ಪರಮಪಾಪಿಯ ಮಹಾ ಸಂಹಾರ


Team Udayavani, Oct 29, 2019, 6:10 AM IST

papi

ವಾಷಿಂಗ್ಟನ್‌: ಅಮೆರಿಕದ ತಮ್ಮ ಅಧಿಕೃತ ನಿವಾಸ “ಶ್ವೇತ ಭವನ’ದಿಂದ ಮಾಡಲಾದ ಟೆಲಿವಿಷನ್‌ ನೇರಪ್ರಸಾರದಲ್ಲಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು, ಐಸಿಸ್‌ ಸಂಸ್ಥಾಪಕ ಅಬು ಬಕ್‌Å ಅಲ್‌-ಬಾಗ್ಧಾದಿಯ ಸಾವಿನ ಸುದ್ದಿಯನ್ನು ಪ್ರಕಟಿಸುತ್ತಿದ್ದಂತೆ ಜಗತ್ತಿನ ನಾನಾ ದೇಶಗಳಲ್ಲಿ ಐಸಿಸ್‌ನಿಂದ ನೇರ ಹಾಗೂ ಪರೋಕ್ಷವಾಗಿ ಪೀಡನೆಗೆ ಒಳಗಾಗಿದ್ದವರು, ಸಿರಿಯಾ, ಇರಾಕ್‌ನಲ್ಲಿನ ಕೋಟ್ಯಂತರ ಮಂದಿ ನರರೂಪದ ರಾಕ್ಷಸ ಕ್ರಿಮಿಯೊಂದು ನಾಶವಾಗಿದ್ದಕ್ಕೆ ಒಂದು ದೀರ್ಘ‌ವಾದ ನಿಟ್ಟುಸಿರುಬಿಟ್ಟರು. ಅಷ್ಟಕ್ಕೂ, ಆ ಶ್ವೇತ ಭವನದಿಂದ 6,000 ಮೈಲುಗಳಾಚೆಗೆ ನಡೆದಿದ್ದ ಆ ಜಾಣ್ಮೆಯ ಕಾರ್ಯಾಚರಣೆ ಹೇಗೆ ನಡೆಯಿತು ಎಂಬುದೇ ಒಂದು ಕುತೂಹಲಕಾರಿ ವಿದ್ಯಮಾನ.

ಮಾಹಿತಿ ನೀಡಿದ್ದ ಆ ಇಬ್ಬರು!: “ದುಷ್ಮನ್‌ ಕಹಾ ಹೇ’ ಅಂದ್ರೆ “ಬಗಲ್‌ ಮೇ ಹೇ’ ಎಂಬ ಮಾತೊಂದಿದೆ. ಬಾಗ್ಧಾದಿ ವಿಚಾರದಲ್ಲಿ ಆ ದುಷ್ಮನ್‌ ಕೇವಲ “ಬಗಲ್‌’ನಲ್ಲಿ (ಪಕ್ಕದಲ್ಲಿ) ಇರಲಿಲ್ಲ, “ಬಾಹೋ ಮೆ’ (ಬಾಹು ಬಂಧನದಲ್ಲಿ) ಇದ್ದರು! ಅಂದರೆ, ಬಾಗ್ಧಾದಿಯ ಇತ್ತೀಚಿನ ರಹಸ್ಯ ಅಡಗುದಾಣದ ಸುಳಿವನ್ನು ಆತನ ಆಪ್ತ ಮಿತ್ರ ಇಸ್ಮಾಯಿಲ್‌ ಎಲ್‌-ಇಥಾವಿ ಹಾಗೂ ಆತನ ಪತ್ನಿಯಲ್ಲೊಬ್ಟಾಕೆ ಬಾಯಿಬಿಟ್ಟಿದ್ದರು.

