ಜನತೆಯ ಆರೋಗ್ಯದೊಂದಿಗೆ ಆರ್ಥಿಕತೆಯ ಸವಾಲು


Team Udayavani, May 13, 2021, 6:40 AM IST

ಜನತೆಯ ಆರೋಗ್ಯದೊಂದಿಗೆ ಆರ್ಥಿಕತೆಯ ಸವಾಲು

ಕೋವಿಡ್‌ ಸಂಕಷ್ಟದಿಂದ ದೇಶದಲ್ಲಿ ಅಘೋಷಿತ ಆರೋಗ್ಯ ತುರ್ತು ಪರಿಸ್ಥಿತಿ ಉಂಟಾಗಿದೆ ಎಂದರೆ ತಪ್ಪಿಲ್ಲ. ಆರ್ಥಿಕತೆಯ ಮೇಲೆ ಮೊದಲ ಲಾಕ್‌ಡೌನ್‌ ತಂದಿತ್ತ ವಿಷಮ ಪರಿಸ್ಥಿತಿ ತಿಳಿಯಾಗುವ ಮೊದಲೇ ಎರಡನೆಯ ಅಲೆಯು ಚಂಡಮಾರುತದಂತೆ ಅಪ್ಪಳಿಸಿದ್ದು ದೇಶ ನಲುಗಿದೆ. ಪರಿಸ್ಥಿತಿ ಹಳಿಗೆ ಮರಳುತ್ತಿದೆ ಎನ್ನುವಷ್ಟರಲ್ಲಿ ಎರಡನೆ ಅಲೆಯ ಆಘಾತ. ಈವರೆಗೆ ರಾಷ್ಟ್ರೀಯ ಲಾಕ್‌ಡೌನ್‌ ಘೋಷಿಸದಿದ್ದರೂ ಹಲವಾರು ರಾಜ್ಯಗಳಲ್ಲಿ ಅನಿವಾರ್ಯವಾಗಿ ವಿಧಿಸಲಾಗಿರುವ ಜನತಾ ಕರ್ಫ್ಯೂ, ಭಾಗಶಃ ಲಾಕ್‌ಡೌನ್‌ ಇತ್ಯಾದಿ ಕ್ರಮಗಳು ಮತ್ತು ವಾಣಿಜ್ಯ ಚಟುವಟಿಕೆಗಳ ಮೇಲೆ ನಿರ್ಬಂಧಗಳನ್ನು ವಿಧಿಸಿರುವುದು ಆರ್ಥಿಕ ಅನಿಶ್ಚಿತತೆಗೆ ಕಾರಣವಾಗದೇ ಇರಲಾರದು. ಕೊರೊನಾದಿಂದುಂಟಾದ ಕರಾಳ ಚಿತ್ರಣಗಳಿಂದಾಗಿ ಚರಿತ್ರೆಯಲ್ಲಿ ಕೇಳಿದ ಮಹಾಯುದ್ಧ, ಮಹಾಪಿಡುಗುಗಳು ನಮ್ಮೆದುರಿಗೆ ಪ್ರತ್ಯಕ್ಷವಾಗಿ ಹಾದುಹೋಗವಂತೆ ಭಾಸವಾಗುತ್ತಿದೆ. ಬದುಕುಳಿದರೆ ಸಾಕು ಎನ್ನುವ ಈ ಆತಂಕದ ಪರಿಸ್ಥಿತಿಯಲ್ಲಿ ದೇಶದ ಆರ್ಥಿಕತೆಯ ಭವಿಷ್ಯ ಡೋಲಾಯಮಾನವಾಗಿದೆ.

