ಎಂಟು ದಿನಗಳ ಹಸುಗೂಸು ಕೊಂದ ಅಜ್ಜಿ?
ಅನಾರೋಗ್ಯದಿಂದ ಬಳಲುತ್ತಿದ್ದ ಅವಧಿ ಪೂರ್ವ ಜನಿಸಿದ ಹೆಣ್ಣು ಮಗು
Team Udayavani, Nov 30, 2019, 9:57 PM IST
ಬೆಂಗಳೂರು: ಎಂಟು ದಿನಗಳ ಹಸುಗೂಸನ್ನು ಮೊದಲನೇ ಮಹಡಿಯಿಂದ ಎಸೆದು ಕೊಂದಿರುವ ಅಮಾನುಷ ಘಟನೆ ಸೋಲದೇವನಹಳ್ಳಿಯ ಮೇದರಹಳ್ಳಿಯಲ್ಲಿ ಶನಿವಾರ ನಡೆದಿದೆ.
ಮೇದರಹಳ್ಳಿ ನಿವಾಸಿ ಮಾರ್ಷಲ್ ಮತ್ತು ತಮಿಳ್ ಸೆಲ್ವಿ ದಂಪತಿಯ ಹೆಣ್ಣು ಮಗುವನ್ನು ಕೊಲೆಗೈಯ್ಯಲಾಗಿದ್ದು ಘಟನೆ ಸಂಬಂಧ ಮಗುವಿನ ಅಜ್ಜಿ ಪರಮೇಶ್ವರಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದರು.
ತಮಿಳ್ ಸೆಲ್ವಿ ಎಂಟು ದಿನಗಳ ಹಿಂದಷ್ಟೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಶುಕ್ರವಾರ ರಾತ್ರಿ 10 ಗಂಟೆ ಸುಮಾರಿಗೆ ತಮಿಳ್ ಸೆಲ್ವಿ ಮಗುವನ್ನು ಅತ್ತೆ ಪರಮೇಶ್ವರಿ ಪಕ್ಕದಲ್ಲಿ ಮಲಗಿಸಿ ಶೌಚಾಲಯಕ್ಕೆ ಹೋಗಿದ್ದರು. ಕೆಲವು ಹೊತ್ತಿನ ಬಳಿಕ ಅತ್ತೆಯೇ ಮಗು ಕಾಣುತ್ತಿಲ್ಲ ಎಂದು ಚೀರಾಡಿದರು.
ಗಾಬರಿಗೊಂಡ ಆಕೆ ಮನೆಯ ಎಲ್ಲೆಡೆ ಹುಡುಕಾಡಿದರೂ ಪತ್ತೆಯಾಗಿಲ್ಲ. ಅನಂತರ ಅನುಮಾನದ ಮೇರೆಗೆ ಮನೆ ಹಿಂಭಾಗದ ಖಾಲಿ ನಿವೇಶನದಲ್ಲಿ ಹುಡುಕಾಡಿದಾಗ ಮಗುವಿನ ಮೃತ ದೇಹ ಪತ್ತೆಯಾಯಿತು.
ಅನಾರೋಗ್ಯದಿಂದ ಬಳಲುತ್ತಿದ್ದ ಮಗು
ಅವಧಿ ಪೂರ್ವದಲ್ಲಿ ಮಗು(ಎಂಟು ತಿಂಗಳಿಗೆ) ಜನಿಸಿದ್ದು, ಅನಾರೋಗ್ಯದಿಂದ ಬಳಲುತ್ತಿತ್ತು. ಹೀಗಾಗಿ ಹತ್ತಾರು ಕಡೆ ಚಿಕಿತ್ಸೆ ಕೊಡಿಸಿದರೂ ಚೇತರಿಸಿಕೊಂಡಿರಲಿಲ್ಲ. ಅದು ಅಜ್ಜಿ ಪರಮೇಶ್ವರಿ ಅಸಮಾಧಾನಕ್ಕೆ ಕಾರಣವಾಗಿತ್ತು. ಅಲ್ಲದೆ, ತಂದೆ-ತಾಯಿ ಕೂಡ ಬೇಸರಗೊಂಡಿದ್ದರು ಎನ್ನಲಾಗಿದೆ ಎಂದು ಪೊಲೀಸರು ಹೇಳಿದರು.