2018ರ ಫೆಬ್ರವರಿಯಲ್ಲಿ ಈ ಇಬ್ಬರೂ ಪ್ರತ್ಯೇಕ ಪ್ರಕರಣಗಳಲ್ಲಿ ಸಿರಿಯಾದ ಬಂಡುಕೋರರ ನಡುವೆ ಸೆಣೆಸುತ್ತಿರುವ ಕುರ್ದಿಶ್‌ ಸೇನೆ ಹಾಗೂ ಸಿರಿಯಾ ಸೇನೆಗಳ ಜಂಟಿ ತುಕಡಿಗಳಿಗೆ ಸಿಕ್ಕಿಬಿದಿದ್ದರು. ಆ ಇಬ್ಬರೇ, “ಈ ನರರಾಕ್ಷಸ ಸಿರಿಯಾದ ಅಲೆಪೊದ ಪಶ್ಚಿಮ ಪ್ರಾಂತ್ಯದ ಪಶ್ಚಿಮ ಭಾಗದಲ್ಲೇ ಇರುವ ಬರಿಶಾ ಎಂಬ ಪುಟ್ಟ ಹಳ್ಳಿಯ ಹೊರವಲಯದಲ್ಲಿ ಇದ್ದಾನೆ. ಸಿರಿಯಾದ ಕೆಲವು ಆಯ್ದ ಸ್ಥಳಗಳಿಗೆ ಆತ ರಹಸ್ಯವಾಗಿ ಭೇಟಿ ನೀಡಿ, ತನ್ನ ಅನುಯಾಯಿಗಳೊಂದಿಗೆ ಚರ್ಚಿಸುತ್ತಾನೆ. ಕೆಲವೊಮ್ಮೆ ಚೆಕ್‌ಪೋಸ್ಟ್‌ಗಳಲ್ಲಿನ ತಪಾಸಣೆಯನ್ನು ತಪ್ಪಿಸಿಕೊಳ್ಳಲು ತರಕಾರಿ ತುಂಬಿದ ವ್ಯಾನುಗಳಲ್ಲಿ ತನ್ನ ಸಹಚರರೊಂದಿಗೆ ಓಡಾಡುತ್ತಾನೆ’ ಎಂಬ ಮಾಹಿತಿಯನ್ನು ಬಾಯಿಬಿಟ್ಟಿದ್ದರು. ಕುರ್ದಿಶ್‌-ಸಿರಿಯಾ ಸೇನಾಧಿಕಾರಿಗಳು ಆ ಮಾಹಿತಿಯನ್ನು ಸಿರಿಯಾದಲ್ಲಿ ಆ ಎರಡೂ ಸೇನೆಗಳಿಗೆ ನೆರವು ನೀಡುತ್ತಿರುವ ಅಮೆರಿಕಕ್ಕೆ ನೀಡಿದ್ದರು. ಆಗಲೇ, ಅಮೆರಿಕ, ತಂತ್ರಗಾರಿಕೆ ರೂಪಿಸಿತ್ತು.

ತಡಮಾಡಿದ್ದರೆ ಎಸ್ಕೇಪ್‌!: ನಿಖರವಾಗಿ ಆತನ ನೆಲೆಯನ್ನು ಗುರುತಿಸಿದ ನಂತರ ಹಾಗೂ ಕಾರ್ಯಾಚರಣೆಯನ್ನು ಕರಾರುವಾಕ್ಕಾಗಿ ರೂಪಿಸಿದ ನಂತರ, ಅದನ್ನು ಅನುಷ್ಠಾನಗೊಳಿಸುವಾಗ ಕೆಲವು ತಾಂತ್ರಿಕ ಕಾರಣಗಳಿಂದ ಅದು ಎರಡು ಬಾರಿ ರದ್ದಾಗಿತ್ತು. 2 ವಾರಗಳ ಹಿಂದೆ, ಬಾಗ್ಧಾದಿ, ತಾನು ಸದ್ಯಕ್ಕಿರುವ ಅಡಗುದಾಣ ತೊರೆಯಲಿದ್ದಾನೆ ಎಂಬ ಮಾಹಿತಿ ಬಂದ ಕೂಡಲೇ ಜಾಗೃತಗೊಂಡ ಅಮೆರಿಕ ಸೇನೆ, ತಕ್ಷಣವೇ ಮತ್ತೂಂದು ಕಾರ್ಯಾಚರಣೆ ರೂಪಿಸಿತು. ಏಕೆಂದರೆ, ಈ ಬಾರಿ ತಪ್ಪಿಸಿಕೊಂಡಿದ್ದರೆ ಆತನನ್ನು ಪತ್ತೆ ಹಚ್ಚುವುದು ಅಷ್ಟು ಸುಲಭ ಸಾಧ್ಯವಾಗಿರಲಿಲ್ಲ.

