ಕೇವಲ 12 ರೂ.ಗೆ ಬಿಸಿ ಜುನುಕಾ ರೊಟ್ಟಿ ಊಟ:!ಶಿಕ್ಷಕ ಬಸವರಾಜ ಜಾಲೋಜಿ ನಿಸ್ವಾರ್ಥ ಸೇವೆ
ಕಡಿಮೆ ದರದಲ್ಲಿ ನಿತ್ಯ ಊಟ ದೊರಕುತ್ತಿರುವುದು ನನ್ನ ಪುಣ್ಯ...
Team Udayavani, Nov 12, 2024, 5:41 PM IST
ಉದಯವಾಣಿ ಸಮಾಚಾರ
ರಬಕವಿ-ಬನಹಟ್ಟಿ: 12ರೂಪಾಯಿಗೆ ಟಿ-ಕಾಫಿ ಸಿಗದ ಈ ಕಾಲದಲ್ಲಿ ಇಲ್ಲಿನ ಅಮ್ಮ ಫೌಂಡೇಶನ್ ಬನಹಟ್ಟಿಯ ಮಂಗಳವಾರ ಪೇಟೆಯ ಈಶ್ವರಲಿಂಗ ಮೈದಾನ ಹತ್ತಿರವಿರುವ ಊಟದ ಮನೆಯಲ್ಲಿ ಕೇವಲ 12 ರೂ.ಗಳಲ್ಲಿ ಬಡವರ, ನಿರ್ಗತಿಕರ ಹಸಿವು ನೀಗಿಸುವ ಕೆಲಸ ಮಾಡುತ್ತಿದೆ.
ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 3 ಗಂಟೆವರೆಗೆ ಬಿಸಿ ಬಿಸಿ ಜುನಕಾ, ಬಿಸಿ ರೊಟ್ಟಿ ನೀಡುವ ಕಾಯಕದಲ್ಲಿ ನಿರತವಾಗಿದೆ. ಚಿಕ್ಕಪಡಸಲಗಿಯ ಶಿವಶರಣ ಹರಳಯ್ಯ ಸ್ಮಾರಕ ಪ್ರೌಢಶಾಲೆಯಲ್ಲಿ ವಿಜ್ಞಾನ ವಿಷಯದ ಶಿಕ್ಷಕರಾಗಿರುವ ಬಸವರಾಜ ಜಾಲೋಜಿ ಯಾವುದೇ ಅಪೇಕ್ಷೆಯಿಲ್ಲದೆ, ಮತ್ತೊಬ್ಬರ ಸಹಾಯ- ಸಹಕಾರವಿಲ್ಲದೆ ಇಂತಹ ಮಹತ್ವದ ಕಾರ್ಯದಲ್ಲಿ ತೊಡಗಿದ್ದಾರೆ.
ಪ್ರಸ್ತುತ ದಿನಂಪ್ರತಿ 120 ರಿಂದ 150 ಜನರು ಆಹಾರ ಸೇವಿಸಲು ಬರುತ್ತಾರೆ. 2 ರೊಟ್ಟಿ, ಜುನುಕದೊಂದಿಗೆ ಉಳ್ಳಾಗಡ್ಡಿ, ಸೌತೆಕಾಯಿ ನೀಡುವ ಇವರು ಈ ಭಾಗದ ಬಡವರಿಗೆ ಭಾಗ್ಯದಾತರಾಗಿದ್ದಾರೆ.
ಬಡವರಿಗೆ ಆಧಾರ: ದಿನಂಪ್ರತಿ ಕೂಲಿ ಕಾರ್ಮಿಕರಿಗೆ, ಚಿಕ್ಕ ವೇತನ ದೊರಕುವ ಸಿಬ್ಬಂದಿಗೆ, ನಿರಾಶ್ರಿತರಿಗೆ ಈ ಊಟದ
ಮನೆ ಸಂಜೀವಿನಿಯಾಗಿದೆ. ಇಂದಿನ ದಿನಮಾನದಲ್ಲಿಕೇವಲ 12 ರೂ.ಗೆ ದಿನಂಪ್ರತಿ 2 ರೊಟ್ಟಿ ಜತೆಗೆ ಸಾಕಾಗುವಷ್ಟು ಜುನುಕಾ ಒದಗಿಸುತ್ತಿರುವುದು ವಿಶೇಷ.
