ಉದ್ಯೋಗ ಸೃಷ್ಟಿಸುತ್ತಿದೆ ಡಿಜಿಟಲ್ ಜಗ
Team Udayavani, Dec 25, 2020, 5:20 AM IST
ಕೋವಿಡ್‌ನ ಸಮಯದಲ್ಲಿ ಉದ್ಯೋಗ ಮಾರುಕಟ್ಟೆಯಲ್ಲಿ ಭಾರೀ ಪಲ್ಲಟವಾಗುತ್ತಿದೆ. ಡಿಜಿಟಲ್ ತಂತ್ರಜ್ಞಾನವು ನವ ಉದ್ಯೋಗ ಸಾಧ್ಯತೆಗಳ ದ್ವಾರವನ್ನು ತೆರೆದಿಟ್ಟಿದೆ. ಕಳೆದ 8-9 ತಿಂಗಳಲ್ಲಿ ಭಾರತದ ಉದ್ಯೋಗ ಕ್ಷೇತ್ರದಲ್ಲಿ ಹೇಗೆ ಹೊಸ ಅವಕಾಶಗಳು ಸೃಷ್ಟಿಯಾಗುತ್ತಿವೆ? ಇಲ್ಲಿದೆ ಮಾಹಿತಿ…
ಆ್ಯಪ್ ಮಾರುಕಟ್ಟೆಯ ವೇಗ
ಕೋವಿಡ್ ಸಮಯದಲ್ಲಿ ಬೃಹತ್ ಹೊಟೇಲ್ ಸಮೂಹಗಳು ಸೇರಿದಂತೆ ಅನೇಕ ಉದ್ಯಮಗಳು ತಮ್ಮದೇ ಆ್ಯಪ್‌ಗಳನ್ನು ಅಭಿವೃದ್ಧಿಪಡಿಸುತ್ತಿರುವ ಕಾರಣ ಆ್ಯಪ್ ನಿರ್ಮಾಣಕಾರರಿಗೆ, ಅದಕ್ಕೆ ಪೂರಕವಾದ ಗುಣಮಟ್ಟದ ಬರಹ ರೂಪಿಸುವ ಕಂಟೆಂಟ್ ರೈಟರ್‌ಗಳಿಗೆ ಬೇಡಿಕೆ ಹೆಚ್ಚಾಗಿದೆ. ಟೀಮ್‌ಲೀಸ್ ಸರ್ವಿಸಸ್ ಎಂಬ ಅಧ್ಯಯನ ಸಂಸ್ಥೆಯ ಪ್ರಕಾರ, ಗಿಗ್ ವರ್ಕರ್‌ಗಳೆಂದು ಕರೆಸಿಕೊಳ್ಳುವ ತಾಂತ್ರಿಕ ವರ್ಗಕ್ಕೆ, ಗ್ರಾಫಿಕ್ಸ್ ಡಿಸೈನ್, ಕಂಟೆಂಟ್ ರೈಟಿಂಗ್ ಮಾಡುವ ಸ್ವತಂತ್ರೊದ್ಯೋಗಿ (ಫ್ರೀಲ್ಯಾನ್ಸರ್ಸ್) ಕಳೆದ ವರ್ಷದ ಎಪ್ರಿಲ್-ನವೆಂಬರ್ ತಿಂಗಳಿಗೆ ಹೋಲಿಸಿದರೆ, ಈ ವರ್ಷದಲ್ಲಿ ಬೇಡಿಕೆ 20-25 ಪ್ರತಿಶತ ಏರಿಕೆಯಾಗಿದೆ. ಅಲ್ಲದೇ ಈ ವರ್ಗದ ಉದ್ಯೋಗಿಗಳಿಗೆ ಈ ಬಾರಿ ಆದಾಯದಲ್ಲಿ 45-50 ಪ್ರತಿಶತ ಏರಿಕೆಯಾಗಿದೆ.
