ಗಡಿ “ಕಿಡಿ’ಗೆ ಕೈ ನಾಯಕರ ಮೌನ


Team Udayavani, Jan 1, 2020, 6:30 AM IST

Sathish

ಬೆಳಗಾವಿ: ಮಹಾರಾಷ್ಟ್ರದಲ್ಲಿ ಮೈತ್ರಿ ಸರ್ಕಾರ ಇದ್ದರೂ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಆಡಿದ ಮಾತು ಬೆಳಗಾವಿ ಗಡಿ ವಿವಾದದಕ್ಕೆ ಮತ್ತೆ ಜೀವ ನೀಡಿದೆ. ಇದು ಅಪಾಯದ ಮುನ್ಸೂಚನೆ ಎನ್ನುವಾಗಲೇ ಕನ್ನಡ ಹೋರಾಟಗಾರರ ಹಾಗೂ ಗಡಿ ಭಾಗದಲ್ಲಿರುವ ಕನ್ನಡಿಗರ ದೃಷ್ಟಿ ರಾಜಕೀಯ ಪಕ್ಷಗಳ ಕಡೆ ತಿರುಗಿದೆ.

ಗಡಿ ವಿವಾದವನ್ನು ಮತ್ತೆ ಕೆಣಕಿರುವ ಶಿವಸೇನೆ ಜತೆ ಮಹಾರಾಷ್ಟ್ರದಲ್ಲಿ ಕಾಂಗ್ರೆಸ್‌ ಅಧಿಕಾರ ಹಂಚಿಕೊಂಡಿರುವುದರಿಂದ ಕನ್ನಡಿಗರು ಸಹಜವಾಗಿಯೇ ಕಾಂಗ್ರೆಸ್‌ನತ್ತ ಕೆಂಗಣ್ಣು ಬೀರುವಂತಾಗಿದೆ. ಬೆಳಗಾವಿ ಕುರಿತು ಮುಖ್ಯಮಂತ್ರಿಗಳ ಹೇಳಿಕೆ ನಂತರ ಕಾಂಗ್ರೆಸ್‌ ಪಕ್ಷದ ಅದರಲ್ಲೂ ಬೆಳಗಾವಿ ಜಿಲ್ಲೆಯ ನಾಯಕರ ಸ್ಪಷ್ಟವಾದ ನಿಲುವು ಇದುವರೆಗೆ ಹೊರಬಾರದಿರುವುದು ಸಹ ಅನುಮಾನಗಳಿಗೆ ಅವಕಾಶ ಮಾಡಿಕೊಟ್ಟಿದೆ.

ಈ ಹಿಂದೆ ಮಹಾರಾಷ್ಟ್ರದಲ್ಲಿ ಶಿವಸೇನೆ ಹಾಗೂ ಬಿಜೆಪಿ ಸರ್ಕಾರವಿದ್ದಾಗ ಗಡಿ ವಿವಾದ ಅಥವಾ ಗದ್ದಲ ಉಂಟಾದರೆ ಸಾಕು ಬಿಜೆಪಿ ಮೇಲೆ ಮುಗಿಬೀಳುತ್ತಿದ್ದ ಕಾಂಗ್ರೆಸ್‌ ನಾಯಕರು ಇದುವರೆಗೆ ಬಹಿರಂಗವಾಗಿ ಯಾವುದೇ ಹೇಳಿಕೆ ನೀಡಿಲ್ಲ. ಮಹಾರಾಷ್ಟ್ರದ ಮುಖ್ಯಮಂತ್ರಿಗಳಿಗೆ ತಿರುಗೇಟು ಕೊಟ್ಟಿಲ್ಲ. ಶಿವಸೇನೆಯ ಕ್ರಮವನ್ನು ಖಂಡಿಸಿಲ್ಲ. ಹೀಗಾಗಿ ಕಾಂಗ್ರೆಸ್‌ ನಡೆಯ ಬಗ್ಗೆ ಕನ್ನಡಿಗರಲ್ಲಿ ಅನುಮಾನ ಬರುವಂತೆ ಮಾಡಿದೆ.

