ನಾಯಕತ್ವದ ಅಗ್ನಿಪರೀಕ್ಷೆ
ಮತದಾನಕ್ಕೆ 24 ಗಂಟೆ ಮೊದಲು ನಾನಾ ಲೆಕ್ಕಾಚಾರ
Team Udayavani, Dec 4, 2019, 6:30 AM IST
ಬೆಂಗಳೂರು: ಕಾಂಗ್ರೆಸ್- ಜೆಡಿಎಸ್ ಸರಕಾರ ಪತನಗೊಳಿಸುವ ಸಲುವಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಸುಪ್ರೀಂ ಕೋರ್ಟ್‌ನಲ್ಲಿ ನಾಲ್ಕು ತಿಂಗಳ ಕಾಲ ಹೋರಾಟ ನಡೆಸಿ ಸ್ಪರ್ಧೆಗೆ ಅವಕಾಶ ಪಡೆದ ಅನರ್ಹರು ಎದುರಿಸುತ್ತಿರುವ ಉಪ ಚುನಾವಣೆ ಈಗ ಮೂರೂ ಪಕ್ಷಗಳ ನಾಯಕತ್ವದ ಅಗ್ನಿಪರೀಕ್ಷೆಯಾಗಿ ಮಾರ್ಪಟ್ಟಿದೆ.
ಮತದಾನಕ್ಕೆ 24 ಗಂಟೆಗಳು ಬಾಕಿ ಇದ್ದು ಮೂರೂ ಪಕ್ಷಗಳ ಕಾರ್ಯ ತಂತ್ರ, ರಣತಂತ್ರ, ಅಭ್ಯರ್ಥಿ ಗಳ ನಾಮಬಲ, ಪಕ್ಷದ ವರ್ಚಸ್ಸು, ಜಾತಿ-ಸಮುದಾಯಗಳ ಸಮೀ ಕರಣ ಎಲ್ಲದಕ್ಕೂ ಗುರುವಾರ ಮತ ದಾರ ನೀಡುವ ಉತ್ತರವೇ ಅಂತಿಮ ವಾಗಲಿದೆ. ಮಂಗಳವಾರ ಬಹಿರಂಗ ಪ್ರಚಾರಕ್ಕೆ ತೆರೆಬಿದ್ದಿದೆ.
“ಅನರ್ಹತೆ’ ಪ್ರಮುಖ ವಿಷಯ ವಾಗಿದ್ದ ಈ ಉಪ ಚುನಾವಣೆಯು ಮಹಾರಾಷ್ಟ್ರದ ನಾಟಕೀಯ ರಾಜಕೀಯ ವಿದ್ಯಮಾನಗಳಿಂದಲೂ ಪ್ರಭಾವಿತವಾಗಿದ್ದು, ಈಗ ಯಾರ ಜತೆ ಮೈತ್ರಿ, ಯಾರ ನಾಯಕತ್ವ ಎಂಬ ರಾಜ ಕೀಯ ಚರ್ಚೆಯವರೆಗೆ ಬಂದು ತಲುಪಿದೆ.
ಉಪ ಚುನಾವಣೆ ಕಣ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ವಿಪಕ್ಷ ನಾಯಕ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿ ಅವರ ಪ್ರತಿಷ್ಠೆಯ ಜತೆಗೆ ಅಸ್ತಿತ್ವದ ಪ್ರಶ್ನೆಯೂ ಆಗಿದೆ. ಜತೆಗೆ, ಒಂದು ಸರಕಾರ ಪತನಗೊಳಿಸಿ ಹೊಸ ಸರಕಾರ ಪ್ರತಿಷ್ಠಾಪಿಸಿದ ಅನರ್ಹರು ಈಗ ಬಿಜೆಪಿ ಸರಕಾರದ ಭವಿಷ್ಯ ವನ್ನೂ ನಿರ್ಧರಿಸಲಿದ್ದಾರೆ.