ಒಂದು ವರ್ಷದ ಹಿಂದಕ್ಕೆ ಹೋಲಿಸಿದರೆ ಆರ್ಥಿಕತೆಯಲ್ಲಿ ಭಾರತ ಚೇತರಿಸಿಕೊಂಡಿರುವ ರೀತಿ ಮೆಚ್ಚತಕ್ಕದ್ದು. ಒಂದು ವರ್ಷದ ಹಿಂದೆ ತೀವ್ರವಾಗಿ ಆರ್ಥಿಕ ಹಿಂಜರಿಕೆ ಕಂಡಿದ್ದು ಮೂರು ದಶಕಗಳ ಹಿಂದೆ ಸರಿದಿತ್ತು. ಕೋವಿಡ್‌ ಆಘಾತದ ಪರಿಣಾಮ 2020-21ಕ್ಕೆ ಜಿಡಿಪಿ ಶೇ (-) 8 ಕ್ಕೆ ಕುಸಿದಿತ್ತು. ತದನಂತರ ಆರ್ಥಿಕತೆ ವೇಗವಾಗಿ ವಿ (ಗಿ) ಆಕಾರದಲ್ಲಿ ಚೇತರಿಸಿಕೊಳ್ಳುತ್ತಾ ಬಂದಿದೆ. ಕಳೆದ ಏಳು ತಿಂಗಳುಗಳಿಂದ ಜಿಎಸ್‌ಟಿ ಸಂಗ್ರಹಣೆ ಸತತ ಒಂದು ಲಕ್ಷ ಕೋಟಿ ರೂ.ಗಳ ಗಡಿ ದಾಟಿದೆ. ಮಾರ್ಚ್‌ ತಿಂಗಳಲ್ಲಿ 1.24 ಲಕ್ಷ ಕೋಟಿ ರೂ. ಮತ್ತು ಎಪ್ರಿಲ್‌ನಲ್ಲಿ ರೂ. 1.41 ಲಕ್ಷ ಕೋಟಿ ರೂ. ದಾಟಿರುವುದು ಸಾರ್ವಕಾಲಿಕ ದಾಖಲೆಯಾಗಿದೆ. ಆದರೆ ಸ್ಫೋಟಗೊಳ್ಳುತ್ತಿರುವ ಎರಡನೆಯ ಅಲೆಯು ಆರ್ಥಿಕ ಪ್ರಗತಿಯ ವೇಗವನ್ನು ದುರ್ಬಲಗೊಳಿಸುತ್ತಿದೆ. ನುರಿತ ಆರ್ಥಿಕ ತಜ್ಞರಿಗೂ ಆರ್ಥಿಕತೆಯ ಬಗ್ಗೆ ಭವಿಷ್ಯ ಹೇಳುವುದು ಕಷ್ಟ. ಆದರೆ ದೇಶದ ನಿಜವಾದ ಆರ್ಥಿಕತೆಗೆ ನೈಜ ಸವಾಲು ಮುಂದಿದೆ ಎಂದರೆ ತಪ್ಪಾಗಲಾರದು.

