ಬಾಹ್ಯಾಕಾಶ ನಿಲ್ದಾಣದಲ್ಲಿ ವಿಜ್ಞಾನಿಗಳ ಸಂಖ್ಯೆ 11ಕ್ಕೇರಿಕೆ
Team Udayavani, Apr 26, 2021, 7:20 AM IST
ವಾಷಿಂಗ್ಟನ್: ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿರುವ ಖಗೋಳ ವಿಜ್ಞಾನಿಗಳ ಸಂಖ್ಯೆ ಶನಿವಾರ 11ಕ್ಕೆ ಏರಿದೆ.
ನಿಲ್ದಾಣದಲ್ಲಿ ಈವರೆಗೆ ಇಷ್ಟು ಖಗೋಳಯಾತ್ರಿಗಳು ಒಟ್ಟಿಗೆ ಸೇರಿ ಕೆಲಸ ಮಾಡುತ್ತಿರುವುದು ಇದೇ ಮೊದಲು. ಅಮೆರಿಕ, ರಷ್ಯಾ, ಜಪಾನ್ ಹಾಗೂ ಫ್ರಾನ್ಸ್ ದೇಶದವರು ಅಲ್ಲಿದ್ದಾರೆ. ಶುಕ್ರವಾರದವರೆಗೆ ಅಲ್ಲಿ 7 ವಿಜ್ಞಾನಿಗಳಿದ್ದರು.
ಶನಿವಾರದಂದು ಸ್ಪೇಸ್ ಎಕ್ಸ್ ರಾಕೆಟ್‌ನಲ್ಲಿ ಇಲ್ಲಿಗೆ ನಾಲ್ವರು ವಿಜ್ಞಾನಿಗಳು ಬಂದು ಸೇರಿದ್ದಾರೆ. ಹಾಗಾಗಿ, ಅಲ್ಲೀಗ 11 ವಿಜ್ಞಾನಿಗಳಿದ್ದು ಈವರೆಗಿನ ದಾಖಲೆಯಾಗಿದೆ.
ಈ ಹಿನ್ನೆಲೆಯಲ್ಲಿ, ಆ ವಿಜ್ಞಾನಿಗಳ ತವರು ರಾಷ್ಟ್ರಗಳ ಬಾಹ್ಯಾಕಾಶ ಸಂಸ್ಥೆಗಳ ಮುಖ್ಯಸ್ಥರು, ಅಭಿನಂದನೆ ಸಲ್ಲಿಸಲು ವೀಡಿಯೋ ಕಾಲ್ ಮಾಡಿದ್ದು, ಆ ವೇಳೆ ಎಲ್ಲ ವಿಜ್ಞಾನಿಗಳು ಏಕಕಾಲದಲ್ಲಿ ಪರದೆ ಮೇಲೆ ಕಾಣಿಸಿಕೊಂಡಿದ್ದಾರೆ. ಈ ಫೋಟೋ ಒಂದು ಐತಿಹಾಸಿಕ ದಾಖಲೆಯೆನಿಸಲಿದೆ ಎಂದು ಬಾಹ್ಯಾಕಾಶ ತಜ್ಞರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ
MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.