Teachers Day: ಶಿಕ್ಷಣ ದೇಗುಲದ ನುಡಿ ನೆನಪು: ಶಾಲಾ, ಕಾಲೇಜು ಅಂದರೆ ತಕ್ಷಣ ನೆನಪಾಗುವುದು…
ಇಂದಿನ ಶಿಕ್ಷಕರ ದಿನಾಚರಣೆಯ ಸಂದರ್ಭದಲ್ಲಿ ನೆನಪಿಸುವ ಪ್ರಯತ್ನ ಇಲ್ಲಿದೆ
Team Udayavani, Sep 5, 2024, 10:00 AM IST
ಶಿಕ್ಷಣ ಸಂಸ್ಥೆಗಳು ಅಂದ ತಕ್ಷಣವೇ ನೆನಪಾಗುವುದು ಅಲ್ಲಿನ ಭವ್ಯ ಕಟ್ಟಡಗಳಲ್ಲ.. ಮೊದಲಾಗಿ ನೆನಪಾಗುವುದು ಅಲ್ಲಿನ ಗುರು ಪರಂಪರೆ. ಶಿಕ್ಷಣ ತಜ್ಞ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರು ನಮಗಾಗಿ ಇಂದು ಒಬ್ಬ ಆದರ್ಶ ಶಿಕ್ಷಕನ ಪ್ರತಿಮೆಯನ್ನೆ ರೂಪಿಸಿ ನಮ್ಮ ಮುಂದೆ ಅನಾವರಣಗೊಳಿಸಿದ್ದಾರೆ. ಅಂತಹ ಶಿಕ್ಷಕರ ಪ್ರತಿಮೆಯನ್ನು ನಾನು ಕಲಿತ ಶಿಕ್ಷಣ ದೇಗುಲಗಳಲ್ಲಿ ನೇೂಡಿದ್ದೇನೆ.ಇಂದಿನ ಶಿಕ್ಷಕರ ದಿನಾಚರಣೆಯ ಸಂದರ್ಭದಲ್ಲಿ ನೆನಪಿಸುವ ಪ್ರಯತ್ನ ಇಲ್ಲಿದೆ.
ನನ್ನ ಮೊದಲ ಪ್ರಾಥಮಿಕ ಶಿಕ್ಷಣ ನಡೂರಿನ ಮಹಾಲಿಂಗೇಶ್ವರ ಹಿರಿಯ ಪ್ರಾಥಮಿಕ ಶಾಲೆ. ನನಗೆ ಶಾಲೆ ಅಂದರೇನು ಅನ್ನುವುದನ್ನು ಆಟಿಕೆಗಳ ಪ್ರೀತಿಯ ಮೂಲಕ ತೇೂರಿಸಿ ಕೊಟ್ಟವರು ಕ್ರಿಶ್ಚಿಯನ್ ಮೇಷ್ಟ್ರು; ಮತ್ತು ಶಾಲಾ ಸ್ಥಾಪಕ ಹೆಡ್ ಮಾಸ್ಟರ್ ನಾರಾಯಣ ಶೆಟ್ರು.
ನನ್ನ ಮೂರನೇ ತರಗತಿ ಕಲಿಕೆ ಕೊಕ್ಕರ್ಣೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ.ಅಕ್ಷರ ಕಲಿಯದ ನನಗೆ ಅಕ್ಷರ ಜ್ಞಾನ ಮೂಡಿಸಿದವರು ಸೀತಾರಾಮರಾಯರು. ಭಾಷಣ ಕಲೆ ಕನ್ನಡದ ಪ್ರೀತಿ ಕಲಿಸಿದವರು ಕುಶಲ ಮಾಸ್ಟರ್, ಗೇೂವಿನ ಕಥೆಯನ್ನು ಹೇಳಿ ಕಣ್ಣಿನಲ್ಲಿ ನೀರು ತರಿಸಿದವರು ರಘುರಾಮ್ ಉಪ್ಪಾರರು, ಇಂಗ್ಲಿಷ್ ಭಾಷೆಯಲ್ಲಿ ಗೌರವ ಮೂಡಿಸಿದವರು ಲಕ್ಷ್ಮಣ ಪೂಜಾರಿಯವರು, ಲೆಕ್ಕದಲ್ಲಿ ನನ್ನನ್ನು” ನಿತ್ಯಾನಂದನೆಂದೆ “ಕರೆದು ಕಿವಿ ಹಿಂಡಿದವರು ಗೇೂಪಾಲಕೃಷ್ಣ ಮಾಸ್ಟರ್ ,ಕೊಕ್ಕರ್ಣೆ ಹೈಸ್ಕೂಲು. ಸಮಾಜ ವಿಜ್ಞಾನದಲ್ಲಿ ಕಣ್ಣು ತೆರೆಸಿದವರು ಸಂಜೀವ ಮಾಸ್ಟರ್, ಕನ್ನಡದ ಕಂಪನ್ನು ಹೃದಯಕ್ಕೆ ತುಂಬಿಸಿದವರು ರಮೇಶ್ ಮಾಸ್ಟರ್, ಕ್ರಿಕೆಟ್ ಆಟದಲ್ಲಿ ಹುರಿದುಂಬಿಸಿದವರು ಶ್ರೀನಿವಾಸ ಹೆಗ್ಡೆ, ವಿಜ್ಞಾನದಲ್ಲಿ ನಮ್ಮ ಕಣ್ಣು ತೆರೆಸಿದವರು ಪ್ರಕಾಶ ಮಾಸ್ಟರು, ಲೆಕ್ಕವೆಂದರೆ ಲೆಕ್ಕವೇ ಅಲ್ಲ ಅನ್ನುವ ತರದಲ್ಲಿ ಧೈರ್ಯ ತುಂಬಿದವರು ಗೇೂಪಾಲ ಮಾಸ್ಟರ್..
