ರುದ್ರಾಭಿಷೇಕ ಮೂಲಕ ರಾಮಮಂದಿರಕ್ಕೆ ಅಡಿಪಾಯ
ಭಾರತೀಯರ ಶತಮಾನಗಳ ಕನಸಿನ ನನಸಿಗೆ ಶ್ರೀಕಾರ ; ಮಂದಿರ ನಿರ್ಮಾಣಕ್ಕೆ ಎರಡು ವಿನ್ಯಾಸಗಳು ಪರಿಗಣನೆಯಲ್ಲಿ
Team Udayavani, Jun 11, 2020, 6:00 AM IST
ಅಯೋಧ್ಯೆ: ಭಾರತೀಯರ ಶತಮಾನಗಳ ಕನಸಿನ ಅಯೋಧ್ಯೆ ರಾಮಮಂದಿರ ನಿರ್ಮಾಣಕ್ಕೆ ರಾಮಜನ್ಮಭೂಮಿಯಲ್ಲಿ ಬುಧವಾರ ಚಾಲನೆ ನೀಡಲಾಯಿತು.
ಇಲ್ಲಿನ ಕುಬೇರ ತಿಲ ದಲ್ಲಿ ಬೆಳಗ್ಗೆ ರುದ್ರಾಭಿಷೇಕ, ಇನ್ನಿತರ ಪೂಜಾ ಕೈಂಕರ್ಯ ಗಳನ್ನು ನೆರವೇರಿಸುವ ಮೂಲಕ ಮಂದಿರ ನಿರ್ಮಾಣಕ್ಕೆ ಅಡಿಪಾಯ ಹಾಕಲಾಯಿತು.
ಈ ಸಂದರ್ಭ ಶ್ರೀ ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ಅಧ್ಯಕ್ಷ ಮಹಾಂತ ಕೆ.ಎನ್. ದಾಸ್ ಮಾತನಾಡಿ, ಅಡಿಗಲ್ಲು ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿಯವರೇ ಆಗಮಿಸಬೇಕಿತ್ತು. ಆದರೆ ಕೊರೊನಾ ಬಿಕ್ಕಟ್ಟು ಆರಂಭವಾದ ಬಳಿಕ ಅವರು ಯಾವುದೇ ಸಾರ್ವಜನಿಕ ಕಾರ್ಯ ಕ್ರಮಗಳಲ್ಲಿ ಭಾಗವಹಿಸುತ್ತಿಲ್ಲ. ಹಾಗಾಗಿ ಈ ಕಾರ್ಯಕ್ರಮಕ್ಕೆ ಅವರು ಬಂದಿಲ್ಲ ಎಂದರು.
ವಿಎಚ್‌ಪಿ ವಿನ್ಯಾಸವೇ ಅಂತಿಮ?
ಮಂದಿರದ ವಿನ್ಯಾಸ ಹೇಗಿರಬೇಕು ಎಂಬ ವಿಚಾರವಾಗಿ ಚರ್ಚೆಗಳು ನಡೆಯುತ್ತಿವೆ. ಈ ಹಿನ್ನೆಲೆ ಯಲ್ಲಿ ನಾನಾ ವಿನ್ಯಾಸಗಳನ್ನು ಪರಿಗಣಿಸಲಾಗುತ್ತಿದೆ. 1992ರಲ್ಲಿ ವಿಶ್ವ ಹಿಂದೂ ಪರಿಷತ್ ತನ್ನದೇ ಆದ ಮಂದಿರ ವಿನ್ಯಾಸವೊಂದನ್ನು ರಾಮಮಂದಿರ ತೀರ್ಥಕ್ಷೇತ್ರ ಟ್ರಸ್ಟ್‌ನ ಮುಂದಿಟ್ಟಿತ್ತು. ಆ ವಿನ್ಯಾಸ ರಚಿಸಿದ್ದು ಹೆಸರಾಂತ ವಾಸ್ತುಶಿಲ್ಪಿ ಚಂದ್ರಕಾಂತ ಸೋಮಪುರ್. ಹಾಗಾಗಿ ಆ ವಿನ್ಯಾಸಕ್ಕೆ ಅವರ ಹೆಸರನ್ನೇ ಇಡಲಾಗಿದೆ. ದೇಶದ ತುಂಬೆಲ್ಲ ರಾಮಮಂದಿರ ಆಂದೋಲನ ಪ್ರಖರವಾಗಿ ರೂಪುಗೊಂಡಿದ್ದ ದಿನಗಳಲ್ಲಿ ಅದೇ ವಿನ್ಯಾಸದ ರಾಮಮಂದಿರದ ಚಿತ್ರವನ್ನು ಎಲ್ಲ ಕರಪತ್ರಗಳಲ್ಲಿ, ಕ್ಯಾಲೆಂಡರ್‌ಗಳಲ್ಲಿ ಮುದ್ರಿಸಲಾಗಿತ್ತು. ಜನರೂ ಅದನ್ನು ಮೆಚ್ಚಿಕೊಂಡಿದ್ದರು. ಅದೇ ವಿನ್ಯಾಸದಲ್ಲೇ ರಾಮಮಂದಿರ ಮೂಡಿಬರಲಿ ಎಂಬುದು ಅನೇಕರ ಅಭಿಪ್ರಾಯವಾಗಿದೆ.
