ಅಮೆರಿಕ ಡಾಲರ್‌ ವಿರುದ್ಧ ಬರಲಿದೆ ಚೀನ ಬಿಟ್‌ ಕಾಯಿನ್‌

ಈಗಾಗಲೇ ನಾಲ್ಕು ನಗರಗಳಲ್ಲಿ ಪ್ರಾಯೋಗಿಕ ಚಲಾವಣೆ ; ಹೊಸ ವ್ಯವಸ್ಥೆ ಮೂಲಕ ವೇತನ ಪಾವತಿಯೂ ಆರಂಭ

Team Udayavani, May 3, 2020, 5:50 AM IST

ಅಮೆರಿಕ ಡಾಲರ್‌ ವಿರುದ್ಧ ಬರಲಿದೆ ಚೀನ ಬಿಟ್‌ ಕಾಯಿನ್‌

ಸಾಂದರ್ಭಿಕ ಚಿತ್ರ.

ಬೀಜಿಂಗ್‌: ಕೋವಿಡ್-19 ವೈರಸ್‌ ವಿಚಾರದಲ್ಲಿ ನಿರಂತ ರವಾಗಿ ದೊಡ್ಡಣ್ಣನಿಂದ ವಾಗ್ಧಾಳಿಗೆ ಗುರಿಯಾಗುತ್ತಿರುವ ಚೀನಾ ಈಗ ಅಮೆರಿಕದ ಡಾಲರ್‌ಗೆ ಸೆಡ್ಡು ಹೊಡೆಯಲು ಮುಂದಾಗಿದೆ. ಅದರ ಆರಂಭಿಕ ಹೆಜ್ಜೆಯೆಂಬಂತೆ, ಚೀನಾ ತನ್ನದೇ ಆದ ಅಧಿಕೃತ ಡಿಜಿಟಲ್‌ ಕರೆನ್ಸಿಯನ್ನು ನಾಲ್ಕು ನಗರಗಳಲ್ಲಿ ಪ್ರಾಯೋಗಿಕವಾಗಿ ಚಲಾವಣೆಗೊಳಿಸಲು ಶುರು ಮಾಡಿದೆ. ಈ ಮೂಲಕ ಅಮೆರಿಕದ ಡಾಲರ್‌ ಏಕಸ್ವಾಮ್ಯವನ್ನು ನಾಶ ಮಾಡುವ ಯೋಜನೆಯನ್ನು ಡ್ರ್ಯಾಗನ್‌ ಹಾಕಿಕೊಂಡಿದೆ.

ಚೀನಾದ ಅಪೆಕ್ಸ್‌ ಬ್ಯಾಂಕ್‌ (ಪೀಪಲ್ಸ್‌ ಬ್ಯಾಂಕ್‌ ಆಫ್ ಚೈನಾ)ನ ಡಿಜಿಟಲ್‌ ಕರೆನ್ಸಿ ಸಂಶೋಧನಾ ಸಂಸ್ಥೆಯು ಈಗಾಗಲೇ  ಸುಝೌ, ಹಾಗೂ ಕ್ಸಿಯಾಂಗನ್‌ ನಗರಗಳಲ್ಲಿ ಮತ್ತು 2022ರ ಬೀಜಿಂಗ್‌ ವಿಂಟರ್‌ ಒಲಿಂಪಿಕ್ಸ್‌ ನಡೆಯುವಂಥ ಕೆಲವು ಪ್ರದೇಶಗಳಲ್ಲಿ ಈಗಾಗಲೇ ಡಿಜಿಟಲ್‌ ಕರೆನ್ಸಿಯ ಪ್ರಯೋಗ ಶುರುಮಾಡಿದೆ.

