ಗ್ರಾ.ಪಂ. ವ್ಯಾಪ್ತಿಯಲ್ಲಿ ಸಣ್ಣ ಬ್ಲಾಕ್‌ಗಳಿಗೆ ಅವಕಾಶ: ಸಚಿವ ಹಾಲಪ್ಪ ಆಚಾರ್
ಮರಳು ಪೂರೈಕೆ ಸರಳ, ಪಾರದರ್ಶಕಗೊಳಿಸಲು ರಾಜ್ಯಕ್ಕೊಂದೇ ಆ್ಯಪ್
Team Udayavani, Jan 29, 2022, 8:05 AM IST
ಮಂಗಳೂರು: ಬೇಡಿಕೆಗೆ ತಕ್ಕಂತೆ ಪಾರದರ್ಶಕವಾಗಿ ಮರಳು ಪೂರೈಸಲು ರಾಜ್ಯಾದ್ಯಂತ ಅನ್ವಯವಾ ಗುವಂತೆ “ಮರಳುಮಿತ್ರ’ ಆ್ಯಪ್ ಸಿದ್ಧಪಡಿಸಲಾಗುತ್ತಿದೆ ಎಂದು ಸಚಿವ ಹಾಲಪ್ಪ ಆಚಾರ್ ತಿಳಿಸಿದ್ದಾರೆ.
ಶುಕ್ರವಾರ ಜಿ.ಪಂ. ಸಭಾಂಗಣ ದಲ್ಲಿ ಜಿಲ್ಲಾ ಪ್ರಗತಿ ಪರಿಶೀಲನ ಸಭೆಯ ಬಳಿಕ ಅವರು ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ, ಈಗಾ ಗಲೇ ಕೆಲವು ಜಿಲ್ಲೆಗಳು ಆ್ಯಪ್ ಮೂಲಕ ಪಾರದರ್ಶಕ ಮರಳು ಪೂರೈಕೆಗೆ ಕ್ರಮ ಕೈಗೊಂಡಿವೆ. ಮುಂದಿನ ದಿನಗಳಲ್ಲಿ ಇಡೀ ರಾಜ್ಯಕ್ಕೆ ಒಂದೇ ಆ್ಯಪ್ ಬಳಸಲಾಗುವುದು. ಈ ಆ್ಯಪ್ ಮರಳು ಸಾಗಾಟ ವಾಹನಗಳ ಜಿಪಿಎಸ್, ಜಿಯೋ ಟ್ಯಾಗಿಂಗ್, ಜಿಯೋ ಫೆನ್ಸಿಂಗ್ ಜತೆಗೆ ಸಂಪರ್ಕ ಹೊಂದಿರುತ್ತದೆ. ಇದು ಮರಳು ಕಾಳಸಂತೆಯಲ್ಲಿ ಮಾರುವುದನ್ನು ತಪ್ಪಿಸಲಿದೆ ಎಂದರು.
ಕರಾವಳಿಗೆ ತೊಂದರೆ ಇಲ್ಲ
ಜನರ ಬೇಡಿಕೆಗೆ ತಕ್ಕಂತೆ ಸರಳವಾಗಿ ಮರಳು ಪೂರೈಕೆಯಾಗಬೇಕೆಂಬ ಉದ್ದೇಶದಿಂದ ಹೊಸ ಮರಳು ನೀತಿ ರೂಪಿಸಲಾಗಿದೆ. ಹೊಸ ಮರಳು ನೀತಿಯಲ್ಲಿ ಕರಾವಳಿಯ ಪಾರಂಪರಿಕ ಮರಳುಗಾರಿಕೆಗೂ ಅವಕಾಶ ನೀಡಲಾಗಿದೆ ಎಂದರು.
ಹೊಸ ಮರಳು ನೀತಿಯಂತೆ 6 ವಿಧದ ಬ್ಲಾಕ್‌ಗಳಿಗೆ ಅವಕಾಶ ನೀಡ ಲಾಗಿದೆ. ಗ್ರಾ.ಪಂ. ವ್ಯಾಪ್ತಿಯಲ್ಲಿ ಸಣ್ಣ ಬ್ಲಾಕ್‌ಗಳಿಗೆ ಅವಕಾಶ ನೀಡಿದ್ದು, ಒಂದು ಟನ್‌ಗೆ 300 ರೂ.ಗಳಂತೆ ಪೂರೈಸಲು ಗ್ರಾ.ಪಂ.ಗಳಿಗೆ ಅವಕಾಶ ನೀಡಲಾಗಿದೆ ಎಂದರು.
