ಪವಾಡ ನಡೆದರಷ್ಟೇ ಸರ್ಕಾರದ ಉಳಿವು
ಬೆಂಗಳೂರಿನ ಶಾಸಕರು ಉಳಿದರಷ್ಟೇ ಸರ್ಕಾರ ಸೇಫ್
Team Udayavani, Jul 9, 2019, 6:00 AM IST
ಬೆಂಗಳೂರು: ಹದಿಮೂರು ಶಾಸಕರ ರಾಜೀನಾಮೆ, ಇಬ್ಬರು ಪಕ್ಷೇತರರ ಬೆಂಬಲ ವಾಪಸ್‌ನಿಂದ ಸಮ್ಮಿಶ್ರ ಸರ್ಕಾರ ಅಲ್ಪಮತಕ್ಕೆ ಕುಸಿದಿದ್ದು, ಇನ್ನೇನಾದರೂ ‘ಪವಾಡ’ ನಡೆದರಷ್ಟೇ ಸರ್ಕಾರ ಉಳಿಯಬಹುದು.ಇಲ್ಲವೇ ಅನರ್ಹತೆ ಅಸ್ತ್ರವಷ್ಟೇ ವರದಾನವಾಗಬೇಕು.
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರೂ ಮುಂಬೈಗೆ ಹೋಗದೆ ಬೆಂಗಳೂರಿನಲ್ಲೇ ಇರುವ ಹಿರಿಯ ಕಾಂಗ್ರೆಸ್ ನಾಯಕ ರಾಮಲಿಂಗಾರೆಡ್ಡಿ, ಮುನಿರತ್ನ ಹಾಗೂ ಆನಂದ್‌ಸಿಂಗ್, ಮುಂಬೈನಲ್ಲಿರುವ ಎಸ್.ಟಿ. ಸೋಮಶೇಖರ್, ಬೈರತಿ ಬಸವರಾಜ್, ಗೋಪಾಲಯ್ಯ ಸೇರಿ ಆರು ಮಂದಿ ರಾಜೀನಾಮೆ ವಾಪಸ್ ಪಡೆದರೆ ಸರ್ಕಾರ ಪವಾಡ ಸದೃಶವಾಗಿ ಉಳಿಯಬಹುದು. ಅದಕ್ಕಾಗಿಯೇ ಶಾಸಕರು ವಾಪಸ್ ಬರುವಂತಾಗಲು ಅನರ್ಹತೆ ಅಸ್ತ್ರ ಸಹ ಪ್ರಯೋಗಿಸಲಾಗುತ್ತಿದೆ ಎನ್ನಲಾಗಿದೆ.
ಆರು ಶಾಸಕರು ವಾಪಸ್ ಬಂದರೆ ಸಮ್ಮಿಶ್ರ ಸರ್ಕಾರ ಉಳಿಯುತ್ತದೆ ಎಂಬುದು ಖಾತರಿಯಾದರೆ ಪಕ್ಷೇತರ ಶಾಸಕರು ವಾಪಸ್ ಬರಲೂ ಬಹುದು. ಸರ್ಕಾರ ಉಳಿಯಲು ಇದೊಂದೇ ಆಶಾಭಾವನೆ ಉಳಿದಿದೆ.
13 ಶಾಸಕರು ರಾಜೀನಾಮೆ ನೀಡಿದ್ದರೂ, ಆ ಪೈಕಿ ಆರು ಜನ ವಾಪಸ್ ಪಡೆದರೂ ಸರ್ಕಾರದ ಸಂಖ್ಯಾಬಲ 110ಕ್ಕೆ ಏರಲಿದೆ. ಇಬ್ಬರು ಪಕ್ಷೇತರರ ಬೆಂಬಲ ಪಡೆದರೆ 112 ಆಗಲಿದೆ. ಆಗ ಸದನದಲ್ಲಿ ಬಹುಮತ ಸಾಬೀತಿಗೆ ರಾಜ್ಯಪಾಲರು ಸೂಚಿಸಿದರೂ ಬಹುಮತ ಸಾಬೀತು ಮಾಡಿ ಸರ್ಕಾರ ಉಳಿಸಿಕೊಳ್ಳಬಹುದು ಎಂಬ ಲೆಕ್ಕಾಚಾರ ಕಾಂಗ್ರೆಸ್ ಮತ್ತು ಜೆಡಿಎಸ್‌ನದು.
