Tender Open: ತುರ್ತು ಸೇವೆಗೆ ಬರಲಿದೆ ಮೂರು ಸೀ ಆ್ಯಂಬುಲೆನ್ಸ್
ಮೀನುಗಾರರಿಗೆ ಅನುಕೂಲ, ಮಲ್ಪೆ, ಮಂಗಳೂರು, ತದಡಿ ಬಂದರಿನಿಂದ ಕಾರ್ಯಾಚರಣೆ
Team Udayavani, Oct 6, 2024, 7:50 AM IST
ಮಲ್ಪೆ: ಮೀನುಗಾರರ ಹಲವು ವರ್ಷಗಳ ಬೇಡಿಕೆಗಳಲ್ಲಿ ಒಂದಾದ ಸೀ ಆ್ಯಂಬುಲೆನ್ಸ್ ಖರೀದಿಗೆ ಮೀನುಗಾರಿಕೆ ಇಲಾಖೆ ಸಿದ್ಧತೆ ನಡೆಸಿದ್ದು, ಟೆಂಡರ್ ಪ್ರಕಿಯೆಗೆ ಚಾಲನೆ ಸಿಕ್ಕಿದೆ.
ಸಮುದ್ರ ಮಧ್ಯೆ ಅವಘಡಗಳು ಸಂಭವಿಸಿದಾಗ ತುರ್ತು ರಕ್ಷಣ ಕಾರ್ಯಕ್ಕಾಗಿ ಇಂಥದ್ದೊಂದು ಆ್ಯಂಬು ಲೆನ್ಸ್‌ಗೆ ಮೀನುಗಾರರು ಹಲವು ವರ್ಷ ದಿಂದ ಸರಕಾರಕ್ಕೆ ಬೇಡಿಕೆ ಸಲ್ಲಿಸುತ್ತಿದ್ದು, ಅಧಿವೇಶನದಲ್ಲೂ ಪ್ರಸ್ತಾವವಾಗಿತ್ತು. ಸೀ ಆ್ಯಂಬುಲೆನ್ಸ್ ಅನ್ನು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು, ಉಡುಪಿ ಜಿಲ್ಲೆಯ ಮಲ್ಪೆ ಹಾಗೂ ಉ. ಕನ್ನಡ ಜಿಲ್ಲೆಯ ತದಡಿ ಬಂದರಿನಲ್ಲಿ ಇರಿಸಲು ಅವಕಾಶ ಕಲ್ಪಿಸಲಾಗುತ್ತದೆ. 3 ಆ್ಯಂಬುಲೆನ್ಸ್‌ಗಾಗಿ 7 ಕೋ. ರೂ ವ್ಯಯಿಸಲು ನಿರ್ಧರಿಸಲಾಗಿದೆ ಎನ್ನಲಾಗುತ್ತದೆ.
ಚಿಕಿತ್ಸೆ ಸಿಗುತ್ತಿರಲಿಲ್ಲ
ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಮೀನುಗಾರಿಕೆ ನಡೆಯುತ್ತಿದೆ. ಸದಾ ಅಪಾಯದಲ್ಲಿಯೇ ಸಮುದ್ರದಲ್ಲಿ ಕಾರ್ಯ ನಿರ್ವಹಿಸುವ ಮೀನುಗಾರರು ಅವಘಡಕ್ಕೆ ಸಿಲುಕಿದಾಗ ಸಕಾಲದಲ್ಲಿ ಚಿಕಿತ್ಸೆ ದೊರೆಯದೆ ಮೃತಪಟ್ಟ ಉದಾಹರಣೆಗಳೂ ಇವೆ.
ಏನೆಲ್ಲ ವೈದಕೀಯ ಪರಿಕರಗಳು?
ಸಮುದ್ರದಲ್ಲಿ ಮೀನುಗಾರರಿಗೆ ಅಥವಾ ಸಾರ್ವಜನಿಕರಿಗೆ ಯಾವುದಾ ದರೂ ಸಮಸ್ಯೆಯಾದಾಗ ತತ್‌ಕ್ಷಣ ನೆರವಿಗೆ ಧಾವಿಸಿ ಅವರಿಗೆ ವೈದ್ಯ ಕೀಯ ಸೇವೆ ನೀಡಲಾಗುತ್ತದೆ. ಒಂದು ಆ್ಯಂಬುಲೆನ್ಸ್‌ನಲ್ಲಿ ಐವರು ರೋಗಿ ಗಳನ್ನು ಕರದೊಯ್ಯಲುಅವಕಾಶವಿದ್ದು, ಬೋಟಿನಲ್ಲೇ ಚಿಕಿತ್ಸೆ ನೀಡುವ ವ್ಯವಸ್ಥೆ ಯನ್ನೂ ಅಳವಡಿಸಲಾಗುತ್ತದೆ. ಇಸಿಜಿ, ಬ್ಯಾಗ್ ಮತ್ತು ಮಾಸ್ಕ್ ವೆಂಟಿಲೇಶನ್ ಡಿವೈಸ್, ಪಲ್ಸ್ ಆಕ್ಸಿಮೀಟರ್, ಸ್ಟ್ರಚ್ಚರ್, ಶವಾಗಾರಕ್ಕಾಗಿ ಶೀತಲೀಕರಣ ಘಟಕ, ಅದರ ಜತೆಗೆ ರಕ್ಷಣ ಸಿಬಂದಿ, ಆಕ್ಸಿಜನ್ ಸಿಲಿಂಡರ್ ಸಹಿತ ವೈದ್ಯಕೀಯ ಚಿಕಿತ್ಸಾ ಪರಿಕರಗಳು ಒಳಗೊಂಡಿದೆ.