ಪ್ರಸಕ್ತ ಆರ್ಥಿಕ ವರ್ಷದಲ್ಲಿ ಶೇ. 12.5 ರಷ್ಟು ಆರ್ಥಿಕ ಪ್ರಗತಿ ಕಾಣಲಿದೆಯೆಂದು ಐಎಂಎಫ್ ಅಂದಾಜು ಮಾಡಿತ್ತು. ತದನಂತರ ಕೋವಿಡ್‌ ಬಿಕ್ಕಟ್ಟಿನ ನಡುವೆಯೇ ಭಾರತದ ಆರ್ಥಿಕ ಬೆಳವಣಿಗೆ ಆಶಾದಾಯಕವಾಗಿದೆ ಮತ್ತು ಶೇ. 11 ರ ಆಸುಪಾಸಿನಲ್ಲಿ ಏರಿಕೆಯಾಗಬಹುದೆಂದು ಪ್ರಮುಖ ಸಮೀಕ್ಷೆಗಳಿಂದ ವ್ಯಕ್ತವಾಗಿತ್ತು. ಇದೀಗ ಫೆಬ್ರವರಿಯಲ್ಲಿ ಅಂದಾಜಿಸಿದಷ್ಟು ಆರ್ಥಿಕತೆಯ ಅಭಿವೃದ್ಧಿ ಸಾಧ್ಯವಿಲ್ಲ ಎಂದು ಐಎಂಎಫ್ ಹೇಳಿದೆ. ಕೋವಿಡ್‌ ಅಲೆಯ ತೀವ್ರತೆ ಮತ್ತು ನಿಭಾಯಿಸುವಲ್ಲಿ ಎದುರಿಸುತ್ತಿರುವ ಸಂಕಷ್ಟಗಳು ಆರ್ಥಿಕತೆಯ ಮೇಲೆ ಹೊಡೆತ ಬೀಳಲಿದೆ ಎಂದು ಪ್ರಮುಖ ಸಮೀಕ್ಷೆಗಳು ಹೇಳಿವೆ. ಅಮೆರಿಕದ ಎಸ್‌ ಆ್ಯಂಡ್‌ ಪಿ ಗ್ಲೋಬಲ್‌ ರೇಟಿಂಗ್‌ ಜಿಡಿಪಿ ಬೆಳವಣಿಗೆಯ ಮುನ್ನೋಟವನ್ನು ಶೇ. 9.8 ಕ್ಕೆ ಪರಿಷ್ಕರಿಸಿದೆ. ಪ್ರಸಕ್ತ ವರ್ಷದಲ್ಲಿ ವಿಶ್ವದ ದೊಡ್ಡ ಆರ್ಥಿಕತೆಗಳ ಪೈಕಿ ಅತ್ಯಂತ ದೊಡ್ಡ ಮಟ್ಟದ ಹೆಚ್ಚಳವಾಗುವ ನಿರೀಕ್ಷೆಯಿತ್ತು. ಎರಡು ತಿಂಗಳ ಹಿಂದಿನ ನಿರೀಕ್ಷೆ ಈಗ ಉಲ್ಟಾ ಆಗಿ ಹಿನ್ನಡೆ ಸಂಭವಿಸುವ ಸಾಧ್ಯತೆಯಿದೆ. ಪರಿಷ್ಕರಿಸಲ್ಪಟ್ಟ ಶೇ. 9.8 ರ ಬೆಳವಣಿಗೆಯ ನಿರೀಕ್ಷೆಯೂ ಅನುಮಾನಾಸ್ಪದ.

ಕೊರೊನಾ ಮೂರನೆಯ ಅಲೆ ಭಾರತವನ್ನು ಕಾಡಲಿದೆ ಎಂಬ ಎಚ್ಚರಿಕೆ, ಲಾಕ್‌ಡೌನ್‌ ಪರಿಸ್ಥಿತಿಗಳನ್ನು ಸಮರ್ಪಕವಾಗಿ ನಿಭಾಯಿಸುವುದು ಮತ್ತಿತರ ವಿಚಾರಗಳು ಆರ್ಥಿಕತೆಯ ಮೇಲೆ ಪ್ರತ್ಯಕ್ಷ ಪರಿಣಾಮ ಬೀರುತ್ತದೆ. 2022-23ರಲ್ಲಿ ಅತಿವೃಷ್ಟಿ, ಅನಾವೃಷ್ಟಿ ದೇಶವನ್ನು ಕಾಡದೆ ವಾಡಿಕೆಯಷ್ಟು ಮುಂಗಾರು ಮಳೆ ಸುರಿದು ಕೃಷಿ ಕ್ಷೇತ್ರ ಉತ್ತಮ ಪ್ರಗತಿಯನ್ನು ಕಂಡರೆ ಮತ್ತು ಬೇರೆ ಸಮಸ್ಯೆಗಳು ಸೃಷ್ಟಿಯಾಗದಿದ್ದಲ್ಲಿ ಜಿಡಿಪಿ ಶೇ. 6.8 ರಿಂದ ಶೆ. 7 ಬೆಳವಣಿಗೆಯನ್ನು ಕಂಡರೂ ಕೂಡ ಕೊರೊನಾ ನಿಯಂತ್ರಣದಲ್ಲಿ ಸೋಲುತ್ತಿರುವುದರಿಂದಾಗಿ ಆರ್ಥಿಕಾಭಿವೃದ್ಧಿಯ ಬಗ್ಗೆ ಒಂದಿಷ್ಟು ಕಳವಳವಂತೂ ಇದ್ದೇ ಇದೆ.