ಕೆಪಿಸಿಸಿ ನಿಲುವೇನು?: ಗಡಿ ವಿವಾದ ಮತ್ತೆ ತೀವ್ರ ಸ್ವರೂಪ ಪಡೆಯುತ್ತಿರುವ ಹಿನ್ನೆಲೆಯಲ್ಲಿ ಕೆಪಿಸಿಸಿ ನಿಲುವು ಈಗ ಅತ್ಯಗತ್ಯ. ಮಹಾರಾಷ್ಟ್ರದಲ್ಲಿ ಶಿವಸೇನೆ ಜತೆ ಸರ್ಕಾರ ರಚಿಸಿದ್ದರೂ ಕರ್ನಾಟಕದ ಹಿತಾಸಕ್ತಿ ರಕ್ಷಣೆ ವಿಷಯದಲ್ಲಿ ತನ್ನ ವಿರೋಧವನ್ನು ವ್ಯಕ್ತಪಡಿಸಲೇಬೇಕು. ಜತೆಗೆ ಶಿವಸೇನೆಗೆ ಗಡಿ ವಿಚಾರ ಪ್ರಸ್ತಾಪ ಮಾಡದಂತೆ ತಾಕೀತು ಮಾಡಬೇಕು ಎಂಬುದು ಕನ್ನಡ ಹೋರಾಟಗಾರರ ಒತ್ತಾಯ.

ಆದರೆ ವಿವಾದ ಎದ್ದು ವಾರ ಕಳೆದರೂ ಕಾಂಗ್ರೆಸ್‌ ನಾಯಕರು ವಿಶೇಷವಾಗಿ ಬೆಳಗಾವಿ ಜಿಲ್ಲೆಯ ಮುಖಂಡರು ಶಿವಸೇನೆಯ ನಡೆಯ ಬಗ್ಗೆ ಯಾವುದೇ ಸ್ಪಷ್ಟನೆ ಅಥವಾ ಖಂಡನೆ ಮಾಡದೇ ಇರುವುದು ಕನ್ನಡ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ. ಬೆಳಗಾವಿಯ ಗಡಿ ವಿಚಾರದಲ್ಲಿ ಜಿಲ್ಲೆಯ ರಾಜಕಾರಣಿಗಳು ಮೊದಲಿಂದಲೂ ದ್ವಂದ್ವ ನೀತಿ ಅನುಸರಿಸಿಕೊಂಡು ಬಂದಿರುವುದು ಗುಟ್ಟಾಗಿ ಉಳಿದಿಲ್ಲ.

ಮಹಾರಾಷ್ಟ್ರದ ವಿರುದ್ಧ ಅಥವಾ ಗಡಿ ವಿವಾದದ ವಿರುದ್ಧ ಮಾತನಾಡಿದರೆ ಮರಾಠಿ ಭಾಷಿಕ ಮತಗಳು ತಪ್ಪುತ್ತವೆ ಎಂಬ ಭಯದಿಂದ ಕಾಂಗ್ರೆಸ್‌ ಹಾಗೂ ಬಿಜೆಪಿ ರಾಜಕಾರಣಿಗಳು ಕರ್ನಾಟಕದ ಹಿತಾಸಕ್ತಿಗೆ ವಿರುದ್ಧವಾಗಿಯೇ ನಡೆದುಕೊಂಡು ಬಂದಿದ್ದಾರೆ. ಈ ವಿಷಯದಲ್ಲಿ ಸದಾ ಅಂತರವನ್ನು ಕಾಯ್ದಕೊಳ್ಳುತ್ತ ಬಂದಿವೆ. ಇದೇ ಕಾರಣದಿಂದ ಗಡಿ ಭಾಗದ ಕನ್ನಡಿಗರು ಹೋರಾಟದಲ್ಲಿ ಹಿನ್ನಡೆ ಅನುಭವಿಸುತ್ತ ಬಂದಿದ್ದಾರೆ.

