ದಶಕದ ಟೆಸ್ಟ್ ಯಾನ : ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪಾಲಿಗೂ ಮಹತ್ವದ ದಿನ
Team Udayavani, Jun 20, 2021, 10:00 PM IST
ಹೊಸದಿಲ್ಲಿ: ರಾಹುಲ್ ದ್ರಾವಿಡ್ ಮತ್ತು ಸೌರವ್ ಗಂಗೂಲಿ ಅವರ ಟೆಸ್ಟ್ ಪದಾರ್ಪಣೆಯ ಬೆಳ್ಳಿಹಬ್ಬದ ದಿನವನ್ನು ಈಗಾಗಲೇ ಎಲ್ಲರೂ ಸಂಭ್ರಮಿಸಿದ್ದಾರೆ. ಇದೇ ವೇಳೆ ಜೂನ್ 20ರ ರವಿವಾರ ಎನ್ನುವುದು ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪಾಲಿಗೂ ಮಹತ್ವದ ದಿನವಾಗಿತ್ತು ಎಂಬುದನ್ನು ಮರೆಯುವಂತಿಲ್ಲ. ಕೊಹ್ಲಿ ಟೆಸ್ಟ್‌ಕ್ಯಾಪ್ ಧರಿಸಿ ದಶಕವೊಂದು ಪೂರ್ತಿಗೊಂಡಿತು!
2011ರ ವೆಸ್ಟ್ ಇಂಡೀಸ್ ಪ್ರವಾಸದ ವೇಳೆ ಕಿಂಗ್‌ಸ್ಟನ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಕೊಹ್ಲಿಗೆ ಭಾರತವನ್ನು ಪ್ರತಿನಿಧಿಸುವ ಅವಕಾಶ ಸಿಕ್ಕಿತು. ಜತೆಗೆ ಅಭಿನವ್ ಮುಕುಂದ್ ಮತ್ತು ಪ್ರವೀಣ್ ಕುಮಾರ್ ಅವರಿಗೂ ಇದು ಪದಾರ್ಪಣ ಟೆಸ್ಟ್ ಆಗಿತ್ತು. ಈ ಮೂವರಲ್ಲಿ ತಂಡದ ಖಾಯಂ ಸದಸ್ಯನಾಗಿ ಉಳಿದುಕೊಂಡವರು ಕೊಹ್ಲಿ ಮಾತ್ರ.
ರಾಹುಲ್ ದ್ರಾವಿಡ್, ವಿವಿಎಸ್ ಲಕ್ಷ್ಮಣ್ ಅವರಂಥ ವಿಶ್ವ ದರ್ಜೆಯ ಆಟಗಾರರನ್ನು ಒಳಗೊಂಡ ತಂಡ ಇದಾಗಿತ್ತು.
ಕೊಹ್ಲಿ ಅದೃಷ್ಟದ ಪ್ರವೇಶ
ವಿರಾಟ್ ಕೊಹ್ಲಿ ಎರಡೂ ಇನ್ನಿಂಗ್ಸ್‌ಗಳಲ್ಲಿ 5ನೇ ಕ್ರಮಾಂಕದಲ್ಲಿ ಆಡಲಿಳಿದಿದ್ದರು. ಗಳಿಸಿದ್ದು 4 ಮತ್ತು 15 ರನ್. ಆದರೆ ಕೊಹ್ಲಿ ಪ್ರವೇಶ ಎನ್ನುವುದು ಭಾರತದ ಪಾಲಿಗೆ ಅದೃಷ್ಟವನ್ನೇ ತಂದಿತ್ತು. ಟೀಮ್ ಇಂಡಿಯಾ 63 ರನ್ನುಗಳಿಂದ ಗೆದ್ದು 1-0 ಮುನ್ನಡೆ ಸಾಧಿಸಿತ್ತು.
ಇದನ್ನೂ ಓದಿ :ಕಪ್ಪು ರಂಧ್ರಗಳ ಬಗೆಗಿನ ವಿಜ್ಞಾನಿ ಸ್ಟೀಫನ್ ಹಾಕಿಂಗ್ಸ್ ಪ್ರಮೇಯಕ್ಕೆ ವಿಜ್ಞಾನಿಗಳ ಮೊಹರು
ಅಗ್ರಮಾನ್ಯ ಬ್ಯಾಟ್ಸ್‌ಮನ್
ಈ ಒಂದು ದಶಕದಲ್ಲಿ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ಏರಿದ ಎತ್ತರ, ನೆಟ್ಟ ಮೈಲುಗಲ್ಲು, ಸ್ಥಾಪಿಸಿದ ದಾಖಲೆಗಳು ಅಸಂಖ್ಯ. ವಿಶ್ವಕಪ್ ಫೈನಲ್ ಸೇರಿದಂತೆ 92 ಟೆಸ್ಟ್ ಆಡಿರುವ ಕೊಹ್ಲಿ, 27 ಶತಕಗಳನ್ನು ಒಳಗೊಂಡ 7,534 ರನ್ ಪೇರಿಸಿದ್ದಾರೆ. ಐತಿಹಾಸಿಕ ಫೈನಲ್‌ನಲ್ಲಿ ಭಾರತದ ಸರ್ವಾಧಿಕ ಟೆಸ್ಟ್ ನಾಯಕತ್ವದ ದಾಖಲೆಯನ್ನೂ ಸ್ಥಾಪಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
TeamIndia; ಮುಗಿಯಿತಾ ರೋಹಿತ್ ವೃತ್ತಿಜೀವನ? ಮೆಲ್ಬೋರ್ನ್ ಗೆ ಬಂದ ಅಗರ್ಕರ್ ಹೇಳಿದ್ದೇನು?
INDvAUS: ನಿತೀಶ್ ಕುಮಾರ್ ಆಕರ್ಷಕ ಶತಕ; ಫಾಲೋಆನ್ ಅವಮಾನದಿಂದ ಪಾರು
INDvsAUS: ವಿಚಿತ್ರ ರೀತಿಯಲ್ಲಿ ಔಟಾದ ರಿಷಭ್ ಪಂತ್ ವಿರುದ್ದ ಕಿಡಿಕಾರಿದ ಗಾವಸ್ಕರ್
Vijay Hazare Trophy: ಅರುಣಾಚಲ ಎದುರಾಳಿ; ರಾಜ್ಯಕ್ಕೆ 4ನೇ ಜಯದ ನಿರೀಕ್ಷೆ
Pro Kabaddi: ಹರಿಯಾಣ- ಪಾಟ್ನಾ ಫೈನಲ್ ಹಣಾಹಣಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.