ಸದ್ಯ ದೇಶದಲ್ಲಿನ ಕೊರೊನಾರ್ಭಟವನ್ನು ಕಂಡಾಗ ಭಾರತ ಟಾಪ್‌ಟೆನ್‌ ಆರ್ಥಿಕತೆ ಹೊಂದಿರುವ ರಾಷ್ಟ್ರಗಳಿಗಿಂತ ಕೆಳಗೆ ಕುಸಿಯಲಿದೆ ಮತ್ತು ಭಾರತ ಜಗತ್ತಿನ 5ನೇ ದೊಡ್ಡ ಆರ್ಥಿಕತೆಯಾಗಲು ಕನಿಷ್ಠ ಇನ್ನು ನಾಲ್ಕು ವರ್ಷಗಳು ಬೇಕಾಗಬಹುದು. 2019ರಲ್ಲಿ ಭಾರತದ ಜಿಡಿಪಿ 2.871 ಟ್ರಿಲಿಯನ್‌ ಡಾಲರ್‌ಗಳಷ್ಟಿತ್ತು. ಇದರೊಂದಿಗೆ ಬ್ರಿಟನ್‌ ಅನ್ನು ಹಿಂದಿಕ್ಕಿ 5ನೇ ಸ್ಥಾನ ಪಡೆದುಕೊಂಡಿತ್ತು. ಆದರೆ 2020-21 ಕ್ಕೆ 2.709 ಟ್ರಿಲಿಯನ್‌ ಡಾಲರ್‌ಗೆ ಇಳಿದು ಆರನೆಯ ಸ್ಥಾನಕ್ಕೆ ಕುಸಿಯಿತು.

ಲಸಿಕೆ ಅಭಿಯಾನದಲ್ಲಿ ವಿಫ‌ಲವಾಗಿ ಕೋವಿಡ್‌ ನಿಯಂತ್ರಣದಲ್ಲಿ ಸೋತರೆ ಮತ್ತು ಸಂಪೂರ್ಣ ಲಾಕ್‌ಡೌನ್‌ ಪರಿಸ್ಥಿತಿ ಎದುರಾದರೆ ಆರ್ಥಿಕತೆ ಮತ್ತಷ್ಟು ಕುಸಿಯಲಿದೆ. ಸಾರ್ವಜನಿಕರ ಕೋವಿಡ್‌ ಶಿಷ್ಟಾಚಾರ ಪಾಲನೆಯೂ ಕೂಡಾ ಆರ್ಥಿಕತೆಗೆ ಪೂರಕವಾಗುತ್ತದೆ. ಸಮಷ್ಟಿ ದೃಷ್ಟಿಯಿಂದ ನೋಡಿದರೆ ಭಾರತ ಮಹಾ ಮಾರಿಯನ್ನು ಮಣಿಸಲು ಶತಾಯಗತಾಯ ಪ್ರಯತ್ನಿಸುತ್ತಿದೆ. ವಿಶ್ವದ ಒಟ್ಟಾರೆ ಜನಸಂಖ್ಯೆಯಲ್ಲಿ ಶೇ. 18ರಷ್ಟು ಜನಸಂಖ್ಯೆಯಿರುವ ಈ ದೇಶದ ಅತ್ಯಂತ ದೊಡ್ಡ ಲಸಿಕಾ ಅಭಿಯಾನ ವೇಗವನ್ನು ಪಡೆದುಕೊಂಡಿದೆ. ಆದರೆ ಹತ್ತಾರು ಸಮಸ್ಯೆಗಳು ಮತ್ತು ಮಾನವ ಜೀವಕ್ಕೆರಗುತ್ತಿರುವ ಅಪಾಯಗಳ ನಡುವೆ ಜನನಿಬಿಡ 138 ಕೋಟಿ ಜನರಿರುವ ದೇಶದಲ್ಲಿ ಶ್ರಮಿಸಬೇಕಾದ ಹಾದಿ ಇನ್ನೂ ಸುದೀರ್ಘ‌ವಿದೆ.

