ರಷ್ಯಾ ತೊರೆಯುತ್ತಿವೆ ಹಲವು ಕಂಪೆನಿಗಳು
Team Udayavani, Mar 7, 2022, 8:05 AM IST
ರಷ್ಯಾವು ಉಕ್ರೇನ್ ವಿರುದ್ಧ ನಡೆಸುತ್ತಿರುವ ದಾಳಿ ನಿಯಂತ್ರಣ ಇಲ್ಲದೆ ಮುಂದುವರಿದಿದೆ. ಜತೆಗೆ
ಅಮೆರಿಕ ಮತ್ತು ಇತರ ರಾಷ್ಟ್ರಗಳು ವಿಧಿಸಿರುವ ದಿಗ್ಬಂಧನದಿಂದಾಗಿ ಹಲವು ಕ್ಷೇತ್ರಗಳ ಕಂಪೆನಿಗಳು ಆ ದೇಶ ತೊರೆದಿವೆ ಮತ್ತು ಆ ನಿಟ್ಟಿನಲ್ಲಿ ಯೋಚನೆ ಮಾಡಿವೆ. ಆ್ಯಪಲ್ ಮತ್ತು ಇಕಿಯಾ ಕಂಪೆನಿಗಳು ಈಗಾಗಲೇ ತಮ್ಮ ವಹಿವಾಟು ಸ್ಥಗಿತಗೊಳಿಸಿವೆ.
ತೈಲ ಮತ್ತು
ನೈಸರ್ಗಿಕ ಅನಿಲ
ಬ್ರಿಟಿಷ್ ಪೆಟ್ರೋಲಿಯಂ ರಷ್ಯಾ ತೊರೆದ ಮೊದಲ ಕಂಪೆನಿ. ಫೆ.27ರಂದು ಘೋಷಿಸಿಕೊಂಡಿದ್ದ ಪ್ರಕಾರ ರಷ್ಯಾದ ಇಂಧನ ಕಂಪೆನಿ ರೋಸ್ನೆಫ್ಟ್ ನಲ್ಲಿರುವ ಶೇ.19.75 ಪಾಲು ಮಾರುವ ನಿರ್ಧಾರ ಮಾಡಿದೆ. ಶೆಲ್ ಕೂಡ ಗಾಜೊರ್ಮ್ನ ಸಹಭಾಗಿತ್ವ ತ್ಯಜಿಸಿದೆ. ಇದು ಜರ್ಮನಿ-ರಷ್ಯಾ ನಾರ್ಡ್ ಸ್ಟ್ರೀಮ್ 2ನೇ ಆವೃತ್ತಿಯ ಅನಿಲ ಪೈಪ್‌ಲೈನ್‌ನಲ್ಲಿ ತೊಡಗಿಸಿಕೊಂಡಿದೆ. ಅಮೆರಿಕದ ಎಕ್ಸಾನ್ ಮೊಬಿಲ್ ಕೂಡ ದ್ವೀಪದಲ್ಲಿ ನಡೆಸುವ ತೈಲ ಮತ್ತು ಅನಿಲ ಸಂಶೋಧನೆಯಿಂದ ದೂರ ಉಳಿಯಲಿದೆ.
ಹಣಕಾಸು ಸೇವೆಗಳು
ವೀಸಾ, ಮಾಸ್ಟರ್ ಕಾರ್ಡ್ ರಷ್ಯಾದ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ವಹಿವಾಟಿನ ಶೇ.90 ಅಂಶವನ್ನು ಹೊಂದಿವೆ. ದೇಶದ ಕೆಲವೊಂದು ಬ್ಯಾಂಕುಗಳಿಗೆ ಅಂತಾರಾಷ್ಟ್ರೀಯ ನಿಷೇಧ ಹೇರಿದ ಬಳಿಕ ಅವುಗಳಿಗೆ ಸಂಬಂಧಿಸಿದ ವಹಿವಾಟಿನಿಂದ ವೀಸಾ, ಮಾಸ್ಟರ್ ಹಿಂದೆ ಸರಿದಿವೆ.
ಗ್ರಾಹಕ ಉಪಯೋಗಿ, ಅಟೋಮೊಬೈಲ್
-ಎಲ್ಲ ಉತ್ಪನ್ನಗಳ ಮಾರಾಟವನ್ನು ರಷಾದಲ್ಲಿ ನಡೆ ಸುವುದಿಲ್ಲ ಎಂದು ಆ್ಯಪಲ್ ಈಗಾಗಲೇ ಘೋಷಣೆ ಮಾಡಿದೆ. ಆ್ಯಪಲ್ ಸ್ಟೋರ್‌ನಿಂದ ರಷ್ಯಾ ಟುಡೇ, ಸ್ಪುಟ್ನಿಕ್ ನ್ಯೂಸ್ ವೆಬ್‌ಸೈಟ್ ಅನ್ನು ತೆಗೆದುಹಾಕಿದೆ.