ಕಸಾಯಿ ಕಾರ್ಮಿಕರಿಗೂ ಹೆಚ್ಚಿದ ಬೇಡಿಕೆ
ಮಾನವ ಸಂಪನ್ಮೂಲ ಸೇವೆ ಒದಗಿಸುವ ಟೀಮ್‌ಲೀಸ್ ಸರ್ವಿಸಸ್, ಮೆಟ್ರೋ ನಗರಿಗಳಲ್ಲಿನ ಕಸಾಯಿ ಕಾರ್ಮಿಕರಿಗೆ ಉದ್ಯೋಗ ನೀಡಲಾರಂಭಿಸಿದೆ. ಕೋವಿಡ್ ಆರಂಭವಾದಾಗಿನಿಂದ ಗ್ರಾಹಕರು ಮೀನು ಮತ್ತು ಮಾಂಸಕ್ಕಾಗಿ ಮಾಂಸದಂಗಡಿಗಳಿಗೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ. ಈ ಕಾರಣಕ್ಕಾಗಿಯೇ ಅವರು ನಮ್ಮ ಆ್ಯಪ್‌ಗ್ ಳಲ್ಲಿ ಬೇಡಿಕೆಯಿಡಲಾರಂಭಿಸಿದರು. ಆಗ ನಾವು ಮಾಂಸ ಮಾರುಕಟ್ಟೆಗಳಲ್ಲಿ ಅಡ್ಡಾಡಿ, ಅಲ್ಲಿನ ಕಸಾಯಿ ಕಾರ್ಮಿಕರನ್ನು ಕರೆತಂದು, ಅವರಿಗೆ ಹೆಚ್ಚುವರಿ ತರಬೇತಿ ನೀಡುತ್ತಿದ್ದೇವೆ. ಇವರಿಗೆಲ್ಲ ತಿಂಗಳಿಗೆ 15 ಸಾವಿರದಿಂದ 20 ಸಾವಿರ ರೂ.ಗಳವರೆಗೆ ಸಂಬಳ ಕೊಡುತ್ತಿದ್ದೇವೆ ಎನ್ನುತ್ತಾರೆ ಟೀಮ್ ಲೀಸ್ ಸರ್ವಿಸಸ್‌ನ ಸಹಸ್ಥಾಪಕಿ ರಿತುಪರ್ಣಾ ಚಕ್ರವರ್ತಿ.
ಗೃಹ ಸೇವೆ ಕ್ಷೇತ್ರದಲ್ಲಿ ಬೆಳವಣಿಗೆ
ಗೃಹ ಸೇವೆಗಳ ಉದ್ಯಮ ವಲಯದಲ್ಲಿ ಬೃಹತ್ತಾಗಿ ಬೆಳೆಯುತ್ತಿರುವ ಅರ್ಬನ್ ಕಂಪೆನಿ (ಈ ಹಿಂದೆ ಅರ್ಬನ್ ಕ್ಲಾಪ್)ಯ ಗ್ರಾಹಕರ ಸಂಖ್ಯೆ ಲಾಕ್ ಡೌನ್ ಅವಧಿಯಲ್ಲಿ 33 ಪ್ರತಿಶತ ಅಧಿಕವಾಗಿತ್ತು. ಗ್ರಾಹಕರ ಸಂಖ್ಯೆ ಹೆಚ್ಚುತ್ತಾ ಹೋದಂತೆ ಈ ಸಂಸ್ಥೆಯಡಿ ಸೇವೆ ಸಲ್ಲಿಸುವ ವಿವಿಧ ಕ್ಷೇತ್ರಗಳ ಜನರೂ ಅಧಿಕವಾದರು. ಗೃಹೋಪಕರಣಗಳನ್ನು ರಿಪೇರಿ ಮಾಡುವವರು, ಹೇರ್ ಕಟ್ ಮಾಡುವವರು, ಮನೆ ಸ್ವತ್ಛ ಮಾಡುವವರು ಸೇರಿದಂತೆ ವಿವಿಧ ರಂಗಗಳ ಉದ್ಯೋಗಿಗಳು, ಈಗ ಭಾರೀ ಪ್ರಮಾಣದಲ್ಲಿ ಅರ್ಬನ್ ಕಂಪೆನಿಯಲ್ಲಿ ನೋಂದಣಿ ಮಾಡಿಕೊಂಡು