ಸ್ವಾತಂತ್ರ್ಯಪೂರ್ವ ವರ್ಷಗಳನ್ನೇ ಗಣನೆಗೆ ತೆಗೆದುಕೊಂಡರೂ ದೇಶವು ಹಲವಾರು ಸಾಮಾಜಿಕ ಮತ್ತು ಆರ್ಥಿಕ ಏಳುಬೀಳುಗಳು ಮತ್ತು ಸಂಕಷ್ಟಗಳಿಂದ ಪಾರಾಗಿ ಬಂದಿದೆ. ಜನತೆ ಒಂದೊಪ್ಪತ್ತಿನ ಗಂಜಿಗೂ ಪರದಾಡುತ್ತಿದ್ದಾಗ ಹಸುರು ಕ್ರಾಂತಿಯ ಮೂಲಕ ಆಹಾರ ಸ್ವಾವಲಂಬನೆ ಸಾಧಿಸಲಾಯಿತು. 1991ರಲ್ಲಿ ದೇಶ ದಿವಾಳಿ ಅಂಚಿಗೆ ಕುಸಿದಿತ್ತು. ದೇಶದ ಬೊಕ್ಕಸ ಬರಿದಾಗಿ ಕೇವಲ ಮೂರು ವಾರಗಳ ಆಮದು ಖರ್ಚಿಗೆ ಅಗತ್ಯವಿರುವಷ್ಟು ವಿದೇಶಿ ವಿನಿಮಯವಿತ್ತು. ಅಂತಹ ಶೋಚನೀಯ ಪರಿಸ್ಥಿತಿಯಲ್ಲಿ ಸಮಾಜವಾದಿ ಮತ್ತು ಮುಕ್ತ ಮಾರುಕಟ್ಟೆ ಆಧಾರಿತ ಉದಾರೀಕರಣಕ್ಕೆ ತೆರೆದುಕೊಂಡು ಪರಿಸ್ಥಿತಿಯನ್ನು ನಿಭಾಯಿಸಿತ್ತು. 2008 ರಲ್ಲಿ ಜಾಗತಿಕ ಆರ್ಥಿಕ ಹಿಂಜರಿಕೆ ಸಂಭವಿಸಿದಾಗಲೂ ಪವಾಡ ಸದೃಶ ರೀತಿಯಲ್ಲಿ ಪ್ರತಿಕೂಲ ಪರಿಣಾಮಗಳಿಂದ ಪಾರಾಗಿತ್ತು. ದೇಶೀ ಮಾರುಕಟ್ಟೆ ಮತ್ತು ಬ್ಯಾಂಕಿಂಗ್‌ ವ್ಯವಸ್ಥೆ ದೇಶವನ್ನು ಕಾಪಾಡಿತ್ತು. ಇದೀಗ ಆರೋಗ್ಯ ಮತ್ತು ಆರ್ಥಿಕತೆಗಳೆರಡೂ “ಮಾಡು ಇಲ್ಲವೇ ಮಡಿ’ ಎಂಬಂತಹ ರೀತಿಯ ಸವಾಲನ್ನು ಎದುರಿಸುತ್ತಿದೆ.

