Talk Fight: ಬಿ.ಎಸ್.ಯಡಿಯೂರಪ್ಪ ಬಗ್ಗೆ ಹಗುರ ಮಾತು ಸಲ್ಲ: ಬಿ.ವೈ.ವಿಜಯೇಂದ್ರ ಎಚ್ಚರಿಕೆ
ಯತ್ನಾಳ್‌ಗೆ ಪೊರಕೆ ಸೇವೆ ಮಾಡಲು ಹೆಣ್ಣು ಮಕ್ಕಳು ಸಜ್ಜು: ಮಾಡಾಳು ಮಲ್ಲಿಕಾರ್ಜುನ
Team Udayavani, Nov 4, 2024, 6:45 AM IST
ಚಿತ್ರದುರ್ಗ: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಏನು ಮಾತನಾಡುತ್ತಾರೆ ಎನ್ನುವುದು ಭಗವಂತನಿಗೆ ಗೊತ್ತು. ಬಿಜೆಪಿ ವೇದಿಕೆ ಮೇಲೆ ಯಡಿಯೂರಪ್ಪ ಹತ್ತಬಾರದು ಎಂದು ಹೇಳಿದ್ದಾರೆ. ಯಡಿಯೂರಪ್ಪ, ಅನಂತಕುಮಾರ್ ಸೇರಿದಂತೆ ಅನೇಕ ಹಿರಿಯರು ರಾಜ್ಯಾದ್ಯಂತ ಓಡಾಡಿ ಪಕ್ಷ ಕಟ್ಟದಿದ್ದರೆ ಇವರಿಗೆ ವೇದಿಕೆಯೇ ಇರುತ್ತಿರಲಿಲ್ಲ. ವೇದಿಕೆ ಕಟ್ಟುವ ಯೋಗ್ಯತೆಯೂ ಕೆಲವರಿಗೆ ಇರುತ್ತಿರಲಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಯತ್ನಾಳ್ ವಿರುದ್ಧ ಕಿಡಿಕಾರಿದರು.
ಸುದ್ದಿಗಾರರ ಜತೆ ಮಾತನಾಡಿ, ಯಡಿಯೂರಪ್ಪ ಬಗ್ಗೆ ಹಗುರವಾಗಿ ಮಾತನಾಡುವುದನ್ನು ಮೊದಲು ಬಿಡಲಿ. ಬಿಎಸ್‌ವೈ ಕೊಡುಗೆಯನ್ನು ನೆನಪು ಮಾಡಿಕೊಳ್ಳಲಿ. ಮನಬಂದಂತೆ ಮಾತನಾಡಿದರೆ ಸೂಕ್ತ ಸಂದರ್ಭದಲ್ಲಿ ತಕ್ಕ ಉತ್ತರ ನೀಡಬೇಕಾಗುತ್ತದೆ ಎಂದು ವಿಜಯೇಂದ್ರ ಎಚ್ಚರಿಕೆ ನೀಡಿದರು.
ವಿಜಯೇಂದ್ರ ವಿರುದ್ಧ ಮಾತನಾಡಿದರೆ ಪೊರಕೆ ಸೇವೆ: ಮಾಡಾಳು
ದಾವಣಗೆರೆ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧ ಇನ್ನು ಮುಂದೆ ಬಸನಗೌಡ ಪಾಟೀಲ್ ಯತ್ನಾಳ್ ಮಾತನಾಡಿದರೆ ಪೊರಕೆ ಸೇವೆ ಮಾಡುವುದಕ್ಕೆ ಹೆಣ್ಣು ಮಕ್ಕಳು ಸಜ್ಜಾಗಿದ್ದಾರೆ ಎಂದು ಚನ್ನಗಿರಿ ಬಿಜೆಪಿ ಮುಖಂಡ ಮಾಡಾಳು ಮಲ್ಲಿಕಾರ್ಜುನ ಎಚ್ಚರಿಸಿದರು.