ಒಂದು ವರುಷದಲ್ಲಿ ವಿಜ್ಞಾನದ ಸುಖ ಕಷ್ಟಗಳನ್ನು ಕಲಿಸಿದ ಕಾಲೇಜು ಬ್ರಹ್ಮಾವರ ಎಸ್.ಎಂ.ಎಸ್.ಜೂನಿಯರ್ ಕಾಲೇಜು. ಗಣಿತ ಅಂದರೆ ಕಷ್ಟ..ಆದರೆ ಪ್ರೀತಿಯಿಂದ ನಡೆಸಿಕೊಂಡವರು ಮನ ಮೇೂಹನರಾಯರು.. ಭೌತಶಾಸ್ತ್ರ ದಲ್ಲಿ ತೂಗಿ ಅಳೆದವರು ಸುವಾರಿಸ್ ರು, ರಾಸಾಯನ ಶಾಸ್ತ್ರದಲ್ಲಿ ನಗುವಿನ ಅನಿಲವನ್ನು ಮೂಗಿಗೆ ತಾಗಿಸಿದವರು ಯು.ಎಲ್.ಭಟ್ಟರು, ಕಪ್ಪೆಯನ್ನು ಕೈಯಲ್ಲಿ ಹಿಡಿದು ಆಪರೇಷನ್ ಮಾಡಿಸಿದವರು ಮಹಾಲಿಂಗ ಭಟ್ಟರು, ಇಂಗ್ಲಿಷ್ ನ ಘನ ಗಂಭೀರತೆಯನ್ನು ತುಂಬಿಸಿದವರು ಮ್ಯಾಥ್ಯೂ ನೈನಾನ್ ರು, ಕನ್ನಡದ ವ್ಯಕ್ತಿಯ ಸೌಂದರ್ಯತೆಯನ್ನು ಪರಿಚಯಿಸಿದವರು ಈಶ್ವರ ಭಟ್ಟರು.
ಶಿಕ್ಷಣ ಸಾಹಿತ್ಯದ ಬದುಕನ್ನು ಸಂಪನ್ನ ಗೊಳಿಸಿದ ಕಾಲೇಜು ಹಿರಿಯಡಕ ಸರಕಾರಿ ಪದವಿಪೂರ್ವ ಕಾಲೇಜು.ವಿಜ್ಞಾನದ ಸುಖ ಕಷ್ಟಗಳನ್ನು ಅನುಭವಿಸಿ ಬಂದ ಈ ಬಡ ವಿದ್ಯಾರ್ಥಿಗೆ ಶಿಕ್ಷಣ ಬಗ್ಗೆ ಪ್ರೀತಿ ವಿಶ್ವಾಸ ಮೂಡಿಸಿದವರು ಶ್ರೀನಿವಾಸ ಪ್ರಭುಗಳು; ಸಾಹಿತ್ಯ ಪ್ರಪಂಚಕ್ಕೆ ಪರಿಚಯಿಸಿದವರು ಚಿಕ್ಕನಾಯಕನಹಳ್ಳಿ ನಾಗರಾಜ್ ರಾಯರು, ಒದ್ದೆ ಮೇಕ್ ಇಟ್ ಮುದ್ದೆ..ಅನ್ನುವುದರ ಮೂಲಕ “ಕೂಕ್ಸ್ ಕ್ಲಬ್ ” ಇಂಗ್ಲಿಷ್ ನಾಟಕದಲ್ಲಿ ನನ್ನನ್ನು ಹೀರೊ ಮಾಡಿದವರು ಸ್ಟೇಲಾ ಮೇಡಂ, ರಾಜ್ಯ ಶಾಸ್ತ್ರದಲ್ಲಿ ರಾಜಕೀಯ ಪರಿಚಯಿಸಿದವರು ಹಿತ್ಲಮನೆಯವರು, ಇತಿಹಾಸವನ್ನು ಪಕ್ಕಾ ಇಂಗ್ಲಿಷ್ ನಲ್ಲಿ ತಲೆಗೆ ತುಂಬಿಸಿದವರು ಧಾರವಾಡದ ಎನ್.ಜಿ.ಸೆಟ್ಟಿಯವರು, ಅರ್ಥ ಶಾಸ್ತ್ರವನ್ನು ಕಿವಿಗೆ ಕೇಳುವಷ್ಟೆ ಮೆಲುಧ್ವನಿಯಲ್ಲಿ ತಿಳಿಸಿದವರು ಮಸ್ಕರೇನಿಸ್ ರು;
