ಭಾರತದಲ್ಲಿ ಸದ್ಯ ಯಾವುದೇ ಕ್ರೀಡಾಕೂಟಗಳಿಲ್ಲ; ರಿಜಿಜು
Team Udayavani, May 24, 2020, 5:45 AM IST
ಹೊಸದಿಲ್ಲಿ: ಸದ್ಯ ಭಾರತ ಯಾವುದೇ ಅಂತಾರಾಷ್ಟ್ರೀಯ ಕ್ರೀಡಾಕೂಟಗಳನ್ನು ನಡೆಸುವುದಿಲ್ಲ ಎಂದು ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಶನಿವಾರ ಸ್ಪಷ್ಟಪಡಿಸಿದ್ದಾರೆ. ಜತೆಗೆ ಕ್ರೀಡಾಭಿಮಾನಿಗಳು ಖಾಲಿ ಸ್ಟೇಡಿಯಂನಲ್ಲಿ ನಡೆಯುವ ಪಂದ್ಯಗಳಿಗೆ ಹೊಂದಿಕೊಳ್ಳಬೇಕಿದೆ ಎಂದೂ ಅವರು ಹೇಳಿದರು.
“ನಮ್ಮ ಮುಂದಿರುವ ಸದ್ಯದ ಗುರಿಯೆಂದರೆ ಕೋವಿಡ್-19 ವಿರುದ್ಧ ಹೋರಾಟ ನಡೆಸಿ ಇದನ್ನು ನಿರ್ಮೂಲನೆ ಮಾಡುವುದಾಗಿದೆ. ಕ್ರೀಡಾ ಜಗತ್ತು ಸಹಜ ಸ್ಥಿತಿಗೆ ಮರಳಬೇಕಿದೆ. ಈಗಿನ ಸ್ಥಿತಿಯಲ್ಲಿ ಭಾರತದ ಆತಿಥ್ಯದ ಕ್ರೀಡಾಕೂಟಗಳ ದಿನಾಂಕವನ್ನು ಸೂಚಿಸುವುದು ಅಸಾಧ್ಯ. ಸದ್ಯ ಭಾರತದಲ್ಲಿ ಯಾವುದೇ ಅಂತಾ ರಾಷ್ಟ್ರೀಯ ಕ್ರೀಡಾಕೂಟ ನಡೆಯುವ ಸಾಧ್ಯತೆ ಇಲ್ಲ’ ಎಂದು ಕಿರಣ್ ರಿಜಿಜು ಹೇಳಿದರು.
“ಭವಿಷ್ಯದಲ್ಲಿ ವೀಕ್ಷಕರ ಗೈರಲ್ಲಿ ಕ್ರೀಡಾ ಕೂಟಗಳು ನಡೆಯುವ ಸಾಧ್ಯತೆ ಹೆಚ್ಚಿದೆ. ಇದಕ್ಕೆ ಕ್ರೀಡಾಭಿಮಾನಿಗಳು ಹೊಂದಿ ಕೊಳ್ಳಲು ಮಾನಸಿಕವಾಗಿ ಸಿದ್ಧರಾಗ ಬೇಕಿದೆ’ ಎಂದೂ ರಿಜಿಜು ಹೇಳಿದರು.
ಐಪಿಎಲ್ ಭವಿಷ್ಯವೇನು?
