ಕೋವಿಡ್ ನಿಯಂತ್ರಣದಲ್ಲಿ ಸಾರ್ವಜನಿಕರ ಸಾಮಾಜಿಕ ಜವಾಬ್ದಾರಿಗಳು
Team Udayavani, Jun 28, 2021, 6:45 AM IST
ಭಾರತ ವಿಶ್ವದ ಅತೀದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹೊಂದಿರುವ ದೇಶ. ಯಾವುದೇ ಒಂದು ದೇಶದ ಪ್ರಜಾಪ್ರಭುತ್ವದ ಯಶಸ್ಸು ಎನ್ನುವುದು ಪ್ರಜಾ ಪ್ರಭುತ್ವದ ಪ್ರಕ್ರಿಯೆಯಲ್ಲಿ. ಅಲ್ಲಿನ ಪ್ರಜೆಗಳು ಎಷ್ಟರ ಮಟ್ಟಿಗೆ ಪ್ರಜಾಪ್ರಭುತ್ವದ ಪ್ರಕ್ರಿಯೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ ಎನ್ನುವ ಆಧಾರದ ಮೇಲೆ ನಿಂತಿದೆ.
ಕೋವಿಡ್ -19 ಮಹಾಮಾರಿಯನ್ನು ಸಂಪೂರ್ಣ ವಾಗಿ ನಿಯಂತ್ರಿಸಬೇಕಾದರೂ ಜನರ ಪಾತ್ರ ಬಹು ಮುಖ್ಯ ವಾದುದು. ಲಸಿಕೆ ಪಡೆಯುವುದು ಮತ್ತು ಇನ್ನೊಬ್ಬರು ಪಡೆದುಕೊಳ್ಳುವಂತೆ ಮಾಡುವುದು ಪ್ರತಿಯೊಬ್ಬ ನಾಗರಿಕರ ಹಕ್ಕು ಹೇಗೋ ಹಾಗೆಯೇ ಕರ್ತವ್ಯ ಕೂಡ. ಜನರು ಭಾಗಿಯಾಗುವ ಈ ಪ್ರಕ್ರಿಯೆಗೆ ಸೋಶಿಯಲ್ ವ್ಯಾಕ್ಸಿನೇಶನ್ ಎಂದು ಹೇಳಬಹುದಾಗಿದೆ. ಈ ಬಗ್ಗೆ ವೈಜ್ಞಾನಿಕವಾದ ಮತ್ತು ವೈದ್ಯಕೀಯವಾಗಿ ಅಂಗೀಕೃತ ಮಾಹಿತಿಯನ್ನು ಮಾತ್ರ ಜನರು ನಂಬಬೇಕು. ವೈಜ್ಞಾನಿಕ ಮಾಹಿತಿಯು ಸಂಶೋಧನಾ ಧಾರಿತ ಮಾಹಿತಿಯಾಗಿದ್ದು, ಸತ್ಯದ ಮೇಲೆ ನಿಂತಿರುತ್ತದೆ. ಸತ್ಯ ಸಮಸ್ಯೆಯ ಮೂಲವನ್ನು ಕಂಡುಹಿಡಿದು ಸಮಸ್ಯೆಗೆ ಪರಿಹಾರವನ್ನು ಕಂಡು ಹಿಡಿಯಲು ಸಹಕಾರಿಯಾಗಿದೆ.
ಸರಕಾರ ಕೋವಿಡ್-19 ನಿಯಂತ್ರಣಕ್ಕೆ ಹೊರಡಿ ಸಿರುವ ಮಾರ್ಗಸೂಚಿಯನ್ನು ಚಾಚೂ ತಪ್ಪದೇ ಪಾಲಿಸಬೇಕಾಗಿರುವುದು ಪ್ರತಿಯೊಬ್ಬ ಪ್ರಜ್ಞಾವಂತ ನಾಗರಿಕರ ಕರ್ತವ್ಯ ಮತ್ತು ಜವಾಬ್ದಾರಿ. ಕೋವಿಡ್-19 ಯಾವಾಗ ಕೊನೆಗೊಳ್ಳುತ್ತದೆ ಎನ್ನುವುದರ ಬಗ್ಗೆ ಯಾರೊಬ್ಬರಲ್ಲಿಯೂ ಸಹ ನಿಖರವಾದ ಮಾಹಿತಿ ಇಲ್ಲ. ಆದರೆ ಕೋವಿಡ್-19 ನಿಯಂತ್ರಣಕ್ಕೆ ಪಾಲಿಸಬೇಕಾದ ನಿಯಮಗಳನ್ನು ಪಾಲಿಸಿದಲ್ಲಿ ಕೋವಿಡ್-19 ನಿಯಂತ್ರಿಸಲು ಸಾಧ್ಯವಾಗಲಿದೆ.
