Tax Discrimination: ಕೇಂದ್ರದ ತೆರಿಗೆ ತಾರತಮ್ಯ; 8 ರಾಜ್ಯದ ಸಿಎಂಗಳಿಗೆ ಸಿದ್ದು ಪತ್ರ
ಅಕ್ಟೋಬರ್ ಮೊದಲ ವಾರದಲ್ಲಿ ಬೆಂಗಳೂರಲ್ಲಿ ಸಮಾವೇಶ, ಸಿಎಂಗಳನ್ನು ಆಹ್ವಾನಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ
Team Udayavani, Sep 11, 2024, 11:20 PM IST
ಬೆಂಗಳೂರು: ಕೇಂದ್ರ ಸರ್ಕಾರದ ತೆರಿಗೆ ತಾರತಮ್ಯ ಖಂಡಿಸಿ ಕೇರಳ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ಗುಜರಾತ್, ಹರಿಯಾಣ ಮತ್ತು ಪಂಜಾಬ್ ಮುಖ್ಯಮಂತ್ರಿಗಳಿಗೆ ಕರ್ನಾಟಕ ಸಿಎಂ ಸಿದ್ದರಾಮಯ್ಯ (CM Siddaramaiah) ಪತ್ರ ಬರೆದಿದ್ದಾರೆ. ಅಕ್ಟೋಬರ್ ಮೊದಲ ವಾರದಲ್ಲಿ ಬೆಂಗಳೂರಿನಲ್ಲಿ ಸಮಾವೇಶ ಆಯೋಜಿಸಲು ಮುಂದಾಗಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಸಿಎಂ ಸಿದ್ದರಾಮಯ್ಯ, 16ನೇ ಹಣಕಾಸು ಆಯೋಗವು ದೇಶದ ಎಲ್ಲ ರಾಜ್ಯಗಳೊಂದಿಗೆ ಸಮಾಲೋಚನಾ ಸಭೆಗಳನ್ನು ನಡೆಸುತ್ತಿರುವ ಬೆನ್ನಲ್ಲೇ ಕೇಂದ್ರ ಸರ್ಕಾರದ ಅನ್ಯಾಯದ ತೆರಿಗೆ ಹಂಚಿಕೆ ಕುರಿತು 8 ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದೇನೆ ಎಂದು ತಿಳಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ಟ್ವೀಟ್
ಹಿಂದಿನ ಹಣಕಾಸು ಆಯೋಗದ ಕೆಲ ನೀತಿಯಿಂದ ಕರ್ನಾಟಕ ಮತ್ತು ಇತರೆ ತಲಾವಾರು ಜಿಎಸ್ಡಿಪಿ ಹೆಚ್ಚಿದ್ದು, ಒಟ್ಟಾರೆ ಆರ್ಥಿಕತೆಗೆ ಅತಿ ಹೆಚ್ಚು ಕೊಡುಗೆ ನೀಡುವ ರಾಜ್ಯಗಳು ಕಡಿಮೆ ಮೊತ್ತದ ತೆರಿಗೆ ಪಾಲು ಪಡೆಯುವಂತಾಗಿದೆ. ಇದರಿಂದಾಗಿ ಮಾನವ ಸಂಪನ್ಮೂಲ ಹಾಗೂ ಭೌತಿಕ ಸಂಪನ್ಮೂಲದ ಮೇಲೆ ಬಂಡವಾಳ ಹಾಕುವ ಸಾಮರ್ಥ್ಯಕ್ಕೆ ಮಿತಿ ಹೇರುವಂತಾಗಿದೆ. ತೆರಿಗೆದಾರರು ತಾವು ಕಟ್ಟಿದ ತೆರಿಗೆಯ ಪಾಲು ನ್ಯಾಯಸಮ್ಮತವಾಗಿ ಹಿಂದಿರುಗಬೇಕು ಎನ್ನುವ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಹೀಗಾಗಿ ಹಣಕಾಸು ಆಯೋಗವು ದಕ್ಷತೆ ಹಾಗೂ ಕಾರ್ಯಕ್ಷಮತೆಯ ಆಧಾರದ ಮೇಲೆ ತೆರಿಗೆ ಪಾಲನ್ನು ಹಂಚಿಕೆ ಮಾಡಬೇಕು ಎಂಬುದನ್ನು ಕರ್ನಾಟಕಕ್ಕೆ ಆಯೋಗ ಬಂದಾಗ ಸ್ಪಷ್ಟವಾಗಿ ತಿಳಿಸಿದ್ದೇವೆ.
I have written to the Chief Ministers of Kerala, Tamil Nadu, Andhra Pradesh, Telangana, Maharashtra, Gujarat, Haryana, and Punjab regarding the unfair devolution of taxes by the Union government.
States with higher GSDP per capita, like Karnataka and others, are being penalized… pic.twitter.com/SLqpNwVPDA
— Siddaramaiah (@siddaramaiah) September 11, 2024
ಒಟ್ಟಾಗಿ ಪ್ರಸ್ತಾವನೆ ಇಡಲು ಪ್ರಸ್ತಾಪ:
ದೇಶದ ಜಿಡಿಪಿಗೆ ಹೆಚ್ಚಿನ ಕೊಡುಗೆ ಕೊಡುತ್ತಿರುವ ರಾಜ್ಯಗಳು ಅತ್ಯಂತ ಕಡಿಮೆ ಪ್ರಮಾಣದ ತೆರಿಗೆ ಪಾಲನ್ನು ಕೇಂದ್ರದಿಂದ ಪಡೆಯುತ್ತಿದೆ. ಈ ಬಗ್ಗೆ ಆಯೋಗದ ಮುಂದೆ ಸೂಕ್ತ ಪ್ರಸ್ತಾವನೆಯನ್ನು ಎಲ್ಲರೂ ಒಟ್ಟಾಗಿ ಇಡಬೇಕಿದೆ. ಹೀಗಾಗಿ ಬೆಂಗಳೂರಿನಲ್ಲಿ ನಡೆಯಲಿರುವ ಸಮಾವೇಶದಲ್ಲಿ ಪಾಲ್ಗೊಳ್ಳುವಂತೆ 8 ರಾಜ್ಯಗಳ ಮುಖ್ಯಮಂತ್ರಿಗಳಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf: ರೈತರಿಗೆ ನೀಡಿರುವ ನೋಟಿಸ್ ತಕ್ಷಣ ವಾಪಸ್: ಅಧಿಕಾರಿಗಳಿಗೆ ಸಿಎಂ ಖಡಕ್ ಸೂಚನೆ
Waqf Issue: ನ.4ರಂದು ರಾಜ್ಯಾದ್ಯಂತ ಕಾಂಗ್ರೆಸ್ ಸರ್ಕಾರದ ವಿರುದ್ದ ಬಿಜೆಪಿ ಪ್ರತಿಭಟನೆ
High Court: ಕ್ರಿಮಿನಲ್ ಕೇಸ್ ಡೈರಿ ಪ್ರತೀ ಪುಟಕ್ಕೆ ಸಹಿ:ಅರ್ಜಿ ವಜಾಗೊಳಿಸಿದ ಹೈಕೋರ್ಟ್
Bengaluru: ಸುವರ್ಣ ಸಂಭ್ರಮದಲ್ಲಿ ರಾಜ್ಯೋತ್ಸವ ವೈಭವ
Bengaluru: ಕೇಂದ್ರದ ತೆರಿಗೆ ಅನ್ಯಾಯ ಮಧ್ಯೆಯೂ ಅಭಿವೃದ್ಧಿ: ಸಿಎಂ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.