ಪ್ರಕೃತಿ ಸೌಂದರ್ಯದ “ಈ ಮೇರುತಿ ಪರ್ವತ” ಚಾರಣಿಗರ ಸ್ವರ್ಗ
ಮೇತಿಕಾನ್ ಟೀ ಎಸ್ಟೇಟಿನಿಂದ ಅನುಮತಿಯನ್ನು ಪಡೆದು ಚಾರಣ ಪ್ರಾರಂಭಿಸಬೇಕು.
ಸುಧೀರ್, Nov 28, 2020, 6:25 PM IST
ಪ್ರವಾಸಿಗರ ಸ್ವರ್ಗ ಎಂದೇ ಕರೆಯಬಹುದಾದ ಚಿಕ್ಕಮಗಳೂರು ಹಲವಾರು ಪ್ರವಾಸಿ ತಾಣಗಳನ್ನು ಹೊಂದಿರುವ ಜಿಲ್ಲೆ ಎಂದೇ ಹೆಸರುವಾಸಿಯಾಗಿದೆ. ಚಿಕ್ಕಮಗಳೂರು ಎಂದಾಕ್ಷಣ ನಮ್ಮ ಮನಸಿನಲ್ಲಿ ಬರುವಂತಹ ಪ್ರಮುಖ ಹೆಸರು ಕೆಮ್ಮಣ್ಣು ಗುಂಡಿ, ಬಾಬಾ ಬುಡನಗಿರಿ, ಮುಳ್ಳಯ್ಯನಗಿರಿಬೆಟ್ಟ, ಇವಿಷ್ಟು ತಾಣಗಳನ್ನು ಹೆಚ್ಚಿನ ಪ್ರವಾಸಿಗರು ಸಂದರ್ಶಿಸುವ ಸ್ಥಳಗಳು. ಆದರೆ ಈ ಜಿಲ್ಲೆಯಲ್ಲಿ ಇದೆ ರೀತಿಯ ಹತ್ತು ಹಲವು ಪ್ರವಾಸಿ ತಾಣಗಳು ತಮ್ಮ ಪ್ರಾಕೃತಿಕ ಸೌಂದರ್ಯದಿಂದ ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸುತ್ತಿದೆ. ಅಂತಹ ಪ್ರಮುಖತಾಣಗಳ ಸಣ್ಣ ಪರಿಚಯವನ್ನು ನಾವು ಪರಿಚಯಿಸುತ್ತಿದ್ದೇವೆ. ಅಂದ ಹಾಗೆ ಇಂದು ನಾನು ಹೇಳಲು ಹೊರಟಿರುವ ಸುಂದರತಾಣದ ಹೆಸರು ಮುಳ್ಳಯ್ಯನ ಗಿರಿಬೆಟ್ಟದಷ್ಟೇ ಸೌಂದರ್ಯವನ್ನು ಮೈಗೆತ್ತಿಕೊಂಡಿರುವ ಇದೆ ಜಿಲ್ಲೆಯಲ್ಲಿ ಆಕಾಶದೆತ್ತರಕ್ಕೆ ತಲೆಯೆತ್ತಿ ನಿಂತಿರುವ ಗಿರಿಶಿಖರ ಮೇರುತಿ ಪರ್ವತ.
ಚಾರಣಿಗರ ಸ್ವರ್ಗ:
ಮೇರುತಿ ಪರ್ವತ ಸಮುದ್ರ ಮಟ್ಟದಿಂದ ಸುಮಾರು 5451 ಅಡಿಗಳಷ್ಟು ಎತ್ತರದಲ್ಲಿದೆ ಈ ಗಿರಿಶಿಖರವು ಶೃಂಗೇರಿ ಕಳಸ, ಹೊರನಾಡು ಪವಿತ್ರ ಯಾತ್ರಾ ಸ್ಥಳದ ಕೇಂದ್ರ ಭಾಗವಾದಲ್ಲಿ ಮೈದಳೆದು ನಿಂತಿದೆ.