-ಅಮೆರಿಕದ ಫೋರ್ಡ್, ಜರ್ಮನಿಯ ವೋಕ್ಸ್ ವ್ಯಾಗನ್ ಮತ್ತು ಬಿಎಂಡಬ್ಲ್ಯೂ , ಜಪಾನ್‌ನ ಹೋಂಡಾ ಕಂಪೆನಿಗಳು ರಷ್ಯಾದಿಂದ ವಹಿವಾಟು ನಡೆಸುವುದರಿಂದ ದೂರ ಇರಲು ತೀರ್ಮಾನಿಸಿವೆ.
-ಜಗತ್ತಿನ ಅತಿದೊಡ್ಡ ಪೀಠೊಪಕರಣ ಉತ್ಪಾದನಾ ಕಂಪೆನಿ ಇಕ್ಯಾ (ಐಓಉಅ) ರಷ್ಯಾದಲ್ಲಿ ರುವ ಎಲ್ಲ ಮಳಿಗೆಗಳನ್ನು ಮುಚ್ಚಲು ನಿರ್ಧರಿಸಿದೆ.
ನಾಗರಿಕ ವಿಮಾನಯಾನ
ಅಮೆರಿಕದ ಬೋಯಿಂಗ್ ಕಂಪೆನಿ ರಷ್ಯಾಕ್ಕೆ ವಿಮಾನ ಬಿಡಿಭಾಗ ಗಳನ್ನು ಮಾರಾಟ ಮಾಡುವ ಪ್ರಸ್ತಾವನೆಯಿಂದ ಹಿಂದೆ ಸರಿದಿದೆ. ಜತೆಗೆ ವಿಮಾನಗಳ ನಿರ್ವಹಣೆ ಮಾಡುವುದಿಲ್ಲ ಎಂದಿದೆ. ರಷ್ಯಾದಲ್ಲಿ ಬೋಯಿಂಗ್ ಕಂಪೆನಿಯ ವಿಮಾನಗಳೇ ಹೆಚ್ಚು ಇವೆ.
ಮನರಂಜನೆ
ದ ವಾಲ್ಟ್ ಡಿಸ್ನಿ ಕಂಪೆನಿ ಕೂಡ ಚಿತ್ರಮಂದಿರಗಳಲ್ಲಿ ಕಂಪೆನಿ ನಿರ್ಮಾಣದ ಸಿನೆಮಾಗಳನ್ನು ಬಿಡುಗಡೆ ಮಾಡದಿರಲು ಮುಂದಾಗಿದೆ. ವಾರ್ನರ್ ಸ್ಟುಡಿಯೋ, ನೆಟ್‌ಫ್ಲಿಕ್ಸ್ ಕಂಪೆನಿಗಳೂ ತಮ್ಮ ತಮ್ಮ ವಹಿವಾಟು ನಿಲ್ಲಿಸಲು ನಿರ್ಧಾರ ಮಾಡಿವೆ.
ಅಮೆರಿಕನ್ ಎಕ್ಸ್‌ಪ್ರೆಸ್ ಕಾರ್ಡ್ ಕಂಪೆನಿಯ ವಹಿವಾಟು ಸೀಮಿತ ವ್ಯಾಪ್ತಿಯಲ್ಲಿದ್ದರೂ ಅದೂ ಪುತಿನ್ ದೇಶದಿಂದ ವಾಪಸಾಗಲು ಮುಂದಾಗಿದೆ.
ವಿತ್ತೀಯ ಸಲಹಾ ಸಂಸ್ಥೆ ಕೂಡ ರಷ್ಯಾದ ಹಲವು ಹಣಕಾಸು ಸಂಸ್ಥೆಗಳಿಂದ ಬೇರ್ಪಡಲು ನಿರ್ಧರಿಸಿದೆ. ದ ಬಿಗ್ ಫೋರ್ ಅಕೌಂಟೆಂಟ್ಸ್, ಡೆಲಾಯ್, ಅರ್ನೆಸ್ಟ್ ಆ್ಯಂಡ್ ಯಂಗ್ , ಕೆಪಿಎಂಜಿ ಮತ್ತು ಪಿಡಬ್ಲ್ಯೂ ಸಿ ಸದ್ಯ ಕಾರ್ಯನಿರ್ವಹಿಸುತ್ತಿವೆ. ಈ ಎಲ್ಲ ಕಂಪೆನಿಗಳೂ ಉಕ್ರೇನ್ ಮೇಲೆ ರಷ್ಯಾ ದಾಳಿ ಖಂಡಿಸಿ ಹೇಳಿಕೆ ಬಿಡುಗಡೆ ಮಾಡಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
America: ಬೋಯಿಂಗ್ ಸಂಸ್ಥೆಯ 17,000 ಉದ್ಯೋಗಿಗಳು ಶೀಘ್ರವೇ ವಜಾ
Vivek Ramaswamy: ವಿವೇಕ್‌ಗೆ ಟ್ರಂಪ್ ಸರಕಾರದ ಕಾರ್ಯಕ್ಷಮತೆ ಇಲಾಖೆ ಹೊಣೆ
MUST WATCH
ಹೊಸ ಸೇರ್ಪಡೆ
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
Daily Horoscope: ಉದ್ಯೋಗಾಸಕ್ತರಿಗೆ ಹೊಸ ಅವಕಾಶಗಳು ಗೋಚರ, ಸ್ವರ್ಣೋದ್ಯಮಕ್ಕೆ ಲಾಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.