ಜಿಲ್ಲೆಯ ರಾಜಕಾರಣಿಗಳು ರಾಜ್ಯದ ಜನರ ಪರ ಗಟ್ಟಿಯಾಗಿ ನಿಂತಿದ್ದರೆ ಇವತ್ತು ಬೆಳಗಾವಿಯಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ ಹಾಗೂ ಶಿವಸೇನೆ ಇರುತ್ತಲೇ ಇರಲಿಲ್ಲ. ಆದರೆ ಜಿಲ್ಲೆಯ ರಾಜಕಾರಣಿಗಳ ಪರೋಕ್ಷ ನೆರವು ಎಂಇಎಸ್‌ ಹಾಗೂ ಶಿವಸೇನೆಗೆ ಗಡಿ ವಿವಾದದ ಹೆಸರಲ್ಲಿ ರಾಜಕಾರಣ ಮುಂದುವರಿಸುವಂತೆ ಮಾಡಿದೆ. ಇದರಿಂದ ಸಾಕಷ್ಟು ಆರ್ಥಿಕವಾಗಿ ಲಾಭ ಉಂಡಿರುವ ಎಂಇಎಸ್‌ ನಾಯಕರು ವಿವಾದ ಜೀವಂತ ಇರುವಂತೆ ಮಾಡಿದ್ದಾರೆ.

ಶಾಸಕ ಸತೀಶ ಏನಂತಾರೆ?: ಮಹಾರಾಷ್ಟ್ರ ಸಿಎಂ ಉದ್ಧವ ಠಾಕ್ರೆ ಬೆಳಗಾವಿ ಕುರಿತು ವಿವಾದಾತ್ಮಕ ಹೇಳಿಕೆ ನೀಡಿರಬಹುದು. ಹಾಗೆಂದ ಮಾತ್ರಕ್ಕೆ ಬೆಳಗಾವಿ ಅವರದಾಗುವುದಿಲ್ಲ. ಗಡಿ ವಿವಾದ ನ್ಯಾಯಾಲಯದಲ್ಲಿದೆ. ಅದರ ತೀರ್ಪು ಬರುವವರೆಗೆ ಎಲ್ಲರೂ ಸುಮ್ಮನಿರಬೇಕು. ಈಗ ಮುಖ್ಯಮಂತ್ರಿಗಳಿಂದ ಬಂದಿರುವ ಹೇಳಿಕೆ ಕೇವಲ ಸ್ವಾರ್ಥ ರಾಜಕೀಯ ಉದ್ದೇಶದಿಂದ ನೀಡಿದ ಹೇಳಿಕೆ. ಇದಕ್ಕೆ ಜನರು ಕಿವಿಗೊಡಬಾರದು ಎಂಬುದು ಯಮಕನಮರಡಿ ಕಾಂಗ್ರೆಸ್‌ ಶಾಸಕ ಸತೀಶ ಜಾರಕಿಹೊಳಿ ಹೇಳಿಕೆ.

ಮಹಾರಾಷ್ಟ್ರಕ್ಕಿಂತ ಕರ್ನಾಟಕದಲ್ಲೇ ನೀವು ಚೆನ್ನಾಗಿದ್ದೀರಿ. ಇಲ್ಲಿಗೆ ಬರಬೇಕು ಎನ್ನುವುದನ್ನು ಮರೆತುಬಿಡಿ. ಅದರ ಬದಲು ಕರ್ನಾಟಕದ ಜನರ ಜತೆ ಕೂಡಿ ಬಾಳುವುದನ್ನು ರೂಢಿಸಿಕೊಳ್ಳಿ ಎಂದು ಮಹಾರಾಷ್ಟ್ರ ನವ ನಿರ್ಮಾಣ ಸೇನೆ ಮುಖ್ಯಸ್ಥ ರಾಜ್‌ ಠಾಕ್ರೆ ಬೆಳಗಾವಿಯ ಎಂಇಎಸ್‌ ಮುಖಂಡರಿಗೆ ಬುದ್ಧಿವಾದ ಹೇಳಿ ಕಳಿಸಿದ್ದರು. ಈ ಮಾತನ್ನು ಒಮ್ಮೆ ನೆನಪು ಮಾಡಿಕೊಳ್ಳುವುದು ಒಳ್ಳೆಯದು ಎನ್ನುತ್ತಾರೆ ಸತೀಶ ಜಾರಕಿಹೊಳಿ.