ರಮೇಶ್ ಜಾರಕಿಹೊಳಿ, ಪ್ರತಾಪಗೌಡ ಪಾಟೀಲ್, ಮಹೇಶ್ ಕುಮಟಳ್ಳಿ, ಬಿ.ಸಿ.ಪಾಟೀಲ್, ಶಿವರಾಮ್ ಹೆಬ್ಟಾರ್, ಎಚ್.ವಿಶ್ವನಾಥ್, ನಾರಾಯಣಗೌಡ ವಾಪಸ್ ಬರದಿದ್ದರೂ ಸರ್ಕಾರ ಉಳಿಸಿಕೊಳ್ಳಲು ಕಾಂಗ್ರೆಸ್-ಜೆಡಿಎಸ್ ಕಾರ್ಯತಂತ್ರ ರೂಪಿಸಿದೆ. ಅವಕಾಶ ಸಿಕ್ಕರೆ ಬಿಜೆಪಿಯ ಕೆಲವು ಶಾಸಕರ ಸೆಳೆಯುವ ಪ್ರಯತ್ನವೂ ನಡೆಯುತ್ತಿದೆ.
ಬಿಜೆಪಿ ತಂತ್ರ: ‘ಆಪರೇಷನ್ ಕಮಲ ಇಲ್ಲ’ ಎಂದು ಹೇಳುತ್ತಲೇ ಸಮ್ಮಿಶ್ರ ಸರ್ಕಾರದ ಸಂಖ್ಯಾಬಲ ಕುಗ್ಗಿಸು ತ್ತಿರುವ ಬಿಜೆಪಿಯ ಕಾರ್ಯತಂತ್ರ ಬೇರೆಯದೇ ಇದೆ. ಈಗಾಗಲೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ 13 ಶಾಸಕರು ಕಾಂಗ್ರೆಸ್-ಜೆಡಿಎಸ್‌ನವರ ಸಂಪರ್ಕ, ಮನವೊಲಿಕೆಗೆ ಮಣಿಯದಂತೆ ಮಾಡುವುದು. ಜತೆಗೆ ಸೌಮ್ಯಾ ರೆಡ್ಡಿ ಸೇರಿ ಇನ್ನೂ ಇಬ್ಬರು ಶಾಸಕರ ಕೈಲಿ ರಾಜೀನಾಮೆ ಕೊಡಿಸುವುದು. ಆಗ, ಸರ್ಕಾರದ ಸಂಖ್ಯಾಬಲ 102 ಕ್ಕೆ ಕುಸಿಯಲಿದೆ.
ಒಂದೊಮ್ಮೆ ರಾಜ್ಯಪಾಲರು ಸದನದಲ್ಲಿ ಬಹುಮತ ಸಾಬೀತಿಗೆ ಕುಮಾರಸ್ವಾಮಿಗೆ ಅವಕಾಶ ಕೊಟ್ಟರೂ ರಾಜೀನಾಮೆ ಕೊಟ್ಟಿರುವ ಶಾಸಕರನ್ನು ಹೊರತುಪಡಿಸಿ ಒಟ್ಟಾರೆ ವಿಧಾನಸಭೆ ಸಂಖ್ಯಾಬಲ 209ಕ್ಕೆ ಇಳಿಯಲಿದೆ. ಆಗ ಬಹುಮತಕ್ಕೆ 105 ಬೇಕಾಗುತ್ತದೆ. ಸಮ್ಮಿಶ್ರ ಸರ್ಕಾರದ ಬಲ 102 ಮಾತ್ರ ಇರುವುದರಿಂದ ವಿಶ್ವಾಸಮತಕ್ಕೆ ಸೋಲಾಗುತ್ತದೆ. ಬಿಜೆಪಿಗೆ ಸರ್ಕಾರ ರಚನೆಗೆ ಅವಕಾಶ ಕೊಟ್ಟರೆ 107 ಸಂಖ್ಯಾಬಲದೊಂದಿಗೆ ಸರ್ಕಾರ ರಚನೆಗೆ ಅವಕಾಶ ಸಿಗುತ್ತದೆ ಎಂಬುದು ಬಿಜೆಪಿ ನಾಯಕರ ಲೆಕ್ಕಾಚಾರ.
