ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್‌ ಟೂರಿಸಂ ಹಬ್ಬ!

ಕೆಫೆಯಲ್ಲಿ ಏನಾದರು ಕೆಲಸ ಸಿಗಬಹುದಾ ಎಂಬ ನಿರೀಕ್ಷೆಯೊಂದಿಗೆ...

ನಾಗೇಂದ್ರ ತ್ರಾಸಿ, Nov 22, 2024, 6:26 PM IST

ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್‌ ಟೂರಿಸಂ ಹಬ್ಬ!

ಜಾಗತಿಕ ಯುದ್ದೋನ್ಮಾದದ ಪರಿಣಾಮ ಗಾಜಾ ಪಟ್ಟಿ ಸರ್ವನಾಶವಾಗಿದೆ. ಮತ್ತೊಂದೆಡೆ ರಷ್ಯಾದ ಸಾಮ್ರಾಜ್ಯಶಾಹಿ ದಾಹಕ್ಕೆ ಉಕ್ರೈನ್‌ ಎಂಬ ಪುಟ್ಟ ದೇಶ ಸ್ಮಶಾನ ಸದೃಶವಾಗಿದೆ. ಶ್ರೀಲಂಕಾ, ಬಾಂಗ್ಲಾದೇಶ, ಅಫ್ಘಾನಿಸ್ತಾನ, ಪಾಕಿಸ್ತಾನ, ನೇಪಾಳದ ಆರ್ಥಿಕ ಸ್ಥಿತಿ ಡೋಲಾಯಮಾನವಾಗಿದ್ದು, ಉಗಾಂಡದ ಪರಿಸ್ಥಿತಿ ತಲೆದೋರಲು ಹೆಚ್ಚು ದಿನ ಕಾಯುವ ಅಗತ್ಯವಿಲ್ಲ! ಇವೆಲ್ಲದರ ನಡುವೆ ಜಗತ್ತಿನ ಬಲಾಢ್ಯ ದೇಶ ಎನಿಸಿಕೊಂಡ ಒಂದು ದೇಶ ಇದೇ ಹಾದಿ ಹಿಡಿದಿರುವುದು ಹುಬ್ಬೇರಿಸುವ ಸಂಗತಿಯಾಗಿದೆ!

ಆರ್ಥಿಕವಾಗಿ ಉಚ್ಚ್ರಾಯ ಸ್ಥಿತಿಯಲ್ಲಿದ್ದ ಈ ದೇಶದ ಪುರುಷರು ಸಂಜೆಗತ್ತಲಲ್ಲೇ ಸಮುದ್ರದತ್ತ ತೆರಳುತ್ತಿದ್ದರು…ಅದಕ್ಕೆ ಕಾರಣ ಬಡದೇಶಗಳಿಂದ ಆಗಮಿಸಿ ಕಾಯುತ್ತಿದ್ದ ವೇಶ್ಯೆಯರಿಗಾಗಿ! ಆದರೆ ಇಂದು ಕಾಲಚಕ್ರ ಉರುಳಿದೆ…ಅದೇ ನಳನಳಿಸುವ ಟೋಕಿಯೋದತ್ತ ವಿದೇಶಿಯರು ಸೆ*ಕ್ಸ್‌ ಟೂರಿಸಂನಿಂದಾಗಿ ಲಗ್ಗೆ ಇಡತೊಡಗಿದ್ದಾರೆ. ಹೌದು ಜಪಾನ್‌ ನಲ್ಲಿ ಬಡತನ ಹೆಚ್ಚಳವಾಗುವ ಜೊತೆಗೆ ಈ ದೇಶ ವೇಶ್ಯಾವಾಟಿಕೆ ಅಡ್ಡೆಯ ನೂತನ ರಾಜಧಾನಿಯಾಗುತ್ತಿದೆ!

ದ ಸ್ಟಾರ್‌ ದೈನಿಕ ವರದಿ ಪ್ರಕಾರ, ಜಪಾನ್‌ ಈಗ ಬಡ ರಾಷ್ಟ್ರವಾಗುತ್ತಿದೆ. ಇದರೊಂದಿಗೆ ಟೊಕಿಯೊದಲ್ಲಿ ಮಾಂಸದಂಧೆ ವಹಿವಾಟು ಭರ್ಜರಿಯಾಗಿ ನಡೆಯುತ್ತಿದ್ದು, ಪ್ರಯಾಣಿಕರಿಗೆ ಕೋವಿಡ್‌ ಸಂದರ್ಭದಲ್ಲಿ ವಿಧಿಸಿದ್ದ ನಿರ್ಬಂಧದ ನಂತರ ಇದೀಗ ಟೊಕಿಯೋಗೆ ದೊಡ್ಡ ಸಂಖ್ಯೆಯಲ್ಲಿ ವಿದೇಶಿಯರು ಆಗಮಿಸುತ್ತಿರುವುದನ್ನು ನಾವು ಗಮನಿಸಿದ್ದೇವೆ ಎಂಬುದು ಲೈಸನ್‌ ಕೌನ್ಸಿಲ್‌ ನ ಪ್ರಧಾನ ಕಾರ್ಯದರ್ಶಿ ಯೋಷಿಹಿದೆ ಟನಾಕಾ ತಿಳಿಸಿದ್ದಾರೆ.

