ಕೆಡುಕೆನಿಸಿದ ಕ್ರೋಧವನ್ನು ತ್ಯಜಿಸಿದರೆ ಒಡಕು ಮೂಡದು


Team Udayavani, Jul 24, 2021, 6:30 AM IST

ಕೆಡುಕೆನಿಸಿದ ಕ್ರೋಧವನ್ನು ತ್ಯಜಿಸಿದರೆ ಒಡಕು ಮೂಡದು

“ಎಲ್ಲ ಬಣ್ಣಗಳನ್ನು ಮಸಿ ನುಂಗಿತು’ ಎಂಬ ಮಾತಿದೆ. ಅದರಂತೆ ಹಲವು ಸದ್ಗುಣಗಳನ್ನು ಹೊಂದಿರುವ ಕೆಲವರಲ್ಲಿ ಇರಬಹುದಾದ ಸಿಟ್ಟಿನ ದುರ್ಗುಣದಿಂದ ಅವರ ಖ್ಯಾತಿಗೆ ಕಳಂಕ ಬರುವುದಿದೆ. ಧೂಳು ತುಂಬಿದ ದರ್ಪಣದಲ್ಲಿ ಮುಖ ದರ್ಶನ ಸ್ಪಷ್ಟವಾಗಲಾರದಷ್ಟೇ? ಅದರಂತೆ ಈ ಸಿಟ್ಟಿನ ಪ್ರಭಾವದಿಂದ ಅಂತಃಕರಣ ಮಲಿನಗೊಂಡವರು ಜನಮಾನಸದಲ್ಲಿ ದುಷ್ಟರಾಗಿ ಪ್ರತಿಬಿಂಬಿತರಾಗುತ್ತಾರೆ. ಕೆಲ ವೆಡೆ ಕೌಟುಂಬಿಕ ಒಡಕು ಸೃಷ್ಟಿಯಾಗಿ ಒಂದೇ ಮಾಡಿನಡಿಯ ಗೋಡೆಯನ್ನು ಹಂಚಿಕೊಳ್ಳಲು ಈ ದುಡುಕು ಸ್ವಭಾವವೂ ಕಾರಣವಾಗುವುದಿದೆ. “ಕಾಮಕ್ಕಿಂತ ದೊಡ್ಡ ರೋಗವಿಲ್ಲ. ಕೋಪಕ್ಕೆ ಸಮಾನವಾದ ಬೆಂಕಿ ಬೇರೆ ಇರದು’ ಎಂಬುದು ಚಾಣಕ್ಯ ನೀತಿ. “ಮನಯೊಳಗಿನ ಕಿಚ್ಚು ಮನೆಯ ಸುಡುವುದಲ್ಲದೆ ನೆರೆಮನೆಯ ಸುಡದು’ಎಂಬುದಾಗಿ ವಚನಕಾರರು ಎಚ್ಚರಿಸಿದ್ದಾರೆ. ತನ್ನ ಜೀವನದ ಕೊನೆ ಯವರೆಗೂ ದಾಯಾದಿಗಳ ವಿರುದ್ದ ಹೋರಾಡಿದ ಕೌರವನ ಕೋಪಾ ವೇಶದಿಂದಾಗಿ ಸಮಗ್ರ ಕುರು ವಂಶ ನಾಶವಾಯಿತಂತೆ. ಇಂತಹ ದುರಂತ ಗಳನ್ನು ಸ್ವತಃ ತಂದುಕೊಂಡ ವ್ಯಕ್ತಿಗಳ ಕತೆಗಳು ಪುರಾಣದಲ್ಲಿ ಹಲವಾರಿವೆ.