ಸುದ್ದಿಗಾರರ ಜತೆ ಮಾತನಾಡಿದ ಅವರು, ಯಡಿಯೂರಪ್ಪ ಬಗ್ಗೆ ಮಾತನಾಡಲು ಯತ್ನಾಳ್‌ಗೆ ನೈತಿಕತೆಯೇ ಇಲ್ಲ. ಅವರು ಹಾಗೆಯೇ ಮಾತನಾಡುತ್ತಿದ್ದರೆ ಪೊರಕೆ ಸೇವೆ, ಒನಕೆ ಸೇವೆ ಮಾಡುವುದಕ್ಕೂ ಮಹಿಳೆಯರು ಸಿದ್ಧವಾಗಿದ್ದಾರೆ. ಯಡಿಯೂರಪ್ಪ ಮನೆಯಲ್ಲಿ ತಿಂದು ಅವರ ಮನೆಯ ಗಳ ಎಣಿಸುತ್ತಿದ್ದಾರೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಈ ಜಾಗ ನಮ್ಮದು… ವಿದ್ಯಾರ್ಥಿಗಳನ್ನು ಹೊರಹಾಕಿ ಶಾಲೆಗೆ ಬೀಗ ಜಡಿಯಲು ಯತ್ನಿಸಿದ ಕುಟುಂಬ
ಮೈಕ್ರೋ ಫೈನಾನ್ಸ್ ಗಳಿಂದ ಆರ್ಥಿಕ ಕ್ಷೇತ್ರ ಹಿಂಸಾತ್ಮಕ ವಾತಾವರಣವಾಗಿ ಬದಲಾಗುತ್ತಿದೆ
Hubballi: ಚಾಕು ಇರಿದು ಯುವಕನ ಕೊಲೆ ಪ್ರಕರಣ… ಪೊಲೀಸರಿಂದ ಮೂವರು ಆರೋಪಿಗಳ ಕಾಲಿಗೆ ಗುಂಡು
IT Raid: ಬೆಳಗಾವಿಯ ಉದ್ಯಮಿ ದೊಡ್ಡಣ್ಣವರ ಸೇರಿ ನಾಲ್ವರು ಉದ್ಯಮಿಗಳಿಗೆ ಐಟಿ ಶಾಕ್
BJP: ರಾಜ್ಯಾಧ್ಯಕ್ಷ ಚುನಾವಣೆ ಸ್ಪರ್ಧೆಗೆ ನಾನೂ ಸಿದ್ಧ: ಬಿ.ವೈ.ವಿಜಯೇಂದ್ರ ತಿರುಗೇಟು
MUST WATCH
ಹೊಸ ಸೇರ್ಪಡೆ
ಈ ಜಾಗ ನಮ್ಮದು… ವಿದ್ಯಾರ್ಥಿಗಳನ್ನು ಹೊರಹಾಕಿ ಶಾಲೆಗೆ ಬೀಗ ಜಡಿಯಲು ಯತ್ನಿಸಿದ ಕುಟುಂಬ
Arrested: ಬಿಡಿಸಿಸಿ, ಅಪೆಕ್ಸ್ ಬ್ಯಾಂಕ್‌ಗೆ 19 ಕೋಟಿ ರೂ. ವಂಚನೆ: ಮೂವರ ಸೆರೆ
ಮೈಕ್ರೋ ಫೈನಾನ್ಸ್ ಗಳಿಂದ ಆರ್ಥಿಕ ಕ್ಷೇತ್ರ ಹಿಂಸಾತ್ಮಕ ವಾತಾವರಣವಾಗಿ ಬದಲಾಗುತ್ತಿದೆ
Hubballi: ಚಾಕು ಇರಿದು ಯುವಕನ ಕೊಲೆ ಪ್ರಕರಣ… ಪೊಲೀಸರಿಂದ ಮೂವರು ಆರೋಪಿಗಳ ಕಾಲಿಗೆ ಗುಂಡು
IT Raid: ಬೆಳಗಾವಿಯ ಉದ್ಯಮಿ ದೊಡ್ಡಣ್ಣವರ ಸೇರಿ ನಾಲ್ವರು ಉದ್ಯಮಿಗಳಿಗೆ ಐಟಿ ಶಾಕ್