ಬೃಹತ್‌ ಸಂಖ್ಯೆಯಲ್ಲಿ ಹಲವಾರು ದೇಶಗಳಿಂದ ವಿದೇಶಿ ಪುರುಷರು ಆಗಮಿಸುತ್ತಿದ್ದು, ಅವರಲ್ಲಿ ಬಿಳಿಯರು, ಏಷ್ಯನ್, ಕಪ್ಪು ವರ್ಣೀಯರು ಇದ್ದಾರೆ. ಆದರೆ ಇದರಲ್ಲಿ ಚೀನಾದವರ ಸಂಖ್ಯೆ ಅಧಿಕವಾಗಿದೆ. ಹದಿಹರೆಯದ ಬಾಲಕಿಯರು ಮತ್ತು ಯುವತಿಯರು ತಮ್ಮ 20ನೇ ವಯಸ್ಸಿನಲ್ಲಿ ಜೀವನ ನಿರ್ವಹಣೆಗಾಗಿ ಸೆ*ಕ್ಸ್‌ ಇಂಡಸ್ಟ್ರೀನಲ್ಲಿ ತೊಡಗಿಕೊಂಡಿರುವುದಾಗಿ ಟನಾಕಾ ಕಳವಳ ವ್ಯಕ್ತಪಡಿಸಿದ್ದಾರೆ.

ಜಪಾನ್‌ ಸ್ಥಿತಿ ತುಂಬಾ ಶೋಚನೀಯವಾಗಿದೆ. ಇಲ್ಲಿನ ಪರಿಸ್ಥಿತಿ ತುಂಬಾ, ತುಂಬಾ ಕೆಟ್ಟುಹೋಗಿದೆ. ಮಕ್ಕಳ ಸಂಖ್ಯೆ, ಹಿಂಸಾಚಾರ ಹೆಚ್ಚಳವಾಗುತ್ತಿದ್ದು, ನಮ್ಮ ಸಂಘಟನೆ ಏನು ನೆರವು ನೀಡಲು ಸಾಧ್ಯವೋ ಅಷ್ಟನ್ನು ಮಾಡುತ್ತಿದ್ದು, ಅದಕ್ಕಿಂತ ಹೆಚ್ಚು ಏನೂ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಟನಾಕಾ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

ನೆರೆಯ ಕನಗ್ವಾವಾ ಪ್ರಿಫೆಕ್ಚರ್‌ ನ ಹುಡುಗಿಯೊಬ್ಬಳು ಹೈಸ್ಕೂಲ್ ಶಿಕ್ಷಣ ಪೂರೈಸಿ, ಕೆಫೆಯಲ್ಲಿ ಏನಾದರು ಕೆಲಸ ಸಿಗಬಹುದಾ ಎಂಬ ನಿರೀಕ್ಷೆಯೊಂದಿಗೆ ಕುಬುಕಿಚೋ ನಗರಕ್ಕೆ ಆಗಮಿಸಿದ್ದಳು. ಆದರೆ ಆಕೆಗೆ ದುಬಾರಿ ಖರ್ಚು ತಲೆನೋವಾಗಿ ಪರಿಣಮಿಸಿಬಿಟ್ಟಿತ್ತು. ನಿಧಾನಕ್ಕೆ ಆಕೆ ಕಂಡುಕೊಂಡ ಜಾಗ ಪಾರ್ಕ್‌ ಪ್ರದೇಶ! ಹೌದು ಓಕುಬೋ ಪಾರ್ಕ್‌ ನ ಬೀದಿಯಲ್ಲಿ ಅತ್ತಿಂದಿತ್ತ ನಿಂತು ತಿರುಗಾಡಿದರೆ ನಮಗೆ ಬೇಕಾದ ಗಿರಾಕಿ ಸಿಗುತ್ತಾರೆ…ಜತೆಗೆ ಹಣವೂ ಸಿಗುತ್ತೆ ಎಂಬುದು ಆಕೆಯ ನುಡಿ!