ಎಷ್ಟು ಸಜ್ಜನನಾಗಿದ್ದರೂ ಸಿಟ್ಟು ಆವರಿಸಿಕೊಂಡಿರುವಾತನನ್ನು ಆತ ಮಹಾ ಕೋಪಿಷ್ಟ ಎಂಬುದಾಗಿ ಜನ ಬೆಟ್ಟು ಮಾಡಿ ತೋರಿಸುವುದಿದೆ. ಈ ಕೆಟ್ಟ ಹೆಸರಿನಿಂದ ಹೊರಗುಳಿಯಬೇಕಾದರೆ ಒಳಸೇರಿರುವ ಕ್ರೋಧವನ್ನು ತೊರೆಯಬೇಕಾಗುತ್ತದೆ. ಕಾಶೀ ಕ್ಷೇತ್ರಕ್ಕೆ ಯಾತ್ರೆಗೈದಿದ್ದ ಒಬ್ಟಾತ “ಜೀವನದಲ್ಲಿ ಇನ್ನು ಮುಂದೆ ಕೋಪಿಸಲಾರೆ’ ಎಂದುಕೊಂಡು ತನ್ನ ಕೋಪವನ್ನೆಲ್ಲ ಅಲ್ಲೇ ಬಿಟ್ಟು ಬಂದನಂತೆ. ಇತ್ತ ಊರ ವರೆಲ್ಲ ಈ ಕುರಿತು ಪ್ರಶ್ನಿಸಿದಾಗ, ಆತ ಒಂದೆರಡು ಬಾರಿ ಸಾವಧಾನದಿಂದ ಉತ್ತರಿಸಿದ. ಆದರೆ ಕುತೂಹಲದಿಂದ ಮತ್ತೂ ಕೆಣಕಿದಾಗ, ಸಹನೆಯನ್ನು ಕಳೆದುಕೊಂಡ ಆತ “ಇನ್ನು ಆ ಸುದ್ದಿ ಎತ್ತಿದರೆ ನಿಮ್ಮನ್ನೆಲ್ಲ ಬಡಿದೋಡಿಸುವೆ’ ಎಂದು ಸಿಡಿಮಿಡಿಗೊಂಡನಂತೆ. ಹಾಗಾಗಿ ಕೋಪವನ್ನು ತ್ಯಜಿಸುವುದು ಅಷ್ಟು ಸುಲಭದ ವಿಚಾರವೂ ಅಲ್ಲ. ಏಕೆಂದರೆ ಬುದ್ಧಿಯು ನಮ್ಮ ಮನಸ್ಸನ್ನು ಕೆರಳಿಸಲು ಸದಾ ಹವಣಿಸುತ್ತಿರುತ್ತದೆ. ಆದರೆ ಇಂದ್ರಿಯಗಳ ಹಿಡಿತವನ್ನು ಸಾಧಿಸಿ ಕೊಂಡಾಗ ಅದೇ ಮನವು ಅರಳುತ್ತದೆ. ಆಗ ಸಹಜವಾಗಿಯೇ ಮೈಗೂಡಿಕೊಳ್ಳುವ ಶಾಂತ ಚಿತ್ತದಿಂದಾಗಿ, ಅಲ್ಲಿದ್ದ ಸಿಟ್ಟು ಶಮನಗೊಳ್ಳಬಹುದಾಗಿದೆ.