ಉಪ ಚುನಾವಣೆ ಘೋಷಣೆ ಯಾದ ದಿನಕ್ಕೂ ಬಹಿರಂಗ ಪ್ರಚಾರಕ್ಕೆ ಕೊನೆಯ ದಿನವಾದ ಮಂಗಳ ವಾರಕ್ಕೂ ರಾಜಕೀಯ ಪರಿಸ್ಥಿತಿ ಸಾಕಷ್ಟು ಬದಲಾಗಿದೆ. ಆರೋಪ-ಪ್ರತ್ಯಾರೋಪ, ವಾಕ್ಸಮರ, ವೈಯಕ್ತಿಕ ಟೀಕೆ-ನಿಂದನೆ, ಜಾತಿ, ಅನರ್ಹತೆ, ಸಾಮೂಹಿಕ ರಾಜೀನಾಮೆ, ಸೇರ್ಪಡೆ, ಒಪ್ಪಂದ, ಒಳ ಒಪ್ಪಂದ ಎಲ್ಲದಕ್ಕೂ ಸಾಕ್ಷಿಯಾಗಿ ಮತದಾರನ ತೀರ್ಮಾನದವರೆಗೆ ಬಂದು ನಿಂತಿದೆ.
ಮತದಾನಕ್ಕೆ ನಾಲ್ಕೈದು ದಿನಗಳು ಇರುವಾಗ ಚರ್ಚೆಗೆ ಬಂದ ಮರು ಮೈತ್ರಿ ಜೋರು ಸದ್ದು ಮಾಡುತ್ತಿದೆ. ಅದಾದ ಬಳಿಕ ರಾಜ್ಯ ರಾಜಕೀಯದಲ್ಲಿ ನಾನಾ ರೀತಿಯ ವಿಶ್ಲೇಷಣೆಗಳೂ ನಡೆಯುತ್ತಿವೆ.
15 ವಿಧಾನಸಭೆ ಕ್ಷೇತ್ರಗಳ ಪೈಕಿ ಬಿಜೆಪಿಗೆ 6 ಸ್ಥಾನಕ್ಕಿಂತ ಕಡಿಮೆ ಬಂದರೆ ಸರಕಾರ ಅಲ್ಪಮತಕ್ಕೆ ಕುಸಿಯುತ್ತದೆ. ಆಗ ಕಾಂಗ್ರೆಸ್ ಮತ್ತು ಜೆಡಿಎಸ್ ಮರು ಮೈತ್ರಿ ಮಾಡಿಕೊಳ್ಳಬಹುದು. ಇಲ್ಲವೇ ಬಿಜೆಪಿ ಸರಕಾರ ಉಳಿಸಿಕೊಳ್ಳಲು ಜೆಡಿಎಸ್ ನೆರವು ಬಯಸಬಹುದು ಎಂಬೆಲ್ಲ ಮಾತುಗಳು ಕೇಳಿಬರುತ್ತಿವೆ. ಜತೆಗೆ ಕಾಂಗ್ರೆಸ್-ಜೆಡಿಎಸ್ ಸರಕಾರ ವಾದರೆ ಯಾರು ಮುಖ್ಯ ಮಂತ್ರಿ, ಬಿಜೆಪಿ-ಜೆಡಿಎಸ್ ಸರಕಾರ ರಚನೆ ಯಾದರೆ ಯಾರು ಮುಖ್ಯ ಮಂತ್ರಿ ಎಂಬ ಹಂತಕ್ಕೂ ಹೋಗಿದೆ.
ಕಾಂಗ್ರೆಸ್, ಜೆಡಿಎಸ್ ನಾಯಕರು ಮೈತ್ರಿ ಪ್ರಸ್ತಾಪ ಇಲ್ಲ ಎಂದು ಹೇಳುತ್ತಾ ಒಳಗೊಳಗೇ ತಮ್ಮದೇ ಆದ ಲೆಕ್ಕಾಚಾರಗಳನ್ನು ಹಾಕಿಕೊಂಡಿದ್ದಾರೆ. ಯಡಿಯೂರಪ್ಪ, ಸಿದ್ದರಾಮಯ್ಯ, ಕುಮಾರಸ್ವಾಮಿಯವರು ಮುಂದಿನ ರಾಜಕೀಯ ಭವಿಷ್ಯವು ಉಪ ಚುನಾವಣೆ ಮೇಲೆಯೇ ನಿಂತಿದೆ. ಚುನಾವಣೆಯ ಫಲಿತಾಂಶ ಡಿ. 9ರಂದು ಪ್ರಕಟವಾಗಲಿದೆ.