ನನಗೆ ತೈವಾನ್‌, ಮೈನ್‌ ಲ್ಯಾಂಡ್‌ ಚೀನಾ, ಹಾಂಗ್‌ ಕಾಂಗ್‌ ನಿಂದ ಗಿರಾಕಿಗಳಿದ್ದಾರೆ. ನಾನು ತುಂಬಾ ಫೇಮಸ್‌ ಆಗಿರುವುದರಿಂದ ನಾನು ಯಾವಾಗಲೂ ಈ ವೃತ್ತಿ(ವೇಶ್ಯಾವಾಟಿಕೆ) ಬ್ಯುಸಿಯಾಗಿರುತ್ತೇನೆ ಎನ್ನುತ್ತಾಳೆ ರುವಾ. ಆದರೆ ಇದರಲ್ಲಿ ತುಂಬಾ ಅಪಾಯವೂ ಇದೆ. ಕೆಲವು ವಾರಗಳ ಹಿಂದೆ ನನ್ನ ಗೆಳತಿಯೊಬ್ಬಳ ಮೇಲೆ ಚೀನಾದ ಗಿರಾಕಿಯೊಬ್ಬ‌ ಹಲ್ಲೆ ನಡೆಸಿ ಬಿಟ್ಟಿದ್ದ. ಗಂಟೆಗೆ ಎಷ್ಟು ಹಣ ಎಂಬ ವಿಚಾರದಲ್ಲಿ ಆ ಗಿರಾಕಿ ಕೋಪಗೊಂಡು ಹಲ್ಲೆ ನಡೆಸಿದ್ದ. ಆಕೆ ಆತನ ತಲೆ ಮೇಲೆ ಯಾವುದೋ ವಸ್ತುವಿನಿಂದ ಹೊಡೆದುಬಿಟ್ಟಿದ್ದಳು. ನಂತರ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ರುವಾ ವಿವರಣೆ ನೀಡುತ್ತಾಳೆ.

ಕೋವಿಡ್‌ 19ರ ಆರ್ಥಿಕ ಹೊಡೆತದಿಂದ ಇನ್ನೂ ಚೇತರಿಸಿಕೊಳ್ಳದ ಪರಿಣಾಮ ಮಹಿಳೆಯರು, ಯುವತಿಯರು ವೇಶ್ಯಾವಾಟಿಕೆ ಉದ್ಯಮದಲ್ಲಿ ತೊಡಗಿಕೊಂಡಿರುವುದಾಗಿ ವರದಿ ವಿವರಿಸಿದೆ. ಕ್ಲಬ್‌ ಮತ್ತು ಪಾರ್ಕ್‌  ಹೆಸರಿನಲ್ಲಿ ಬೆಳೆಯುತ್ತಿರುವ ಉದ್ಯಮದಲ್ಲಿ ವೇಶ್ಯಾವಾಟಿಕೆ ಮಿತಿಮೀರಿ ನಡೆಯುತ್ತಿರುವುದಾಗಿ ವರದಿ ತಿಳಿಸಿದೆ.

ಬೀದಿಯಲ್ಲಿ ರಾಜಾರೋಷವಾಗಿ ವೇಶ್ಯೆವಾಟಿಕೆ ದಂಧೆಯಲ್ಲಿ ತೊಡಗಿಕೊಂಡ ಶೇ.43ರಷ್ಟು ಮಹಿಳೆಯರನ್ನು ಬಂಧಿಸಲಾಗಿದೆ (2023) ಎಂದು ಮೆಟ್ರೊಪೊಲಿಟನ್‌ ಪೊಲೀಸ್‌ ಇಲಾಖೆ ಅಂಕಿಅಂಶ ವಿವರಿಸಿದೆ. ಇವರಲ್ಲಿ ಹೆಚ್ಚಿನವರು 20 ಅಥವಾ 19 ವರ್ಷದ ಯುವತಿಯರು ಎಂದು ತಿಳಿಸಿದೆ.! ನೆದರ್ಲ್ಯಾಂಡ್‌ ನಲ್ಲಿ ವೇಶ್ಯಾವಟಿಕೆ ಕಾನೂನು ಬದ್ಧವಾದ ವಹಿವಾಟು. ಆದರೆ ಮಹಿಳೆಯರ ಆರೋಗ್ಯ ಮತ್ತು ಅವರ ರಕ್ಷಣೆಗೆ ಹೆಚ್ಚಿನ ಒತ್ತು ನೀಡಿದೆ. ಆದರೆ ಜಪಾನ್‌ ನಲ್ಲಿ ವೇಶ್ಯಾವಾಟಿಕೆ ಹೆಚ್ಚಳದ ಜತೆಗೆ ಮಾರಕ ರೋಗಗಳ ಭೀತಿಯೂ ಹೆಚ್ಚಿಸಿದೆ!