ಕೆಲವು ವೇಳೆ ಉದ್ವೇಗದ ಸನ್ನಿವೇಶಗಳು ಸೃಷ್ಟಿಯಾದಾಗ “ಕಣ್ಣಾರೆ ಕಂಡರು ಪರಾಂಬರಿಸಿ ನೋಡಬೇಕಂತೆ’. ಈ ತಣ್ತೀ ವಿಚಾರವನ್ನು ಮನಗಂಡವರ ದುಡುಕು ಬುದ್ಧಿ ಇದರಿಂದ ತಣ್ಣಗಾ ಗುವುದುಂಟು. ಮಾತ್ರವಲ್ಲದೆ ಈ ಸತ್ಯವನ್ನರಿಯಲು ಮನ ಮಾಡುವ ವರು ಲೋಕದಲ್ಲಿ ವಿವೇಕಿಗಳೆಂದೆನಿಸಿ ಕೊಳ್ಳುತ್ತಾರೆ. ಇದಕ್ಕೊಂದು ದೃಷ್ಟಾಂತ ವೆನ್ನಬಹುದಾದ ಪ್ರಸಂಗ ಹೀಗಿದೆ.
ಒಬ್ಟಾತ ದೊರೆ ತನ್ನ ಅರಮನೆಗೆ ಬಂದಾಗ ಪರಪುರುಷನ ಜತೆ ತನ್ನ ರಾಣಿಯು ಮಂಚದಲ್ಲಿರುವುದಾಗಿ ಗ್ರಹಿಸಿ ಕೊಂಡನಂತೆ. ಆ ದೃಶ್ಯವನ್ನು ಕಂಡ ತತ್‌ಕ್ಷಣ ಸಹಜವಾಗಿ ಕೆಂಡಾ ಮಂಡಲಗೊಂಡ ಆತನು ಖರವಾಳವನ್ನು ಕೈಗೆತ್ತಿಕೊಂಡನು. ಅದೇ ವೇಳೆ ತಾನೇ ಗೋಡೆಯಲ್ಲಿ ನೇತುಹಾಕಿದ್ದ “ಕಣ್ಣಾರೆ ಕಂಡರೂ…’ ಎಂಬ ನೀತಿವಾಕ್ಯದ ಫ‌ಲಕ ವೊಂದು ದೊಪ್ಪನೆ ಕೆಳಗುರುಳಿತು. ಇತ್ತ ಆತನ ಕೈಯಲ್ಲಿದ್ದ ಕತ್ತಿಯೂ ಜಾರಿತು. ಕೂಡಲೇ ಮಂಚದಿಂದೆದ್ದ ಮನೆಕೆಲಸದಾಕೆ ಭಯದಿಂದ ತತ್ತರಿಸಿ, ರಾಣಿಯಲ್ಲಿ “ಅಮ್ಮಾ ನಿತ್ಯ ಈ ಮಂಚವನ್ನು ಶುಚಿಗೊಳಿಸುತ್ತಿದ್ದ ನನಗೆೆ ಅದರಲ್ಲೊಮ್ಮೆ ಒರಗಬೇಕೆಂಬ ಆಸೆ ಇತ್ತು. ಅದರಂತೆ, ನಾನಿಂದು ಏಕಾಂತದಲ್ಲಿ ಮುಸುಕೆಳೆದುಕೊಂಡಾಗ, ಖಾವಂದರೇ ಬಂದು ವಿರಮಿಸಿರಬೇಕೆಂದು ಗ್ರಹಿಸಿ ಕೊಂಡ ತಾವು ಮಂಚವೇರಿದಿರಿ’. ಎಂದು ಅರಸಿಯ ಕಾಲು ಹಿಡಿದು ತನ್ನ ತಪ್ಪೊಪ್ಪಿಕೊಂಡಳಂತೆ. ಇಲ್ಲಿ ಅಚಾ ತುರ್ಯದಿಂದ ಅರಮನೆಯು ಅರೆಘ ಳಿಗೆಯಲ್ಲಿ ನರಕ ಸದೃಶವಾಗುವ ಸಂಭಾ ವ್ಯತೆ ಇತ್ತು. ಆದರೆ ಅಲ್ಲಿದ್ದ ನೀತಿವಾ ಕ್ಯದ ಸಂದೇಶವನ್ನು ದೊರೆಯು ಅರಿತು ಕೊಂಡ ಫ‌ಲವಾಗಿ ಆಪತ್ತು ತಪ್ಪಿತು. ಸಿಟ್ಟು ಇಳಿಯಿತು, ಬದುಕು ಬೆಳಗಿತು.

