ವಿವಾಹ ಸಮಾರಂಭದಲ್ಲಿ ವಧು ಡ್ಯಾನ್ಸ್…ವರನಿಂದ ಕಪಾಳಮೋಕ್ಷ…ಮುಂದೆ ನಡೆದಿದ್ದೇನು ಗೊತ್ತಾ?
ಏತನ್ಮಧ್ಯೆ ವಧುವಿನ ಸಹೋದರ ಸಂಬಂಧಿಯೊಬ್ಬ ಬಂದು ಆಕೆಯ ಕೈಹಿಡಿದು ಡ್ಯಾನ್ಸ್ ನಲ್ಲಿ ತೊಡಗಿದ್ದ.
Team Udayavani, Jan 22, 2022, 2:51 PM IST
ತಮಿಳುನಾಡು: ಮದುವೆ ಸಮಾರಂಭದಲ್ಲಿ ಡ್ಯಾನ್ಸ್ ಮಾಡಿರುವ ಘಟನೆ ಮೂವರ ಜೀವನದ ದಿಕ್ಕನ್ನೇ ಬದಲಿಸಿರುವ ಅಪರೂಪದ ಪ್ರಸಂಗವೊಂದು ತಮಿಳುನಾಡಿನ ಕಡಲೂರಿನಲ್ಲಿ ನಡೆದಿದೆ. ವಿವಾಹ ಸಮಾರಂಭದಲ್ಲಿ ಮದುಮಗಳು ಡ್ಯಾನ್ಸ್ ಮಾಡಿದ್ದು, ಈ ಸಂದರ್ಭದಲ್ಲಿ ಆಕ್ರೋಶಗೊಂಡ ವರ ಆಕೆಯ ಕೆನ್ನೆಗೆ ಹೊಡೆದಿದ್ದ, ಇದರ ಪರಿಣಾಮ ಮಧುಮಗಳು ತನ್ನ ಸಹೋದರ ಸಂಬಂಧಿಯನ್ನು ವಿವಾಹವಾಗಿರುವ ಪ್ರಕರಣ ಇದಾಗಿದೆ.
ಇದನ್ನೂ ಓದಿ:ಯೋಗ್ಯತೆ ಇಲ್ಲ, ಧಂ ಇಲ್ಲ,ವಿಷಸರ್ಪದಂತೆ : ಸಿದ್ದರಾಮಯ್ಯ ವಿರುದ್ಧ ಹೆಚ್ ಡಿಕೆ ಆಕ್ರೋಶ
ಏನಿದು ಘಟನೆ:
ಇದೊಂದು ಸಿನಿಮಾ ಶೈಲಿಯಲ್ಲಿ ನಡೆದ ಘಟನೆಯಂತಿದ್ದು, ಸ್ಥಳೀಯ ಪ್ರಸಿದ್ಧ ಉದ್ಯಮಿಯೊಬ್ಬರ ಮಗಳ ವಿವಾಹ ತಮಿಳುನಾಡಿನ ಕಡಂಪುಲಿಯೂರ್ ನಲ್ಲಿ ಜನವರಿ 20ರಂದು ನಡೆಯಬೇಕಾಗಿತ್ತು. ಪನ್ರುಟಿಯ ವಧು ಹಾಗೂ ಪೆರಿಯಕುಟ್ಟುಪಾಳ್ಯಂನ ವರ 2021ರ ನವೆಂಬರ್ 21ರಂದು ನಿಶ್ಚಿತಾರ್ಥ ಮಾಡಿಕೊಂಡಿದ್ದರು.
2022ರ ಜನವರಿ 19ರಂದು ಜೋಡಿಯ ವಿವಾಹಕ್ಕೆ ಒಂದು ದಿನದ ಮೊದಲು ನಡೆದ ವಿವಾಹ ಸಮಾರಂಭದಲ್ಲಿ ವರ, ವಧು ಹಾಗೂ ಸಂಬಂಧಿಕರು ಪಾಲ್ಗೊಂಡಿದ್ದರು. ವಿವಾಹ ಸಮಾರಂಭದಲ್ಲಿ ನಡೆಯುತ್ತಿದ್ದ ಡ್ಯಾನ್ಸ್ ಗೆ ವಧು ಹೆಜ್ಜೆ ಹಾಕತೊಡಗಿದ್ದಳು, ಆರಂಭದಲ್ಲಿ ಎಲ್ಲರೂ ಸಂಭ್ರಮಿಸಿದ್ದರು. ಏತನ್ಮಧ್ಯೆ ವಧುವಿನ ಸಹೋದರ ಸಂಬಂಧಿಯೊಬ್ಬ ಬಂದು ಆಕೆಯ ಕೈಹಿಡಿದು ಡ್ಯಾನ್ಸ್ ನಲ್ಲಿ ತೊಡಗಿದ್ದ.
