ದೃಢ ನಿರ್ಧಾರ ಕೈಗೊಳ್ಳುವ ಮುನ್ನ ಯೋಚಿಸಿ
ದರೆ ಎಷ್ಟೋ ಸಂದರ್ಭದಲ್ಲಿ ನಾವೇ ಹಾಸಿಗೆಗಿಂತ ಹೆಚ್ಚು ಉದ್ದಕ್ಕೆ ಕಾಲು ಚಾಚುತ್ತೇವೆ.
Team Udayavani, Jul 24, 2021, 12:28 PM IST
ಕಳೆದ ವರ್ಷವಷ್ಟೇ ಮಹಾನಗರದಲ್ಲಿ ಒಂದು ಮನೆ ಖರೀದಿಸಿದ ಗೆಳತಿ ಈ ಬಾರಿ ಮತ್ತೂಂದು ಮನೆಯನ್ನು ಖರೀದಿಸಿದ್ದಳು. ಇದು ಸ್ವಲ್ಪ ಬೇಸರ ತರಿಸಿದರೂ ತೋರಗೊಡಲಿಲ್ಲ ರೇಶ್ಮಾ. ಅನಂತರ ಯೋಚಿಸಿದ ಅವಳು, ಅವರ ಹಣದಲ್ಲಿ ಅವರು ಮನೆ ಖರೀದಿಸಿದರೆ ನನಗ್ಯಾಕೆ ಬೇಸರವಾಗಬೇಕು.
ಇದನ್ನೂ ಓದಿ:ಆಲಮಟ್ಟಿ ಜಲಾಶಯದ ಒಳ ಹರಿವು ಹೆಚ್ಚಳ : ಕೃಷ್ಣಾ ನದಿಗೆ 3.50 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ
ನಾವಿರುವ ಬಾಡಿಗೆ ಮನೆಯಲ್ಲಿ ನೆಮ್ಮದಿಯಾಗಿದ್ದೇವೆ. ಈ ನಡುವೆ ಸಾಲಸೋಲ ಮಾಡಿ ಮನೆ ಖರೀದಿಸುವ ಆಸೆ ನನಗ್ಯಾಕೆ? ಎಂದುಕೊಂಡರೂ ಪದೇಪದೇ ಅದೇ ನೆನಪಾಗುತ್ತಿತ್ತು. ಇದನ್ನು ಗಂಡನ ಬಳಿ ಹೇಳಿ ನಾವು ಪುಟ್ಟದೊಂದು ಮನೆ ಖರೀದಿಸೋಣ ಎಂದು ಬಿಟ್ಟಳು. ಸರಿ ಎಂದು ಆತ ಒಪ್ಪಿಕೊಂಡರೂ ಅವರ ಬಜೆಟ್‌ಗೆ ಹೊಂದಿಕೊಳ್ಳುವ ಮನೆ ಸಿಗಬೇಕಲ್ಲ. ಕೆಲಕಾಲ ಒಂದಷ್ಟು ಮನೆಗಳನ್ನು ನೋಡಿದರೂ ಮತ್ತೆ ಸುಮ್ಮನಾದರು.
ನೆಮ್ಮದಿಯ ಜೀವನ ನಮ್ಮದಾಗಿದ್ದರೂ ಇನ್ನೊಬ್ಬರು ಮಾಡುವ ಕೆಲಸ ಕಾರ್ಯಗಳು ನಮ್ಮ ಬದುಕಿನ ಮೇಲೂ ಪರಿಣಾಮ ಬೀರುತ್ತದೆ. ಆದರೆ ನಾವು ಅದನ್ನು ಹೊರ ಜಗತ್ತಿಗೆ ತೋರ್ಪಡಿಸುವುದಿಲ್ಲ. ಆದರೂ ಒಳಗೊಳಗೆ ಅಂತರ್ಯುದ್ಧ ಮಾಡಿಕೊಂಡಿರುತ್ತೇವೆ.
ಜೀವನ ಎಂದರೆ ಹೀಗೆ. ಯಾರೋ ಮಾಡಿದ್ದು ನಮ್ಮದೂ ಆಗಬೇಕು ಎನ್ನುತ್ತೇವೆ. ನಮ್ಮದಾಗಿರುವುದನ್ನು ಇನ್ನೊಬ್ಬರು ಬಯಸುತ್ತಿರುತ್ತಾರೆ. ಇದು ಮನುಷ್ಯನ ಸಹಜ ಗುಣ. ಆದರೆ ಇನ್ನೊಬ್ಬರಂತೆ ನಾವು ಬದುಕುವುದರಲ್ಲಿ ಏನರ್ಥವಿದೆ. ಜೀವನದಲ್ಲಿ ಹಾಸಿಗೆ ಇದ್ದಷ್ಟೇ ಕಾಲು ಚಾಚಬೇಕು ಎನ್ನುತ್ತೇವೆ. ಆದರೆ ಎಷ್ಟೋ ಸಂದರ್ಭದಲ್ಲಿ ನಾವೇ ಹಾಸಿಗೆಗಿಂತ ಹೆಚ್ಚು ಉದ್ದಕ್ಕೆ ಕಾಲು ಚಾಚುತ್ತೇವೆ. ಪರಿಣಾಮ ಭವಿಷ್ಯದಲ್ಲೊಂದು ದಿನ ಸಂಕಷ್ಟಕ್ಕೆ ಸಿಲುಕಿಕೊಳ್ಳಲೇಬೇಕು.