ಉರಿಯುವ ಬೆಂಕಿಗೆ ತುಪ್ಪ: ಒಂದು ಕಡೆ ಶಿವಸೇನೆ ಹಾಗೂ ಎಂಇಎಸ್‌ ನಾಯಕರು ಗಡಿ ವಿವಾದ ತೆಗೆದು ಮರಾಠಿ ಭಾಷಿಕರನ್ನು ಪ್ರಚೋ ದನೆ ಮಾಡುತ್ತಿದ್ದರೆ ಇನ್ನೊಂದೆಡೆ ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ಬೆಳಗಾವಿ ಗಾಮೀಣ ಶಾಸಕಿ ಲಕ್ಷ್ಮೀ ಹೆಬ್ಟಾಳಕರ ಅವರನ್ನು ಸೋಲಿಸಲು ಮರಾಠಿಗರು ಒಂದಾಗಬೇಕೆಂದು ಹೇಳಿರುವುದು ನಾನಾ ರೀತಿಯ ವಿಶ್ಲೇಷಣೆಗೆ ಕಾರಣವಾಗಿದೆ. ರಮೇಶ ಹೇಳಿಕೆಯನ್ನೇ ಅವಕಾಶವಾದಿ ರಾಜಕಾರಣಕ್ಕೆ ಬಳಕೆ ಮಾಡಿಕೊಳ್ಳಲು ಮುಂದಾಗಿರುವ ಎಂಇಎಸ್‌ ನಾಯಕರು ಗಡಿ ಭಾಗದಲ್ಲಿ ಭಾವನಾತ್ಮಕ ವಿಷಯದ ಮೂಲಕ ಮರಾಠಿಗರನ್ನು ಒಂದು ಮಾಡುತ್ತಿದ್ದಾರೆ.

ರಾಜಕೀಯಕ್ಕಾಗಿ ರಮೇಶ “ಮರಾಠಿ ಪ್ರೀತಿ’: ವ್ಯಂಗ್ಯ
ವಿಜಯಪುರ: “ಮರಾಠರ ಪರ ಮಾತಾಡದಿದ್ದರೆ ಚುನಾವಣೆಯಲ್ಲಿ ಮಣ್ಣು ಮುಕ್ಕುವ ಭೀತಿಯಿಂದ ಮನಸ್ಸಿನಿಂದ ಅಲ್ಲದಿದ್ದರೂ ಮತಕ್ಕಾಗಿ ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಮರಾಠರ ಪರ ಮಾತನಾಡುತ್ತಾರೆ’ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ದೂರಿದರು. ಸುದ್ದಿಗಾರರ ಜತೆ ಮಾತನಾಡಿ, ರಮೇಶ ಜಾರಕಿಹೊಳಿ ಅವರ ಮರಾಠರ ಪರ ಹೇಳಿಕೆ ರಾಜಕೀಯ ಅನಿವಾರ್ಯತೆಯಿಂದ ಕೂಡಿದೆ.

ಆದರೆ, ಇತರೆಡೆಗಿಂತ ಬೆಳಗಾವಿ ರಾಜಕಾರಣವೇ ಬೇರೆ ಇದೆ ಎಂದರು. ಮಹಾರಾಷ್ಟ್ರ ರಾಜ್ಯ ಗಡಿ ಕ್ಯಾತೆ ವಿಚಾರ ವಿವಾದ ಮಾಡುವುದನ್ನು ಬಿಟ್ಟು ಅಭಿವೃದ್ಧಿಗೆ ಆದ್ಯತೆ ನೀಡಬೇಕು. ಮರಾಠರು ಬೆಳಗಾವಿ ತಮ್ಮದು ಎಂದ ಮಾತ್ರಕ್ಕೆ ಕನ್ನಡಿಗರಾದ ನಾವು ಬಿಡೋಕಾಗುತ್ತಾ? ಇನ್ನು 5 ವರ್ಷ ಮಾತ್ರವಲ್ಲ, ಯಾರೇ ಹುಟ್ಟಿದರೂ ಬೆಳಗಾವಿಯನ್ನು ಕರ್ನಾಟಕದಿಂದ ಕಿತ್ತುಕೊಳ್ಳಲು ಸಾಧ್ಯವಿಲ್ಲ. ಕನ್ನಡಿಗರೇನು ಕೈಯಲ್ಲಿ ಬಳೆ ತೊಟ್ಟುಕೊಂಡಿಲ್ಲ, ತಾಕತ್ತಿದ್ದರೆ ಬೆಳಗಾವಿಯನ್ನು ಪಡೆಯಲಿ ನೋಡೋಣ ಎಂದರು.

