ಟೋಕಿಯೊ: ಟೇಬಲ್ ಟೆನಿಸ್‌ನಲ್ಲಿ ಭಾರತದ ಮಣಿಕಾ ಬಾತ್ರಾ ಗ್ರೇಟ್ ಕಮ್‌ಬ್ಯಾಕ್
Team Udayavani, Jul 26, 2021, 12:10 AM IST
ಟೋಕಿಯೊ: ಟೇಬಲ್ ಟೆನಿಸ್‌ನಲ್ಲಿ ಭಾರತದ ಸ್ಟಾರ್ ಆಟಗಾರ್ತಿ ಮಣಿಕಾ ಬಾತ್ರಾ ಹಿನ್ನಡೆಯ ಬಳಿಕ ಅಮೋಘ ಚೇತರಿಕೆ ಕಂಡು ಗೆಲುವು ಸಾಧಿಸಿದರೆ, ಜಿ. ಸಥಿಯನ್ ಅಮೋಘ ಮುನ್ನಡೆಯ ಹೊರತಾಗಿಯೂ ಸೋಲಿನ ಸುಳಿಗೆ ಸಿಲುಕಿದ್ದಾರೆ.
ದ್ವಿತೀಯ ಸುತ್ತಿನಲ್ಲಿ 32ನೇ ರ್‍ಯಾಂಕಿಂಗ್‌ನ ಉಕ್ರೇನಿಯನ್ ಮಾರ್ಗರಿಟಾ ಪೆಸೋಟ್ಸ್‌ಕಾ ವಿರುದ್ಧ ಸೆಣಸುತ್ತಿದ್ದ 62ನೇ ರ್‍ಯಾಂಕಿಂಗ್‌ನ ಮಣಿಕಾ ಬಾತ್ರಾ ಮೊದಲೆರಡು ಗೇಮ್ ಕಳೆದುಕೊಂಡ ಬಳಿಕವೂ ನೀಡಿದ ಹೋರಾಟ ಪ್ರಶಂಸೆಗೆ ಪಾತ್ರವಾಯಿತು. 2-2 ಸಮಬಲ ಸಾಧಿಸಿದ ಬಳಿಕ 5ನೇ ಗೇಮ್ ಕೂಡ ಕಳಕೊಂಡರು. ಕೊನೆಯ 2 ಗೇಮ್‌ಗಳಲ್ಲಿ ಮತ್ತೆ ತಿರುಗೇಟು ನೀಡಿ 4-3 ಅಂತರದ ರೋಚಕ ಗೆಲುವು ಸಾಧಿಸಿದರು (4-11, 4-11, 11-7, 12-10, 8-11, 11-5, 11-7).
3ನೇ ಸುತ್ತಿನಲ್ಲಿ ಮಣಿಕಾ ಬಾತ್ರಾ ಆಸ್ಟ್ರಿಯಾದ ಸೋಫಿಯಾ ಪೊಲ್ಕನೋವಾ ಅವರನ್ನು ಎದುರಿಸಲಿದ್ದಾರೆ. ಇದು ಕೂಡ ಕಠಿನ ಸವಾಲೇ ಆಗಿದೆ. ಆದರೆ ದ್ವಿತೀಯ ಸುತ್ತಿನ ಗೆಲುವು ತುಂಬಿಸಿರುವ ಆತ್ಮವಿಶ್ವಾಸ ಎನ್ನುವುದು ಮಣಿಕಾಗೆ ಲಾಭ ತರಲಿದೆ ಎಂಬುದು ಎಲ್ಲರ ನಿರೀಕ್ಷೆ.
ಇದನ್ನೂ ಓದಿ :ಟೋಕಿಯೊ ಒಲಿಂಪಿಕ್ಸ್ : ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು ಶುಭಾರಂಭ
ಸಥಿಯನ್‌ಗೆ ಸೋಲು
ಜಿ. ಸಥಿಯನ್ ಅವರದು ಇದಕ್ಕೆ ವಿರುದ್ಧವಾದ ಫಲಿ ತಾಂಶವಾಗಿತ್ತು. 38ನೇ ರ್‍ಯಾಂಕಿಂಗ್‌ನ ಅವರು ಹಾಂಕಾಂಗ್‌ನ ಲಾಮ್ ವಿರುದ್ಧ 3-0 ಮುನ್ನಡೆ ಹೊಂದಿದ್ದರು. ಆದರೆ ಸತತ 4 ಗೇಮ್‌ಗಳನ್ನು ಕಳೆದುಕೊಂಡು ನಿರಾಸೆ ಮೂಡಿಸಿದರು. ಈ ಪಂದ್ಯವನ್ನು ಅವರು 3-4ರಿಂದ ಕಳೆದುಕೊಂಡರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Team India; ಡ್ರೆಸ್ಸಿಂಗ್ ರೂಂ ರಹಸ್ಯ: ಕೋಚ್ ಗಂಭೀರ್ ವಿರುದ್ಧ ಮಾಜಿ ಕ್ರಿಕೆಟಿಗರ ಅಸಮಾಧಾನ
Rohit Sharma; ಸಿಡ್ನಿ ಟೆಸ್ಟ್ ಬಳಿಕ ರೋಹಿತ್ ವಿದಾಯ?
Team India; 2025 ಭಾರತ ಆಡುವುದು ಹತ್ತೇ ಟೆಸ್ಟ್
Women’s ODI rankings; 5ನೇ ಸ್ಥಾನಕ್ಕೆ ಏರಿದ ದೀಪ್ತಿ ಶರ್ಮ
TestTeam; ಆಸ್ಟ್ರೇಲಿಯಾ ಪ್ರಕಟಿಸಿದ ವರ್ಷದ ಟೆಸ್ಟ್ ತಂಡಕ್ಕೆ ಭಾರತೀಯ ನಾಯಕ; ರೋಹಿತ್ ಅಲ್ಲ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
KD Movie: ಕೆಡಿ ಶಿವ ಮೊಗದಲ್ಲಿ 25 ಮಿಲಿಯನ್ ನಗು
Mumbai: ಹೊಸ ವರ್ಷದ ಮುನ್ನಾದಿನ 17,800 ವಾಹನ ಚಾಲಕರಿಗೆ ದಂಡ, 89 ಲಕ್ಷ ರೂ. ಸಂಗ್ರಹ
Hubballi: ಹಳೇ ವೈಷಮ್ಯದಿಂದ ಸಹಚರರೊಂದಿಗೆ ಸೇರಿ ಹಲ್ಲೆ; ವ್ಯಕ್ತಿ ಮೃತ್ಯು
Delhi: ಕೇಜ್ರಿವಾಲ್ ಚುನಾವಣೆಯಲ್ಲಿ ನೀಡಿದ್ದ ಒಂದೂ ಭರವಸೆ ಈಡೇರಿಸಿಲ್ಲ: ಬಿಜೆಪಿ ವಾಗ್ದಾಳಿ
2025 ‘ಸುಧಾರಣೆಗಳ ವರ್ಷ’ಎಂದು ಘೋಷಣೆ ಮಾಡಿದ ರಕ್ಷಣ ಸಚಿವಾಲಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.