ಬೆಟ್ಟದ ಮೇಲೆ ಹತ್ತಿ ನೋಡಿದರೆ ಸುತ್ತಲೂ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿರುವ ಕಾಫಿ, ಅಡಿಕೆ ತೋಟಗಳು, ಅಂದ ಹಾಗೆ ಮಾಗಿಯ ಕಾಲದಲ್ಲಿ ಈ ಬೆಟ್ಟಕ್ಕೆ ಹತ್ತಿದರೆ ನಮ್ಮ ಜೊತೆಗಿರುವವರು ಮುಸುಕು ಮಂಜಿನಲ್ಲಿ ಅವಿತು ಕುಳಿತಂತೆ ಭಾಸವಾಗುತ್ತದೆ ಒಮ್ಮಿಂದೊಮ್ಮೆಗೆ ನಾವು ಕಾಶ್ಮೀರದಲ್ಲಿದ್ದೇವೇನೋ ಎನ್ನುವ ಅನುಮಾನನೂ ಹುಟ್ಟುತ್ತದೆ. ಇಲ್ಲಿನ ಮತ್ತೊಂದು ವಿಶೇಷತೆ ಏನೆಂದರೆ ತಪಾಸಣೆ ಇಲ್ಲಿ ಬದರಿಮುನಿಗಳು ತಪಸ್ಸು ಮಾಡಿದ್ದಾರೆಂಬ ಕುರುಹುಗಳಿವೆ ಜೊತೆಗೆ ಇಲ್ಲಿ ಬಂಡೆಕಲ್ಲುಗಳನ್ನು ಕೊರೆದು ಬರುವಂತಹ ತೀರ್ಥ ಈ ಪ್ರದೇಶದ ಜನರ ಜೀವನಾಡಿಯಾಗಿದೆ.
ಮೇರುತಿ ಪರ್ವತಕ್ಕೆ ಭೇಟಿ ನೀಡುವವರು ಬಸರಿಕಟ್ಟೆಯಲ್ಲಿರುವ ಮೇತಿಕಾನ್ ಟೀ ಎಸ್ಟೇಟಿನಿಂದ ಅನುಮತಿಯನ್ನು ಪಡೆದು ಚಾರಣ ಪ್ರಾರಂಭಿಸಬೇಕು. ಸುತ್ತಲೂ ಹಚ್ಚಹಸುರಿನ ಸ್ವಚ್ಛಂದ ಕಾಫಿ ತೋಟದ ನಡುವೆ ಹೆಜ್ಜೆ ಹಾಕುತ್ತಾ ಸಾಗಿದರೆ ನಿಮ್ಮ ಉತ್ಸಾಹ ಇಮ್ಮಡಿಗೊಳ್ಳುವುದಂತೂ ಸತ್ಯ. ಮುಂದೆ ಸಾಗಿದರೆ ನಮಗೆ ನೆರಳು ನೀಡಲು ಆಳೆತ್ತರಕ್ಕೆ ಬೆಳೆದು ನಿಂತಿರುವ ಮರಗಳು, ಮರಗಳಲ್ಲಿ ಚಿಲಿಪಿಲಿ ಹಕ್ಕಿಗಳ ನಾದ ನಮ್ಮ ಚಾರಣದ ಹುಮ್ಮಸ್ಸನ್ನು ಹೆಚ್ಚಿಸಿದಂತಹ ಅನುಭವ. ಹೀಗೆ ಸಾಗುತ್ತ ಮುಂದೆ ಎದುರುಗೊಳ್ಳುವುದೇ ಹಸಿರು ಹುಲ್ಲುಗಳಿಂದ ಶೃಂಗಾರಗೊಂಡಿರುವ ಮೇರುತಿ ಪರ್ವತ.