ಗಡಿ ವಿವಾದ ಇದುವರೆಗೆ ಜೀವಂತವಾಗಿರಲು ನಮ್ಮ ರಾಜಕಾರಣಿಗಳೇ ಕಾರಣ. ವಿವಾದ ಎದ್ದು ವಾರದ ಮೇಲಾಯಿತು. ಪ್ರತಿಭಟನೆಗಳು ನಡೆದವು. ಆದರೆ ಇವತ್ತಿನವರೆಗೂ ಜಿಲ್ಲೆಯ ಒಬ್ಬ ಶಾಸಕ ಹಾಗೂ ಸಂಸದರು ನಮ್ಮ ಪರ ದನಿ ಎತ್ತಲಿಲ್ಲ. ಮಹಾರಾಷ್ಟ್ರದ ನಿಲುವು ಖಂಡಿಸಲಿಲ್ಲ. ಗಡಿ ವಿಷಯವನ್ನು ತಮ್ಮ ರಾಜಕಾರಣಕ್ಕೆ ಬಳಸಿಕೊಂಡರು. ಇದು ಕನ್ನಡಿಗರ ದೊಡ್ಡ ದುರ್ದೈವ.
-ಗಣೇಶ ರೋಕಡೆ, ಕರವೇ ಮುಖಂಡ

ಗಡಿ ವಿಚಾರದಲ್ಲಿ ನಮ್ಮ ನಿಲುವು ಸ್ಪಷ್ಟ. ಬೆಳಗಾವಿ ಯಾವತ್ತಿದ್ದರೂ ಕರ್ನಾಟಕದ ಮುಖ್ಯಭಾಗ. ವಿವಾದದ ಹೇಳಿಕೆಯಿಂದ ಯಾವುದೂ ಬದಲಾಗುವುದಿಲ್ಲ. ಇದರಿಂದ ಜನರಿಗೆ ತೊಂದರೆ. ಗಡಿ ವಿವಾದ ಸರ್ವೋತ್ಛ ನ್ಯಾಯಾಲಯದಲ್ಲಿರುವಾಗ ಮಹಾರಾಷ್ಟ್ರ ಸಿಎಂ ಉದ್ಧವ ಠಾಕ್ರೆ ತಟಸ್ಥರಾಗಿರಬೇಕು. ಎರಡೂ ರಾಜ್ಯಗಳ ಕಡೆಯಿಂದ ಕಠಿಣ ನಿರ್ಧಾರವಾಗಬೇಕು.
-ಸತೀಶ ಜಾರಕಿಹೊಳಿ, ಕಾಂಗ್ರೆಸ್‌ ಶಾಸಕ

* ಕೇಶವ ಆದಿ

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ-131: ಮನುಷ್ಯತ್ವ ದೇಹದಲ್ಲಿಯೋ? ಆತ್ಮನಲ್ಲಿಯೋ?

Udupi: ಗೀತಾರ್ಥ ಚಿಂತನೆ-131: ಮನುಷ್ಯತ್ವ ದೇಹದಲ್ಲಿಯೋ? ಆತ್ಮನಲ್ಲಿಯೋ?

