Thirupathi Laddu: ತಿರುಪತಿಗೆ ತೆರಳುವ ನಂದಿನಿ ತುಪ್ಪದ ಟ್ಯಾಂಕರ್‌ಗೆ ಜಿಪಿಎಸ್‌ ಕಣ್ಗಾವಲು!

ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಿದ ಕೆಎಂಎಫ್‌, ಬೇರೆ ರಾಜ್ಯಗಳಿಂದಲೂ ತುಪ್ಪಕ್ಕೆ ಬೇಡಿಕೆ ಹೆಚ್ಚಿದೆ: ಎಂಡಿ

Team Udayavani, Sep 22, 2024, 8:25 PM IST

Nandini

ಬೆಂಗಳೂರು: ತಿರುಪತಿ ಲಡ್ಡು ಪ್ರಸಾದದಲ್ಲಿ ಕಲಬೆರಕೆ ತುಪ್ಪ ಬಳಕೆ ನಿಲ್ಲಿಸಿ ಪಾವಿತ್ರ್ಯತೆಗೆ ಒತ್ತು ನೀಡುವ ಸಲುವಾಗಿ ಟಿಟಿಡಿ (ತಿರುಪತಿ ತಿರುಮಲ ದೇವಸ್ಥಾನ) ಈಗ ಮತ್ತಷ್ಟು ನಂದಿನಿ ತುಪ್ಪ ಪೂರೈಕೆಗಾಗಿ ಕೆಎಂಎಫ್ ಗೆ​​ ಮನವಿ ಮಾಡಿದ್ದರಿಂದ ನಂದಿನಿ ತುಪ್ಪದ ಸುರಕ್ಷತಾ ಕ್ರಮಗಳ ಬಗ್ಗೆ ಮತ್ತಷ್ಟು ಎಚ್ಚರ ವಹಿಸಿದೆ. ಅದಕ್ಕಾಗಿ ತಿರುಪತಿಗೆ ನಂದಿನಿ ತುಪ್ಪ ಸಾಗಿಸುವ ಮಾರ್ಗ ಮಧ್ಯೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಲು ತಿರುಮಲಕ್ಕೆ ಕಳುಹಿಸುವ ತುಪ್ಪದ ಟ್ಯಾಂಕರ್‌ಗಳಿಗೆ ಜಿಪಿಎಸ್, ಎಲೆಕ್ಟ್ರಿಕ್ ಲಾಕಿಂಗ್ ಅಳವಡಿಸಲು ಮುಂದಾಗಿದೆ.

ತಿರುಮಲಕ್ಕೆ ಒಟ್ಟಾರೆ 3 ತಿಂಗಳಿಗೆ 350 ಟನ್‌ ತುಪ್ಪ ನೀಡುವಂತೆ ಕೆಎಂಎಫ್‌ನೊಂದಿಗೆ ಟಿಟಿಡಿ ಒಪ್ಪಂದ ಮಾಡಿಕೊಂಡಿತ್ತು. ಹಿಂದೆ ಟಿಟಿಡಿ ಮಾಡಿಕೊಂಡ ಒಪ್ಪಂದ ಇನ್ನೂ ಒಂದೂವರೆ ತಿಂಗಳಲ್ಲಿ ಮುಕ್ತಾಯವಾಗಲಿದೆ. ಒಂದು ತಿಂಗಳ ಹಿಂದೆ ಟಿಟಿಡಿ ಕೆಎಂಎಫ್‌ಗೆ ತುಪ್ಪದ ಟೆಂಡರ್‌ ಒದಗಿಸಿದೆ.