|ಉನ್ನತ ಶಿಕ್ಷಣಕ್ಕೆ ದಾರಿ ತೇೂರಿಸಿ ಪ್ರತಿಭೆ ವ್ಯಕ್ತಿತ್ವ ಬೆಳೆಸಿದ ಶಿಕ್ಷಣ ಸಂಸ್ಥೆ ಉಡುಪಿ ಎಂಜಿ ಎಂ.ಕಾಲೇಜು. ಮಾತೃ ಹೃದಯದ ಪ್ರೀತಿ ತುಂಬಿದವರು ಇಂದಿರಾ ಕಿದಿಯೂರ್ ; ರಾಜಕೀಯ ಶಾಸ್ತ್ರದಲ್ಲಿ ಪಾರ್ಥನಾಗಿ ಕುಣಿದು ಉಪನ್ಯಾಸದ ರುಚಿಯನ್ನು ತುಂಬಿದವರು ಎಂ.ಡಿ.ನಂಜುಂಡರು; ಬಂಟನೂ ಹೆದರಬೇಕು ಅಂತಹ ಕಂಠದ ಅರ್ಥ ಶಾಸ್ತ್ರ ಪ್ರಾಧ್ಯಾಪಕ ರಾಮ ಭಟ್ಟರು; ರಾಜಕೀಯ, ಅರ್ಥ ಶಾಸ್ತ್ರದಲ್ಲಿ ಪುರಾಣಗಳನ್ನೆ ಧರೆಗಿಳಿಸಿದವರು ಶ್ರೀಶ ಬಲ್ಲಾಳ್ ರು; ಅಸ್ಕಲಿತವಾದ ಧ್ವನಿಮುದ್ರಿಕೆವೊ ಅನ್ನುವ ಹಾಗೆ ಇತಿಹಾಸವನ್ನು ಬಿಚ್ಚಿ ಇಟ್ಟವರು ಪದಕಣ್ಣಯ್ಯ, ಸ್ವಲ್ಪವೂ ಅಲುಗಾಡದೆ ನಿಂತ ನಿಲುವಿನಲ್ಲಿಯೇ ಇತಿಹಾಸವನ್ನು ಕಿವಿಗೆ ತುಂಬಿದವರು ಬಾಲಚಂದ್ರರು.
ಇತಿಹಾಸದಲ್ಲಿ ಪಾಶ್ಚಾತ್ಯ ವನ್ನು ಮೆಚ್ಚಿ ಕೊಂಡು ಕೊನೆಗೂ ಸೇೂಮಯಾಜಿ ಸ್ಥಾನ ಪಡೆದ ಅತ್ಯಂತ ಸ್ಪೂರದ್ರೂಪಿ ಉಪನ್ಯಾಸಕರು ಅನ್ನಿಸಿಕೊಂಡ ಅನಂತ ಕೃಷ್ಣ ಸೇೂಮಯಾಜಿಗಳು: ಶಾಕುಂತಲ ನಾಟಕವನ್ನು ವಲ್ಕಲೆಗಳು ಕಣ್ಣಿಗೆ ಬಿಗುದಪುವಂತೆ ಪಾಠ ಮಾಡಿದ ವಕ್ವಾಡಿ ಶ್ರೀನಿವಾಸ ಭಟ್ಟರು;some task for education ಅನ್ನುವnon detail ಪಾಠವನ್ನು ಇಂದಿಗೂ ಡಿಟೈಲ್ ಆಗಿ ನೆನಪಿಸುವಂತೆ ಕಲಿಸಿದ ಎನ್ ಟಿ ಭಟ್ಟರು; ಇವರನ್ನೆಲ್ಲ ಅವರ ಶಿಷ್ಯರು ಮರೆಯಲು ಹೇಗೆ ಸಾಧ್ಯ?