ವೇತನ ಪಾವತಿಯೂ ಶುರು: ಈ ಅಧಿಕೃತ ಡಿಜಿಟಲ್‌ ಕರೆನ್ಸಿಯನ್ನು ಡಿಸಿ/ಇಪಿ ಹಾಗೂ ಇಆರ್‌ ಎಂಬಿ ಎಂದು ಕರೆಯಲಾಗುತ್ತದೆ. ವಿಶೇಷವೆಂದರೆ, ಕೆಲವು ಸರ್ಕಾರಿ ಉದ್ಯೋಗಿಗಳಿಗೆ ಏಪ್ರಿಲ್‌ ವೇತನ ವನ್ನು ಈ ಕರೆನ್ಸಿಯ ಮೂಲಕವೇ ಪಾವತಿಸಲಾಗಿದೆ. ಕೆಲವು ನಗರಗಳಲ್ಲಿ ಸಾರಿಗೆ ಸಂಪರ್ಕ, ಇನ್ನೂ ಕೆಲವು ನಗರಗಳಲ್ಲಿ ಆಹಾರ ಮತ್ತು ಚಿಲ್ಲರೆ ವ್ಯಾಪಾರಗಳಿಗೆ ಇದನ್ನು ಪ್ರಾಯೋಗಿಕವಾಗಿ ಬಳಸಲಾಗುತ್ತಿದೆ. ಅಷ್ಟೇ ಅಲ್ಲ, ಮೆಕ್‌ಡೊನಾಲ್ಡ್‌, ಸ್ಟಾರ್‌ಬಕ್ಸ್‌, ಸಬ್‌ವೇ ಸೇರಿದಂತೆ 19 ರಿಟೇಲರ್‌ಗಳಿಗೆ ಡಿಜಿಟಲ್‌ ಕರೆನ್ಸಿಗಳ ಟ್ರಯಲ್‌ ಮಾಡುವಂತೆ ಆಹ್ವಾನ ನೀಡಲಾಗಿದೆ.

ಹಣದುಬ್ಬರ ಏರಿಕೆಯಾಗಲ್ಲ: ಸದ್ಯಕ್ಕೆ ಡಿಜಿಟಲ್‌ ಕರೆನ್ಸಿಯನ್ನು ದೊಡ್ಡ ಮಟ್ಟದಲ್ಲಿ ಸಾರ್ವಜನಿಕರಿಗೆ ಚಲಾವಣೆಗೆ ಬಿಡುವುದಿಲ್ಲ. ಆದರೆ, ದೀರ್ಘ‌ಕಾಲ ದಲ್ಲಿ ಇದರ ವ್ಯಾಪಕ ಬಳಕೆ ಆರಂಭವಾಗಲಿದೆ. ಅಲ್ಲದೆ ಈಗ ಚಲಾವಣೆಯಲ್ಲಿರುವ ಡಿಜಿಟಲ್‌ ಕರೆನ್ಸಿಯಿಂದ ಹಣದುಬ್ಬರ ಏರಿಕೆಯಾಗಬಹುದೆಂಬ ಭೀತಿಯೂ ಬೇಡ. ಎಂದು ಚೀನಾದ ಅಪೆಕ್ಸ್‌ ಬ್ಯಾಂಕ್‌ ಹೇಳಿದೆ.

ಅಮೆರಿಕಕ್ಕೆ ತಿರುಗುಬಾಣ
ಕೋವಿಡ್-19 ವಿಚಾರದಲ್ಲಿ ಚೀನಾ ವಿರುದ್ಧ ಅಮೆರಿಕ ಕೆಂಡ ಕಾರುತ್ತಲೇ ಇದೆ, ಜತೆಗೆ ವ್ಯಾಪಾರ ಸಮರ, ನಿರ್ಬಂಧದ ಬೆದರಿಕೆಯನ್ನೂ ಒಡ್ಡುತ್ತಿದೆ. ಹೀಗಾಗಿ, ಅಮೆರಿಕನ್‌ ಡಾಲರ್‌ನ ಏಕಸ್ವಾಮ್ಯವನ್ನು ತಗ್ಗಿಸಿ, ಹೂಡಿಕೆದಾರರು ಮತ್ತು ಉದ್ಯಮಿಗಳಿಗೆ ಪರ್ಯಾಯ ಕರೆನ್ಸಿಯ ಆಯ್ಕೆ ಒದಗಿಸುವುದು ಚೀನಾದ ಕಾರ್ಯತಂತ್ರವಾಗಿದೆ. ಅಲ್ಲದೆ, ಅಮೆರಿಕವೇನಾದರೂ ಚೀನಾದ ಮೇಲೆ ಆರ್ಥಿಕ ದಿಗ್ಬಂಧ ಹೇರಿದರೂ, ತಮ್ಮ ಆರ್ಥಿಕತೆಗೆ ಸಮಸ್ಯೆಯಾಗದಂತೆ ನೋಡಿಕೊಳ್ಳುವುದೂ ಇದರ ಮತ್ತೂಂದು ಉದ್ದೇಶವಾಗಿದೆ.