ವಾಹನಗಳಿಗೆ ಜಿಪಿಎಸ್​ ಟ್ರ್ಯಾಕ್ ಅಳವಡಿಕೆ: ಕೆಎಂಎಫ್​​ ಎಂಡಿ
ಈ ಬಗ್ಗೆ ಬೆಂಗಳೂರಿನಲ್ಲಿ ಕೆಎಂಎಫ್​​ ವ್ಯವಸ್ಥಾಪಕ ನಿರ್ದೇಶಕ (ಎಂಡಿ) ಜಗದೀಶ್​  ಮಾತನಾಡಿ, ಟಿಟಿಡಿಗೆ ತೆರಳುವ ನಂದಿನಿ ತುಪ್ಪದ ವಾಹನಗಳಿಗೆ ಸೂಕ್ತ ಭದ್ರತಾ ವ್ಯವಸ್ಥೆ ಮಾಡಲಾಗಿದೆ. ತಿರುಪತಿಗೆ ನಂದಿನಿ ತುಪ್ಪ ಸಾಗಿಸುವ ವಾಹನಗಳಿಗೆ ಜಿಪಿಎಸ್​ ಟ್ರ್ಯಾಕ್, ಎಲೆಕ್ಟ್ರಿಕ್​ ಡೋರ್ ಅಳವಡಿಸಿದ್ದು,  ಪ್ರಯೋಗಾಲಯ  ಪರೀಕ್ಷೆ ಬಳಿಕ ನಂದಿನಿ ತುಪ್ಪ ಪೂರೈಸಲಾಗುತ್ತದೆ. ಈ ಹಿಂದೆ ಇದ್ದ ಸರ್ಕಾರದಲ್ಲಿ ಟಿಟಿಡಿಗೆ ತುಪ್ಪ ಪೂರೈಕೆ ಮಾಡಿರಲಿಲ್ಲ. ಇದೀಗ ಟಿಟಿಡಿ ಬೇಡಿಕೆ ಮೇರೆಗೆ ನಂದಿನಿ ತುಪ್ಪ ಪೂರೈಸುತ್ತಿದ್ದೇವೆ ಎಂದು ಮಾಹಿತಿ ನೀಡಿದರು.

ರಾಜ್ಯದ ಮುಜರಾಯಿ ದೇಗುಲಗಳಿಗೆ ನಂದಿನಿ ತುಪ್ಪ ಪೂರೈಕೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಜೊತೆಗೆ ಬೇರೆ ರಾಜ್ಯಗಳಿಂದಲೂ ನಂದಿನಿ ತುಪ್ಪಕ್ಕೆ ಬೇಡಿಕೆ ಹೆಚ್ಚಿದೆ. ಹೀಗಾಗಿ ಪ್ರತಿದಿನ 15 ಲಕ್ಷ ಲೀಟರ್ ಹಾಲಿನಿಂದ ತುಪ್ಪ ತಯಾರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ  ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಇಷ್ಟೊಂದು ಎಚ್ಚರಿಕೆ ಯಾಕೆ?
ತಿರುಪತಿಯ ಲಡ್ಡು ಪ್ರಸಾದಕ್ಕೆ ಬಳಸುವ ತುಪ್ಪದಲ್ಲಿ ಪ್ರಾಣಿಗಳ ಕೊಬ್ಬು ಮಿಶ್ರಿತವಾಗಿದೆ ಎನ್ನುವ ಅಂಶದ ವರದಿಯಿಂದ ತಿಳಿದು ಬಂದಿದೆ. ಇದೀಗ ಇಂತಹ ಆರೋಪಗಳು ಮುಂದೆ ಕೆಎಂಎಫ್​ ನಂದಿನಿ ತುಪ್ಪದ ಮೇಲೂ ಬರಬಹುದು ಅಥವಾ ಮಾರ್ಗ ಮಧ್ಯೆ ತುಪ್ಪದ ಟ್ಯಾಂಕರ್ ನಿಲ್ಲಿಸಿ ರಾಜಕೀಯ ಲಾಭಕ್ಕಾಗಿ ಏನಾದರೂ ಕಲಬೆರೆಕೆ ಮಾಡುವ ಸಾಧ್ಯತೆಗಳಿವೆ ಎನ್ನುವ ಕಾರಣಕ್ಕೆ ಮುಂಜಾಗ್ರತೆಯ ಈ ಕ್ರಮ ಅನುಸರಿಸಲು ಅಧಿಕಾರಿಗಳು ಮುಂದಾಗಿದ್ದಾರೆ.

ಟಾಪ್ ನ್ಯೂಸ್

Rayanna Brigade ಸ್ಥಾಪನೆಗೆ ಶೀಘ್ರ ನಿರ್ಧಾರ: ಈಶ್ವರಪ್ಪ

Rayanna Brigade ಸ್ಥಾಪನೆಗೆ ಶೀಘ್ರ ನಿರ್ಧಾರ: ಈಶ್ವರಪ್ಪ

Tiger-hu

Hunasuru: ಕೂಂಬಿಂಗ್ ವೇಳೆಯೇ ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ಎರಗಿದ ಹುಲಿ!

ಕುಲಸಚಿವ, ಇನ್‌ಸ್ಪೆಕ್ಟರ್‌ ವಜಾ ಮಾಡಿ: ಅಶ್ವತ್ಥನಾರಾಯಣ್‌ ಒತ್ತಾಯ

Tumkur University ಕುಲಸಚಿವ, ಇನ್‌ಸ್ಪೆಕ್ಟರ್‌ ವಜಾ ಮಾಡಿ: ಅಶ್ವತ್ಥನಾರಾಯಣ್‌ ಒತ್ತಾಯ

1-eqwewewqe

Ayodhya: ಭಾಗಶಃ ನಿರ್ಮಿಸಿದ ರಾಮ ಮಂದಿರದಲ್ಲಿ ಪ್ರಾರ್ಥನೆ ಸಲ್ಲಿಸಲು ಸಾಧ್ಯವಿಲ್ಲ!