ಮಹಾನಗರದಲ್ಲಿ ಜೀವನ ಸಾಗಿಸುವುದು ಸುಲಭವಲ್ಲ. ಒಂದನ್ನು ಪಡೆದುಕೊಳ್ಳಬೇಕಾದರೆ ಇನ್ನೊಂದನ್ನು ಕಳೆದುಕೊಳ್ಳಲೇಬೇಕು. ಹಾಗಿರುವಾಗ ಯಾವುದು ನಮಗೆ ಹೆಚ್ಚು ಅಗತ್ಯವೋ ಎಂಬುದುನ್ನು ನೋಡಿಕೊಳ್ಳುವುದು ಕೂಡ ಮುಖ್ಯವಾಗುತ್ತದೆ. ಹೀಗಿರುವಾಗ ಇಲ್ಲಸಲ್ಲದ ಆಸೆಗಳನ್ನು ಮನದಲ್ಲಿ ಹುದುಗಿಡಬೇಕು ಎಂದೇನಿಲ್ಲ. ನಮಗೆ ಯಾವುದು ಸಾಧ್ಯವೋ ಅದನ್ನು ಈಡೇರಿಸಿಕೊಳ್ಳಬಹುದು. ದೊಡ್ಡ ಆಸೆ ಅಲ್ಲದಿದ್ದರೂ ಚಿಕ್ಕಪುಟ್ಟ ಆಸೆಗಳನ್ನು ಈಡೇರಿಸಿಕೊಂಡು ಕುಟುಂಬ ಸಮೇತ ಎಲ್ಲರೂ ಖುಷಿ ಪಡಬಹುದು.
ನಿಜವಾದ ಖುಷಿ ಇರೋದು ದೊಡ್ಡದನ್ನು ಪಡೆದರೆ ಮಾತ್ರವಲ್ಲ ಚಿಕ್ಕಪುಟ್ಟ ಆಸೆಗಳನ್ನು ಈಡೇರಿಸಿದರೂ ಅದರಲ್ಲಿ ಹೆಚ್ಚು ಖುಷಿ ಸಿಗುತ್ತದೆ. ದೊಡ್ಡದ್ದನ್ನು ಪಡೆದಾಗ ಕೇವಲ ಖುಷಿ ಮಾತ್ರ ನಮ್ಮದಾಗುವುದಿಲ್ಲ. ಅದರೊಂದಿಗೆ ಸಾಕಷ್ಟು ಜವಾಬ್ದಾರಿಯೂ ನಮ್ಮನ್ನು ಅರಸಿಕೊಂಡು ಬರುವುದು. ಹೀಗಾಗಿ ಎಲ್ಲದಕ್ಕೂ ಸಜ್ಜಾಗುವ ಮೊದಲು ನಮಗೆ ಅದರ ಅಗತ್ಯವೇನಿದೆ ಎಂಬುದನ್ನೊಮ್ಮೆ ಪರಿಶೀಲಿಸಬೇಕು. ಕುಟುಂಬ ಎಂದರೆ ಅಲ್ಲಿ ನಾವೊಬ್ಬರೇ ಅಲ್ಲ. ನಮ್ಮವರೂ ಇರುತ್ತಾರೆ. ಹೀಗಿರುವಾಗ ನಮ್ಮ ಒಂದು ನಿರ್ಧಾರದಿಂದ ಎಲ್ಲರನ್ನೂ ಸಂಕಷ್ಟಕ್ಕೆ ದೂಡಬಾರದಲ್ಲವೇ. ಹೀಗಾಗಿ ಯೋಚಿಸಿ ನಿರ್ಧಾರ ಕೈಗೊಳ್ಳುವುದು
ಮುಖ್ಯವಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Chikkamagaluru: ನಾವು ನಡೆದಿದ್ದೇ ದಾರಿ, ನಡಿ ಮಗಾ….ಮರಿ ಆನೆಗೆ ನಡೆಯಲು ಕಲಿಸಿದ ತಾಯಿ ಆನೆ
Mangaluru: ಜೀವನ ಶೈಲಿ ಸಂಬಂಧಿ ಕಾಯಿಲೆಗೆ ಪರಿಹಾರ ಅಗತ್ಯ
Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
Someshwara ದೇಗುಲ: ಶಿವಪಂಚಾಕ್ಷರಿ ಕೋಟಿ ನಾಮಜಪ ಯಜ್ಞ ಸಂಪನ್ನ
Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.