ಈ ಸಂದರ್ಭದಲ್ಲಿ 13ನೇ ಐಪಿಎಲ್ ಪಂದ್ಯಾವಳಿಯ ಬಗ್ಗೆ ಪ್ರತಿಕ್ರಿಯಿಸಿದ ಕ್ರೀಡಾ ಸಚಿವರು, “ಅದು ಐಪಿಎಲ್ ಇರಬಹುದು ಅಥವಾ ಇನ್ಯಾವುದೇ ಕ್ರೀಡಾಕೂಟ ಇರಬಹುದು, ಇಲ್ಲಿ ಸರಕಾರದ ನಿರ್ಧಾರವೇ ಅಂತಿಮ. ಸರಕಾರ ಪರಿಸ್ಥಿತಿಯನ್ನು ಗಮನಿಸಿ ತನ್ನ ನಿರ್ಧಾರವನ್ನು ಪ್ರಕಟಿಸಲಿದೆ. ನಾವು ಕ್ರೀಡಾಕೂಟ ನಡೆಸಲೇಬೇಕೆಂಬ ಕಾರಣಕ್ಕಾಗಿ ಕ್ರೀಡಾಳುಗಳ ಆರೋಗ್ಯ ದೊಂದಿಗೆ ಚೆಲ್ಲಾಟವಾಡುವುದಿಲ್ಲ. ಆರೋಗ್ಯ ಮತ್ತು ಸುರಕ್ಷತೆಗೆ ನಮ್ಮ ಮೊದಲ ಆದ್ಯತೆ. ಇದರ ಜತೆಗೇ ಕೇಂದ್ರ ಗೃಹ ಸಚಿವಾಲಯ ಮತ್ತು ಸ್ಥಳೀಯ ಆಡಳಿತ ಮಂಡಳಿ ರೂಪಿಸಿದ ಮಾರ್ಗದರ್ಶಿ ಸೂತ್ರಗಳನ್ನೂ ಗಂಭೀರವಾಗಿ ಪರಿಗಣಿಸ ಬೇಕಿದೆ’ ಎಂದರು.ದೇಶದಲ್ಲಿ ಕ್ರೀಡಾ ಚಟುವಟಿಕೆಯನ್ನು ಮುಂದುವರಿಸಲು ಸಾಯ್ ಕೆಲವು ನಿಯಮಗಳನ್ನು ರೂಪಿಸಿದ ಬೆನ್ನಲ್ಲೇ ಸಚಿವ ಕಿರಣ್ ರಿಜಿಜು ಈ ಹೇಳಿಕೆ ನೀಡಿರುವುದು ಉಲ್ಲೇಖನೀಯ.
ಒಲಿಂಪಿಕ್ಸ್ ನಡೆಯುವ ವಿಶ್ವಾಸ
ಕೋವಿಡ್-19 ಕಾರಣದಿಂದ 2021ಕ್ಕೆ ಮುಂದೂಡಲ್ಪಟ್ಟ ಟೋಕಿಯೊ ಒಲಿಂ ಪಿಕ್ಸ್ ಕ್ರೀಡಾಕೂಟಕ್ಕೆ ಸಂಬಂಧಿಸಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕಿರಣ್ ರಿಜಿಜು, “ಇದು ಮುಂದಿನ ವರ್ಷ ನಡೆಯುವ ವಿಶ್ವಾಸವಿದೆ. ಇದಕ್ಕಾಗಿ ಭಾರತೀಯರ ತಯಾರಿ ಉತ್ತಮ ಮಟ್ಟದಲ್ಲಿದೆ. ಒಲಿಂಪಿಕ್ಸ್ ಇತಿಹಾಸದಲ್ಲೇ ನಮ್ಮವರು ಇಷ್ಟೊಂದು ದೊಡ್ಡ ಮಟ್ಟದ ಸಿದ್ಧತೆ ನಡೆಸಿದ್ದಿಲ್ಲ. ಆದರೆ ಟಾಪ್-10 ಅಥವಾ ಟಾಪ್-5 ಸ್ಥಾನದ ಗುರಿಯಲ್ಲಿ ನಾವಿಲ್ಲ. 2028ರಲ್ಲಿ ಭಾರತ ಪದಕಪಟ್ಟಿಯಲ್ಲಿ ಅಗ್ರ ಹತ್ತರಲ್ಲಿರಬೇಕು ಎಂಬುದು ನಮ್ಮ ಪ್ರಮುಖ ಗುರಿ…’ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Australian Open: ಹಿಂದೆ ಸರಿದ ಸಿಮೋನಾ ಹಾಲೆಪ್
South Africa vs Pakistan 2nd Test: ಬಾಶ್ ದಾಖಲೆ: ದ. ಆಫ್ರಿಕಾ ಮುನ್ನಡೆ
Melbourne Cricket Club; ಸಚಿನ್ ತೆಂಡುಲ್ಕರ್‌ಗೆ ಗೌರವ ಸದಸ್ಯತ್ವ
Boxing: ವಿಶ್ವ ಬಾಕ್ಸಿಂಗ್ ಸಂಸ್ಥೆಯಿಂದ ಮಧ್ಯಂತರ ಏಷ್ಯನ್ ಮಂಡಳಿ
INDWvWIW: ದೀಪ್ತಿ ಶರ್ಮಾ ಆಲ್ ರೌಂಡ್ ಶೋ; ಸರಣಿ ಕ್ಲೀನ್‌ಸ್ವೀಪ್ ಮಾಡಿದ ವನಿತೆಯರು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.