ಮೆಟಾವರ್ಸ್ ಆರತಕ್ಷತೆ: ನ್ಯೂ ಟ್ರೆಂಡ್- ವಿಡಿಯೋ ವೈರಲ್
Team Udayavani, Feb 11, 2022, 8:00 AM IST
ಕೊರೊನಾ ಬಂದ ಮೇಲೆ ವರ್ಚುವಲ್ ಮದುವೆ ಸಾಕಷ್ಟಾಗಿವೆ. ಆದರೆ ಇದೀಗ ಅದಕ್ಕೂ ಮೀರಿ ಮೆಟಾವರ್ಸ್ ವೆಡ್ಡಿಂಗ್, ಮೆಟಾವರ್ಸ್ ಆರತಕ್ಷತೆ ಟ್ರೆಂಡ್ ಆಗಲಾರಂಭಿಸಿವೆ. ಇತ್ತೀಚೆಗೆ ತಮಿಳುನಾಡಿನ ಜೋಡಿಯೊಂದು ಮೆಟಾವರ್ಸ್ ದುನಿಯಾದಲ್ಲೇ ರಿಸೆಪ್ಶನ್ ನಡೆಸಿಕೊಂಡಿದ್ದಾರೆ. ಹಾಗಾದರೆ ಏನು ಈ ಮೆಟಾವರ್ಸ್? ಅದರಲ್ಲಿ ನಾವೇಗೆ ಭಾಗವಹಿಸಬಹುದು ಎನ್ನುವುದಕ್ಕೆ ಇಲ್ಲಿದೆ ಮಾಹಿತಿ.
ಬೇರೆಯದ್ದೇ ಜಗತ್ತು:
ಈ ಮೆಟಾವರ್ಸ್ ಸಂಪೂರ್ಣ ಡಿಜಿಟಲ್ ಆಗಿರುವ ಬೇರೆಯದ್ದೇ ಜಗತ್ತು. ಉದಾಹರಣೆಗೆ ನೀವು ಆಡುವ ಪಬ್‌ಜಿ ಅಂದುಕೊಳ್ಳಿ. ಅಲ್ಲಿ ಹೇಗೆ ಯಾವುದೋ ಸ್ಥಳದಲ್ಲಿ ನಿಮ್ಮ ಡಿಜಿಟಲ್ ಪ್ರತಿರೂಪ ಇರುತ್ತದೆಯೋ ಇಲ್ಲಿಯೂ ಹಾಗೇ. 3ಡಿ ಮನುಷ್ಯರಾಗಿ ಡಿಜಿಟಲ್ ಪ್ರಪಂಚದೊಳಗೆ ಕಾಲಿಡುವ ನೀವು, ನಿಮ್ಮ ಕೀಬೋರ್ಡ್, ಮೊಬೈಲ್ ಸ್ಕ್ರೀನ್ ಸಹಾಯದಿಂದಲೇ ನಿಮ್ಮಿಷ್ಟದಂತೆ ಚಲಿಸಬಹುದು.
ದಂಪತಿಯ ಪ್ಲ್ರಾನ್:
ತಮಿಳುನಾಡು ನಿವಾಸಿ, ಐಐಟಿ ಮದ್ರಾಸ್‌ನಲ್ಲಿ ಪ್ರೊಜೆಕ್ಟ್ ಅಸೋಸಿಯೇಟ್ ಆಗಿ ಕೆಲಸ ಮಾಡುತ್ತಿರುವ ದಿನೇಶ್ ಎಸ್‌ಪಿ ಅವರು ಫೆ.6ರಂದು ಜಂಗನಂದಿನಿ ರಾಮಸ್ವಾಮಿಯನ್ನು ವರಿಸಿದ್ದಾರೆ. ಕೊರೊನಾ ಹಿನ್ನೆಲೆ ಕೆಲವೇ ಆಪ್ತರ ಸಮ್ಮುಖದಲ್ಲಿ ದಾಂಪತ್ಯಕ್ಕೆ ಕಾಲಿಟ್ಟ ದಂಪತಿ ಮೆಟಾವರ್ಸ್‌ನಲ್ಲಿ ರಿಸೆಪ್ಶನ್ ಇಟ್ಟುಕೊಂಡಿದ್ದರು. ಅದರಲ್ಲಿ ದೇಶ ವಿದೇಶಗಳ 6000 ಮಂದಿ ಪಾಲ್ಗೊಂಡಿದ್ದರು.
ಸ್ವರ್ಗದಲ್ಲಿರುವ ಅಪ್ಪನೂ ಹಾಜರ್:
ಜಂಗನಂದಿನಿ ತಂದೆ ಕಳೆದ ವರ್ಷವೇ ಮೃತಪಟ್ಟಿದ್ದರು. ಆದರೆ ಆಕೆಗೆ ಉಡುಗೊರೆ ಕೊಡಬೇಕೆಂದು ನಿರ್ಧರಿಸಿದ ವರ ದಿನೇಶ್, ಆಕೆಯ ತಂದೆಯ 3ಡಿ ರೂಪವನ್ನೂ ಮೆಟಾವರ್ಸ್ ರಿಸೆಪ್ಶನ್‌ನಲ್ಲಿ ಭಾಗವಹಿಸುವಂತೆ ಮಾಡಿದ್ದಾರೆ.
ತರ್ಡಿವರ್ಸ್ ಪ್ರಯತ್ನ:
ತಮಿಳುನಾಡಿನ ತರ್ಡಿವರ್ಸ್ ಹೆಸರಿನ ಸಂಸ್ಥೆ ದಂಪತಿಗೆಂದು ಮೆಟಾವರ್ಸ್ ತಯಾರಿಸಿಕೊಟ್ಟಿದೆ. ಎನ್‌ಎಫ್ ಟಿ, ಬ್ಲ್ಯಾಕ್‌ಚೈನ್‌ಗಳ ಬಗ್ಗೆ ಹಲವು ವರ್ಷಗಳಿಂದ ಕೆಲಸ ಮಾಡುತ್ತಿರುವ ಪ್ರದೀಪ್‌ರ ಬೇಡಿಕೆಯಂತೆಯೇ ಹ್ಯಾರಿಪಾಟರ್‌ನ ಹಾಂಗ್‌ವರ್ಟ್ ಥೀಮ್‌ನಲ್ಲಿ ಡಿಜಿಟಲ್ ಪ್ರಪಂಚವನ್ನು ಸೃಷ್ಟಿಸಲಾಗಿತ್ತು. ಸಂಸ್ಥೆಯ 12 ಇಂಜಿನಿಯರ್‌ಗಳು ತಿಂಗಳ ಕಾಲ ಕೆಲಸ ಮಾಡಿ ಈ ರಿಸೆಪ್ಶನ್ ಯಶಸ್ವಿಯಾಗಿಸಿದ್ದಾರೆ.
— mohit pandey (@MohitPandey553) February 7, 2022
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.