ಮುಂದಡಿಯಿಟ್ಟ ಸೈನಿಕರು: ಅಮೆರಿಕದ ಸ್ಥಳೀಯ ಕಾಲಮಾನದ ಪ್ರಕಾರ, ಶನಿವಾರವೇ ಅಮೆರಿದ ಸೈನಿಕರು ಸಿಎಚ್‌-47 ಹೆಲಿಕಾಪ್ಟರ್‌ಗಳಲ್ಲಿ ಶಸ್ತ್ರಸಜ್ಜಿತರಾಗಿ ಸಿರಿಯಾ ಕಡೆಗೆ ಪ್ರಯಾಣ ಬೆಳೆಸಿದರು. ಮಾರ್ಗ ಮಧ್ಯೆ, ಇರಾಕ್‌, ಟರ್ಕಿ ಮತ್ತು ರಷ್ಯಾದ ವಾಯು ನೆಲೆಯ ಮೂಲಕ ಹಾದು ಹೋಗಬೇಕಿತ್ತು. ಆ ದೇಶಗಳಿಗೆಲ್ಲಾ ಸಿರಿಯಾದಲ್ಲಿ ಬಂಡುಕೋರರು ಹಾಗೂ ಭದ್ರತಾ ಪಡೆಗಳ ನಡುವೆ ಸಂಭವಿಸಬಹುದಾದ ದೊಡ್ಡದೊಂದು ಕಾಳಗವನ್ನು ತಪ್ಪಿಸಲು ಹೋಗುತ್ತಿರುವುದಾಗಿ ತಿಳಿಸಲಾಗಿತ್ತು. ಸಿರಿಯಾದಲ್ಲಿ ಬಂಡುಕೋರರ ವಿರುದ್ಧ ಸೆಣಸುತ್ತಿರುವ ಕುರ್ದಿಶ್‌ ಮತ್ತು ಸಿರಿಯಾ ಸೇನೆಗಳಿಗೆ ಅಮೆರಿಕ ಸೇನಾ ನೆರವು ನೀಡಿರುವುದರಿಂದ ಮೇಲ್ನೋಟಕ್ಕೆ ಈ ಮಾಹಿತಿ ಸರಿಯೆ ನಿಸಿದ್ದರಿಂದ ಆ ದೇಶಗಳ ಮೂಲಕ ಅಮೆರಿಕ ಹೆಲಿಕಾ ಪ್ಟರ್‌ಗಳು ಹಾದುಹೋಗಲು ಅನುಮತಿ ಸಿಕ್ಕಿತ್ತು.

ಸಂಜೆ ಹೊತ್ತಿಗೆ ಕಾರ್ಯಾಚರಣೆ ಆರಂಭ: ವಾಷಿಂಗ್ಟನ್‌ನ ಸ್ಥಳೀಯ ಕಾಲಮಾನದ ಪ್ರಕಾರ, ಸಂಜೆ 5 ಗಂಟೆ ಸುಮಾರಿಗೆ ಅಬು ಬಾಗ್ಧಾದಿ ನೆಲೆಸಿದ್ದ ಬಂಗಲೆಯನ್ನು ಸುತ್ತುವರಿದ ಅಮೆರಿಕ ಸೇನಾ ಪಡೆ, ಆತನ ಬಂಗಲೆಗಿದ್ದ ಬೃಹತ್‌ ಕಾಂಪೌಂಡ್‌ ಗೋಡೆಗೆ ವಿಶೇಷ ಸ್ಫೋಟಕಗಳ ಮೂಲಕ ತೂತು ಕೊರೆದು ಒಳ ನುಗ್ಗಿದರು. ಬಂಗಲೆಯನ್ನು ಸುತ್ತುವರಿದು ಮೊದಲು ಆತನಿಗೆ ಶರಣಾಗುವಂತೆ ಸೂಚಿಸಲಾಯಿತು. ಆದರೆ, ಅದಕ್ಕೆ ಆತ ಹಾಗೂ ಆತನ ಸಹಚರರು ಸಹಕರಿಸಲಿಲ್ಲ. ಹಾಗಾಗಿ, ಅನಿವಾರ್ಯವಾಗಿ ಕಾರ್ಯಾಚರಣೆ ಶುರು ಮಾಡಲಾಯಿತು. ಹಂತಹಂತವಾಗಿ ಕಾರ್ಯಾಚರಣೆ ನಡೆಸುತ್ತಾ ಬಾಗ್ಧಾದಿಯ ಅಂತಃಪುರಕ್ಕೆ ಲಗ್ಗೆಯಿಡುವ ಹೊತ್ತಿಗೆ ಆತ ತನ್ನ ಖಾಸಗಿ ಕೋಣೆಯ ಮಗ್ಗುಲಲ್ಲೇ ಇದ್ದ ಸುರಂಗ ಮಾರ್ಗದೊಳಗೆ ತನ್ನ ಮೂವರು ಮಕ್ಕಳೊಂದಿಗೆ ಇಳಿದು ಹೋಗಿದ್ದ. ಅದನ್ನು ಅಂದಾಜಿಸಿ, ಸುರಂಗದೊಳಗೆ ಹೋದ ಅಮೆರಿಕದ ಸೈನಿಕರು ಹಾಗೂ ಕೆ9 ಶ್ವಾನಗಳು, ಬಾಗ್ಧಾದಿಯನ್ನು ಹಿಂಬಾಲಿಸಿಕೊಂಡು ಹೋದರು. ಆದರೆ, ಆ ಸುರಂಗದ ಮತ್ತೂಂದು ತುದಿ ಮುಚ್ಚಲ್ಪಟ್ಟಿತ್ತು. ಆ ತುಟ್ಟ ತುದಿ ತಲುಪಿದ ಕೂಡಲೇ ಬಾಗ್ಧಾದಿಗೆ ದಿಕ್ಕೇ ತೋಚದಂತಾಯಿತು. ಇನ್ನೇನು ಸೈನಿಕರು ತನ್ನನ್ನು ಸುತ್ತುವರಿಯುವ ಸಂದರ್ಭ ಬಂದೇಬಿಟ್ಟಿತು ಎನ್ನು ಹೊತ್ತಿನಲ್ಲೇ ಆತ ತನ್ನ ಮೂವರು ಮಕ್ಕಳೊಂದಿಗೆ ತನ್ನನ್ನು ತಾನು ಸ್ಫೋಟಿಸಿಕೊಂಡು ಅಸುನೀಗಿದ.

