ಕೋವಿಡ್ 19 ವಾರ್ಡ್‌ನಲ್ಲಿದ್ದ ಬೆಕ್ಕುಗಳ ಮೃತ್ಯು
ಕಾಸರಗೋಡು ಜಿಲ್ಲಾಸ್ಪತ್ರೆಯಲ್ಲಿ ನಡೆದ ಶಂಕಾಸ್ಪದ ಬೆಳವಣಿಗೆ
Team Udayavani, Apr 12, 2020, 6:15 AM IST
ಸಾಂದರ್ಭಿಕ ಚಿತ್ರ
ಕಾಸರಗೋಡು ನ್ಯೂಯಾರ್ಕ್‌ನ ಬ್ರಾಂಕ್ಸ್ ಮೃಗಾಲಯದ ಹುಲಿಗೆ ಕೋವಿಡ್ 19 ತಗಲಿದ್ದು ಈಗಾಗಲೇ ಜಗತ್ತಿನಾದ್ಯಂತ ಸಂಚಲನ ಸೃಷ್ಟಿಸಿದೆ. ಇದರ ಬೆನ್ನಿಗೆ ಕಾಸರ ಗೋಡು ಜಿಲ್ಲಾಸ್ಪತ್ರೆಯ ಕೋವಿಡ್ 19 ಐಸೊಲೇಶನ್ ವಾರ್ಡ್‌ನಲ್ಲಿದ್ದ ಐದು ಬೆಕ್ಕುಗಳು ಮೃತಪಟ್ಟಿರುವುದು ಆತಂಕಕ್ಕೆ ಕಾರಣವಾಗಿದೆ.
ಕಾಸರಗೋಡು ಜಿಲ್ಲೆಯಲ್ಲಿ 120ಕ್ಕೂ ಅಧಿಕ ಮಂದಿಗೆ ಸೋಂಕು ದೃಢಪಟ್ಟಿದ್ದು, ಕೇರಳದ ಹಾಟ್‌ಸ್ಪಾಟ್‌ಗಳಲ್ಲಿ ಒಂದಾಗಿದೆ. ಇದರ ನಡುವೆ ಈ ಪ್ರಕರಣ ಬೆಳಕಿಗೆ ಬಂದಿದೆ. ಬ್ರೆಜಿಲ್‌ನಲ್ಲಿ ಬೆಕ್ಕು, ಸಿಂಗಾಪುರದಲ್ಲಿ ನಾಯಿಗಳಿಗೆ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಈ ಬೆಕ್ಕುಗಳಿಗೂ ಸೋಂಕು ತಗಲಿರಬಹುದೇ ಎಂಬ ಆತಂಕ ವ್ಯಕ್ತವಾಗಿದೆ. ಹೀಗಾಗಿ ಅವುಗಳ ಪ್ರಮುಖ ಅಂಗಾಂಗಗಳನ್ನು ತಿರುವನಂತಪುರದಲ್ಲಿರುವ ಪ್ರಾಣಿ ರೋಗ ಪತ್ತೆ ಕೇಂದ್ರಕ್ಕೆ ಕಳುಹಿಸಲಾಗಿದೆ.
ಮೃತ ಬೆಕ್ಕುಗಳಲ್ಲಿ ಮೂರು ದೊಡ್ಡವಾಗಿದ್ದು, ಅವುಗಳಲ್ಲಿ ಎರಡು ಗಂಡು, ಮತ್ತೂಂದು ಹೆಣ್ಣು. ಇನ್ನೆರಡು ಮರಿಗಳು.
ಹೆಚ್ಚಿನ ಪರೀಕ್ಷೆಗೂ ರವಾನೆ
ತಿರುವನಂತಪುರದ ಪ್ರಾಣಿ ರೋಗ ಪತ್ತೆ ಕೇಂದ್ರದಿಂದ ಸ್ಪಷ್ಟ ಫಲಿತಾಂಶ ಸಿಗದೆ ಇದ್ದರೆ ಹೆಚ್ಚಿನ ಪರೀಕ್ಷೆಗಾಗಿ ಭೋಪಾಲದಲ್ಲಿರುವ ರಾಷ್ಟ್ರೀಯ ಹೈ ಸೆಕ್ಯೂರಿಟಿ ಆ್ಯನಿಮಲ್ ಡಿಸೀಸಸ್ ಪ್ರಯೋಗಾಲಯಕ್ಕೆ ಕಳುಹಿಸ ಲಾಗುತ್ತದೆ ಎಂದು ಕಾಸರಗೋಡಿನ ಪ್ರಾಣಿ ಜನ್ಯ ಕಾಯಿಲೆಗಳ ನಿರ್ಮೂಲನ ಯೋಜನೆಯ ಸಂಚಾಲಕ ಡಾ| ಟಿಟೋ ಜೋಸೆಫ್ ಹೇಳಿದ್ದಾರೆ.
ಸೆರೆ ಹಿಡಿಯಲಾಗಿತ್ತು
ಜಿಲ್ಲಾಸ್ಪತ್ರೆಯ ಕೋವಿಡ್ 19 ವಾರ್ಡ್‌ನಲ್ಲಿ ಬೆಕ್ಕುಗಳು ಓಡಾಡುತ್ತಿದ್ದ ಬಗ್ಗೆ ಜಿಲ್ಲಾಧಿಕಾರಿ ಡಾ| ಡಿ. ಸಜಿತ್ ಬಾಬು ಅವರಿಗೆ ದೂರುಗಳು ಸಲ್ಲಿಕೆಯಾಗಿದ್ದವು. ಅವು ಗಲೀಜು ಮಾಡುತ್ತಿವೆ ಎಂದೂ ದೂರಲಾಗಿತ್ತು. ಜಿಲ್ಲಾಧಿಕಾರಿ ಆದೇಶದ ಮೇರೆಗೆ ಪಶು ಸಂಗೋಪನ ಇಲಾಖೆಯ ಉಸ್ತುವಾರಿಯಲ್ಲಿ ಅವುಗಳನ್ನು ಸೆರೆ ಹಿಡಿಯಲಾಗಿತ್ತು. ಅನಂತರ ಅವುಗಳನ್ನು ಗೂಡಿನಲ್ಲಿಟ್ಟು ಆಹಾರ ಒದಗಿಸಲಾಗುತ್ತಿತ್ತು ಎಂದು ಜಿಲ್ಲಾ ಪಶುಸಂಗೋಪನ ಅಧಿಕಾರಿ ಡಾ| ಉಣ್ಣಿಕೃಷ್ಣನ್ ತಿಳಿಸಿದ್ದಾರೆ.
ಈ ಬೆಕ್ಕುಗಳನ್ನು ಹಿಡಿದವರು ಪರ್ಸನಲ್ ಪ್ರೊಟೆಕ್ಷನ್ ಇಕ್ವಿಪ್‌ಮೆಂಟ್ ಅನ್ನು ಧರಿಸಿದ್ದರು ಎಂದು ಡಾ| ಟಿಟೋ ಜೋಸೆಫ್ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.