Congress: ತುಷ್ಟೀಕರಣದಿಂದ ಮತಾಂಧ ಶಕ್ತಿಗಳಿಗೆ ಶಕ್ತಿ; ಜೋಶಿ ಕಿಡಿ

Congress: ತುಷ್ಟೀಕರಣದಿಂದ ಮತಾಂಧ ಶಕ್ತಿಗಳಿಗೆ ಶಕ್ತಿ; ಜೋಶಿ ಕಿಡಿ

Nandini

Thirupathi Laddu: ತಿರುಪತಿಗೆ ತೆರಳುವ ನಂದಿನಿ ತುಪ್ಪದ ಟ್ಯಾಂಕರ್‌ಗೆ ಜಿಪಿಎಸ್‌ ಕಣ್ಗಾವಲು!

MP Yaduveer Wadiyar: ಭಾವನೆಗೆ ಧಕ್ಕೆಯಾಗದಂತೆ ಮಹಿಷಾ ದಸರಾ ಆಚರಿಸಲಿ

Yaduveer Wadiyar: ಭಾವನೆಗೆ ಧಕ್ಕೆಯಾಗದಂತೆ ಮಹಿಷಾ ದಸರಾ ಆಚರಿಸಲಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕುಲಸಚಿವ, ಇನ್‌ಸ್ಪೆಕ್ಟರ್‌ ವಜಾ ಮಾಡಿ: ಅಶ್ವತ್ಥನಾರಾಯಣ್‌ ಒತ್ತಾಯ

Tumkur University ಕುಲಸಚಿವ, ಇನ್‌ಸ್ಪೆಕ್ಟರ್‌ ವಜಾ ಮಾಡಿ: ಅಶ್ವತ್ಥನಾರಾಯಣ್‌ ಒತ್ತಾಯ

1-asasa

Lingayat ಪಂಚಮಸಾಲಿ 2A ಹೋರಾಟ: ವಕೀಲರ ಸಮಾವೇಶದಲ್ಲಿ 3 ನಿರ್ಣಯ ಅಂಗೀಕಾರ

PSI Parshuram ಕುಟುಂಬಕ್ಕೆ ಪರಿಹಾರ ಕೊಡಿ: ಛಲವಾದಿ ಆಗ್ರಹ

PSI Parshuram ಕುಟುಂಬಕ್ಕೆ ಪರಿಹಾರ ಕೊಡಿ: ಛಲವಾದಿ ಆಗ್ರಹ

Rain: ಸೆ.23 ರಂದು ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆ ಬೀಳುವ ಸಾಧ್ಯತೆ

Rain: ಸೆ.23 ರಂದು ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆ ಬೀಳುವ ಸಾಧ್ಯತೆ

1-siddu-aa

TB Dam; ಮೈತುಂಬಿಕೊಂಡ ತುಂಗಭದ್ರೆಗೆ ಸಿಎಂ ಸಿದ್ದರಾಮಯ್ಯ ಅವರಿಂದ ಬಾಗಿನ ಅರ್ಪಣೆ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

Rayanna Brigade ಸ್ಥಾಪನೆಗೆ ಶೀಘ್ರ ನಿರ್ಧಾರ: ಈಶ್ವರಪ್ಪ

Rayanna Brigade ಸ್ಥಾಪನೆಗೆ ಶೀಘ್ರ ನಿರ್ಧಾರ: ಈಶ್ವರಪ್ಪ

1-chess–bg

Chess Olympiad; ಭಾರತಕ್ಕೆ ಅವಳಿ ಸ್ವರ್ಣ ಸಂಭ್ರಮ

Sampaje: ಸಹಪಾಠಿಯ ಮರ್ಮಾಂಗ ಎಳೆದ ವಿದ್ಯಾರ್ಥಿಗಳು!

Sampaje: ಸಹಪಾಠಿಯ ಮರ್ಮಾಂಗ ಎಳೆದ ವಿದ್ಯಾರ್ಥಿಗಳು!

POlice

Kasaragod: ಹಲ್ಲೆ ಪ್ರಕರಣ: ಕೇಸು ದಾಖಲು

ganja

Bajpe; ಗಾಂಜಾ ಸೇವನೆ; ಮೂವರು ವಶಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.