ಗ್ರೀನ್ ಟೀ ಸವಿಯಾಗಿರಲಿ
ಸಾಮಾನ್ಯ ಗ್ರೀನ್ ಟೀ, ಇದಕ್ಕೆ ಜೇನುತುಪ್ಪ, ನಿಂಬೆ ರಸ ಹಾಕಿ ಎಲ್ಲರೂ ಕುಡಿದಿರುತ್ತಾರೆ.
Team Udayavani, Nov 30, 2012, 9:40 AM IST
ಗ್ರೀನ್ ಟೀ ಎಂದರೆ ಡಯಟ್ ಮಾಡುವವರಿಗೆ, ಆರೋಗ್ಯ ಕಾಳಜಿ ವಹಿಸುವವರಿಗೆ ಎನ್ನುವ ಕಾಲ ಈಗಿಲ್ಲ. ಗ್ರೀನ್ ಟೀಯನ್ನು ಯಾರೂ ಬೇಕಾದರೂ ಕುಡಿಯಬಹುದು ಮಾತ್ರವಲ್ಲ ಇದರಿಂದ ವಿಶೇಷ ರೀತಿಯ ಪಾನೀಯ ಮಾಡಿ ಸೇವಿಸಬಹುದು. ದಣಿದ ದೇಹಕ್ಕೆ ತಂಪನ್ನು ನೀಡುವ, ಬಿಸಿಲಿಗೆ ಬೆಂದು ಮನೆಗೆ ಬಂದಾಗ, ತಂಪಾದ ಜ್ಯೂಸ್ ಕುಡಿಯಬೇಕು, ಆರೋಗ್ಯಕರವಾಗಿರಬೇಕು ಎನ್ನುವವರಿಗೆ ಸೂಕ್ತವಾದ ಪಾನೀಯ ಗ್ರೀನ್ ಟೀ ಜ್ಯೂಸ್.
ಇದು ಕೇವಲ ಪಾನೀಯವಲ್ಲ ಆರೋಗ್ಯಕರ ಪಾನೀಯವಾಗಿದೆ. ಇದರಲ್ಲಿ ಬಳಸುವ ಪ್ರತಿಯೊಂದು ವಸ್ತುವೂ ಆರೋಗ್ಯಕ್ಕೆ ಅತ್ಯುತ್ತಮವಾದದ್ದು. ಈ ಪಾನೀಯಕ್ಕೆ ಪುದೀನಾ ಬಳಸುವುದರಿಂದ ಜೀರ್ಣಕ್ರಿಯೆಯನ್ನು ಉತ್ತಮ ರೀತಿಯಲ್ಲಿರಿಸುತ್ತದೆ. ಇನ್ನು ಗ್ರೀನ್ ಟೀ, ಮುಳ್ಳು ಸೌತೆಕಾಯಿ, ನಿಂಬೆ, ಜೇನುತುಪ್ಪ ಆರೋಗ್ಯಕ್ಕೆ ಬೇಕಾದ ಅಹ್ಲಾದತೆಯನ್ನು ತುಂಬುತ್ತದೆ ಮಾತ್ರವಲ್ಲ ದೇಹದ ಬೊಜ್ಜು ಇಳಿಸಲು ಸಹಾಯಕವಾಗಿದೆ. ಹೀಗಾಗಿ ಯಾರು ಬೇಕಾದರೂ ಈ ಪಾನೀಯವನ್ನು ಮಾಡಿ ಕುಡಿಯಬಹುದು.
ಸಾಮಾನ್ಯ ಗ್ರೀನ್ ಟೀ, ಇದಕ್ಕೆ ಜೇನುತುಪ್ಪ, ನಿಂಬೆ ರಸ ಹಾಕಿ ಎಲ್ಲರೂ ಕುಡಿದಿರುತ್ತಾರೆ. ಇದು ರುಚಿಯ ಕಾರಣದಿಂದ ಕುಡಿಯುವುದಲ್ಲ. ಬದಲಿಗೆ ಆರೋಗ್ಯಕ್ಕೆ ಉತ್ತಮ ಎಂದುಕೊಂಡು ಕುಡಿಯುತ್ತೇವೆ. ಕುಡಿಯಲು ಬೇಜಾರೆನಿಸುವ ಗ್ರೀನ್ ಟೀಯಿಂದಲೂ ವಿಶೇಷವಾದ, ಮನಸ್ಸಿಗೆ ಅಹ್ಲಾದತೆ ಕೊಡುವ ಪಾನೀಯವನ್ನು ಮಾಡಬಹುದು.
ಬೇಕಿರುವುದೇನು?
ಇದಕ್ಕೆ ಬೇಕಿರುವುದು ಅರ್ಧ ಚಮಚ ಜೇನು ತುಪ್ಪ, ನಿಂಬೆ ಹಣ್ಣಿನ 4 ಪೀಸ್, ಒಂದು ಕಪ್ ಐಸ್ ಕ್ಯೂಬ್, 2 ಗ್ರೀನ್ ಟೀ ಬ್ಯಾಗ್, ಸ್ವಲ್ಪ ಮುಳ್ಳುಸೌತೆ, 5 ಪುದೀನಾ ಎಲೆ, ಅರ್ಧ ಕಪ್ ಸೋಡಾ.
ಮಾಡುವುದು ಹೇಗೆ?
ಮೊದಲಿಗೆ ಒಂದು ದೊಡ್ಡ ಗಾತ್ರದ ಗ್ಲಾಸ್‌ಗೆ ಜೇನು ತುಪ್ಪ, ನಿಂಬೆ ಹಣ್ಣು, ಪುದೀನಾ ಎಲೆಗಳನ್ನು ಹಾಕಿಡಿ. ಬಳಿಕ ಅರ್ಧದಷ್ಟು ಐಸ್ ಕ್ಯೂಬ್‌ಗಳನ್ನು ಹಾಕಿ. ಅರ್ಧ ಕಪ್ ಬಿಸಿ ನೀರಿನಲ್ಲಿ ಅದ್ದಿಗ ಗ್ರೀನ್ ಪ್ಯಾಕೆಟ್ ಅನ್ನು ತೆಗೆದು ಸಂಪೂರ್ಣವಾಗಿ ತಣಿದ ಬಳಿಕ ಅದರ ನೀರನ್ನು ಅದನ್ನು ಗ್ಲಾಸ್‌ಗೆ ಸುರಿಯಿರಿ. ಅದರ ಮೇಲೆ ಸೋಡಾ ಸುರಿಸಿಯಿರಿ. ಬಳಿಕ ಸ್ಟ್ರಾ ಹಾಕಿ ಕುಡಿದರೆ ರುಚಿಯಾಗಿರುತ್ತದೆ.
. ವಿದ್ಯಾ ಕೆ. ಇರ್ವತ್ತೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.