ಇದು ವರನಿಗೆ ಸಹಿಸಿಕೊಳ್ಳಲು ಸಾಧ್ಯವಾಗದೆ ತನ್ನ ಭಾವಿ ಪತ್ನಿ ಹಾಗೂ ಸಹೋದರ ಸಂಬಂಧಿಯನ್ನು ದೂರ ತಳ್ಳಿಬಿಟ್ಟಿದ್ದ. ಇದರ ಪರಿಣಾಮ ಇಬ್ಬರ ನಡುವೆ ವಾಗ್ವಾದ ನಡೆದಾಗ, ವರ ವಧುವಿನ ಕೆನ್ನೆಗೆ ಹೊಡೆದು ಬಿಟ್ಟಿದ್ದ. ಕೂಡಲೇ ಆಕೆಯು ವರನ ಕೆನ್ನೆಗೆ ಹೊಡೆದು ಬಿಟ್ಟಿದ್ದಳು. ಈ ಘಟನೆ ನಡೆಯುತ್ತಿದ್ದಂತೆಯೇ ಎರಡು ಕುಟುಂಬಗಳ ಸದಸ್ಯರ ನಡುವೆ ಜಗಳ ಆರಂಭವಾಗಿಬಿಟ್ಟಿತ್ತು. ಇವನನ್ನು ನನ್ನ ಅಳಿಯನನ್ನಾಗಿ ಒಪ್ಪಿಕೊಳ್ಳಲಾರೆ ಎಂದು ವಧುವಿನ ತಂದೆ ಹೇಳಿದ್ದು, ವಧು ಕೂಡಾ ವರನನ್ನು ವಿವಾಹವಾಗುವುದಿಲ್ಲ ಎಂದು ಹೇಳಿಬಿಟ್ಟಿದ್ದಳು!
ಅದೇ ವಿವಾಹ ಸಮಾರಂಭದಲ್ಲಿ ವಧುವಿನ ತಂದೆ ಕೈಹಿಡಿದು ಡ್ಯಾನ್ಸ್ ಮಾಡಿದ್ದ ಸಹೋದರ ಸಂಬಂಧಿ ಹಾಗೂ ಆತನ ಕುಟುಂಬದವರ ಜೊತೆ ಮಾಡಿ ವಿವಾಹ ನಿಶ್ಚಯಿಸಿ, ಜನವರಿ 20ರಂದು ನಿಗದಿಪಡಿಸಿದ್ದ ದಿನಾಂಕದಂದೇ ಮಗಳ ವಿವಾಹ ನೆರವೇರಿಸಿರುವುದಾಗಿ ವರದಿ ವಿವರಿಸಿದೆ.
ವರದಿಯ ಪ್ರಕಾರ, ವಧುವಿನ ಕುಟುಂಬದವರು ತಮಗೆ ಬೆದರಿಕೆ ಹಾಕಿದ್ದು, ಏಳು ಲಕ್ಷ ರೂಪಾಯಿ ಪರಿಹಾರ ಕೊಡಬೇಕೆಂದು ಬೇಡಿಕೆ ಇಟ್ಟಿರುವುದಾಗಿ ವರ ಪೊಲೀಸರಿಗೆ ದೂರು ನೀಡಿದ್ದಾನೆ. ಈತನ ಮೇಲೂ ವಧುವಿಗೆ ಕಪಾಳಮೋಕ್ಷ ಮಾಡಿರುವ ಆರೋಪವೂ ಇದ್ದು, ಈ ಬಗ್ಗೆ ತನಿಖೆ ನಡೆಸುವುದಾಗಿ ಪೊಲೀಸ್ ಅಧಿಕಾರಿ ತಿಳಿಸಿರುವುದಾಗಿ ವರದಿ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kuno National Park; ಮರಿಗಳಿಗೆ ಜನ್ಮ ನೀಡಿದ ಚೀತಾ ನೀರ್ವಾ: ಸಂಖ್ಯೆ ಹೆಚ್ಚಳ
Adani funding; 100 ಕೋಟಿ ನಿಧಿಯನ್ನು ಸ್ವೀಕರಿಸುವುದಿಲ್ಲ ಎಂದ ರೇವಂತ್ ರೆಡ್ಡಿ
Andaman: ಕೋಸ್ಟ್ ಗಾರ್ಡ್ ಕಾರ್ಯಾಚರಣೆ… ಮೀನುಗಾರಿಕಾ ದೋಣಿಯಲ್ಲಿದ್ದ 5ಟನ್ ಮಾದಕ ವಸ್ತು ವಶ
Maharashtra: ಕಾಂಗ್ರೆಸ್ ಗೆ ಕೇವಲ 16 ಸ್ಥಾನ; ಕೈ ಅಧ್ಯಕ್ಷ ಸ್ಥಾನಕ್ಕೆ ಪಟೋಲೆ ರಾಜೀನಾಮೆ
Politics: ಫಡ್ನವೀಸ್ ಗೆ ಬೆಂಬಲ ನೀಡಿದ ಅಜಿತ್; ಮಹಾರಾಷ್ಟ್ರದಲ್ಲಿ ಮುಗಿಯದ ಸಿಎಂ ತಿಕ್ಕಾಟ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Kuno National Park; ಮರಿಗಳಿಗೆ ಜನ್ಮ ನೀಡಿದ ಚೀತಾ ನೀರ್ವಾ: ಸಂಖ್ಯೆ ಹೆಚ್ಚಳ
Adani funding; 100 ಕೋಟಿ ನಿಧಿಯನ್ನು ಸ್ವೀಕರಿಸುವುದಿಲ್ಲ ಎಂದ ರೇವಂತ್ ರೆಡ್ಡಿ
Katpadi: ಹೆದ್ದಾರಿ ಅಂಚಿನಲ್ಲಿ ಅಪಾಯ!; ರಸ್ತೆ ಬದಿಯಲ್ಲಿ ಉದ್ದಕ್ಕೂ ಹೊಂಡಗುಂಡಿ
ಒಕ್ಕಲಿಗ ಸಂಘದ ಕಾರ್ಯಕ್ರಮದಲ್ಲಿ ಕೆ.ಜೆ.ಜಾರ್ಜ್ ಭಾಷಣಕ್ಕೆ ಆಕ್ಷೇಪ: ಕ್ಷಮೆಯಾಚಿಸಿದ ಸಚಿವರು
Gurupura: ನಾಡಕಚೇರಿ ಕಟ್ಟಡ ಉದ್ಘಾಟನೆಗೆ ಸಿದ್ಧ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.