ದ.ಕ.ದ ಸಿ.ಆರ್.ಝಡ್.ನ ನೇತ್ರಾವತಿಯಲ್ಲಿ 9 ಮತ್ತು ಫಲ್ಗುಣಿಯಲ್ಲಿ 5 ಮರಳು ದಿಬ್ಬ ಗುರುತಿಸಿದ್ದು, ಕೆಎಸ್‌ಸಿಝಡ್‌ಎಂಎಗೆ ಪ್ರಸ್ತಾವನೆ ಕಳುಹಿಸಲಾಗಿದೆ. ಹೊಸ ಮರಳು ನೀತಿಯಂತೆ ಜಿಲ್ಲೆಯ ಗ್ರಾ.ಪಂ. ವ್ಯಾಪ್ತಿಗಳ ಹಳ್ಳ ಗಳ ಪಾತ್ರಗಳಲ್ಲಿ 5 ಮರಳು ಬ್ಲಾಕ್‌ಗಳನ್ನು ಗುರುತಿಸಿ 4 ಬ್ಲಾಕ್‌ಗಳಿಗೆ ಕಾರ್ಯಾ ದೇಶ ನೀಡಲಾಗಿದೆ. ಹೊಸ ಮರಳು ನೀತಿಯಂತೆ ಕೆಎಸ್‌ಎಂಸಿಎಲ್ ವತಿಯಿಂದ ಅಣೆಕಟ್ಟಿನ ಹಿನ್ನೀರು ಪ್ರದೇಶಗಳಲ್ಲಿ ಹೂಳು/ಮರಳು ತೆಗೆಯಲು 3 ಮರಳು ನಿಕ್ಷೇಪಗಳನ್ನು ಗುರುತಿಸಲಾಗಿದೆ. ಇ ಟೆಂಡರ್ ಕಂ ಹರಾಜು ಮೂಲಕ 5 ವರ್ಷಗಳ ಅವಧಿಗೆ 17 ಮರಳು ಬ್ಲಾಕ್‌ಗಳ ಗುತ್ತಿಗೆ ಮಂಜೂರು ಮಾಡಲಾಗಿದೆ. ಪರಿಸರ ವಿಮೋಚನೆ ಪತ್ರದಂತೆ ವಾರ್ಷಿಕ 4,72,090 ಮೆ. ಟನ್ ಮರಳು ತೆಗೆಯಬಹುದು. ನಾನ್ ಸಿ.ಆರ್.ಝಡ್.ನಲ್ಲಿ ಮತ್ತೂಮ್ಮೆ 10 ಮರಳು ಬ್ಲಾಕ್‌ಗಳಿಗೆ ಇ-ಟೆಂಡರ್ ಕರೆಯಲಾಗಿದೆ. 20 ಬ್ಲಾಕ್‌ಗಳಿಗೆ ಸರ್ವಿಸ್ ಬಿಡ್ ಕರೆಯಲಾಗಿದೆ. ಜಿಲ್ಲೆಯಲ್ಲಿ ಒಟ್ಟು 314 ಪ್ರಕರಣ ಪತ್ತೆ ಹಚ್ಚಿ ದಂಡ ಸಂಗ್ರಹಿಸಲಾಗಿದೆ. 2021-22ನೇ ಸಾಲಿನಲ್ಲಿ 30.24 ಕೋ.ರೂ ರಾಜಸ್ವ ಸಂಗ್ರಹ ಗುರಿ ನಿಗದಿಪಡಿಸಲಾಗಿದೆ ಎಂದರು.
25 ಅಂಗನವಾಡಿ ಕಟ್ಟಡಗಳಿಗೆ ಅನುದಾನ
ಅಮೃತ ಯೋಜನೆಯಡಿ ದ.ಕ. ಜಿಲ್ಲೆಯ 25 ಅಂಗನವಾಡಿ ಕಟ್ಟಡಗಳಿಗೆ ತಲಾ 1 ಲ.ರೂ.ಗಳಂತೆ 25 ಲ.ರೂ. ಅನುದಾನ ಬಿಡುಗಡೆಯಾಗಿದೆ ಎಂದು ಸಚಿವ ಹಾಲಪ್ಪ ಆಚಾರ್ ತಿಳಿಸಿದ್ದಾರೆ.
ಜಿಲ್ಲೆಯ ಅಂಗನವಾಡಿಗಳಲ್ಲಿ 1,49,400 ಮಕ್ಕಳು ದಾಖಲಾಗಿದ್ದು, ಪೂರಕ ಪೌಷ್ಠಿಕ ಆಹಾರ ಪಡೆಯುತ್ತಿದ್ದಾರೆ. 13,380 ಗರ್ಭಿಣಿಯರು, 13,793 ಬಾಣಂತಿಯರಿಗೆ ಪೂರಕ ಪೌಷ್ಠಿಕ ಆಹಾರ ಒದಗಿಸಲಾಗುತ್ತಿದೆ. ಜಿಲ್ಲೆಯಲ್ಲಿ ಇದುವರೆಗೆ 41 ತೀವ್ರ ಅಪೌಷ್ಠಿಕ ಮಕ್ಕಳು, 2,067 ಸಾಧಾರಣ ತೂಕದ ಮಕ್ಕಳನ್ನು ಗುರುತಿಸಲಾಗಿದೆ. ಅವರ ಆರೋಗ್ಯ ಸುಧಾರಣೆಗೆ ಸೂಕ್ತ ಚಿಕಿತ್ಸೆ ಒದಗಿಸಲಾಗುತ್ತಿದೆ. 2021-22ನೇ ಸಾಲಿನಲ್ಲಿ 3,432 ಫಲಾನುಭವಿಗಳಿಗೆ ಸುಕನ್ಯಾ ಸಮೃದ್ಧಿ ಯೋಜನೆಯ ಖಾತೆ ತೆರೆಯಲಾಗುತ್ತಿದೆ. ಜಿಲ್ಲೆಯಲ್ಲಿ 4,058 ಸ್ತ್ರೀ ಶಕ್ತಿ ಗುಂಪುಗಳನ್ನು ರಚನೆ ಮಾಡಲಾಗಿದೆ. ಜಿಲ್ಲೆಯಲ್ಲಿ 25 ಅಂಗನವಾಡಿ ಕಾರ್ಯಕರ್ತೆಯರು ಮತ್ತು 55 ಸಹಾಯಕಿಯರ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ ಎಂದರು.