ದೇಶವು ಸಾಮಾಜಿಕ ರಕ್ಷಣೆಗೆ ಭಾರೀ ಪ್ರಮಾಣದ ಹಣ ಒದಗಿಸಿದೆ. ಇದೀಗ ಕೋವಿಡ್‌ ವಿರುದ್ಧ ಹಣಕಾಸು ವಲಯ ನಡೆಸುತ್ತಿರುವ ಹೋರಾಟಕ್ಕೆ ಆರ್‌ಬಿಐ ನೇರವಾಗಿ ಸ್ಪಂದಿಸಿ ಸಕಾಲಿಕ ನಿರ್ಣಯ ಕೈಗೊಂಡಿದೆ. ವೈದ್ಯಕೀಯ ಕ್ಷೇತ್ರದ ಉತ್ಪಾದಕರಿಗೆ ನೆರವಾಗಲು 50 ಸಾವಿರ ಕೋಟಿ ರೂ. ಪ್ಯಾಕೇಜ್‌ ಘೋಷಣೆಯಾಗಿದೆ. ಈ ಹಣವನ್ನು ತುರ್ತು ವೈದ್ಯಕೀಯ ಪರಿಸ್ಥಿತಿ, ನಿರ್ವಹಣೆ, ಲಸಿಕೆ ಉತ್ಪಾದನೆ, ಆರೋಗ್ಯ ಕೇಂದ್ರಗಳ ಸ್ಥಾಪನೆ ಸೇರಿ ವಿವಿಧ ಕೊರೊನಾ ವಿರುದ್ಧ ಹೋರಾಟಕ್ಕಾಗಿ ಬಳಸಿಕೊಳ್ಳಬಹುದು ಎಂದು ಹೇಳಲಾಗಿದೆ. ಅತೀ ಸಣ್ಣ, ಸಣ್ಣ, ಮಧ್ಯಮ ಕೈಗಾರಿಕೆ(ಎಂಎಸ್‌ಎಂಇ) ಕ್ಷೇತ್ರಗಳಿಗೆ ಮತ್ತೂಂದು ಸುತ್ತಿನ ಸಾಲ ಮರುಪಾವತಿ ಮುಂದೂಡಿಕೆ (ಮೊರೆಟೋರಿಯಂ) ಯೋಜನೆ ಪ್ರಕಟಿಸಿದೆ. ವೈದ್ಯಕೀಯ ಉತ್ಪಾದನ ರಂಗಕ್ಕೆ ಸವಾಲಿನ ನಡುವೆ ಅವಕಾಶಗಳ ಸುಸಂದರ್ಭವೂ ಇದಾಗಿದೆ. ಸದ್ಯ ದೇಶ ಎದುರಿಸುತ್ತಿರುವ ಬಿಕ್ಕಟ್ಟನ್ನು ಸಮರ್ಥವಾಗಿ ನಿಭಾಯಿಸಲು ಆರ್‌ಬಿಐ ತನ್ನ ಸಂಪನ್ಮೂಲಗಳನ್ನು ಹಂಚಿಕೊಡುತ್ತಿರುವುದು ಮತ್ತು ಇದುವರೆಗಿನ ಎಲ್ಲ ಆರ್ಥಿಕ ಸಂಕಷ್ಟಗಳಿಗೆ ಆರ್‌ಬಿಐ ಸ್ಪಂದಿಸಿರುವುದು ಆಶಾದಾಯಕ ಬೆಳವಣಿಗೆ. ಮತ್ತೂಂದೆಡೆ ಕೇಂದ್ರ ಸರಕಾರ ಆರೋಗ್ಯ ಕ್ಷೇತ್ರ ಮತ್ತು ಅದಕ್ಕೆ ಸಂಬಂಧಿಸಿದ ಮೂಲ ಸೌಕರ್ಯಗಳನ್ನು ಬಲಪಡಿಸಲು ಪ್ರಯತ್ನಿಸುತ್ತಿದೆ. ಇದೇ ಸಂದರ್ಭದಲ್ಲಿ ದೇಶವು ಮೂರನೆಯ ಅಲೆಯನ್ನು ಎದುರಿಸಲು ಸನ್ನದ್ಧವಾಗಬೇಕಾಗಿದೆ. ಸವಾಲುಗಳನ್ನು ಮೆಟ್ಟಿ ನಿಂತು ದೃಢ ಹೆಜ್ಜೆಗಳನ್ನು ಇರಿಸಬೇಕಾಗಿದೆ. ಕೊರೊನಾವನ್ನು ಹಿಮ್ಮೆಟ್ಟಿಸಿ ಸಕಲ ಕ್ಷೇತ್ರಗಳಿಗೆ ಕಾಯಕಲ್ಪ ಒದಗಿಸಿ ದೇಶದ ಆರ್ಥಿಕತೆಯನ್ನು ಮತ್ತೆ ಬಲಪಡಿಸಬೇಕಿದೆ.

– ಚೇರ್ಕಾಡಿ ಸಚ್ಚಿದಾನಂದ ಶೆಟ್ಟಿ

ಟಾಪ್ ನ್ಯೂಸ್

Amit Shah ಹೇಳಿಕೆ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ: ಬಿ.ಕೆ. ಹರಿಪ್ರಸಾದ್‌

Amit Shah ಹೇಳಿಕೆ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ: ಬಿ.ಕೆ. ಹರಿಪ್ರಸಾದ್‌

Karnataka: ಸರಕಾರದಿಂದ ಕನ್ನಡದ ಅಭಿವೃದ್ಧಿಯೂ ಶೂನ್ಯ: ಬಿ.ವೈ. ವಿಜಯೇಂದ್ರ

Karnataka: ಸರಕಾರದಿಂದ ಕನ್ನಡದ ಅಭಿವೃದ್ಧಿಯೂ ಶೂನ್ಯ: ಬಿ.ವೈ. ವಿಜಯೇಂದ್ರ

1-a-bb

Pro Kabaddi: ಬೆಂಗಳೂರು ಬುಲ್ಸ್‌ ಗೆ 18ನೇ ಸೋಲು

Mandya: ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 46 ಮಂದಿ ಸಾಧಕರಿಗೆ ಸಮ್ಮಾನ