ಬೆಟ್ಟದ ತುದಿಯಲ್ಲಿದೆ ಗಣಪತಿ ಮಂದಿರ:
ಮೇರುತಿ ಪರ್ವತದ ತುತ್ತತುದಿಯನ್ನು ತಲುಪಿದರೆ ಚಾರಣಿಗರಿಗೆ ಪ್ರಕೃತಿ ಸೌಂದರ್ಯದ ಜೊತೆ ದೇವರ ದರುಶನದ ಭಾಗ್ಯ ಕೂಡ ಇಲ್ಲಿ ಸಿಗುತ್ತದೆ, ಬೆಟ್ಟದ ತುದಿಯಲ್ಲಿ ಗಣಪತಿ ದೇವರ ಗುಡಿಯೊಂದಿದ್ದು ಇಲ್ಲಿ ಮಾರ್ಚ್ ತಿಂಗಳಿನಲ್ಲಿ ದೇವರಿಗೆ ವಿಶೇಷ ಪೂಜೆಯನ್ನು ಊರಿನ ಜನರೆಲ್ಲರೂ ಸೇರಿ ನಡೆಸುತ್ತಾರೆ. ಅಂತೆಯೇ ತಪಾಸಣೆಯಲ್ಲಿ ಹೋಮ ಹವನಗಳನ್ನು ನಡೆಸಿಕೊಂಡು ಬರುವುದು ಹಿಂದಿನಿಂದಲೂ ವಾಡಿಕೆಯಲ್ಲಿತ್ತು.
ಬೆಟ್ಟದ ತುದಿಯಲ್ಲಿ ನಿಂತು ಕಣ್ಣು ಹಾಯಿಸಿದರೆ ಒಂದುಕಡೆ ಕಳಸ ಹೊರನಾಡು ದೇವಸ್ಥಾನ ಕಾಣಸಿಗುತ್ತದೆ. ಜೊತೆಗೆ ಚಿಕ್ಕಮಗಳೂರು ಜಿಲ್ಲೆಯ ಎಲ್ಲಾ ಗಿರಿಶಿಖರಗಳನ್ನು ಕಣ್ತುಂಬಿಕೊಳ್ಳಬಹುದು. ಬೆಟ್ಟದ ಬುಡದಲ್ಲಿ ನಿಂತು ಪರ್ವತದ ತುದಿಯನ್ನು ನೋಡಿದಾಗ ಬಾನುಭುವಿ ಸಂಗಮಿಸಿದಂತೆ ಗೋಚರಿಸುತ್ತದೆ.
ತಿಂಡಿ ತಿನಿಸು ನೀವೇ ತೆಗೆದುಕೊಂಡು ಹೋಗಿ:
ಚಾರಣಿಗರು ಇಲ್ಲಿಗೆ ಬರುವಾಗ ತಮಗೆ ಬೇಕಾಗಿರುವ ತಿಂಡಿ ತಿನಿಸುಗಳನ್ನು ತಾವೇ ತರಬೇಕು. ಇಲ್ಲಿ ಯಾವುದೇ ರೀತಿಯ ತಿಂಡಿ ತಿನಿಸುಗಳು ಸಿಗುವುದಿಲ್ಲ, ಬಸರಿಕಟ್ಟೆಯಲ್ಲಿ ತಿಂಡಿ ತಿನಿಸುಗಳನ್ನು ಪಡೆದುಕೊಳ್ಳಬಹುದು.
ಜನಾಕರ್ಷಣೆ ಕಡಿಮೆ :
ಚಿಕ್ಕಮಗಳೂರು ಜಿಲ್ಲೆಯಲ್ಲಿರುವ ಮುಳ್ಳಯ್ಯನ ಗಿರಿ, ಬಾಬಾಬುಡನ್ ಗಿರಿ, ಕೆಮ್ಮಣ್ಣು ಗುಂಡಿ ಹೀಗೆ ಹಲವಾರು ಗಿರಿಧಾಮಗಳು ಹೆಚ್ಚು ಪ್ರಚಲಿತದಲ್ಲಿ ಇದೆ. ಆದರೂ ಅಷ್ಟೇ ಪ್ರಾಮುಖ್ಯತೆಯನ್ನು ಪಡೆದಿರುವ ಮೇರುತಿ ಪರ್ವತ ಹೆಚ್ಚಿನ ಜನಾಕರ್ಷಣೆ ಪಡೆದಿಲ್ಲ. ಈ ಬೆಟ್ಟ ಇನ್ನಷ್ಟು ಜನಾಕರ್ಷಣೆಯನ್ನು ಪಡೆಯಬೇಕಾಗಿದೆ ಎನ್ನುತ್ತಾರೆ ಇಲ್ಲಿನ ಜನರು.