Udupi: ಅಂಬಲಪಾಡಿ ಮೇಲ್ಸೇತುವೆ ಕಾಮಗಾರಿ ಬದಲಿಲ್ಲ: ಕೋಟ

Udupi: ಅಂಬಲಪಾಡಿ ಮೇಲ್ಸೇತುವೆ ಕಾಮಗಾರಿ ಬದಲಿಲ್ಲ: ಕೋಟ

Foot ball

ಬೆಂಗಳೂರಿನಲ್ಲಿ ಭಾರತ- ಮಾಲ್ಡೀವ್ಸ್‌   ವನಿತಾ ಫುಟ್‌ಬಾಲ್‌

Congress ಸರಕಾರದಿಂದ ಗೂಂಡಾಗಳಿಗೆ ಮಣೆ: ನಳಿನ್‌ ಟೀಕೆ

Congress ಸರಕಾರದಿಂದ ಗೂಂಡಾಗಳಿಗೆ ಮಣೆ: ನಳಿನ್‌ ಟೀಕೆ

Dec.24: ಬಸ್ರೂರು “ಅಪ್ಪಣ್ಣ ಹೆಗ್ಡೆ 90′: ವಕ್ವಾಡಿಯಲ್ಲಿ ಸಾರ್ವಜನಿಕ ಸಂಭ್ರಮ

Dec.24: ಬಸ್ರೂರು “ಅಪ್ಪಣ್ಣ ಹೆಗ್ಡೆ 90′: ವಕ್ವಾಡಿಯಲ್ಲಿ ಸಾರ್ವಜನಿಕ ಸಂಭ್ರಮ

Sasthan Toll Plaza: ವಾಣಿಜ್ಯ ವಾಹನಗಳಿಗೆ ಮತ್ತೆ ಶುಲ್ಕ: ಪ್ರತಿಭಟನೆ

Sasthan Toll Plaza: ವಾಣಿಜ್ಯ ವಾಹನಗಳಿಗೆ ಮತ್ತೆ ಶುಲ್ಕ: ಪ್ರತಿಭಟನೆ

Udupi: ಭಗವಾನುವಾಚ ಪುಸ್ತಕ ಇಂದು ಲೋಕಾರ್ಪಣೆ

Udupi: ಭಗವಾನುವಾಚ ಪುಸ್ತಕ ಇಂದು ಲೋಕಾರ್ಪಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮುಮ್ತಾಜ್‌ ಅಲಿ ಆತ್ಮಹ*ತ್ಯೆ ಪ್ರಕರಣ: ಆರೋಪಿಗಳನ್ನು ಪೊಲೀಸ್‌ ವಶಕ್ಕೆ ನೀಡಲ್ಲ

High Court: ಮುಮ್ತಾಜ್‌ ಅಲಿ ಆತ್ಮಹ*ತ್ಯೆ ಪ್ರಕರಣ: ಆರೋಪಿಗಳನ್ನು ಪೊಲೀಸ್‌ ವಶಕ್ಕೆ ನೀಡಲ್ಲ

Karnataka: ಲೋಕಾಯುಕ್ತ ದಾಳಿ; ಕಂತೆ ಕಂತೆ ಹಣ ವಶಕ್ಕೆ

Karnataka: ಲೋಕಾಯುಕ್ತ ದಾಳಿ; ಕಂತೆ ಕಂತೆ ಹಣ ವಶಕ್ಕೆ

H. D. Kumaraswamy: ರಾಜ್ಯದಲ್ಲಿ ಪ್ರಜಾಪ್ರಭುತ್ವ ಕೊನೆಯುಸಿರೆಳೆಯುತ್ತಿದೆಯೇ?

H. D. Kumaraswamy: ರಾಜ್ಯದಲ್ಲಿ ಪ್ರಜಾಪ್ರಭುತ್ವ ಕೊನೆಯುಸಿರೆಳೆಯುತ್ತಿದೆಯೇ?

1-vijay

Vijaypura: ಕೋರ್ಟ್ ನಲ್ಲೆ ಕತ್ತು ಕೊ*ಯ್ದುಕೊಂಡ ಆರೋಪಿ!!

1-ct

C.T.Ravi; ಬಿಡುಗಡೆ ಬಳಿಕ ಬಿಜೆಪಿ ಕಿಡಿ ಕಿಡಿ: ನಾವೇನು ಬಳೆ ತೊಟ್ಟು ಕುಳಿತಿಲ್ಲ…!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-jyo

Asian Weightlifting: ಜೋಶ್ನಾ ನೂತನ ದಾಖಲೆ

1-bcc

U-19 ವನಿತಾ ಏಷ್ಯಾ ಕಪ್‌: ಫೈನಲ್‌ಗೆ ಭಾರತ

1-J-PP

Pro Kabaddi: ಜೈಪುರ್‌ 12ನೇ ವಿಜಯ

1-bangla

T20;ಮೂರೂ ಪಂದ್ಯ ಗೆದ್ದ ಬಾಂಗ್ಲಾ: ವಿಂಡೀಸಿಗೆ ವೈಟ್‌ವಾಶ್‌

1-pak

ODI; ತವರಲ್ಲೇ ಎಡವಿದ ದಕ್ಷಿಣ ಆಫ್ರಿಕಾ: ಸರಣಿ ಗೆದ್ದ ಪಾಕಿಸ್ಥಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.