ಗ್ರಾಹಕರಿಗೆ ಮನೆ ಮನೆಗೆ ಸೇವೆ ಸಲ್ಲಿಸುತ್ತಿದ್ದಾರೆ. ಪ್ರಸಕ್ತ ಈ ಸಂಸ್ಥೆಯೊಂದಿಗೆ 27,000 ಜನರು ಉದ್ಯೋಗ ಕಂಡು ಕೊಂಡಿದ್ದು, ಮುಂದಿನ ವರ್ಷದ ಮಧ್ಯ ಭಾಗದಲ್ಲಿ ಈ ಪ್ರಮಾಣ 35-40 ಪ್ರತಿಶತ ಏರಿಕೆಯಾಗುವ ನಿರೀಕ್ಷೆಯಿದೆ ಎನ್ನುತ್ತಾರೆ ಅರ್ಬನ್ ಕಂಪೆನಿಯ ಸಹ ಸ್ಥಾಪಕ ವರುಣ್ ಖೇತಾನ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Odisha: ಕಾರಿಗೆ ಟ್ರಕ್ ಢಿಕ್ಕಿ ಹೊಡೆದು ಇಬ್ಬರು ಬಿಜೆಪಿ ನಾಯಕರು ಮೃ*ತ್ಯು
Delhi; ರಸ್ತೆಗಳು ಪ್ರಿಯಾಂಕಾ ಗಾಂಧಿ ಕೆನ್ನೆಯಂತಿರಬೇಕು: ಬಿಜೆಪಿ ನಾಯಕನ ಹೇಳಿಕೆಗೆ ಟೀಕೆ
Gujarat: ಕೋಸ್ಟ್ ಗಾರ್ಡ್ ಹೆಲಿಕಾಪ್ಟರ್ ಪತನ; ಮೂವರು ಮೃ*ತ್ಯು
Oyo Rooms: ಮದುವೆಯಾಗದ ಜೋಡಿಗೆ ಇನ್ಮುಂದೆ ʼಓಯೋʼ ರೂಮ್ ಸಿಗೋದು ಕಷ್ಟ – ವರದಿ
Jammu and Kashmir: ಕಮರಿಗೆ ಬಿದ್ದ ವಾಹನ; ಕನಿಷ್ಠ ನಾಲ್ವರು ಸಾವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ
ದುಷ್ಟ ಶಕ್ತಿಗಳಿಂದ ದೇಶದ ನೆಮ್ಮದಿ ಕೆಡಿಸಲು ಧರ್ಮ-ಜಾತಿಯ ದುರ್ಬಳಕೆ: ಸಿದ್ದರಾಮಯ್ಯ
Shivamogga: ಮಾಂಗಲ್ಯ ಸರ ಕಿತ್ತು ಪರಾರಿಯಾದ ಖರ್ತನಾಕ್ ಕಳ್ಳರು; ಸಿಸಿಟಿವಿಯಲ್ಲಿ ಸೆರೆ
Mollywood: ʼಮಾರ್ಕೊʼ ಬಳಿಕ ಮೋಹನ್ ಲಾಲ್ ನಿರ್ದೇಶನದ ʼಬರೋಜ್ʼ ಚಿತ್ರಕ್ಕೂ ಪೈರಸಿ ಕಾಟ
BGT; ಬಾರ್ಡರ್-ಗಾವಸ್ಕರ್ ಟ್ರೋಫಿ ವಿತರಣೆಗೆ ಗಾವಸ್ಕರ್ ಗೆ ಆಹ್ವಾನವಿಲ್ಲ! ದಿಗ್ಗಜನ ಬೇಸರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.