ಹೈಕಮಾಂಡ್‌ಗೆ ಖಡಕ್ ಸಂದೇಶ: ಸರ್ಕಾರ ಉಳಿಸಿಕೊಳ್ಳಲು ಕೊನೇ ಪ್ರಯತ್ನವಾಗಿ ಎರಡೂ ಪಕ್ಷಗಳು ಮುಂದಾಗಿದ್ದು ಮುಂಬೈನಲ್ಲಿರುವ ಅತೃಪ್ತ ಶಾಸಕರು ಮನವೊಲಿಕೆ ಸಾಧ್ಯವಾಗಿದ್ದರೆ ಅಂತಿಮವಾಗಿ ಸಿಎಂ ಎಚ್.ಡಿ.ಕುಮಾರಸ್ವಾಮಿ ರಾಜೀನಾಮೆ ಕೊಡು ವುದು ಅನಿವಾರ್ಯ ವಾಗಬಹುದು. ಇದಕ್ಕಾಗಿ ದೇವೇಗೌಡರು ಹಾಗೂ ಕುಮಾರಸ್ವಾಮಿ ಇಬ್ಬರೂ ಕಾಂಗ್ರೆಸ್ ಹೈಕಮಾಂಡ್‌ಗೆ ಖಡಕ್ ಸಂದೇಶ ಸಹ ರವಾನಿಸಿ, ಮುಂಬೈನಲ್ಲಿರುವ ಕಾಂಗ್ರೆಸ್ ಶಾಸಕರನ್ನು ಕರೆಸುವ ಹೊಣೆ ನಿಮ್ಮದು, ನಮ್ಮ ಶಾಸಕರ ಕರೆಸುವ ಜವಾಬ್ದಾರಿ ನಮ್ಮದು. ಇಲ್ಲದಿದ್ದರೆ ನಮ್ಮ ದಾರಿ ನಮಗೆ ಎಂದೇ ಹೇಳಿದ್ದಾರೆ ಎಂದು ತಿಳಿದು ಬಂದಿದೆ.
-ಎಸ್. ಲಕ್ಷ್ಮಿನಾರಾಯಣ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Egg Thrown: ಬಿಜೆಪಿ ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆತ; ಮೂವರ ಬಂಧನ
ಗಾಂಧಿ ಭಾರತ್ ಕಾರ್ಯಕ್ರಮದ ಬಗ್ಗೆ ಶೆಟ್ಟರ್ ಅಪಸ್ವರ ತೆಗೆದಿದ್ದು ದುರ್ದೈವ – ಎಚ್ ಕೆ ಪಾಟೀಲ
Congress ಅಧಿವೇಶನದ ಶತಮಾನೋತ್ಸವ ಕಾರ್ಯಕ್ರಮ ದೇಶದ ಇತಿಹಾಸದ ಒಂದು ಐತಿಹಾಸಿಕ ಕಾರ್ಯಕ್ರಮ
Vijayapura: ಬಿಜೆಪಿಯಲ್ಲಿ ನಾಯಕತ್ವದ ಕೊರತೆಯಿಲ್ಲ; ಮೋದಿ ನಂತರ ಯೋಗಿ ಎಂದ ಯತ್ನಾಳ್
Haveri: ಕಾರುಗಳ ನಡುವೆ ಭೀಕರ ಅಪಘಾತ; ನಾಲ್ವರ ದುರ್ಮರಣ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಪತ್ನಿಗಾಗಿ ಕೆಲಸದಿಂದ ನಿವೃತ್ತಿ ಪಡೆದ ಪತಿ; ಬೀಳ್ಕೊಡುಗೆ ಕಾರ್ಯಕ್ರಮದಲ್ಲೇ ಪತ್ನಿ ಮೃತ್ಯು
Manipal: ಹಿರಿಯ ವೈದ್ಯೆ ಡಾ. ಆಶಾ ಭಟ್ ನಿಧನ
Banahatti: ತಾಂತ್ರಿಕ ಸೌಲಭ್ಯಗಳನ್ನು ನೀಡುವ ನಿಟ್ಟಿನಲ್ಲಿ ಬದ್ಧಳಾಗಿದ್ದೇನೆ: ಉಮಾಶ್ರೀ
Road Mishap; ದ್ವಿಚಕ್ರ ವಾಹನ-ಲಾರಿ ನಡುವೆ ಅಪಘಾತ: ದಂಪತಿ ಸಾವು
ಕಾಲ್ತುಳಿತ ಪ್ರಕರಣ: ಅಲ್ಲು, ʼಪುಷ್ಪ-2ʼ ತಂಡದಿಂದ ರೇವತಿ ಕುಟುಂಬಕ್ಕೆ 2 ಕೋಟಿ ರೂ. ಪರಿಹಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.