ಸಾಮಾಜಿಕ ಜವಾಬ್ದಾರಿಯ ಮೂಲಕ ಬದಲಾವಣೆ ಸಾಧ್ಯ. ಲಸಿಕೆಯ ಬಗ್ಗೆ ನಿಖರವಾದ ಮಾಹಿತಿ ಹಾಗೂ ಲಸಿಕೆ ಪಡೆಯಬೇಕಾದ ಸಮಯ, ಸ್ಥಳದ ಬಗ್ಗೆ ಅರಿವು ಮತ್ತು ಲಸಿಕೆಯ ಪ್ರಯೋಜನಗಳ ಬಗ್ಗೆ ಸರಿಯಾದ ಮಾಹಿತಿ ಪಡೆದಲ್ಲಿ ಕೋವಿಡ್-19 ನಿಯಂತ್ರಣ ಹಾಗೂ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಬಹುದು.
ಆರೋಗ್ಯವಂತ ಸಮಾಜದ ನಿರ್ಮಾಣ ನಮ್ಮೆಲ್ಲರ ಹೊಣೆ. ಸರಕಾರದ ಯೋಜನೆಗಳನ್ನು, ನಿಯಮಗಳನ್ನು ಜನರು ಗೌರವಿಸುವುದರ ಜತೆಗೆ ಪಾಲಿಸಿ ಅನುಷ್ಠಾನಗೊಳಿಸಿದಲ್ಲಿ ಜನ ಸಮುದಾಯ ಸರಕಾರ ನಿರೀಕ್ಷಿಸಿದ ಮಟ್ಟದಲ್ಲಿ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯವಾಗುತ್ತದೆ. ಕೊರೊನಾ ಅಭಿವೃದ್ಧಿ ಹೊಂದಿದ ಮತ್ತು ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳ ಆರ್ಥಿಕ ವ್ಯವಸ್ಥೆಯ ಮೇಲೆ ಪರಿಣಾಮವನ್ನು ಬೀರುವುದರ ಜತೆಗೆ ಎಲ್ಲ ದೇಶಗಳ ಪ್ರತಿಯೊಬ್ಬ ಪ್ರಜೆಗಳಿಗೆ ಬದುಕಿನ ಹೊಸ ಪಾಠವನ್ನು ಕಲಿಸಿದೆ. ಮೊದಲನೆಯ ಪಾಠ ವೈಯಕ್ತಿಕ ಸ್ವತ್ಛತೆಯ ಜೊತೆಗೆ ಆರೋಗ್ಯ ಶಿಕ್ಷಣ.
ಕೊರೊನಾ ಸಾಂಕ್ರಾಮಿಕ ರೋಗ ದೇಶಕ್ಕೆ ಕಾಲಿಟ್ಟ ದಿನದಿಂದ ಬದಲಾದ ಬದುಕಿನ ಕಲಿಕೆಯೆಂದರೆ 20 ಸೆಕೆಂ ಡ್‌ಗಳ ಕಾಲ ಸೋಪ್‌ನಿಂದ ಚೆನ್ನಾಗಿ ನೀರಿನಲ್ಲಿ ಕೈತೊ ಳೆದು ಕೈಯನ್ನು ಸ್ವತ್ಛಗೊಳಿಸುವುದು. ತಿಂಡಿ ಅಥವಾ ಊಟಕ್ಕಿಂತ ಮುಂಚೆ, ಹೊರಗಡೆಯಿಂದ ಮನೆ ಒಳಗಡೆ ಬಂದಾಗ ನೀರಿನಲ್ಲಿ ಕೈತೊಳೆದು ಸ್ವತ್ಛವಾಗಿರುವಂತದ್ದು ಮೂಲಭೂತ ಆರೋಗ್ಯ ಶಿಕ್ಷಣವಾಗಿರುತ್ತದೆ. ಕೊರೊನಾ ಕಲಿಸಿದ ಇನ್ನೊಂದು ಬದುಕಿನ ಪಾಠ ಕಡ್ಡಾಯವಾಗಿ ಮಾಸ್ಕ್ ಅನ್ನು ಧರಿಸಿ ವೈಯಕ್ತಿಕ ಸ್ವತ್ಛತೆಯ ಜತೆಗೆ ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವುದರಲ್ಲಿ ದೇಶದ ಪ್ರತಿಯೊಬ್ಬ ಪ್ರಜೆಯ ಪಾತ್ರ ಪ್ರಮುಖವಾಗಿದೆ ಎನ್ನುವುದನ್ನು ಜನರಿಗೆ ಮನವರಿಕೆ ಮಾಡಿಕೊಟ್ಟಿರುತ್ತದೆ. ಮಾಸ್ಕ್ ಧರಿಸುವುದರ ಮೂಲಕ ಹೇಗೆ ವೈಯಕ್ತಿಕ ಮತ್ತು ಸಮಾಜದ ಆರೋಗ್ಯವನ್ನು ಕಾಪಾಡಬಹುದು ಎನ್ನುವ ಆರೋಗ್ಯ ಶಿಕ್ಷಣವನ್ನು ಈ ಸಂದರ್ಭದಲ್ಲಿ ನಾವೆಲ್ಲರೂ ತಿಳಿದುಕೊಂಡಿರುತ್ತೇವೆ.
