ಪಂಚಕರ್ಮ ಜತೆಗೆ ಗೌಡರ ಪಂಚತಂತ್ರ
ಕೇಂದ್ರದಲ್ಲಿ ಸಮ್ಮಿಶ್ರ ಸರ್ಕಾರ, ರಾಜ್ಯದಲ್ಲಿ ಸರ್ಕಾರ ಉಳಿಸಲು ಪ್ಲಾನ್
Team Udayavani, May 4, 2019, 6:00 AM IST
ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಫಲಿತಾಂಶ ಏನಾಗಬಹುದೋ ಎಂದು ಕಾಂಗ್ರೆಸ್-ಜೆಡಿಎಸ್‌ನ ನಾಯಕರು ಯೋಚಿಸುತ್ತಿದ್ದರೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಉಡುಪಿ ರೆಸಾರ್ಟ್‌ನಲ್ಲಿ ಪಂಚಕರ್ಮ ಚಿಕಿತ್ಸೆ ನಡುವೆಯೇ ‘ಮಹಾಘಟ್ಬಂಧನ್’ ಸರ್ಕಾರ ರಚನೆಗೆ ಪಂಚ’ತಂತ್ರ’ ರೂಪಿಸುತ್ತಿದ್ದಾರೆ. ಜತೆಗೆ ರಾಜ್ಯದಲ್ಲಿ ಅಸ್ತಿತ್ವದಲ್ಲಿರುವ ಸಮ್ಮಿಶ್ರ ಸರ್ಕಾರದ ಭವಿಷ್ಯದ ಬಗ್ಗೆಯೂ ನೀಲನಕ್ಷೆ ಸಿದ್ಧ ಮಾಡುತ್ತಿದ್ದಾರೆ.
ಚುನಾವಣೆ ಫಲಿತಾಂಶದ ನಂತರ ರಾಷ್ಟ್ರ ರಾಜಕಾ ರಣದಲ್ಲಾಗಬಹುದಾದ ಬದಲಾವಣೆ ಅದು ಕರ್ನಾಟ ಕದ ಮೇಲೆ ಬೀರುವ ಪರಿಣಾಮದ ಅಂದಾಜು ಮಾಡಿ ರುವ ಗೌಡರು ಈಗಿನಿಂದಲೇ ಮುಂದೇನು ಮಾಡ ಬೇಕು ಎಂಬ ಕಾರ್ಯತಂತ್ರದಲ್ಲಿ ತೊಡಗಿದ್ದಾರೆ.
ಉಡುಪಿ ಬಳಿಯ ರೆಸಾರ್ಟ್‌ಗೆ ಹೋಗುವ ಮುನ್ನ ದೇವೇಗೌಡರು ದೆಹಲಿಗೆ ಹೋಗಿ ಕೆಲವು ಪ್ರಾದೇಶಿಕ ಪಕ್ಷಗಳ ನಾಯಕರ ಜತೆ ಚರ್ಚಿಸಿ ಬಂದಿದ್ದರು. ಚಿಕಿತ್ಸೆಯ ನಡುವೆಯೇ ಹಲವು ಮುಖಂಡರನ್ನು ಸಂಪರ್ಕಿಸಿ ಅಲ್ಲಿನ ಸ್ಥಿತಿಯ ಬಗ್ಗೆ ಮಾಹಿತಿ ಪಡೆಯುತ್ತಿದ್ದಾರೆ.
ಉತ್ತರಪ್ರದೇಶ, ದೆಹಲಿ, ಒರಿಸ್ಸಾ, ಆಂಧ್ರಪ್ರದೇಶ, ತೆಲಂಗಾಣ ಸೇರಿದಂತೆ ಬಹುತೇಕ ರಾಜ್ಯಗಳ ಪ್ರಾದೇಶಿಕ ನಾಯಕರು ದೇವೇಗೌಡರ ಸಂಪರ್ಕದಲ್ಲಿದ್ದು, ಲೋಕಸಭೆ ಚುನಾವಣೆ ಫಲಿತಾಂಶದ ನಂತರ ಮಹಾಘಟ್ಬಂಧನ್ ಸ್ವರೂಪವೇ ಬದಲಾಗುವ ನಿರೀಕ್ಷೆಯಲ್ಲಿದ್ದಾರೆ. ಕಾಂಗ್ರೆಸ್ ಈಗಿರುವ ಸ್ಥಾನಗಳಿಗಿಂತ ಹೆಚ್ಚು ಗಳಿಸಿದರೂ, ಆ ಪಕ್ಷ ಸರ್ಕಾರದಿಂದ ಸರ್ಕಾರ ರಚನೆ ಸಾಧ್ಯವಾಗದಿದ್ದರೆ, ಪ್ರಾದೇಶಿಕ ಪಕ್ಷಗಳ ಒಕ್ಕೂಟಕ್ಕೆ ಅದರ ಬೆಂಬಲ ಪಡೆಯುವ ಸಾಧ್ಯತೆಗಳ ಬಗ್ಗೆಯೂ ಚರ್ಚೆ ನಡೆಸುತ್ತಿದ್ದಾರೆ ಎನ್ನಲಾಗಿದೆ.