Mandya: ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 46 ಮಂದಿ ಸಾಧಕರಿಗೆ ಸಮ್ಮಾನ

“ರವಿ ಹತ್ಯೆ ಸಂಚಿನಲ್ಲಿ ಸಿಎಂ, ಗೃಹ ಸಚಿವರ ಕೈವಾಡ’: ಆರ್‌. ಅಶೋಕ್‌

“CT Ravi ಹತ್ಯೆ ಸಂಚಿನಲ್ಲಿ ಸಿಎಂ, ಗೃಹ ಸಚಿವರ ಕೈವಾಡ’: ಆರ್‌. ಅಶೋಕ್‌

CT Ravi ಪ್ರಕರಣ ನ್ಯಾಯಾಂಗ ತನಿಖೆ ಏಕೆ: ಸಿದ್ದರಾಮಯ್ಯ

CT Ravi ಪ್ರಕರಣ ನ್ಯಾಯಾಂಗ ತನಿಖೆ ಏಕೆ: ಸಿಎಂ ಸಿದ್ದರಾಮಯ್ಯ

Udupi: ಭಗವದ್ಗೀತೆ ಜೀವನದ ಭಾಗವಾಗಲಿ: ಸುಬ್ರಹ್ಮಣ್ಯ ಶ್ರೀ

Udupi: ಭಗವದ್ಗೀತೆ ಜೀವನದ ಭಾಗವಾಗಲಿ: ಸುಬ್ರಹ್ಮಣ್ಯ ಶ್ರೀ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mandya :ಗಂಡ ಗದ್ಯ, ಹೆಂಡತಿ ಪದ್ಯ ಮಕ್ಕಳು ರಗಳೆ: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್‌

Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್‌

Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!

Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!

Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್‌

Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್‌

ravishankar-guruji

World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ

1-dhyan

Meditation; ಮಾನಸಿಕ ಆರೋಗ್ಯಕ್ಕೆ ದಿವ್ಯೌಷಧ: ಡಿ.21ರಂದೇ ಏಕೆ ಧ್ಯಾನ ದಿನ?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Amit Shah ಹೇಳಿಕೆ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ: ಬಿ.ಕೆ. ಹರಿಪ್ರಸಾದ್‌

Amit Shah ಹೇಳಿಕೆ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ: ಬಿ.ಕೆ. ಹರಿಪ್ರಸಾದ್‌

Karnataka: ಸರಕಾರದಿಂದ ಕನ್ನಡದ ಅಭಿವೃದ್ಧಿಯೂ ಶೂನ್ಯ: ಬಿ.ವೈ. ವಿಜಯೇಂದ್ರ

Karnataka: ಸರಕಾರದಿಂದ ಕನ್ನಡದ ಅಭಿವೃದ್ಧಿಯೂ ಶೂನ್ಯ: ಬಿ.ವೈ. ವಿಜಯೇಂದ್ರ

1-a-bb

Pro Kabaddi: ಬೆಂಗಳೂರು ಬುಲ್ಸ್‌ ಗೆ 18ನೇ ಸೋಲು

Mandya: ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 46 ಮಂದಿ ಸಾಧಕರಿಗೆ ಸಮ್ಮಾನ

Mandya: ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 46 ಮಂದಿ ಸಾಧಕರಿಗೆ ಸಮ್ಮಾನ

“ರವಿ ಹತ್ಯೆ ಸಂಚಿನಲ್ಲಿ ಸಿಎಂ, ಗೃಹ ಸಚಿವರ ಕೈವಾಡ’: ಆರ್‌. ಅಶೋಕ್‌

“CT Ravi ಹತ್ಯೆ ಸಂಚಿನಲ್ಲಿ ಸಿಎಂ, ಗೃಹ ಸಚಿವರ ಕೈವಾಡ’: ಆರ್‌. ಅಶೋಕ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.