ಪರಮೇಶ್ವರಿ ಹಂತಕಿ?
ಮಾರ್ಷಲ್ ಕುಟುಂಬ ವಾಸವಾಗಿರುವ ಮನೆಗೆ ಎರಡು ಬಾಗಿಲುಗಳಿವೆ. ಒಂದೆಡೆ ಪ್ರವೇಶದ್ವಾರವಿದ್ದರೆ. ಮತ್ತೂಂದೆಡೆ ಅಡುಗೆಮನೆಯಿಂದ ಹಿಂಬದಿ ಹೋಗಲು ಮತ್ತೂಂದು ಬಾಗಿಲು ಇದೆ. ಈ ಮೂಲಕವೇ ಮಗುವನ್ನು ಮನೆಯ ಹಿಂದಿನ ಖಾಲಿ ನಿವೇಶನಕ್ಕೆ ಎಸೆದಿದ್ದಾರೆ ಎಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ.
ಮನೆಯಲ್ಲಿ ಪರಮೇಶ್ವರಿ ಮತ್ತು ಆಕೆಯ ಸೊಸೆ ಸೆಲ್ವಿ ಹೊರತು ಪಡಿಸಿ ಬೇರೆ ಯಾರು ಇರಲಿಲ್ಲ. ಹೊರಗಡೆಯಿಂದಲೂ ಬಂದಿಲ್ಲ. ಇನ್ನು ಸೆಲ್ವಿ ಶೌಚಾಲಯಕ್ಕೆ ಹೋದಾಗ ಮಗು ಪರಮೇಶ್ವರಿ ಬಳಿಯೇ ಇತ್ತು. ಹೀಗಾಗಿ ಈಕೆಯ ಕೃತ್ಯ ಎಸಗಿದ್ದಾರೆ ಎಂಬ ಅನುಮಾನವಿದ್ದು, ವಿಚಾರಣೆ ನಡೆಯುತ್ತಿದೆ.
ಆದರೆ, ವಿಚಾರಣೆ ಸಂದರ್ಭದಲ್ಲಿ ತಾನೂ ಕೃತ್ಯ ಎಸಗಿಲ್ಲ. ಟಿವಿ ನೋಡುವಾಗ ಅಪರಿಚಿತರು ಮಗುವನ್ನು ಎತ್ತೂಯ್ದು ಕೊಂದಿರಬಹುದು ಎಂದು ಹೇಳಿಕೆ ದಾಖಲಿಸಿದ್ದಾರೆ. ಸೊಸೆ ಸೆಲ್ವಿ ಅತ್ತೆ ಪರಮೇಶ್ವರಿ ಹೊರತು ಪಡಿಸಿ ಮನೆಗೆ ಬೇರೆ ಯಾರು ಬಂದಿಲ್ಲ ಎಂದು ಹೇಳುತ್ತಿದ್ದು, ತನಿಖೆ ಮಂದುವರಿದಿದೆ ಎಂದು ಪೊಲೀಸರು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸುಮ್ನೆ ಬ್ಯಾಂಡೇಜ್ ಹಾಕಿಕೊಳ್ಳಲು ಯಾರಿಗೂ ತಲೆ ಕೆಟ್ಟಿಲ್ಲ: ಸಿ.ಟಿ.ರವಿ ಪತ್ನಿ ಪಲ್ಲವಿ
ಬಿಜೆಪಿ, ಕಾಂಗ್ರೆಸ್‌ಗೆ ಪ್ರತ್ಯೇಕ ಕಾನೂನಿಲ್ಲ, ನನ್ನ ದೂರಿಗೆ ಕ್ರಮವಿಲ್ಲವೇಕೆ?: ಸಿ.ಟಿ.ರವಿ
Shimoga; ನಿತ್ಯ ಸುದ್ದಿಯಲ್ಲಿರಬೇಕೆಂದು ಸಿ.ಟಿ ರವಿ ʼಆʼ ಹೇಳಿಕೆ ನೀಡಿದ್ದಾರೆ: ಆಯನೂರು
Tragedy: ಆನೆ ತುಳಿದು ಮಾವುತನ ಸಹಾಯಕ ಮೃತ್ಯು… ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ
Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.