ಒಲಿಂಪಿಕ್ಸ್ ರದ್ದು ಸಾಧ್ಯತೆ: ಯೊಶಿರೊ ಮೋರಿ
ದೂರಗೊಳ್ಳದ ಕೋವಿಡ್-19 ವೈರಸ್ ಭೀತಿ
Team Udayavani, Apr 29, 2020, 5:40 AM IST
ಟೋಕಿಯೊ: ಮುಂದಿನ ವರ್ಷವೂ ಕೋವಿಡ್-19 ಸಾಂಕ್ರಮಿಕ ರೋಗ ನಿಯಂತ್ರಣಕ್ಕೆ ಬಾರದಿದ್ದಲ್ಲಿ ಈಗಾಗಲೇ ಮುಂದಿನ ವರ್ಷಕ್ಕೆ ಮುಂದೂಡಲ್ಪಟ್ಟ ಟೋಕಿಯೊ ಒಲಿಂಪಿಕ್ಸ್ ಕೂಟವನ್ನು ರದ್ದುಗೊಳಿಸಲಾಗುವುದು. ಇನ್ನಷ್ಟು ಮುಂದೂಡುವ ಪ್ರಶ್ನೆಗೆ ಎಲ್ಲ ಎಂದು ಸಂಘಟನಾ ಸಮಿತಿಯ ಅಧ್ಯಕ್ಷರು ಎಚ್ಚರಿಕೆ ನೀಡಿದ್ದಾರೆ.
ವಿಶ್ವದಾದ್ಯಂತ ಪ್ರೇಕ್ಷಕರು ಮತ್ತು ಕ್ರೀಡಾಪಟುಗಳು ಪಾಲ್ಗೊಳ್ಳುವ ಈ ಮಹೋನ್ನತ ಕೂಟ ಆಯೋಜಿಸುವ ವೇಳೆಗೆ ಈ ಸಾಂಕ್ರಾಮಿಕ ರೋಗವು ನಿಯಂತ್ರಣಕ್ಕೆ ಬರುವುದು ಸಂಶಯವೆಂದು ವೈದ್ಯಕೀಯ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ ಹಿನ್ನೆಯಲ್ಲಿ ಸಮಿತಿ ಅಧ್ಯಕ್ಷರು ಈ ರೀತಿ ಪ್ರತಿಕ್ರಿಯೆ ನೀಡಿದರು. ಕೋವಿಡ್-19 ರೋಗ ವ್ಯಾಪಕವಾಗಿ ಹರಡುತ್ತಿರುವ ಕಾರಣದಿಂದಾಗಿ ಟೋಕಿಯೊ ಒಲಿಂಪಿಕ್ಸ್ ಈಗಾಗಲೇ ಒಂದು ವರ್ಷಕ್ಕೆ ಮುಂದೂಡಲ್ಪಟ್ಟಿದ್ದು 2021ರ ಜುಲೈ 23ರಂದು ಆರಂಭವಾಗಲಿದೆ.
ಮುಂದಿನ ವರ್ಷವೂ ಗೇಮ್ಸ್‌ಗೆ ಕೋವಿಡ್-19 ರೋಗ ಬೆದರಿಕೆಯೊಡ್ಡಿದರೆ 2022ಕ್ಕೆ ಮುಂದೂಡ ಬಹುದೇ ಎಂಬ ಜಪಾನಿನ ಕ್ರೀಡಾ ಪತ್ರಿಕೆಯೊಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಟೋಕಿಯೊ ಗೇಮ್ಸ್‌ನ ಸಂಘ ಟನಾ ಸಮಿತಿಯ ಅಧ್ಯಕ್ಷ ಯೊಶಿರೊ ಮೊರಿ ಅವರು “ನೋ’ ಎಂದರಲ್ಲದೇ ಅಂತಹ ಪರಿಸ್ಥಿತಿ ಉಂಟಾದರೆ ಕೂಟವನ್ನು ರದ್ದುಗೊಳಿಸಲಾಗುವುದು ಎಂದರು.