ಬಡವರಿಗೆ ಅನುಕೂಲವಾಗಲೆಂಬ ಉದ್ದೇಶದಿಂದ 12ರೂ.ಗೆ ರೊಟ್ಟಿ ಊಟ ನೀಡಲಾಗುತ್ತಿದೆ. ಎಲ್ಲಿಯವರೆಗೂ ಆ ದೇವರು ಶಕ್ತಿ ನೀಡುತ್ತಾನೋ, ಅಲ್ಲಿಯವರೆಗೂ ಈ ಕಾರ್ಯ ಮುಂದುವರಿಸಿಕೊಂಡು ಹೋಗುತ್ತೇನೆ.’
ಬಸವರಾಜ ಜಾಲೋಜಿ,ಶಿಕ್ಷಕ,
ಅಮ್ಮಾ ಫೌಂಡೇಶನ್ ಸಂಸ್ಥಾಪಕ, ಬನಹಟ್ಟಿ
ಕಳೆದೆರಡು ವರ್ಷಗಳಿಂದ ಇಲ್ಲಿಯೇ ನಿತ್ಯ ಊಟ ಮಾಡುತ್ತೇನೆ. ನಿತ್ಯ 80 ರಿಂದ 100 ರೂ. ಸಂಪಾದಿಸುತ್ತೇನೆ. ಕಡಿಮೆ ದರದಲ್ಲಿ ನಿತ್ಯ ಊಟ ದೊರಕುತ್ತಿರುವುದು ನನ್ನ ಪುಣ್ಯ.
ಗುರಪಾದ ತಳವಾರ, ಕೂಲಿ ಕಾರ್ಮಿಕ.
ವೇತನ ಅಷ್ಟಕಷ್ಟೇಯಿದ್ದರೂ ಬಡವರಿಗೆ ಊಟ ಒದಗಿಸುವದರಲ್ಲಿ ತೃಪ್ತಿ ಇದೆ. ನಿರಂತರ ಸೇವೆಯಲ್ಲಿ ನೆಮ್ಮದಿಯಿದೆ.
ವಾಸಂತಿ ಮಠಪತಿ, ಅಡುಗೆ ತಯಾರಕರು.
■ ಕಿರಣ ಶ್ರೀಶೈಲ ಆಳಗಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
T20: ತಿಲಕ್ ವರ್ಮ ಸ್ಫೋಟಕ ಶತಕ… ಭಾರತ ಆರು ವಿಕೆಟಿಗೆ 219
Ranaji Trophy: ಉತ್ತರ ಪ್ರದೇಶ ವಿರುದ್ಧ ಕರ್ನಾಟಕಕ್ಕೆ ಮುನ್ನಡೆ
Alert: ವಾಟ್ಸ್ಆ್ಯಪ್ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್ ತೆರೆದೀರಿ ಜೋಕೆ!
Vitla:ಮಾಣಿ -ಮೈಸೂರು ರಾಜ್ಯ ಹೆದ್ದಾರಿಯಲ್ಲಿ ಲಾರಿ ಮೇಲೆ ಮರ ಬಿದ್ದು ರಸ್ತೆ ಸಂಪೂರ್ಣ ಬ್ಲಾಕ್
Self Treatment!: ಸ್ವಯಂ ಚಿಕಿತ್ಸೆಯ ಮೂಲಕ ಸ್ತನ ಕ್ಯಾನ್ಸರ್ ಗೆದ್ದ ವಿಜ್ಞಾನಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.