ಪ್ರತಿಯೊಬ್ಬ ಪ್ರಜೆಯು ವೈಯಕ್ತಿಕ ಜವಾಬ್ದಾರಿಯ ಜತೆಗೆ ಸಾಮಾಜಿಕ ಜವಾಬ್ದಾರಿ ಯನ್ನು ಮೈಗೂಡಿ ಸಿಕೊಂಡಲ್ಲಿ ಸ್ವಾಸ್ಥ್ಯ ಸಮಾಜ ನಿರ್ಮಾಣ ಸಾಧ್ಯ.
– ಡಾ| ಬಿ. ವಸಂತ ಶೆಟ್ಟಿ, ಉಪ ಕುಲಸಚಿವರು, ರಾಜೀವ್ ಗಾಂಧಿ ಆರೋಗ್ಯ ವಿವಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra; ನಮ್ಮ ಮೈತ್ರಿ ಕೂಟ ಗೆದ್ದು ಮಹಾರಾಷ್ಟ್ರ ಉಳಿಸಲಿದೆ: ಡಿ.ಕೆ. ಶಿವಕುಮಾರ್
Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ
Maharashtra Election: ಬೂತ್ ಗೆಲ್ಲುವತ್ತ ಗಮನ ಹರಿಸಿ: ಕಾರ್ಯಕರ್ತರಿಗೆ ಮೋದಿ ಕರೆ
Tragedy: ಓವರ್ ಟೇಕ್ ಮಾಡಲು ಹೋಗಿ ಭೀಕರ ಅಪಘಾತ… ನವ ವಧು-ವರ ಸೇರಿ 7 ಮಂದಿ ಮೃತ್ಯು
Jamia Millia Islamia: ಇಸ್ಲಾಂಗೆ ಮತಾಂತರಗೊಳ್ಳಿ ಅಥವಾ ಅತ್ಯಾಚಾರಕ್ಕೆ ಒಳಗಾಗಿ: ಭಾರಿ ಆರೋಪ
MUST WATCH
ಹೊಸ ಸೇರ್ಪಡೆ
Maharashtra; ನಮ್ಮ ಮೈತ್ರಿ ಕೂಟ ಗೆದ್ದು ಮಹಾರಾಷ್ಟ್ರ ಉಳಿಸಲಿದೆ: ಡಿ.ಕೆ. ಶಿವಕುಮಾರ್
Mangaluru: ಕುಮಾರಸ್ವಾಮಿ ಯಾವಾಗ, ಹೇಗೆ ಬೇಕಾದರೂ ಟರ್ನ್ ಆಗುತ್ತಾರೆ: ಜಮೀರ್ ಅಹಮದ್
Kollywood: ಬಹಿರಂಗ ಪತ್ರ ಬರೆದು ಧನುಷ್ ಮೇಲೆ ರೇಗಾಡಿದ ನಟಿ ನಯನತಾರಾ; ಆಗಿರುವುದೇನು?
Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ
Actor Darshan ವಿರುದ್ದ ಸುಪ್ರೀಂನಲ್ಲಿ ಮೇಲ್ಮನವಿ: ಬೆಂಗ್ಳೂರು ಕಮೀಷನರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.