Watch Video: ದ್ವೀಪರಾಷ್ಟ್ರ ವನವಾಟುನಲ್ಲಿ ಪ್ರಬಲ ಭೂಕಂಪ, ಹಲವಾರು ಕಟ್ಟಡ ಕುಸಿತ
ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ
Team Udayavani, Dec 17, 2024, 1:27 PM IST
ವಾಷಿಂಗ್ಟನ್: ಆಸ್ಟ್ರೇಲಿಯಾದ ಪೂರ್ವ ಭಾಗದಲ್ಲಿರುವ ವನವಾಟು ದ್ವೀಪದಲ್ಲಿ ಮಂಗಳವಾರ (ಡಿ.17) 7.3 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, ದ್ವೀಪರಾಷ್ಟ್ರದ ರಾಜಧಾನಿ ಪೋರ್ಟ್ ವಿಲಾ ಸೇರಿದಂತೆ ಹಲವೆಡೆ ಭಾರೀ ಅನಾಹುತ ಸಂಭವಿಸಿರುವುದಾಗಿ ವರದಿ ತಿಳಿಸಿದೆ.
ಮಂಗಳವಾರ ಮಧ್ಯಾಹ್ನ 12-47ಕ್ಕೆ ಭೂಕಂಪ ಸಂಭವಿಸಿದೆ. ಪ್ರಮುಖ ದ್ವೀಪವಾದ ಈಫೇಟ್ ಕರಾವಳಿ ಪ್ರದೇಶದಿಂದ 30 ಕಿಲೋ ಮೀಟರ್ ದೂರದಲ್ಲಿ ಈ ಭೂಕಂಪ ಸಂಭವಿಸಿರುವುದಾಗಿ ಅಮೆರಿಕದ ಭೂಗರ್ಭ ಸಮೀಕ್ಷೆ ಅಧಿಕಾರಿಗಳು ತಿಳಿಸಿದ್ದಾರೆ.
ಭೂಕಂಪನ ಸಂದರ್ಭದ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಒಂದು ವೈರಲ್ ಕ್ಲಿಪ್ ನಲ್ಲಿ, ಭೂಕಂಪನಕ್ಕೆ ಜಂಕ್ ಯಾರ್ಡ್ ನಲುಗಿ ಹೋಗಿರುವ ದೃಶ್ಯ ಸೆರೆಯಾಗಿದೆ.
ಭೂಕಂಪನದಲ್ಲಿ ಅಮೆರಿಕ, ಬ್ರಿಟನ್ ಮತ್ತು ಫ್ರಾನ್ಸ್ ರಾಯಭಾರಿ ಕಚೇರಿ ಕಟ್ಟಡಗಳು ಹಾನಿಗೊಂಡಿರುವುದು ಮತ್ತೊಂದು ವಿಡಿಯೋದಲ್ಲಿ ಸೆರೆಯಾಗಿದೆ. ರಸ್ತೆಯ ಮೇಲೆ ಹಲವಾರು ಮರಗಳು ಬಿದ್ದಿರುವುದು ವಿಡಿಯೋದಲ್ಲಿ ದಾಖಲಾಗಿದೆ.
7.3 earthquake has hit Vanuatu, an island east of Australia.
In this video is the American Embassy. It collapsed with people inside.
The island has suffered massive damage.
Pray for the victims and their families.
— Paul A. Szypula 🇺🇸 (@Bubblebathgirl) December 17, 2024
ಅಮೆರಿಕನ್ ರಾಯಭಾರ ಕಟ್ಟಡದ ಮೊದಲ ಮಹಡಿಯಲ್ಲಿ ಹಾನಿ ಸಂಭವಿಸಿದ್ದು, ಕುಸಿದ ಅವಶೇಷಗಳಡಿ ಜನರು ಸಿಲುಕಿಕೊಂಡಿರುವ ದೃಶ್ಯ ವಿಡಿಯೋದಲ್ಲಿದೆ. ಪೋರ್ಟ್ ವಿಲಾದಲ್ಲಿನ ಹಲವಾರು ಬೃಹತ್ ಕಟ್ಟಡಗಳು ಕುಸಿದು ಬಿದ್ದಿದ್ದು, ಇದರೊಂದಿಗೆ ವಿದ್ಯುತ್ ಮತ್ತು ನೀರು ಸರಬರಾಜು ಕಡಿತಗೊಂಡಿರುವುದಾಗಿ ವರದಿ ವಿವರಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hush Money Case: ಪ್ರಮಾಣವಚನಕ್ಕೂ ಮುನ್ನ ಟ್ರಂಪ್ ಗೆ ಶಾಕ್…! ಏನಿದು ಪ್ರಕರಣ
Syria ತೊರೆವ ಮುನ್ನವೇ ರಷ್ಯಾಗೆ 2082 ಕೋಟಿ ಸಾಗಿಸಿದ್ದ ಸರ್ವಾಧಿಕಾರಿ!
Bangladesh; 2025ರ ಅಂತ್ಯ ಇಲ್ಲವೇ 2026ಕ್ಕೆ ಚುನಾವಣೆ: ಯೂನುಸ್
ವಿಶ್ವಾಸ ಕಳೆದುಕೊಂಡ ಜರ್ಮನಿ ಚಾನ್ಸಲರ್: ಶೀಘ್ರ ಚುನಾವಣೆ
Chido Cyclone: ಫ್ರಾನ್ಸ್ ನಲ್ಲಿ ಭೀಕರ ಚಂಡಮಾರುತದ… ಸಾವಿರ ಗಡಿ ದಾಟಿದ ಮೃತರ ಸಂಖ್ಯೆ?
MUST WATCH
ಹೊಸ ಸೇರ್ಪಡೆ
Beguru Colony Movie: ಟೀಸರ್‌ನಲ್ಲಿ ಬೇಗೂರು ಕಾಲೋನಿ
ಸಾಕಿದ ನಾಯಿಗಾಗಿ ಬಾಯ್ ಫ್ರೆಂಡ್ ಜತೆ ಬ್ರೇಕಪ್ ಮಾಡಿಕೊಂಡ ಬಿಗ್ ಬಾಸ್ ಮಾಜಿ ಸ್ಪರ್ಧಿ
Udupi: ಅಂಬಲಪಾಡಿ ಓವರ್‌ಪಾಸ್ ಕಾಮಗಾರಿ ಆರಂಭ
Nita Ambani: ಬೆಂಗಳೂರಿನ ಪ್ರತಿಷ್ಠಿತ ಕೈಮಗ್ಗ ಮಳಿಗೆಗೆ ಭೇಟಿ ನೀಡಿದ ನೀತಾ ಅಂಬಾನಿ
Wedding: ಚಳಿಗೆ ಮದುವೆ ಮಂಟಪದಲ್ಲೇ ಪ್ರಜ್ಞೆ ತಪ್ಪಿದ ವರ… ನನಗೆ ಈ ಹುಡುಗ ಬೇಡವೆಂದ ವಧು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.