ಸ್ನಾತಕೋತ್ತರ ಶಿಕ್ಷಣಕ್ಕಾಗಿ ಹಾರಿದ್ದು ಕೊಣಾಜೆಯ ಮಂಗಳೂರು ವಿಶ್ವ ಜ್ಞಾನದ ನೆಲದ ಕಡೆಗೆ.ರಾಜ್ಯ ಶಾಸ್ತ್ರವೇ ನನ್ನ ಪ್ರೀತಿಯ ಆಯ್ಕೆ. ವಿಭಾಗದ ಮುಖ್ಯಸ್ಥ ಡಾ.ಮಲ್ಲಯ್ಯ ನವರ ಗರಡಿಯಲ್ಲಿ ರಾಜ್ಯ ಶಾಸ್ತ್ರದ ಪೀಠ ಸ್ವೀಕಾರ. ಸರಳವಾಗಿ ಬೇೂಡಿ೯ನಲ್ಲಿ ಚೊಕ್ಕದಾಗಿ ಬರೆದು ರಾಜಕೀಯ ತತ್ವಶಾಸ್ತ್ರ ವನ್ನು ಹೃದಯಕ್ಕೆ ತುಂಬಿಸಿದವರು ಡಾ.ವೆಲೇರಿಯನ್ ರಾಡ್ರೀಗಸ್ ; ಸಹೇೂದರನ ತರದಲ್ಲಿ ನಿಂತು ಕಲಿಸಿದವರು ಡಾ.ಸದಾನಂದ ರು;ಮುಟ್ಟಿದರೆ ಮುನಿ ಅನ್ನುವ ಸಾಧು ಸ್ವಭಾವದ ಜಮ್ಮಿಲ್ ಅಹ್ಮದ್; ಈ ಎಲ್ಲಾ ಶಿಕ್ಷಕರ ಹಿರಿಯ ಪ್ರಖಂಡ ರಾಜಕೀಯ ಶಾಸ್ತ್ರ ಪಂಡಿತರ ಪಾಠ ಕೇಳಿಸಿಕೊಂಡ ನಾವುಗಳೇ ಧನ್ಯರು..
ಡಾ.ಎಸ್.ರಾಧಾಕೃಷ್ಣನ್ ಹೇಳಿದ ಮಾತು ಇದೆ..ಜ್ಞಾನದ ಬೆಳಕನ್ನು ವಾಸ್ತವಿಕ ಬದುಕಿನತ್ತ ನಡೆಸುವುದೇ ನಿಜವಾದ ಶಿಕ್ಷಣ..ಇಂತಹ ಮೌಲ್ಯಾಧಾರಿತ ಶಿಕ್ಷಣ ನಾನು ಕಲಿತ ಈ ಎಲ್ಲಾ ಶಿಕ್ಷಣ ಸಂಸ್ಥೆಗಳಿಂದ ದೊರಕಿದೆ..ಇದಕ್ಕೆಲ್ಲ ಮೂಲಭೂತವಾಗಿ ಕಾರಣೀಕರ್ತರು ನನ್ನ ಈ ಎಲ್ಲಾ ಪೂಜ್ಯ ಗುರುವರ್ಯರು..ನಿಮಗೆ ಮೊದಲಾಗಿ ಶಿರ ಭಾಗಿವಂದಿಸುತ್ತೇನೆ.
*ಪ್ರೊ.ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ. ಉಡುಪಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Ullala; ನೇಮದ ಗದ್ದೆಯಲ್ಲಿ ತ್ಯಾಜ್ಯ ರಾಶಿ: ವೈದ್ಯನಾಥ ದೈವದ ಕೋಪಾವೇಶ
Security ನೀಡುವಂತೆ ಕೇಂದ್ರ ಸಚಿವರಿಗೆ ಸ್ನೇಹಮಯಿ ಪತ್ರ
Puttur: ನಿಯಂತ್ರಣ ತಪ್ಪಿ ಗುಂಡಿಗೆ ಬಿದ್ದ ಕಾರು; ಮೂವರ ದುರ್ಮರಣ
INDvsAUS: ವಿಚಿತ್ರ ರೀತಿಯಲ್ಲಿ ಔಟಾದ ರಿಷಭ್ ಪಂತ್ ವಿರುದ್ದ ಕಿಡಿಕಾರಿದ ಗಾವಸ್ಕರ್
Hathras: ಶಾಲೆಗೆ ರಜೆ ಸಿಗಬೇಕೆಂದು 2ನೇ ತರಗತಿ ಮಗುವನ್ನು ಕೊಂದ ವಿದ್ಯಾರ್ಥಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.