ಗರ್ಭಪಾತ ತೀರ್ಪು ಸೋರಿಕೆ: ಅಮೆರಿಕದಲ್ಲಿ ಭಾರೀ ಸಂಚಲನ
Team Udayavani, May 5, 2022, 8:10 AM IST
ವಾಷಿಂಗ್ಟನ್: ಅಮೆರಿಕದಾದ್ಯಂತ ಈಗ ಗರ್ಭಪಾತ ಕಾನೂನು ಸದ್ದು ಮಾಡಲಾರಂಭಿಸಿದೆ. ಗರ್ಭಪಾತಕ್ಕೆ ನಿಷೇಧ ಹೇರಲು ಸುಪ್ರೀಂ ಕೋರ್ಟ್ ಚಿಂತನೆ ನಡೆಸಿದೆ ಎಂಬ ವರದಿ ದೇಶಾದ್ಯಂತ ಸಂಚಲನಕ್ಕೆ ಕಾರಣವಾಗಿದೆ.
ಹಿಂದಿನಿಂದಲೂ ಗರ್ಭಪಾತ ನಿಷೇಧವನ್ನು ಬೆಂಬಲಿಸುತ್ತಾ ಬಂದಿರುವ ರಿಪಬ್ಲಿಕನ್ನರು ಮತ್ತು ಗರ್ಭಪಾತ ಮಾಡಿಸಿಕೊಳ್ಳುವುದು ಮಹಿಳೆಯರ ಆಯ್ಕೆಗೆ ಬಿಟ್ಟಿದ್ದು ಎನ್ನುತ್ತಾ ಬಂದಿರುವ ಡೆಮಾಕ್ರಾಟ್ ನಾಯಕರ ನಡುವೆ ವಾಕ್‌ವಾರ್ ಶುರುವಾಗಿದ್ದು, ದೇಶಾದ್ಯಂತ ಪರ-ವಿರೋಧ ಪ್ರತಿಭಟನೆಗಳೂ ಆರಂಭವಾಗಿವೆ. ಇದು ದೇಶವನ್ನು ಮತ್ತೆ ವಿಭಜನೆ ಮಾಡಲಿದೆಯೇ ಎಂಬ ಆತಂಕವೂ ಮೂಡಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಅಧ್ಯಕ್ಷ ಜೋ ಬೈಡೆನ್, “ಮಹಿಳೆಯರಿಗೆ ನೀಡಲಾದ ಆಯ್ಕೆಯ ಹಕ್ಕು ಮೂಲಭೂತವಾದದ್ದು. ಅದನ್ನು ಕಿತ್ತುಕೊಳ್ಳಬಾರದು. ಇಂಥ ತೀರ್ಪು ಸಲಿಂಗ ವಿವಾಹ, ಮಕ್ಕಳನ್ನು ಹೇಗೆ ಬೆಳೆಸಬೇಕು ಸೇರಿದಂತೆ ನಿಮ್ಮ ಖಾಸಗಿತನದ ಅಡಿ ಬರುವ ಎಲ್ಲ ನಿರ್ಧಾರಗಳನ್ನೂ ಮತ್ತೂಬ್ಬರು ನಿರ್ಣಯಿಸಿದಂತಾಗುತ್ತದೆ. ಇದು ಒಳ್ಳೆಯ ಬೆಳವಣಿಗೆಯಲ್ಲ’ ಎಂದಿದ್ದಾರೆ.
ಆಗಿದ್ದೇನು?: 2 ದಿನಗಳ ಹಿಂದೆ “ಪೊಲಿಟಿಕೋ’ ಎಂಬ ಪತ್ರಿಕೆಯು ಅಮೆರಿಕದ ಸುಪ್ರೀಂ ಕೋರ್ಟ್‌ನ ಆದೇಶವೊಂದರ ಕರಡು ಪ್ರತಿಯನ್ನು ಸೋರಿಕೆ ಮಾಡಿತ್ತು. “ಗರ್ಭಪಾತ ಮಾಡಿಸಿಕೊಳ್ಳುವ ಸಂಪೂರ್ಣ ಅಧಿಕಾರ ಮಹಿಳೆಯರಿಗಿದೆ’ ಎಂಬ ಕಳೆದ 4 ದಶಕಗಳಿಂದಲೂ ಚಾಲ್ತಿಯಲ್ಲಿರುವ ತೀರ್ಪಿಗೆ ಸಂಪೂರ್ಣ ವಿರುದ್ಧವಾದ ಅಂಶಗಳು ಈ ಕರಡು ಪ್ರತಿಯಲ್ಲಿತ್ತು. ಜೂನ್ ಅಥವಾ ಜುಲೈನಲ್ಲಿ ಬರಬೇಕಿದ್ದ ತೀರ್ಪಿಗೆ ಸಂಬಂಧಿಸಿದ ಕರಡು ಪ್ರತಿ ಇದಾಗಿದ್ದು, ದೇಶಾದ್ಯಂತ ಗರ್ಭಪಾತ ನಿಷೇಧಿಸಲು ಕೋರ್ಟ್ ಉತ್ಸುಕವಾಗಿರುವುದು ಅದರಿಂದ ದೃಢಪಟ್ಟಿದೆ ಎಂದು ಪೊಲಿಟಿಕೋ ವರದಿ ಹೇಳಿತ್ತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.