ಮೂರನೇ ಟೆಸ್ಟ್ ಪಂದ್ಯಾಟ : ಭಾರತಕ್ಕೆ ಇನ್ನಿಂಗ್ಸ್ ಸೋಲು
Team Udayavani, Aug 28, 2021, 11:30 PM IST
ಲೀಡ್ಸ್ : ಹೇಡಿಂಗ್ಲೆ ಅಂಗಳದಲ್ಲಿ ಇಂಗ್ಲೆಂಡ್ ವೇಗಿಗಳಿಗೆ ಹೆದರಿ ನೆಲಕಚ್ಚಿದ ಭಾರತ ಇನ್ನಿಂಗ್ಸ್ ಹಾಗೂ 76 ರನ್ನುಗಳ ಸೋಲನ್ನು ಹೊತ್ತುಕೊಂಡಿದೆ. ಜೋ ರೂಟ್ ಪಡೆ ಸರಣಿಯನ್ನು ಸಮಬಲಕ್ಕೆ ತರುವಲ್ಲಿ ಯಶಸ್ವಿಯಾಗಿದೆ.
354 ರನ್ನುಗಳ ಭಾರೀ ಹಿನ್ನಡೆಯ ಬಳಿಕ ತೃತೀಯ ದಿನದಾಟದಲ್ಲಿ 2 ವಿಕೆಟಿಗೆ 215 ರನ್ ಗಳಿಸಿದ ಭಾರತ ಉತ್ತಮ ಹೋರಾಟದ ನಿರೀಕ್ಷೆ ಮೂಡಿಸಿತ್ತು. ಆದರೆ ಶನಿವಾರ ಲಂಚ್ ಒಳಗಾಗಿ ಉಳಿದ ಎಂಟೂ ವಿಕೆಟ್‌ಗಳನ್ನು 63 ರನ್ ಅಂತರದಲ್ಲಿ ಕಳೆದುಕೊಂಡಿತು; “78’ರ ನಂಟನ್ನು ಮುಂದುವರಿಸಿತು. ಮೊದಲ ದಿನವೇ 78ಕ್ಕೆ ಉದುರಿ ಶರಣಾಗತಿಯ ಸೂಚನೆ ನೀಡಿದ್ದ ಕೊಹ್ಲಿ ಪಡೆ, ದ್ವಿತೀಯ ಇನ್ನಿಂಗ್ಸ್‌ನಲ್ಲಿ 200 ರನ್ ಹೆಚ್ಚು ಗಳಿಸಿ 278ಕ್ಕೆ ಆಲೌಟ್ ಆಯಿತು.
91 ರನ್ ಗಳಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದ ಪೂಜಾರ ಅದೇ ಮೊತ್ತಕ್ಕೆ ರಾಬಿನ್ಸನ್‌ಗೆ ಲೆಗ್ ಬಿಫೋರ್ ಆದರು (189 ಎಸೆತ, 15 ಬೌಂಡರಿ). ಕೊಹ್ಲಿ 45ರಿಂದ 55ಕ್ಕೆ ಏರಿದರು (125 ಎಸೆತ, 8 ಬೌಂಡರಿ). ರಹಾನೆ ಬ್ಯಾಟಿಂಗ್ ವೈಫಲ್ಯ ಮತ್ತೆ ಮುಂದುವರಿಯಿತು (10). ಪಂತ್ ಒಂದೇ ರನ್ ಮಾಡಿ ಪೆವಿಲಿಯನ್ ಸೇರಿಕೊಂಡರು. ರವೀಂದ್ರ ಜಡೇಜ ಮಾತ್ರ ಬಿರುಸಿನ ಆಟವಾಡಿ 25 ಎಸೆತಗಳಿಂದ 30 ರನ್ ಮಾಡಿದರು (6 ಫೋರ್, ಒಂದು ಸಿಕ್ಸರ್).
19.3 ಓವರ್, 8 ವಿಕೆಟ್ ಪತನ
4ನೇ ದಿನದಾಟದಲ್ಲಿ ಭಾರತದ 8 ವಿಕೆಟ್ ಹಾರಿಸಲು ಇಂಗ್ಲೆಂಡಿಗೆ ಕೇವಲ 19.3 ಓವರ್ ಸಾಕಾಯಿತು. ಊಟದ ಹೊತ್ತಿನೊಳಗಾಗಿ ಭಾರತ ಆಟ ಮುಗಿಸಿತ್ತು. ಪ್ರವಾಸಿಗರನ್ನು ಘಾತಕವಾಗಿ ಕಾಡಿದ ಬೌಲರ್ ಓಲೀ ರಾಬಿನ್ಸನ್. ಅವರು 65 ರನ್ನಿತ್ತು 5 ವಿಕೆಟ್ ಕಿತ್ತರು. ರಾಬಿನ್ಸನ್ ಈ ಸರಣಿಯಲ್ಲಿ 5 ವಿಕೆಟ್ ಉರುಳಿಸಿದ ಎರಡನೇ ನಿದರ್ಶನ ಇದಾಗಿದೆ. ಅವರು ಮೊದಲ ಇನ್ನಿಂಗ್ಸ್‌ನಲ್ಲಿ 2 ವಿಕೆಟ್ ಹಾರಿಸಿದ್ದರು. ಅರ್ಹವಾಗಿ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.
