ಖ್ಯಾತ ತೆಲುಗು ಲೇಖಕ, ನಿರ್ದೇಶಕ ನಂದ್ಯಾಲಾ ರವಿ ಕೋವಿಡ್ ನಿಂದ ನಿಧನ
ನಿರ್ದೇಶಕ ಕೆವಿ ಆನಂದ್, ನಟ ಬಿಕ್ರಮ್ ಜೀತ್ ಕನ್ವರ್ ಪಾಲ್ ಕೋವಿಡ್ 19 ಸೋಂಕಿನಿಂದ ಸಾವನ್ನಪ್ಪಿದ್ದರು.
Team Udayavani, May 15, 2021, 6:43 PM IST
ಹೈದರಾಬಾದ್: ಖ್ಯಾತ ತೆಲುಗು ಲೇಖಕ, ಸಿನಿಮಾ ನಿರ್ದೇಶಕ ನಂದ್ಯಾಲಾ ರವಿ ಅವರು ಶುಕ್ರವಾರ(ಮೇ 14) ಹೈದರಾಬಾದ್ ನ ಆಸ್ಪತ್ರೆಯಲ್ಲಿ ಕೋವಿಡ್ ಸಂಬಂಧಿ ಸಮಸ್ಯೆಯಿಂದ ನಿಧನರಾಗಿರುವುದಾಗಿ ವರದಿ ತಿಳಿಸಿದೆ.
ಕಳೆದ ಮೂರು ವಾರಗಳಿಂದ ಕೋವಿಡ್ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮಾರಣಾಂತಿಕ ಸೋಂಕಿಗೆ ಕೊನೆಯುಸಿರೆಳೆದಿರುವುದಾಗಿ ವರದಿ ಹೇಳಿದೆ. ನೇನು ಸೀತಾಮಹಾಲಕ್ಷ್ಮಿ, ಅಸಾಧ್ಯುಡು ಮತ್ತು ಪಾಂಡೆಮ್ ಸೇರಿದಂತೆ ಹಲವು ಚಿತ್ರಗಳಿಗೆ ರವಿ ಸಂಭಾಷಣೆ ಬರೆದಿದ್ದರು.
ನಂತರ ರವಿ ನಂದ್ಯಾಲಾ ಅವರು ಚಿತ್ರ ನಿರ್ದೇಶನಕ್ಕೆ ಮುಂದಾಗಿದ್ದರು. ಆ ನಿಟ್ಟಿನಲ್ಲಿ ನಾಗ ಶೌರ್ಯ ಮತ್ತು ಅವಿಕಾ ಗೋರ್ ಅಭಿನಯದ “ಲಕ್ಷ್ಮಿ ರಾವ್ ಮಾ ಇಂಟಿಕಿ” ಚಿತ್ರವನ್ನು ರವಿ ನಿರ್ದೇಶಿಸಿದ್ದರು. ಬಳಿಕ ಪವರ್ ಪ್ಲೇ ಮತ್ತು ರೈಡರ್ ಚಿತ್ರಗಳನ್ನು ನಿರ್ದೇಶಿಸಿದ್ದರು.
ಕೋವಿಡ್ ಎರಡನೇ ಅಲೆ ಸಿನಿಮಾ ರಂಗದ ಹಲವು ನಟ, ನಿರ್ದೇಶಕರನ್ನು ಬಲಿ ತೆಗೆದುಕೊಂಡಿದೆ. ತಮಿಳು ನಿರ್ದೇಶಕ ತಾಮೀರಾ, ನಟಿ ಶಶಿಕಲಾ, ನಟ ರಾಹುಲ್ ವೋಹ್ರಾ, ನಿರ್ದೇಶಕ ಕೆವಿ ಆನಂದ್, ನಟ ಬಿಕ್ರಮ್ ಜೀತ್ ಕನ್ವರ್ ಪಾಲ್ ಕೋವಿಡ್ 19 ಸೋಂಕಿನಿಂದ ಸಾವನ್ನಪ್ಪಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Aishwarya Rai ಖುಷಿಗಿಂತ ಬೇರೇನು ಬೇಕು?: ಮಾಜಿ ಪ್ರೇಮಿ ಸಲ್ಮಾನ್
‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ
Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Mika Singh: ಮಿಕಾ ಹಾಡಿಗೆ ಫಿದಾ..ಪಾಕ್ ಅಭಿಮಾನಿಯಿಂದ 3 ಕೋಟಿ ರೂ. ವಾಚ್, ಚಿನ್ನ ಗಿಫ್ಟ್
Actress: ಸಲ್ಮಾನ್,ಶಾರುಖ್ ಬಳಿಕ ಖ್ಯಾತ ನಟಿಗೆ ಜೀವ ಬೆದರಿಕೆ.. 50 ಲಕ್ಷ ರೂ. ಡಿಮ್ಯಾಂಡ್
MUST WATCH
ಹೊಸ ಸೇರ್ಪಡೆ
Byndoor: ಮೀನು ಸಾಗಿಸುವ ವಾಹನದಲ್ಲಿ ಜಾನುವಾರು ಸಾಗಾಟ!
Aishwarya Rai ಖುಷಿಗಿಂತ ಬೇರೇನು ಬೇಕು?: ಮಾಜಿ ಪ್ರೇಮಿ ಸಲ್ಮಾನ್
Mangaluru: ಡಿಜಿಟಲ್ ಅರೆಸ್ಟ್, ಷೇರು ಮಾರುಕಟ್ಟೆ ಹೂಡಿಕೆ ವಂಚನೆ ಪ್ರಕರಣ; ಮೂವರ ಬಂಧನ
Shakti scheme; ಪುರುಷರಿಗೆ ಉಚಿತ ಪ್ರಯಾಣ ಸೌಲಭ್ಯ ಇಲ್ಲ: ರಾಮಲಿಂಗಾರೆಡ್ಡಿ
CBSE: ಶೇ.15 ಪಠ್ಯಕ್ರಮ ಕಡಿತ, ತೆರೆದ ಪುಸ್ತಕ ಮಾದರಿ ಪರೀಕ್ಷೆ ಇಲ್ಲ: ಸಿಬಿಎಸ್‌ಇ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.