ವಾಷಿಂಗ್ಟನ್‌ ಪೋಸ್ಟ್‌ ಎಡವಟ್ಟು
ಅಲ್‌ ಬಾಗ್ಧಾದಿಯ ಹತ್ಯೆ ಸುದ್ದಿಯನ್ನು ಪ್ರಕಟಿಸಿದ ವಾಷಿಂಗ್ಟನ್‌ ಪೋಸ್ಟ್‌ನ ಅಂತರ್ಜಾಲ ಆವೃತ್ತಿಯಲ್ಲಿ, ಆ ಸುದ್ದಿಯ ತಲೆಬರಹದಲ್ಲಿ ಬಾಗ್ಧಾದಿಗೆ ಶ್ರದ್ಧಾಂಜಲಿ ಎಂಬ ಪದ ಬಳಸಿದ್ದು ವ್ಯಾಪಕ ಟೀಕೆಗೆ ಕಾರಣವಾಯಿತು. ಟ್ವಿಟರ್‌ ಸೇರಿದಂತೆ ಹಲವಾರು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಟೀಕೆಗಳು ಕೇಳಿಬಂದ ಹಿನ್ನೆಲೆಯಲ್ಲಿ, ಸುದ್ದಿಯ ತಲೆಬರಹ ಬದಲಾಯಿಸಿದ ಪತ್ರಿಕೆ, ಆ ಕುರಿತಂತೆ ಕ್ಷಮೆಯನ್ನೂ ಯಾಚಿಸಿತು.

ಇದೊಂದು ಶ್ರದ್ಧಾಂಜಲಿಯೂ ಹೌದು
ಬಾಗ್ಧಾದಿ ನಾಶದ ಕಾರ್ಯಾಚರಣೆಗೆ “ಕಾಯಾÉ ಮುಲ್ಲರ್‌’ ಎಂದು ಹೆಸರಿಡಲಾಗಿತ್ತು. ಕಾಯಾÉ ಮುಲ್ಲರ್‌ ಅಮೆರಿಕದ ಸಮಾಜ ಸೇವಕಿ. ಸಿರಿಯಾದಲ್ಲಿ ಸೇವೆಯಲ್ಲಿ ನಿರತರಾಗಿದ್ದ ಇವರನ್ನು ಅಪಹರಿಸಿದ್ದ ಬಾಗ್ಧಾದಿ, ಆಕೆಯ ಮೇಲೆ ಹಲವಾರು ಬಾರಿ ಅತ್ಯಾಚಾರ ಎಸಗಿ, ಆನಂತರ ಹತ್ಯೆಗೈದಿದ್ದ. ಹಾಗಾಗಿ, ಬಾಗ್ಧಾದಿ ಮಾರಣಹೋಮವನ್ನು ಕಾಯಾÉ ಮುಲ್ಲರ್‌ ಅವರಿಗೆ ಸಮರ್ಪಿಸುವ ಉದ್ದೇಶದಿಂದ ಈ ಕಾರ್ಯಾಚರಣೆಗೆ ಅವರ ಹೆಸರನ್ನೇ ಇಡಲಾಗಿತ್ತು. ಮುಲ್ಲರ್‌ ಹೆಸರನ್ನು ಕಾರ್ಯಾಚರಣೆಗೆ ಇಟ್ಟಿದ್ದನ್ನು ಆಕೆಯ ಹೆತ್ತವರು ಸ್ವಾಗತಿಸಿದ್ದು, ಅಮೆರಿಕಕ್ಕೆ ಧನ್ಯವಾದ ಅರ್ಪಿಸಿದ್ದಾರೆ.

ಟಾಪ್ ನ್ಯೂಸ್

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

arrested

CM ಕಚೇರಿಯ ಟಿಪ್ಪಣಿ ನಕಲು: ಬಂಧನ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

arrested

CM ಕಚೇರಿಯ ಟಿಪ್ಪಣಿ ನಕಲು: ಬಂಧನ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.