ಭೇಟಿ ಹೇಗೆ:
ಮೇರುತಿ ಪರ್ವತ ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯಕ್ಕೆ ಹತ್ತಿರದ ಪ್ರದೇಶ, ಕಳಸದಿಂದ ಬಸ್ರಿಕಟ್ಟೆ ಮಾರ್ಗದಲ್ಲಿ ಪ್ರಯಾಣಿಸಿದರೆ ಮೇಥಿಖಾನ್ ಎಸ್ಟೇಟ್ ಎದುರುಗೊಳ್ಳುತ್ತದೆ ಇಲ್ಲಿಂದ ಅನುಮತಿಯನ್ನು ಪಡೆದು ಚಾರಣ ಮುಂದುವರಿಸಬೇಕು.
ಸ್ವಚ್ಛತೆ ಕಾಪಾಡಿ :
ಇಲ್ಲಿಗೆ ಬರುವ ಚಾರಣಿಗರು ಬೆಟ್ಟದ ಸೌಂದರ್ಯಕ್ಕೆ ಧಕ್ಕೆ ಆಗದ ರೀತಿಯಲ್ಲಿ ಸುರಕ್ಷತೆ ವಹಿಸಬೇಕು. ತಾವು ತಂದಂತಹ ತಿಂಡಿ ತಿನಿಸುಗಳನ್ನು ಎಲ್ಲೆಂದರಲ್ಲಿ ಎಸೆದು ಪರಿಸರ ಹಾಳುಮಾಡದೆ ಪರ್ವತದ ಸೌಂದರ್ಯ ಇಮ್ಮಡಿಗೊಳಿಸಲು ಸಹಕರಿಸಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Living together; ವಿಚ್ಛೇದನ ತಡೆಯಲು ಲಿವಿಂಗ್ ಟುಗೆದರ್ ಸಹಕಾರಿಯೇ?
Recipe: ಆರೋಗ್ಯಕ್ಕೆ ಅಮೃತ, ರುಚಿಗೆ ಅದ್ಭುತ ಈ ಚಟ್ನಿ!ಒಂದ್ಸಲ ಈ ವಿಧಾನದಲ್ಲಿ ಟ್ರೈ ಮಾಡಿ…
Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..
BGT 24: ಆತುರದ ನಿರ್ಧಾರ ಮಾಡಿದ್ರಾ ಅಶ್ವಿನ್ : ಟೀಂ ಇಂಡಿಯಾದಲ್ಲಿ ಕೊಹ್ಲಿ ಬೆಲೆ ಇಷ್ಟೇನಾ?
OneNation, OneElection Bill: 31 JPC ಸದಸ್ಯರ ಕಾರ್ಯವ್ಯಾಪ್ತಿ ಏನು?ಸಲಹೆ ನೀಡುವವರು ಯಾರು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: 16 ವರ್ಷದ ಬಾಲಕ ಮೃತ್ಯು, ಮೃತರ ಸಂಖ್ಯೆ 3ಕ್ಕೆ ಏರಿಕೆ
ನನ್ನ ಮಾರ್ಗದರ್ಶಕರನ್ನು ಕಳೆದುಕೊಂಡಿದ್ದೇನೆ… ಮಾಜಿ ಪ್ರಧಾನಿ ನಿಧನಕ್ಕೆ ರಾಹುಲ್ ಸಂತಾಪ
Gangavathi: 25 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ
Patna: “ರಘುಪತಿ ರಾಘವ’ ಭಜನೆ ಹಾಡಿದ ಗಾಯಕಿ ವಿರುದ್ಧ ಪ್ರತಿಭಟನೆ: ಹಾಡುಗಾರ್ತಿ ಕ್ಷಮೆ
Canada: ಮಾನವ ಕಳ್ಳಸಾಗಣೆಯಲ್ಲಿ ಕೆನಡಾದ 260 ಕಾಲೇಜು! ವಿದ್ಯಾರ್ಥಿ ವೀಸಾ ಮೂಲಕ ಆಮಿಷ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.