ಡ್ಯಾನಿಶ್‌ಗೆ ಹೊಣೆ: ಲೋಕಸಭೆ ಚುನಾವಣೆಯಲ್ಲಿ ಉತ್ತರ ಪ್ರದೇಶದ ಅನ್ರೋಹ ಕ್ಷೇತ್ರದಿಂದ ಸ್ಪರ್ಧಿಸುವ ಸಲುವಾಗಿಯೇ ಬಿಎಸ್‌ಪಿ ಸೇರಿರುವ ಜೆಡಿಎಸ್ ರಾಷ್ಟ್ರೀಯ ಮಹಾಪ್ರಧಾನ ಕಾರ್ಯದರ್ಶಿಯಾಗಿದ್ದ ಡ್ಯಾನಿಶ್ ಆಲಿಗೆ ಎಸ್‌ಪಿ-ಬಿಎಸ್‌ಪಿ, ಆರ್‌ಎಲ್ಡಿ ನಾಯಕರನ್ನು ಒಟ್ಟುಗೂಡಿಸುವ ಹೊಣೆಗಾರಿಕೆ ನೀಡಿದ್ದು, ಡ್ಯಾನಿಶ್ ಆಲಿ ಅವರು ಆ ಪ್ರಯತ್ನದಲ್ಲಿ ತೊಡಗಿದ್ದಾರೆ .
ಕರ್ನಾಟಕದಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಡ್ಯಾನಿಶ್ ಅಲಿ ಇದೀಗ ರಾಷ್ಟ್ರ ಮಟ್ಟದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಹೊರತುಪಡಿಸಿದ ಇತರೆ ಪಕ್ಷಗಳ ನಾಯಕರ ಜತೆ ಡ್ಯಾನಿಶ್ ಅಲಿ ಒಂದು ಸುತ್ತು ಮಾತುಕತೆ ಸಹ ನಡೆಸಿ ದೇವೇಗೌಡರ ಸಂದೇಶ ರವಾನಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಪ್ರಾದೇಶಿಕ ಪಕ್ಷಗಳ ನಾಯಕರಿಗೆ ದೇವೇಗೌಡರು ರವಾನಿಸಿರುವ ಸಂದೇಶ ಏನು ಎಂಬುದರ ಬಗ್ಗೆ ಯಾರೂ ಗುಟ್ಟು ಬಿಟ್ಟುಕೊಡುತ್ತಿಲ್ಲ.
ಚಂದ್ರಶೇಖರರಾವ್ ಜತೆ ಚರ್ಚೆ
ಗುರುವಾರ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ತೆಲಂಗಾಣದ ಟಿಆರ್‌ಎಸ್ ಮುಖಂಡ ಚಂದ್ರಶೇಖರರಾವ್ ಹಾಗೂ ಆಂಧ್ರಪ್ರದೇಶದ ವೈ.ಎಸ್.ಆರ್. ಪಕ್ಷದ ಜಗನ್‌ಮೋಹನ್‌ರೆಡ್ಡಿ ಅವರ ಜತೆಯೂ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.