ಬಾಕಿ ಮರಳು ಬ್ಲಾಕ್ ಟೆಂಡರ್
ಪ್ರಕ್ರಿಯೆ ವಾರದೊಳಗೆ ಪೂರ್ಣಗೊಳಿಸಿ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಾಕಿ ಉಳಿದ ಮರಳಿನ 20 ಬ್ಲಾಕ್‌ಗಳ ಟೆಂಡರ್ ಪ್ರಕ್ರಿಯೆಯನ್ನು ಬರುವ ವಾರದೊಳಗೆ ಪೂರ್ಣಗೊಳಿಸಬೇಕು, ಇಲ್ಲದಿದ್ದರೆ ಜಿಲ್ಲಾ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಮುಖ್ಯಸ್ಥರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸುವಂತೆ ಸಚಿವ ಹಾಲಪ್ಪ ಆಚಾರ್ ಪ್ರಗತಿ ಪರಿಶೀಲನ ಸಭೆಯಲ್ಲಿ ಜಿಲ್ಲಾಧಿಕಾರಿಗೆ ಸ್ಪಷ್ಟ ನಿರ್ದೇಶನ ನೀಡಿದ್ದಾರೆ.
ನಾನ್ ಸಿಆರ್‌ಝಡ್‌ನಲ್ಲಿ ಈ ಹಿಂದೆ 30 ಮರಳು ಬ್ಲಾಕ್‌ಗಳಿಗೆ ಕರೆಯಲಾಗಿದ್ದ ಇ-ಟೆಂಡರ್ ಪ್ರಕ್ರಿಯೆ ನ್ಯಾಯಾಲಯದ ಆದೇಶದಂತೆ ಮುಂದುವರಿಸಲಾಗಿದೆ. ಆದರೆ 20 ಮರಳು ಬ್ಲಾಕ್‌ಗಳಲ್ಲಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಳ್ಳದೇ ಇರುವುದಕ್ಕೆ ಅಧಿಕಾರಿಗಳ ನಿರಾಸಕ್ತಿ ಕಾರಣ. ಕೂಡಲೇ ಟೆಂಡರ್ ಪ್ರಕ್ರಿಯೆ ಮುಗಿಸಿ, ಕಾಮಗಾರಿ ಆರಂಭಿಸದಿದ್ದರೆ ಆ ಇಲಾಖೆಯ ಜಿಲ್ಲಾ ಮಟ್ಟದ ಮುಖ್ಯಸ್ಥರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸುವಂತೆ ಸಚಿವರು ಆದೇಶಿಸಿದರು. ಶಾಸಕರಾದ ಉಮನಾಥ ಕೋಟ್ಯಾನ್, ರಾಜೇಶ್ ನಾಯಕ್, ಯು.ಟಿ. ಖಾದರ್, ಪ್ರತಾಪ್‌ಸಿಂಹ ನಾಯಕ್, ಡಾ| ಮಂಜುನಾಥ್ ಭಂಡಾರಿ ಮಾತನಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dinesh Gundu Rao: ಅನರ್ಹರ ಕಾರ್ಡ್ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ
Mangaluru: ಆಟೋ ವರ್ಕಶಾಪ್‌ನಿಂದ 93,540 ರೂ. ಕಳವು
Mangaluru: ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ಕೃಷ್ಣವೇಣಿ ಮನೆ ಮೇಲೆ ಲೋಕಾ ದಾಳಿ
Mangaluru: ವಕ್ಫ್ ಭೂಮಿ ಅತಿಕ್ರಮಣ: ಸಲ್ಲಿಕೆಯಾದ ವರದಿ ಬಗ್ಗೆ ತನಿಖೆಯಾಗಲಿ: ಮಾಣಿಪ್ಪಾಡಿ
Ullala: ಯುವತಿಯ ಮಾನಭಂಗಕ್ಕೆ ಯತ್ನ: ಬಾಲಕ ವಶಕ್ಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.