ಕ್ರೆಗ್ ಓವರ್ಟನ್ ಮತ್ತೋರ್ವ ಯಶಸ್ವಿ ಬೌಲರ್. ಅವರ ಸಾಧನೆ 47ಕ್ಕೆ 3 ವಿಕೆಟ್.
ಇದನ್ನೂ ಓದಿ :ಕ್ಲೀವ್‌ಲ್ಯಾಂಡ್ ಟೆನಿಸ್ : ಪ್ರಶಸ್ತಿ ಹಂತಕ್ಕೆ ಸಾನಿಯಾ ಜೋಡಿ
ಸ್ಕೋರ್ ಪಟ್ಟಿ
ಭಾರತ ಪ್ರಥಮ ಇನ್ನಿಂಗ್ಸ್ 78
ಇಂಗ್ಲೆಂಡ್ ಪ್ರಥಮ ಇನ್ನಿಂಗ್ಸ್ 432
ಭಾರತ ದ್ವಿತೀಯ ಇನ್ನಿಂಗ್ಸ್
ರೋಹಿತ್ ಶರ್ಮ ಎಲ್‌ಬಿಡಬ್ಲ್ಯು ರಾಬಿನ್ಸನ್ 59
ಕೆ.ಎಲ್. ರಾಹುಲ್ ಸಿ ಬೇರ್‌ಸ್ಟೊ ಬಿ ಓವರ್ಟನ್ 8
ಚೇತೇಶ್ವರ್ ಪೂಜಾರ ಎಲ್‌ಬಿಡಬ್ಲ್ಯು ರಾಬಿನ್ಸನ್ 91
ವಿರಾಟ್ ಕೊಹ್ಲಿ ಸಿ ರೂಟ್ ಬಿ ರಾಬಿನ್ಸನ್ 55
ಅಜಿಂಕ್ಯ ರಹಾನೆ ಸಿ ಬಟ್ಲರ್ ಬಿ ಆ್ಯಂಡರ್ಸನ್ 10
ರಿಷಭ್ ಪಂತ್ ಸಿ ಓವರ್ಟನ್ ಬಿ ರಾಬಿನ್ಸನ್ 1
ರವೀಂದ್ರ ಜಡೇಜ ಸಿ ಬಟ್ಲರ್ ಬಿ ಓವರ್ಟನ್ 30
ಮೊಹಮ್ಮದ್ ಶಮಿ ಬಿ ಮೊಯಿನ್ 6
ಇಶಾಂತ್ ಶರ್ಮ ಸಿ ಬಟ್ಲರ್ ಬಿ ರಾಬಿನ್ಸನ್ 2
ಜಸ್‌ಪ್ರೀತ್ ಬುಮ್ರಾ ಔಟಾಗದೆ 1
ಮೊಹಮ್ಮದ್ ಸಿರಾಜ್ ಸಿ ಬೇರ್‌ಸ್ಟೊ ಬಿ ಓವರ್ಟನ್ 0
ಇತರ 15
ಒಟ್ಟು (ಆಲೌಟ್) 278
ವಿಕೆಟ್ ಪತನ: 1-34, 2-116, 3-215, 4-237, 5-239, 6-239, 7-254, 8-257, 9-278.
ಬೌಲಿಂಗ್: ಜೇಮ್ಸ್ ಆ್ಯಂಡರ್ಸನ್ 26-11-63-1
ಓಲೀ ರಾಬಿನ್ಸನ್ 26-6-65-5
ಕ್ರೆಗ್ ಓವರ್ಟನ್ 18.3-6-47-3
ಸ್ಯಾಮ್ ಕರನ್ 9-1-40-0
ಮೊಯಿನ್ ಅಲಿ 14-1-40-1
ಜೋ ರೂಟ್ 6-1-15-0
ಪಂದ್ಯಶ್ರೇಷ್ಠ: ಓಲೀ ರಾಬಿನ್ಸನ್
4ನೇ ಟೆಸ್ಟ್: ಓವಲ್ (ಸೆ. 2-6)
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
T20: ಗೆಲ್ಲುವ ಹಂತದಲ್ಲಿದ್ದ ಶ್ರೀಲಂಕಾವನ್ನು ಹಿಡಿದು ನಿಲ್ಲಿಸಿದ ಕಿವೀಸ್…
Vijay Hazare Trophy; ಮಯಾಂಕ್ ಅಗರ್ವಾಲ್ ಭರ್ಜರಿ ಶತಕ; ಸುಲಭ ಜಯ ಸಾಧಿಸಿದ ಕರ್ನಾಟಕ
TeamIndia; ಮುಗಿಯಿತಾ ರೋಹಿತ್ ವೃತ್ತಿಜೀವನ? ಮೆಲ್ಬೋರ್ನ್ ಗೆ ಬಂದ ಅಗರ್ಕರ್ ಹೇಳಿದ್ದೇನು?
INDvAUS: ನಿತೀಶ್ ಕುಮಾರ್ ಆಕರ್ಷಕ ಶತಕ; ಫಾಲೋಆನ್ ಅವಮಾನದಿಂದ ಪಾರು
INDvsAUS: ವಿಚಿತ್ರ ರೀತಿಯಲ್ಲಿ ಔಟಾದ ರಿಷಭ್ ಪಂತ್ ವಿರುದ್ದ ಕಿಡಿಕಾರಿದ ಗಾವಸ್ಕರ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.