ಪರೀಕ್ಷಾ ಕಿಟ್‌ಗಳು ದೋಷಪೂರಿತ; ಚೀನಕ್ಕೆ ಬ್ರಿಟನ್ ಗುದ್ದು
Team Udayavani, Apr 8, 2020, 12:30 PM IST
ಸಾಂದರ್ಭಿಕ ಚಿತ್ರ
ಲಂಡನ್: ಚೀನದಿಂದ ಖರೀದಿಸಿರುವ ಕೋವಿಡ್-19 ಪರೀಕ್ಷಿಸುವ ಕಿಟ್‌ಗಳು ವಿಶ್ವಾಸಾರ್ಹವಾಗಿಲ್ಲ ಮತ್ತು ಕಳಪೆ ಗುಣಮಟ್ಟದ್ದು ಎಂದು ಬ್ರಿಟನ್ ಆರೋಪಿಸಿದೆ. ಸದ್ಯ ಚೀನ ಕೊಡ ಮಾಡಿದ ಈ ಕಿಟ್ ಗಳು ಕೋವಿಡ್-19 ಸೋಂಕಿತರಲ್ಲಿ ರೋಗನಿರೋಧಕ ಶಕ್ತಿಯನ್ನು ಗುರುತಿಸಲು ಮಾತ್ರ ಬಳಸಬಹುದಾಗಿದೆ. ಬೇರಾವ ಉದ್ದೇಶಕ್ಕೂ ಬಾರದು ಎಂದಿದೆ.
ಈ ಕಿಟ್‌ಗಳನ್ನು ಬಳಸಿ ಆರಂಭಿಕ ಹಂತದ ಮೌಲ್ಯ ಮಾಪನ ಮಾಡಬಹುದು. ದೊಡ್ಡ ಪ್ರಯೋಜ ನವನ್ನು ಇದರಿಂದ ನಿರೀಕ್ಷಿಸಲಾಗದು. ಇದರಲ್ಲಿ ಅನೇಕ ತಪ್ಪಾದ ಫಲಿತಾಂಶ ಬಂದಿವೆ ಎಂದಿದೆ. ಪರೀಕ್ಷೆ ಕಿಟ್‌ಗಳು ಸಮರ್ಪಕವಾಗಿಲ್ಲ. ಹಾಗಾಗಿ, ನಾವು ನೀಡಿದ ಹಣವನ್ನು ಮರು ಪಾವತಿಸುವಂತೆ ಕೇಳಲಿದ್ದೇವೆ’ ಎಂದು ಪ್ರಧಾನಮಂತ್ರಿ ಕಚೇರಿ ತಿಳಿಸಿದೆ. ಬ್ರಿಟನ್ ಗಿಂತ ಮೊದಲೇ ಜೆಕ್ ಗಣರಾಜ್ಯ ದೂಷಿಸಿತ್ತು. 1.50 ಲಕ್ಷ ಕಿಟ್ ಖರೀದಿಸಿದ್ದ ರಿಪಬ್ಲಿಕ್ ಜೆಕ್, ಅದರಲ್ಲಿ ಶೇ. 80ರಷ್ಟು ದೋಷಪೂರಿತವಾಗಿತ್ತು ಎಂದು ತಿಳಿಸಿತ್ತು. ಸ್ಪೇನ್, ನೆದರ್‌ಲ್ಯಾಂಡ್ ಸಹ ಚೀನದ ಕಂಪೆನಿಗಳು ವಿತರಿಸಿದ ಸಾವಿರಾರು ವೈದ್ಯಕೀಯ ಉಪಕರಣಗಳು ದೋಷಪೂರಿತ ಎಂದು ತಿರಸ್ಕರಿಸಿದ್ದವು. ಬ್ರಿಟನ್ ಸರಕಾರವು ಕಳೆದ ತಿಂಗಳು 3.5 ಮಿಲಿಯನ್ ಕಿಟ್ ಗಳಿಗೆ ಆದೇಶಿಸಿತ್ತು.
ಚೀನ ಈಗ ಕೋವಿಡ್ 19ರ ವಿರುದ್ಧ ಹೋರಾಡು ತ್ತಿರುವ ರಾಷ್ಟ್ರಗಳಿಗೆ ನೆರವಿನ ಹಸ್ತ ನೀಡಲು ಮುಂದಾ ಗಿದೆ. ಯುರೋಪ್, ಉತ್ತರ ಅಮೆರಿಕಾ ಮತ್ತು ಹಲವು ರಾಷ್ಟ್ರ ಗಳಿಗೆ ಪರೀಕ್ಷಾ ಕಿಟ್ ಸೇರಿದಂತೆ ವಿವಿಧ ರೀತಿಯ ಸಹಾ ಯಗಳಿಗೆ ಮುಂದಾಗಿದ್ದು, ಆ ರಾಷ್ಟ್ರಗಳ ಅಭಿಪ್ರಾಯ ಏನು ಎಂಬುದನ್ನು ಕಾದು ನೋಡಬೇಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Syria ಮಾಜಿ ಅಧ್ಯಕ್ಷ ಅಸಾದ್‌ಗೆ ವಿಚ್ಛೇದನ ಕೊಡಲು ಪತ್ನಿ ಚಿಂತನೆ?
Sheikh ಹಸೀನಾರನ್ನು ಬಾಂಗ್ಲಾದೇಶಕ್ಕೆ ವಾಪಸ್ ಕಳುಹಿಸಿ: ಭಾರತಕ್ಕೆ ಬಾಂಗ್ಲಾ ಮನವಿ
You Tuber: ನೀಲಿ ಚಿತ್ರತಾರೆ ಆಗಲು ಪಿಎಚ್ ಡಿ ಕಲಿಕೆಯನ್ನೇ ತೊರೆದ ಖ್ಯಾತ ಯೂಟ್ಯೂಬರ್
Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು
Pope Francis; ಗಾಜಾಪಟ್ಟಿ ಮೇಲೆ ನಡೆದದ್ದು ಯುದ್ಧವಲ್ಲ, ಕ್ರೌರ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Parliament: ಸಂಸದರ ತಳ್ಳಾಟ: ಇಂದು ಸಂಸತ್ ಭವನಕ್ಕೆ ದಿಲ್ಲಿ ಪೊಲೀಸರ ಭೇಟಿ?
Former Supreme Court Judge ವಿ.ಸುಬ್ರಹ್ಮಣಿಯನ್ ಎನ್‌ಎಚ್‌ಆರ್‌ಸಿ ಮುಖ್ಯಸ್ಥ
Shatrughan Sinha ಪುತ್ರಿ ವಿವಾಹ ಬಗ್ಗೆ ವಿಶ್ವಾಸ್ ವಿವಾದಾಸ್ಪದ ಹೇಳಿಕೆ
Maharashtra: ನಿಗದಿತ ಮಾರ್ಗ ಬಿಟ್ಟು ಬೇರೆಡೆ ಸಾಗಿದ ವಂದೇ ಭಾರತ್ ರೈಲು!
Syria ಮಾಜಿ ಅಧ್ಯಕ್ಷ ಅಸಾದ್‌ಗೆ ವಿಚ್ಛೇದನ ಕೊಡಲು ಪತ್ನಿ ಚಿಂತನೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.