ಬದಲಾಗಿದೆ ಖದರ್
ಮಹಾರಾಷ್ಟ್ರದಲ್ಲಿ ಶಿವಸೇನೆ- ಎನ್‌ಸಿಪಿ-ಕಾಂಗ್ರೆಸ್ ಜತೆಗೂಡಿ ಸರಕಾರ ರಚಿಸಿದ್ದು, ಬಿಜೆಪಿ ಸರಕಾರ 80 ಗಂಟೆಗಳಲ್ಲಿ ಪತನಗೊಂಡ ಬೆಳವಣಿಗೆ ಅನಂತರ ರಾಜ್ಯ ರಾಜಕಾರಣ, ಉಪ ಚುನಾವಣೆ “ಖದರ್’ ಬದಲಾಗಿದೆ. ಕಾಂಗ್ರೆಸ್ ಪ್ರಚಾರದಿಂದ ದೂರ ಉಳಿದಿದ್ದ ಹಿರಿಯರೆಲ್ಲ ಪ್ರಚಾರದಲ್ಲಿ ತೊಡಗಿದರು. ಕೆಲವೆಡೆ ಒಳ ಒಪ್ಪಂದದಿಂದ ಕಾಂಗ್ರೆಸ್-ಜೆಡಿಎಸ್ ಹೆಚ್ಚು ಸೀಟು ಗೆಲ್ಲಲಿದೆ ಎಂಬ ಮಾತುಗಳ ಹಿನ್ನೆಲೆಯಲ್ಲಿ ಬಿಜೆಪಿಯಲ್ಲೂ ತಳಮಳ ಸೃಷ್ಟಿಯಾಗಿ ಕಾರ್ಯತಂತ್ರ ಬದಲಿಸಿಕೊಂಡಿದೆ. ಜೆಡಿಎಸ್‌ನಲ್ಲೂ ಕಿಂಗ್ ಮೇಕರ್ ಆಗುವ ಆಶಾಭಾವ ಮತ್ತೆ ಮೂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ಮಹಾನಗರ ಪಾಲಿಕೆ ಉಪ ಚುನಾವಣೆ… ವಾರ್ಡ್ ನಂ.29ರಲ್ಲಿ ಬಿಜೆಪಿ ಗೆಲುವು
By Election: ಕೊಪ್ಪಳ ನಗರಸಭೆ ಉಪಚುನಾವಣೆ… ಕಮಲಕ್ಕೊಂದು ಕೈಗೊಂದು ಗೆಲುವು
Siddaramaiah ಸಂಪುಟ ಸೇರಲು ಭರ್ಜರಿ ಲಾಬಿ: ಆಕಾಂಕ್ಷಿಗಳು ಯಾರು? ಕೆಲವರಿಗೆ ಕೊಕ್?
Karnataka BJP; ಬಣ ಸಂಘರ್ಷ ತೀವ್ರ…;ಶಿಸ್ತುಕ್ರಮಕ್ಕೆ ವಿಜಯೇಂದ್ರ ಪಟ್ಟು?
BJP: ಇಂದು ಅಶೋಕ್ ನೇತೃತ್ವದ ಸಭೆ; ಡಿ. 7ಕ್ಕೆ ಬಿಜೆಪಿ ಕೋರ್ ಕಮಿಟಿ ಸಭೆ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Dharmasthala: ಲಕ್ಷದೀಪಗಳ ಜಗಮಗ; ವಿದ್ಯುತ್ ದೀಪಗಳಿಂದ ಶೃಂಗಾರ
Dharmasthala: ಇಂದಿನಿಂದ ಲಕ್ಷದೀಪೋತ್ಸವ… ರಾಜ್ಯಮಟ್ಟದ ವಸ್ತು ಪ್ರದರ್ಶನಕ್ಕೆ ಚಾಲನೆ
Maharashtra: ಮುಖ್ಯಮಂತ್ರಿ ಸ್ಥಾನಕ್ಕೆ ಏಕನಾಥ್ ಶಿಂದೆ ರಾಜೀನಾಮೆ… ಮುಂದಿನ ಸಿಎಂ ಯಾರು?
Mohini Dey: ಎಆರ್ ರೆಹಮಾನ್ ಜತೆ ಸಂಬಂಧ.. ಅವರು ನನಗೆ ತಂದೆ ಸಮಾನ ಎಂದ ಮೋಹಿನಿ
Tiger: ಬೆಂಗಳೂರಿನಿಂದ ತಿರುಪತಿ ಮೃಗಾಲಯಕ್ಕೆ ತಂದಿದ್ದ ರಾಯಲ್ ಬೆಂಗಾಲ್ ಟೈಗರ್ ‘ಮಧು’ ಸಾ*ವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.