ಒಲಿಂಪಿಕ್ ಕೂಟ ಈ ಹಿಂದೆ ಒಮ್ಮೆ ಯುದ್ದದ ಸಂದರ್ಭದಲ್ಲಿ ರದ್ದುಗೊಂಡಿತ್ತು ಎಂದು ತಿಳಿಸಿದ ಮೊರಿ ಅವರು ಕೋವಿಡ್-19 ವೈರಸ್ ವಿರುದ್ಧದ ಹೋರಾಟವನ್ನು ಅದೃಶ್ಯ ಶತ್ರುವಿನ ಜತೆ ಕಾದಾಟಕ್ಕೆ ಹೋಲಿಸಿದರು. ಒಂದು ವೇಳೆ ಈ ಹೋರಾಟದಲ್ಲಿ ನಾವು ಗೆಲುವು ಸಾಧಿಸಿದರೆ ಮುಂದಿನ ಬೇಸಗೆಯಲ್ಲಿ ಒಲಿಂಪಿಕ್ ಕೂಟವನ್ನು ಶಾಂತಿಯುತವಾಗಿ ಆಯೋಜಿಸಲಿದ್ದೇವೆ ಎಂದವರು ತಿಳಿಸಿದರು.
ಅಧ್ಯಕ್ಷರ ಸ್ವಂತ ನಿರ್ಧಾರ
ಗೇಮ್ಸ್ ರದ್ದಾಗಬಹುದೆಂಬ ಹೇಳಿಕೆಗೆ ಪ್ರತಿಕ್ರಿಯೆ ನೀಡಲು ಟೋಕಿಯೊ 2020ರ ವಕ್ತಾರ ಮಾಸ ಟಕಾಯ ನಿರಾಕರಿಸಿದ್ದಾರೆ. ಮೋರಿ ಅವರ ಹೇಳಿಕೆಯು ಅವರ ಸ್ವಂತ ನಿರ್ಧಾರದ ಆಧಾರದಲ್ಲಿ ಬಂದಿದೆ ಎಂದರು. ಆದರೆ ಅಧ್ಯಕ್ಷರ ಈ ಹೇಳಿಕೆಯಿಂದ ಗೇಮ್ಸ್ ಬಗ್ಗೆ ಬಹಳಷ್ಟು ಪ್ರಶ್ನೆಗಳು ಉದ್ಭವಿಸಿವೆ. ಕೋವಿಡ್-19 ರೋಗಕ್ಕೆ ಮದ್ದು ಹುಡುಕದೇ ಇದ್ದಲ್ಲಿ ಮುಂದಿನ ವರ್ಷವೂ ಗೇಮ್ಸ್ ಸಂಘಟಿಸುವುದು ಕಷ್ಟವೆಂದು ಜಪಾನ್ ವೈದ್ಯಕೀಯ ಸಂಸ್ಥೆ ಹೇಳಿರುವುದು ಇನ್ನಷ್ಟು ಅನುಮಾನಗಳಿಗೆ ಕಾರಣವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
INDvAUS: ಬ್ಯಾನ್ ತಪ್ಪಿಸಿಕೊಂಡ ವಿರಾಟ್ ಕೊಹ್ಲಿ; ಆದರೂ ಶಿಕ್ಷೆ ತಪ್ಪಲಿಲ್ಲ
Vijay Hazare Trophy: ಮಯಾಂಕ್ ಅಗರ್ವಾಲ್ ಶತಕದಾಟ; ಪಂಜಾಬ್ ಕೈನಿಂದ ಜಯ ಕಸಿದ ಕರ್ನಾಟಕ
M Chinnaswamy Stadium; ಶಾಂತಾ ಹೆಸರಿಡಲು ಸಮಸ್ಯೆಯೇನಿದೆ? ಕೆಎಸ್‌ಸಿಎ ತಾರತಮ್ಯವೇಕೆ?
PV Sindhu: ವಿಮಾನದಲ್ಲಿ ಶುರುವಾಯ್ತು ಸಿಂಧು-ದತ್ತಾ ಲವ್ ಸ್ಟೋರಿ
INDvAUS: ಯುವ ಆಟಗಾರನ ಕೆಣಕಿ ತಪ್ಪು ಮಾಡಿದರೆ ಕೊಹ್ಲಿ? ಶಿಕ್ಷೆ ಗ್ಯಾರಂಟಿ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.