ರಹಸ್ಯವಾಗಿತ್ತು ಸೋಂಕು ಹಬ್ಬುವ ವಿಚಾರ
ಚೀನ ಕಳ್ಳಾಟದ ಬಗ್ಗೆ 5 ರಾಷ್ಟ್ರಗಳ ತನಿಖಾ ವರದಿಯಲ್ಲಿ ಉಲ್ಲೇಖ
Team Udayavani, May 3, 2020, 6:45 AM IST
ಸಾಂದರ್ಭಿಕ ಚಿತ್ರ.
ಕೋವಿಡ್-19 ವೈರಸ್‌ನ ಬಗ್ಗೆ ಚೀನ ರವೆಯಷ್ಟೂ ಗುಟ್ಟುಬಿಟ್ಟುಕೊಡದೆ, ಜಗತ್ತಿಗೆಲ್ಲ ಚಳ್ಳೇಹಣ್ಣು ತಿನ್ನಿಸಿದೆ ಎಂದು ಆರೋಪಿಸಿದ ಗುಪ್ತಚರ ವರದಿ ಇದೀಗ ಸೋರಿಕೆ ಆಗಿದೆ.
ಅಮೆರಿಕ,ಇಂಗ್ಲೆಂಡ್,ಕೆನಡಾ,ಆಸ್ಟ್ರೇಲಿಯಾ, ನ್ಯೂಜಿಲೆಂಡ್-ರಾಷ್ಟ್ರಗಳು ನಿಯೋಜಿಸಿದ್ದ “ಫೈವ್ ಐಸ್’ ಗುಪ್ತಚರ ಸಂಸ್ಥೆಯಿಂದ ಸೋರಿಕೆಯಾದ 15 ಪುಟಗಳ ವರದಿಯನ್ನು “ಟೆಲಿಗ್ರಾಫ್’ ಪತ್ರಿಕೆ ವರದಿ ಮಾಡಿದೆ.”ಕೋವಿಡ್-19 ಮನುಷ್ಯನಿಂದ ಮನುಷ್ಯನಿಗೆ ಹರಡುತ್ತದೆ ಎಂಬ ಪ್ರಾಥಮಿಕ ಸತ್ಯವನ್ನೇ ಚೀನ ಮುಚ್ಚಿಟ್ಟಿತ್ತು. ಈ ಬಗ್ಗೆ ಮಾತನಾಡಲು ಸಿದ್ಧರಿದ್ದ ಅಲ್ಲಿನ ವೈದ್ಯರನ್ನೇ ಚೀನ ಹತ್ತಿಕ್ಕಿದೆ ಅಥವಾ ಅಪಹರಿಸಿದೆ. ತನ್ನ ದೇಶದೊಳಗೆ ಪ್ರಯಾಣ ನಿರ್ಬಂಧ ಹೇರಿ, ಇತರ ದೇಶಗಳಿಗೆ ಲಾಕ್‌ಡೌನ್ ಅಗತ್ಯವಿಲ್ಲ ಎಂದು ಸುಳ್ಳು ಹೇಳಿತ್ತು.
ವುಹಾನ್‌ನ ಪ್ರಯೋಗಾಲಯದಲ್ಲಿ ಕೋವಿಡ್-19 ವೈರಸ್‌ನಿಂದ ಮೃತಪಟ್ಟ ಬಾವಲಿಗಳ ಸಂಶೋಧನೆಯನ್ನು ನಿರಂತ ರವಾಗಿ ನಡೆಸಲಾಗಿತ್ತು. ವುಹಾನ್ ಲ್ಯಾಬ್‌ನ ವರದಿಗಳನ್ನೂ ಚೀನ ನಾಶಪಡಿಸಿದೆ. ಅಲ್ಲದೆ, ಕೋವಿಡ್-19 ಗೆ ಸೂಕ್ತ ಔಷಧ ಕಂಡುಕೊಳ್ಳಲು ಜಗತ್ತಿನ ದೇಶಗಳೆಲ್ಲ ಅಂಗಲಾಚುವಾಗ, ಅತ್ತ ಚೀನ ಮೌನವಾಗಿದ್ದುಕೊಂಡು ತನ್ನ ದಾಖಲೆ ಗಳನ್ನೆಲ್ಲ ನಾಶಪಡಿಸುತ್ತಿತ್ತು’ ಎಂದು ಆರೋಪಿಸಲಾಗಿದೆ.
ಚೀನಕ್ಕೆ ಡಬ್ಲ್ಯೂಎಚ್‌ಒ ಶ್ಲಾಘನೆ: ಕೋವಿಡ್-19 ಬಿಕ್ಕಟ್ಟನ್ನು ಚೀನ ನಿರ್ವಹಿಸಿದ ರೀತಿಗೆ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್‌ಒ) ಶ್ಲಾಘನೆ ವ್ಯಕ್ತಪಡಿಸಿದೆ. ಚೀನದ ಸಾರ್ವಜನಿಕ ಸಂಪರ್ಕ ಏಜೆನ್ಸಿಯಂತೆ ಕೆಲಸ ನಿರ್ವಹಿಸುತ್ತಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟೀಕಿಸಿದ ಮರುದಿನವೇ ಆರೋಗ್ಯ ಸಂಸ್ಥೆಯ ಈ ಶ್ಲಾಘನೆ ಹೊರಬಿದ್ದಿದೆ.
ಮತ್ತಷ್ಟು ಸಡಿಲ:ಈ ಮಧ್ಯೆ,ಅಮೆರಿಕದಲ್ಲಿ 12ಕ್ಕೂ ಹೆಚ್ಚು ರಾಜ್ಯಗಳು ಲಾಕ್‌ಡೌನ್ ಸಡಿಲಿಸಿದ್ದು,ರೆಸ್ಟೋರೆಂಟ್‌ಗಳು, ಅಂಗಡಿಗಳು, ಇನ್ನಿತರ ವಾಣಿಜ್ಯ ಮಳಿಗೆಗಳು ಬಾಗಿಲು ತೆರೆದಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 38 ಬ*ಲಿ
Netanyahu ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಬಂಧನ ವಾರಂಟ್
Russia ದಿಂದ ಉಕ್ರೇನ್ ಮೇಲೆ ICBM ದಾಳಿ; ನ್ಯೂಕ್ಲಿಯರ್ ದಾಳಿ ಉದ್ವಿಗ್ನತೆ ಹೆಚ್ಚಳ
Chrome Browser: ಗೂಗಲ್ ಸರ್ಚ್ ಎಂಜಿನ್ ಕ್ರೋಮ್ ಮಾರಾಟ?
ವಾಯುವ್ಯ ಅಮೆರಿಕಕ್ಕೆ ಅಪ್ಪಳಿಸಿದ ಬಾಂಬ್ ಸೈಕ್ಲೋನ್, 6 ಲಕ್ಷ ಮನೆಗಳಿಗೆ ವಿದ್ಯುತ್ ಕಡಿತ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.