![Basanagowda-Yatnal](https://www.udayavani.com/wp-content/uploads/2025/02/Basanagowda-Yatnal-1-415x249.jpg)
![Basanagowda-Yatnal](https://www.udayavani.com/wp-content/uploads/2025/02/Basanagowda-Yatnal-1-415x249.jpg)
Team Udayavani, Jan 30, 2025, 7:30 AM IST
ಬೆಳ್ತಂಗಡಿ: ಕೇರಳದ ತಿರುವನಂತಪುರ ಶ್ರೀ ಅನಂತ ಪದ್ಮನಾಭ ಸ್ವಾಮಿ ದೇಗುಲದ ಪ್ರಧಾನ ಅರ್ಚಕ(ಪೆರಿಯ ನಂಬಿ)ರಾಗಿ ಕೊಕ್ಕಡದ ಸತ್ಯನಾರಾಯಣ ತೋಡ್ತಿಲ್ಲಾಯ (45) ನೇಮಕಗೊಂಡಿದ್ದರೆ. ಇವರು ಕೊಕ್ಕಡದ ದಿ| ಸುಬ್ರಾಯ ತೋಡ್ತಿಲ್ಲಾಯ ಹಾಗೂ ಶಾರದಾ ದಂಪತಿಯ ಎರಡನೇ ಪುತ್ರ.
ಮಹಾ ಪ್ರಧಾನ ಅರ್ಚಕರೆಂದರೆ ಅವರಿಗೆ ಸಂಸ್ಥಾನದಿಂದ ನೀಡುವ ಕೊಡೆ (ಛತ್ರಿ) ಮರ್ಯಾದೆ ಇರುವ ವಿಶೇಷ ಸ್ಥಾನ. ಈ ಮಹಾ ಅರ್ಚಕ ಸ್ಥಾನವನ್ನು ಈ ವರೆಗೆ ಪಡೆದವರಲ್ಲಿ ಸತ್ಯನಾರಾಯಣ ತೋಡ್ತಿಲ್ಲಾಯರು ಅತಿ ಕಿರಿಯರು.
ಅರ್ಚಕರಾಗಿ ಸೇರಿದ 6 ತಿಂಗಳಲ್ಲೇ ಇವರಿಗೆ ಮಹಾ ಪ್ರಧಾನ ಅರ್ಚಕ ಸ್ಥಾನ ಸಿಕ್ಕಿದೆ. ಈ ಹುದ್ದೆ ಅಕ್ಕರೆ ದೇಶಿ (ಕೊಕ್ಕಡದ 8 ಮನೆತನ) ಹಾಗೂ ಇಕ್ಕರೆ ದೇಶಿ ಕೇರಳದ 4 ಮನೆತನದ ಒಳಗಾಗಿ ಬರುವಂಥದ್ದು. ಈ ಹಿಂದೆ ಈ ಹುದ್ದೆಯಲ್ಲಿ ರಾಜೇಂದ್ರ ಅರೆಮನೆತ್ತಾಯ (ಅಕ್ಕರೆದೇಶಿ) ಅವರು 1.4 ವರ್ಷ ಸೇವೆ ಸಲ್ಲಿಸಿದ್ದರು.
ಈ ಹುದ್ದೆಗೇರಿದ ಬಳಿಕ ಗೃಹಸ್ಥಾಶ್ರಮ ತೊರೆದು ಸನ್ಯಾಸಿಯಂತೆ ಇರಬೇಕು. ಜತೆಗೆ ದೇವರ ಯಾವುದೇ ಉತ್ಸವಗಳಿಗೆ ಇವರದೇ ಪ್ರಧಾನ ಪೌರೋಹಿತ್ಯವಾಗಿರುತ್ತದೆ. ಸತ್ಯನಾರಾಯಣ ಅವರು ಜ.30ರಂದು ಅಧಿಕಾರ ಸ್ವೀಕರಿಸಲಿದ್ದಾರೆ.
BJP: ಕೇಂದ್ರ ಶಿಸ್ತು ಸಮಿತಿ ನೋಟಿಸ್ಗೆ ಉತ್ತರ ಕೊಟ್ಟ ಶಾಸಕ ಬಸನಗೌಡ ಯತ್ನಾಳ್
Yellapur: ಕಂದಕಕ್ಕೆ ಬಿದ್ದ ಸರಕು ತುಂಬಿದ ಲಾರಿ; ಚಾಲಕ ಹಾಗೂ ನಿರ್ವಾಹಕ ಪಾರು
Manipal: ಮಾಹೆ; ಆಧುನಿಕ ಗ್ರಂಥಾಲಯಗಳ ನಿರ್ವಹಣೆ: ಫೆ. 21, 22: 6ನೇ ರಾಷ್ಟ್ರೀಯ ಸಮ್ಮೇಳನ
Yadagiri: ವಿದ್ಯಾರ್ಥಿಗಳಿಂದ ಚರಂಡಿ ಸ್ವಚ್ಛತೆ: ಆಕ್ರೋಶ
Bhagavad Gita: ಪ್ರಜಾಪ್ರಭುತ್ವ ಸಂಪೂರ್ಣ ಸಾಕಾರಗೊಳ್ಳಲು ಪ್ರತಿಯೊಬ್ಬನಿಗೂ ಭಗವದ್ಗೀತೆ
You seem to have an Ad Blocker on.
To continue reading, please turn it off or whitelist Udayavani.