ಟಾಪ್ ನ್ಯೂಸ್

1-sambhal

Sambhal; ದೇಗುಲ ಬಳಿಕ 150 ವರ್ಷ ಹಳೆ ಬಾವಿ ಪತ್ತೆ

ರಾಜ್ಯದ ಅರಣ್ಯ ವಿಸ್ತರಣೆ, ಸಂರಕ್ಷಣೆಗೆ ವೇಗ ಸಿಗಲಿ

ರಾಜ್ಯದ ಅರಣ್ಯ ವಿಸ್ತರಣೆ, ಸಂರಕ್ಷಣೆಗೆ ವೇಗ ಸಿಗಲಿ

Mulki-kambla

Mulki: ಕಂಬಳದಿಂದ ಕೃಷಿ, ಧಾರ್ಮಿಕ ನಂಬಿಕೆ ವೃದ್ಧಿ: ನ್ಯಾ. ಎನ್‌. ಸಂತೋಷ್‌ ಹೆಗ್ಡೆ

udupi-Bar-Asso

Udupi: ಸುಪ್ರೀಂ, ಹೈಕೋರ್ಟ್‌ಗಳ ತೀರ್ಪು ಆನ್‌ಲೈನ್‌ನಲ್ಲಿ ಲಭ್ಯ: ನ್ಯಾ.ಸೂರಜ್‌

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

SASTHANA-TOLL

Kota: ಸಾಸ್ತಾನ ಟೋಲ್‌: ಡಿ.30ರ ತನಕ ಯಥಾಸ್ಥಿತಿ ಮುಂದುವರಿಕೆಗೆ ಸೂಚನೆ

mob

Samsung Phone; ಫೋಟೋ ಸೋರಿಕೆ: ಕೆಲಸಗಾರರು ವಜಾ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kuwait-PM

Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

Sheik Hasina

Sheikh Hasina ಅವಧಿಯಲ್ಲಾದ ಅಪಹರಣಗಳಿಗೆ ಭಾರತ ಕುಮ್ಮಕ್ಕು: ಬಾಂಗ್ಲಾ ವರದಿ

ravishankar-guruji

Meditation; ಜಾಗತಿಕ ಶಾಂತಿ, ಏಕತೆಗೆ ಧ್ಯಾನ ಮುಖ್ಯ ಸಾಧನ: ಶ್ರೀ ಶ್ರೀ ರವಿಶಂಕರ್‌

iran

Israel ಮೇಲೆ ದಾಳಿಗೆ ಇರಾನ್‌ನಿಂದ ಮಕ್ಕಳ ಬಳಕೆ?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-ru

PF fraud; ಆರೋಪಿ ಕಂಪೆನಿಗಳಿಗೆ ನಾನು ನಿರ್ದೇಶಕನಲ್ಲ: ರಾಬಿನ್‌ ಉತ್ತಪ್ಪ

1-sambhal

Sambhal; ದೇಗುಲ ಬಳಿಕ 150 ವರ್ಷ ಹಳೆ ಬಾವಿ ಪತ್ತೆ

1-reeeee

Vijay Hazare Trophy Cricket: ಇಂದು ಕರ್ನಾಟಕಕ್ಕೆ ಪುದುಚೇರಿ ಎದುರಾಳಿ

ರಾಜ್ಯದ ಅರಣ್ಯ ವಿಸ್ತರಣೆ, ಸಂರಕ್ಷಣೆಗೆ ವೇಗ ಸಿಗಲಿ

ರಾಜ್ಯದ ಅರಣ್ಯ ವಿಸ್ತರಣೆ, ಸಂರಕ್ಷಣೆಗೆ ವೇಗ ಸಿಗಲಿ

Accident-logo

Siddapura: ಕಾರು ಸ್ಕೂಟಿಗೆ ಢಿಕ್ಕಿ; ಸವಾರರು ಗಂಭೀರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.