Test Cricket: ವೆಸ್ಟ್ ಇಂಡೀಸ್-ದಕ್ಷಿಣ ಆಫ್ರಿಕಾ ಮೊದಲ ಟೆಸ್ಟ್ ಡ್ರಾ
ಒಟ್ಟು 8 ವಿಕೆಟ್ ಉರುಳಿಸಿದ ಕೇಶವ್ ಮಹಾರಾಜ್ ಪಂದ್ಯಶ್ರೇಷ್ಠ
Team Udayavani, Aug 12, 2024, 12:00 AM IST
ಪೋರ್ಟ್ ಆಫ್ ಸ್ಪೇನ್: ಮಳೆಯಿಂದ ಅಡಚಣೆಗೊಳಗಾದ ವೆಸ್ಟ್ ಇಂಡೀಸ್ ಮತ್ತು ಪ್ರವಾಸಿ ದಕ್ಷಿಣ ಆಫ್ರಿಕಾ ನಡುವಿನ ಮೊದಲ ಟೆಸ್ಟ್ ಪಂದ್ಯ ಡ್ರಾಗೊಂಡಿದೆ.
ಗೆಲುವಿಗೆ 298 ರನ್ ಗುರಿ ಪಡೆದಿದ್ದ ವೆಸ್ಟ್ ಇಂಡೀಸ್, ಪಂದ್ಯ ಡ್ರಾಗೊಳ್ಳುವ ವೇಳೆ 5 ವಿಕೆಟಿಗೆ 201 ರನ್ ಗಳಿಸಿತ್ತು. ಮಧ್ಯಮ ಕ್ರಮಾಂಕದ ಬ್ಯಾಟರ್ ಅಲಿಕ್ ಅಥನಾಜ್ 92 ರನ್ ಬಾರಿಸಿ ತಂಡವನ್ನು ಕುಸಿತದಿಂದ ಪಾರುಮಾಡಿದರು. ಕೇಸಿ ಕಾರ್ಟಿ ಮತ್ತು ಜೇಸನ್ ಹೋಲ್ಡರ್ ತಲಾ 31 ರನ್ ಮಾಡಿದರು. 18ಕ್ಕೆ 2 ವಿಕೆಟ್, 63ಕ್ಕೆ 3 ವಿಕೆಟ್ ಉರುಳಿಸಿಕೊಂಡ ಕೆರಿಬಿಯನ್ ಪಡೆ ಆತಂಕಕ್ಕೆ ಸಿಲುಕಿತ್ತು.
124 ರನ್ ಮುನ್ನಡೆ ಗಳಿಸಿದ ದಕ್ಷಿಣ ಆಫ್ರಿಕಾ, ದ್ವಿತೀಯ ಸರದಿಯಲ್ಲಿ 3ಕ್ಕೆ 173 ರನ್ ಗಳಿಸಿ ಡಿಕ್ಲೇರ್ ಮಾಡಿತ್ತು. ಟ್ರಿಸ್ಟನ್ ಸ್ಟಬ್ಸ್ 68 ರನ್ ಹೊಡೆದರು. ಒಟ್ಟು 8 ವಿಕೆಟ್ ಉರುಳಿಸಿದ ಕೇಶವ್ ಮಹಾರಾಜ್ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.
ಸರಣಿಯ ದ್ವಿತೀಯ ಟೆಸ್ಟ್ ಆ. 15ರಂದು ಗಯಾನಾದ ಪ್ರೊವಿಡೆನ್ಸ್ ಸ್ಟೇಡಿಯಂನಲ್ಲಿ ಆರಂಭವಾಗಲಿದೆ.
ಸಂಕ್ಷಿಪ್ತ ಸ್ಕೋರ್: ದಕ್ಷಿಣ ಆಫ್ರಿಕಾ-357 ಮತ್ತು 3ಕ್ಕೆ 173 ಡಿಕ್ಲೇರ್.
ವೆಸ್ಟ್ ಇಂಡೀಸ್-233 ಮತ್ತು 5 ವಿಕೆಟಿಗೆ 201.
ಪಂದ್ಯಶ್ರೇಷ್ಠ: ಕೇಶವ್ ಮಹಾರಾಜ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
National Hockey; ಕರ್ನಾಟಕಕ್ಕೆ ಜಯ
Australia ಗೆಲುವಿಗೆ ಕಮಿನ್ಸ್ ನೆರವು: ಪಾಕಿಸ್ಥಾನ 203; ಆಸೀಸ್ 8 ವಿಕೆಟಿಗೆ 204
Pro Kabaddi;ಬೆಂಗಳೂರು ಬುಲ್ಸ್ ಜಯಭೇರಿ: ತಮಿಳ್ ತಲೈವಾಸ್‌ಗೆ 32-36 ಅಂಕಗಳ ಸೋಲು
Football ಮೈದಾನಕ್ಕೆ ಬಡಿದ ಸಿಡಿಲು; ಆಟಗಾರ ಮೃ*ತ್ಯು, ಹಲವರಿಗೆ ಗಾಯ
BGT Series: ಇಂಡಿಯಾ ಎ ಪಂದ್ಯಕ್ಕಾಗಿ ಆಸೀಸ್ ಗೆ ಹೊರಟ ಕೆಎಲ್ ರಾಹುಲ್, ಜುರೆಲ್
MUST WATCH
ಹೊಸ ಸೇರ್ಪಡೆ
Order: ಶಿರೂರು ಗುಡ್ಡ ಕುಸಿತ: 2 ತಿಂಗಳೊಳಗೆ 5 ಲ.ರೂ. ಪರಿಹಾರಕ್ಕೆ ಹೈಕೋರ್ಟ್ ಸೂಚನೆ
Power cut shock:ಅದಾನಿ ಕಂಪೆನಿಗೆ ಬಾಂಗ್ಲಾ ಪಾವತಿ ಶುರು
WhatsApp ನಲ್ಲಿ ಧರ್ಮ ಆಧರಿತ ಗುಂಪು: ಕೇರಳ ಐಎಎಸ್ ಅಧಿಕಾರಿ ದೂರು
Elephants; ಮಧ್ಯಪ್ರದೇಶ ಬಳಿಕ ಒಡಿಶಾದಲ್ಲಿ 7 ತಿಂಗಳಿನಲ್ಲಿ 50 ಆನೆಗಳ ಸಾವು
ವಕ್ಫ್ ನೋಟಿಸ್‌ಗೆ ಬಿಜೆಪಿ ಆಕ್ರೋಶ; ರಾಜ್ಯಾದ್ಯಂತ ಮುಖಂಡರು, ಕಾರ್ಯಕರ್ತರ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.