“ಧೃತಿ ಕ್ಷಮ ದಮೋಸ್ತೇಯಂ ಶೌಚಮಿಂದ್ರಿಯನಿಗ್ರಹ ಧಿರ್ವಿದ್ಯಾಸತ್ಯಮೆಕ್ರೋಧೋ ದಶಕಂ ಧರ್ಮಲಕ್ಷಣಂ’
ಎಂಬ ನೀತಿ ವಾಕ್ಯದಂತೆ ಹತ್ತು ಧರ್ಮ ಲಕ್ಷಣಗಳಲ್ಲಿ ಕ್ರೋಧವೂ ಒಳಗೊಂಡಿದೆ.

- ಸುಬ್ರಹ್ಮಣ್ಯ ಬೈಪಾಡಿತ್ತಾಯ, ನಂದಳಿಕೆ

ಟಾಪ್ ನ್ಯೂಸ್

Yathanal

Winter Session: ಪಂಚಮಸಾಲಿಗಳ ಮೇಲೆ ಲಾಠಿ ಬೀಸಿದವರಿಗೆ ಬಹುಮಾನ; ಶಾಸಕ ಯತ್ನಾಳ್‌ ಆಕ್ರೋಶ

BY-Vijayendra

Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ

1-deee

Allu Arjun ನಿವಾಸದಲ್ಲಿ ದಾಂಧಲೆ!; 8 ಮಂದಿ ಬಂಧನ: ಕೃತ್ಯ ಎಸಗಿದ್ದು ಯಾರು?

sullia

Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ

Baduta-Mandya

Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!

1-women

ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90

Kuwait-PM

Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನನ್ನೊಳಗಿನ “ನಾನು’ ಹೋದರೆ ಹೋದೇನು

ನನ್ನೊಳಗಿನ “ನಾನು’ ಹೋದರೆ ಹೋದೇನು

ಮಾನವ ಜನ್ಮವನ್ನು ವ್ಯರ್ಥಗೊಳಿಸದಿರೋಣ

ಮಾನವ ಜನ್ಮವನ್ನು ವ್ಯರ್ಥಗೊಳಿಸದಿರೋಣ

achivement

ಗೆಲುವಿನ ದಾರಿ ದೂರ… ಪ್ರಯತ್ನ ನಿರಂತರವಾಗಿರಲಿ

ಆತ್ಮತೃಪ್ತಿ, ಹೃದಯ ಶ್ರೀಮಂತಿಕೆಯೇ ಶ್ರೇಷ್ಠ

ಆತ್ಮತೃಪ್ತಿ, ಹೃದಯ ಶ್ರೀಮಂತಿಕೆಯೇ ಶ್ರೇಷ್ಠ

ನಾವೆಲ್ಲರೂ ಸ್ನೇಹಜೀವಿಗಳಾಗೋಣ

ನಾವೆಲ್ಲರೂ ಸ್ನೇಹಜೀವಿಗಳಾಗೋಣ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Yathanal

Winter Session: ಪಂಚಮಸಾಲಿಗಳ ಮೇಲೆ ಲಾಠಿ ಬೀಸಿದವರಿಗೆ ಬಹುಮಾನ; ಶಾಸಕ ಯತ್ನಾಳ್‌ ಆಕ್ರೋಶ

sand 1

Padubidri: ಮರಳು ಅಕ್ರಮ ಸಾಗಾಟ; ವಶ

dw

Malpe: ಕಲ್ಮಾಡಿ; ಕಟ್ಟಡದಿಂದ ಬಿದ್ದು ಕಾರ್ಮಿಕ ಸಾವು

9

Dr MC Sudhakar: ‘ಹೈಕಮಾಂಡ್‌ ಎಷ್ಟು ದಿನ ಜವಾಬ್ದಾರಿ ಕೊಡುತ್ತೋ ಅಷ್ಟು ದಿನ ಸಚಿವ’

3

Brahmavar: ಕೊಕ್ಕರ್ಣೆ; ಜುಗಾರಿ ನಿರತನ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.