“ನಗರ’ ವಿನ್ಯಾಸವೂ ಪರಿಗಣನೆಯಲ್ಲಿ
ಮತ್ತೂಂದು ಮೂಲದ ಪ್ರಕಾರ, ಮಂದಿರಕ್ಕೆ “ನಗರ’ ಎಂಬ ವಿನ್ಯಾಸವನ್ನೂ ಪರಿಗಣಿಸಲಾಗುತ್ತಿದೆ. ಉತ್ತರ ಹಾಗೂ ಪಶ್ಚಿಮ ಭಾರತದಲ್ಲಿ “ನಗರ’ ಮಾದರಿಯ ಕಟ್ಟಡಗಳು ಹೆಚ್ಚು ಪ್ರಸಿದ್ಧಿ. ಅದರಲ್ಲಿ ಉಕ್ಕು, ಸಿಮೆಂಟ್ ಬಳಕೆಯಿರುವುದಿಲ್ಲ. ಅಮೃತಶಿಲೆ ಗಳನ್ನೇ ಸ್ಲ್ಯಾಬ್ ಗಳನ್ನಾಗಿ ಪರಿವರ್ತಿಸಿ ಅವುಗಳನ್ನು ಜೋಡಿಸಿ ಮಂದಿರಗಳನ್ನು ನಿರ್ಮಿಸಲಾಗುತ್ತದೆ. ಈ ಶೈಲಿಯೂ ಪರಿಗಣನೆಯಲ್ಲಿದೆ ಎನ್ನಲಾಗಿದೆ.
ಮೋದಿ ನಿರ್ಧರಿಸುತ್ತಾರೆ
ಮೇಲ್ಕಂಡ ಎರಡೂ ಬಗೆಯ ವಿನ್ಯಾಸ ಗಳ ಲ್ಲೊಂ ದರ ಆಯ್ಕೆಯನ್ನು ಮೋದಿ ಅವರ ವಿವೇಚನೆಗೆ ಬಿಡಲಾಗಿದೆ. ಸದ್ಯ ದಲ್ಲೇ ಎರಡೂ ವಿನ್ಯಾಸಗಳನ್ನು ಕೊಂಡೊಯ್ದು ಅವರ ಸಲಹೆ ಕೇಳಲಾಗುತ್ತದೆ. ಭೇಟಿಯ ದಿನಾಂಕ ಇನ್ನೂ ನಿಗದಿಯಾಗಿಲ್ಲ ಎಂದು ಮಹಾಂತ ಕೆ.ಎನ್. ದಾಸ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು
BBK11: ಬಾಯಿ ಮುಚ್ಕೊಂಡು ಇರು.. ಫೈಯರ್ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!
Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!
Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ
Rain Alert: ರಾಜ್ಯದಲ್ಲಿ ಕನಿಷ್ಠ ತಾಪಮಾನ 4 ಡಿ.ಸೆ ಏರಿಕೆ; ಹಲವೆಡೆ 24ರಂದು ಮಳೆ ಸಾಧ್ಯತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.