ದೇವೇಗೌಡರ ಪಂಚ ‘ತಂತ್ರ’
ಟಿಆರ್‌ಎಸ್ ಮತ್ತು ವೈಎಸ್‌ಆರ್ ಪಕ್ಷಗಳನ್ನು ಸೆಳೆಯುವುದು
ಈ ಹಿಂದೆ ಯುಪಿಎನಲ್ಲಿದ್ದು, ಈಗ ಎನ್‌ಡಿಎ ಜತೆಗಿರುವ ರಾಮ್‌ವಿಲಾಸ್ ಪಾಸ್ವಾನ್‌ರಂಥ ನಾಯಕರಿಗೆ ಗಾಳ
ಮಹಾಘಟಬಂಧನ್‌ಗೆ ಹೊಸ ಪ್ರಾದೇಶಿಕ ಪಕ್ಷಗಳ ಸೇರ್ಪಡೆ
ಪ್ರಾದೇಶಿಕ ಪಕ್ಷಗಳ ತಂಡ ರಚನೆ
ರಾಷ್ಟ್ರ ರಾಜಕಾರಣದಲ್ಲಿ ಮುಂಚೂಣಿ ಪಾತ್ರ ವಹಿಸುವುದು (90ರ ದಶಕದಲ್ಲಿ ಹರಿಕಿಶನ್‌ಸಿಂಗ್ ಸುರ್ಜಿತ್ ವಹಿಸಿದ ಪಾತ್ರ)
ಎಸ್. ಲಕ್ಷ್ಮಿನಾರಾಯಣ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮದುವೆಯಾಗಿದ್ದೇವೆ… ನಮಗೆ ರಕ್ಷಣೆ ನೀಡಿ ಎಂದು ಠಾಣೆ ಮೆಟ್ಟಿಲೇರಿದ ಪ್ರೇಮಿಗಳು
Karnataka: “ಸೈಬರ್ ಕ್ರೈಂ ತಡೆಗೆ ಪ್ರತ್ಯೇಕ ಭದ್ರತಾ ವಿಭಾಗ’: ಸಚಿವ ಡಾ| ಜಿ. ಪರಮೇಶ್ವರ್
Karnataka: ಬೆಂಗಳೂರಿನಲ್ಲಿ ಸಾಕು ನಾಯಿಗಳ ಅಂತ್ಯಕ್ರಿಯೆಗೆ ಚಿತಾಗಾರ; ಸರಕಾರ ಚಿಂತನೆ
Renukaswamy Case: ಕೊನೆಗೂ ಶಿವಮೊಗ್ಗ ಜೈಲಿನಿಂದ ಬಿಡುಗಡೆಯಾದ ಜಗದೀಶ್
Belagavi: ಅಂಗನವಾಡಿ ಕಾರ್ಯಕರ್ತೆಯರ ಬೇಡಿಕೆಗಳ ಈಡೇರಿಕೆಗೆ ಕ್ರಮ: ಸಚಿವೆ ಲಕ್ಷ್ಮೀ
MUST WATCH
ಹೊಸ ಸೇರ್ಪಡೆ
Belagavi: ಮಹಿಳೆಯರ ಸಬಲರಾಗಿಸುವ ಗೃಹಲಕ್ಷ್ಮಿ ಯೋಜನೆ ನಿಲ್ಲಿಸುವ ಮಾತೇ ಇಲ್ಲ: ಸಿದ್ದರಾಮಯ್ಯ
Noida: ಟಾಯ್ಲೆಟಲ್ಲಿ ರಹಸ್ಯ ಕ್ಯಾಮರಾ ಇಟ್ಟಿದ್ದ ಶಾಲಾ ನಿರ್ದೇಶಕ… ಪತ್ತೆ ಹಚ್ಚಿದ ಶಿಕ್ಷಕಿ
ಮದುವೆಯಾಗಿದ್ದೇವೆ… ನಮಗೆ ರಕ್ಷಣೆ ನೀಡಿ ಎಂದು ಠಾಣೆ ಮೆಟ್ಟಿಲೇರಿದ ಪ್ರೇಮಿಗಳು
Mulabagilu: ಭೀಕರ ಅಪಘಾತ: ದ್ವಿಚಕ್ರ ವಾಹನಗಳಿಗೆ ಬೊಲೆರೋ ಢಿಕ್ಕಿ, ನಾಲ್ವರ ಮೃತ್ಯು!
Karnataka: “ಸೈಬರ್ ಕ್ರೈಂ ತಡೆಗೆ ಪ್ರತ್ಯೇಕ ಭದ್ರತಾ ವಿಭಾಗ’: ಸಚಿವ ಡಾ| ಜಿ. ಪರಮೇಶ್ವರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.