‘ಸೀ ಆ್ಯಂಬುಲೆನ್ಸ್‌ಗಾಗಿ 7-8 ವರ್ಷಗಳಿಂದ ಅಗ್ರಹಿಸುತ್ತಾ, ಸಮು ದ್ರದ ಮಧ್ಯೆ ಮೀನುಗಾರರಿಗೆ ಏನಾದರೂ ಅವಘಡ ಉಂಟಾದರೆ ಅವರನ್ನು ದಡಕ್ಕೆ ತರುವಾಗ ಪ್ರಾಣಪಕ್ಷಿ ಹಾರಿಹೋಗುತ್ತದೆ. ಈಗ ನಮ್ಮ ಬೇಡಿಕೆಗೆ ಮನ್ನಣೆ ದೊರೆತಂತಾಗಿದೆ.’
-ಜಯ ಸಿ. ಕೋಟ್ಯಾನ್ ಅಧ್ಯಕ್ಷರು, ಕರ್ನಾಟಕ ಕರಾವಳಿ ಮೀನುಗಾರರ ಕ್ರಿಯಾ ಸಮಿತಿ
‘ಸೀ ಆ್ಯಂಬುಲೆನ್ಸ್‌ಗಳನ್ನು ಪ್ರಮುಖವಾಗಿ ವೈದ್ಯಕೀಯ ಉದ್ದೇಶಗಳಿಗೆ ಬಳಸಲಾಗುತ್ತದೆ. ಇಲಾಖೆಯ ಯೋಜನೆಯಂತೆ ಕರಾವಳಿಯ ಮೂರು ಜಿಲ್ಲೆಗಳಲ್ಲಿ ಸೇವೆ ಆರಂಭವಾಗಲಿದೆ. ಟೆಂಡರ್ ಪ್ರಕಿಯೆಗೆ ಚಾಲನೆ ದೊರೆತಿದ್ದು, ಕೆಲವೇ ತಿಂಗಳಲ್ಲಿ ನೂತನ ಆ್ಯಂಬುಲೆನ್ಸ್ ಕಡಲಿಗಿಳಿಯಲಿವೆ.’
– ವಿವೇಕ್ ಆರ್. ಜಂಟಿ ನಿರ್ದೇಶಕರು, ಮೀನುಗಾರಿಕೆ ಇಲಾಖೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
KMC: ನವೀಕೃತ ವೈದ್ಯಕೀಯ ಆಂಕೊಲಾಜಿ ಹೊರರೋಗಿ, ಕಿಮೊಥೆರಪಿ ಡೇ ಕೇರ್ ಕೇಂದ್ರ ಉದ್ಘಾಟನೆ
Kollur; ಉಪಚುನಾವಣೆಯ ಸೋಲು ಗೆಲುವು ದೇವರ ಫಲಾಫಲ: ಡಿಸಿಎಂ ಡಿ. ಕೆ. ಶಿವಕುಮಾರ್
Naxal Encounter: ದಕ್ಷಿಣ ಭಾರತದಲ್ಲಿ ಇನ್ನುಳಿದಿರುವುದು ಎಂಟೇ ಮಂದಿ ನಕ್ಸಲರು!
Naxal Encounter: ಬಂಧಿತ ಸುರೇಶ್ ಅಂಗಡಿ ಮಾಹಿತಿಯಂತೆ ʼಆಪರೇಷನ್ ವಿಕ್ರಂ ಗೌಡʼ
Naxal Encounter: ನಕ್ಸಲ್ ವಿಕ್ರಂ ಗೌಡ ಅಪಾಯಕಾರಿ ಶಸ್ತ್ರಾಸ್ತ್ರ ಹೊಂದಿದ್ದ: ಡಿಜಿಪಿ
MUST WATCH
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ
ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು
ಶರಣಾಗತಿಗೆ ಸೂಚಿಸಿದರೂ ಸ್ಪಂದಿಸಿಲ್ಲ, ಗುಂಡಿನ ಚಕಮಕಿಯಲ್ಲಿ ಮೋಸ್ಟ್ ವಾಂಟೆಡ್ ನಕ್ಸಲ್ ಸಾವು
ಹೊಸ ಸೇರ್ಪಡೆ
Sandalwood: ಯಾರೋ ನಾ ಕಾಣೆ, ಚಂದಾಗೌಳೆ ಶಾಣೆ..: ಕಟ್ಲೆ ಹಾಡು ಬಂತು
Border Gavaskar Trophy: ಕಾಂಗರೂ ಚಾಲೆಂಜ್ ಗೆ ಅಣಿಯಾದ ಭಾರತ; ಹೇಗಿದೆ ತಂಡದ ಬಲಾಬಲ
Kollywood: ʼಅಮರನ್ʼ ಚಿತ್ರತಂಡದಿಂದ 1 ಕೋಟಿ ರೂ. ಪರಿಹಾರ ಕೇಳಿದ ವಿದ್ಯಾರ್ಥಿ; ಕಾರಣವೇನು?
Netanyahu ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಬಂಧನ ವಾರಂಟ್
Viral Photo: ಬಾಲಿವುಡ್ ನಟ ಆಮಿರ್ ಖಾನ್ ಭೇಟಿಯಾದ ಕಿಚ್ಚ ಸುದೀಪ್; ಫ್ಯಾನ್ಸ್ ಥ್ರಿಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.