ಟಾಪ್ ನ್ಯೂಸ್

Kharge (2)

Manmohan Singh ಅಂತ್ಯಕ್ರಿಯೆ ಸ್ಮಾರಕ ನಿರ್ಮಿಸಬಹುದಾದ ಸ್ಥಳದಲ್ಲಿ ನಡೆಸಲು ಖರ್ಗೆ ಮನವಿ

1-weqeqw

Traffic; ಉಡುಪಿ ನಗರದಲ್ಲಿ 5 ದಿನ ರಸ್ತೆ ಮಾರ್ಗಗಳಲ್ಲಿ ಮಾರ್ಪಾಡು

Madikeri: ದ್ವಿಚಕ್ರ ವಾಹನ – ಟಿಟಿ ನಡುವೆ ಅಪಘಾತ; ಯುವಕ ದುರ್ಮರಣ

Madikeri: ದ್ವಿಚಕ್ರ ವಾಹನ – ಟಿಟಿ ನಡುವೆ ಅಪಘಾತ; ಯುವಕ ದುರ್ಮರಣ

Boxing: ವಿಶ್ವ ಬಾಕ್ಸಿಂಗ್‌ ಸಂಸ್ಥೆಯಿಂದ ಮಧ್ಯಂತರ ಏಷ್ಯನ್‌ ಮಂಡಳಿ

Boxing: ವಿಶ್ವ ಬಾಕ್ಸಿಂಗ್‌ ಸಂಸ್ಥೆಯಿಂದ ಮಧ್ಯಂತರ ಏಷ್ಯನ್‌ ಮಂಡಳಿ

Aranthodu: ಅಪ್ತಾಪ್ತ ವಯಸ್ಸಿನ ಯುವತಿಯ ಮೇಲೆ ಅತ್ಯಾಚಾರ; ಆರೋಪಿಯ ಸೆರೆ

Aranthodu: ಅಪ್ತಾಪ್ತ ವಯಸ್ಸಿನ ಯುವತಿಯ ಮೇಲೆ ಅತ್ಯಾಚಾರ; ಆರೋಪಿಯ ಸೆರೆ

Arrested: ಮೂವರು ಬುರ್ಖಾಧಾರಿ ಕಳ್ಳಿಯರ ಬಂಧನ

Arrested: ಮೂವರು ಬುರ್ಖಾಧಾರಿ ಕಳ್ಳಿಯರ ಬಂಧನ

13

ಕಾಪು ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ನೂತನ ಭಂಡಿ ರಥ, ರಜತ ಗರುಡ ವಾಹನ, ಶೇಷ ವಾಹನ ಸಮರ್ಪಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-man-mohan

Manmohan Singh; ಭಾರತದ ಮೊದಲ ಸಿಖ್ ಪ್ರಧಾನಿ ಈ ವಿಚಾರಕ್ಕಾಗಿ ಕ್ಷಮೆಯಾಚಿಸಿದ್ದರು

Manmohan Singh: ಮನಮೋಹನ್‌ ಸಿಂಗ್‌ ಇಷ್ಟದ ಮೆನು ಯಾವುದು? ಸಸ್ಯಹಾರಿಯಾಗಿದ್ರೂ…ಆದರೆ ಒಮ್ಮೆ

Manmohan Singh: ಮನಮೋಹನ್‌ ಸಿಂಗ್‌ ಇಷ್ಟದ ಮೆನು ಯಾವುದು? ಸಸ್ಯಹಾರಿಯಾಗಿದ್ರೂ…ಆದರೆ ಒಮ್ಮೆ

2

Living together; ವಿಚ್ಛೇದನ ತಡೆಯಲು ಲಿವಿಂಗ್‌ ಟುಗೆದರ್‌ ಸಹಕಾರಿಯೇ?

am

Recipe: ಆರೋಗ್ಯಕ್ಕೆ ಅಮೃತ, ರುಚಿಗೆ ಅದ್ಭುತ ಈ ಚಟ್ನಿ!ಒಂದ್ಸಲ ಈ ವಿಧಾನದಲ್ಲಿ ಟ್ರೈ ಮಾಡಿ…

Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..

Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

puttige-4

Udupi; ಗೀತಾರ್ಥ ಚಿಂತನೆ 138 : ಅಭಿಮಾನತ್ಯಾಗವೇ ಮೋಕ್ಷದ ಮೊದಲ ಮೆಟ್ಟಿಲು

Kharge (2)

Manmohan Singh ಅಂತ್ಯಕ್ರಿಯೆ ಸ್ಮಾರಕ ನಿರ್ಮಿಸಬಹುದಾದ ಸ್ಥಳದಲ್ಲಿ ನಡೆಸಲು ಖರ್ಗೆ ಮನವಿ

1

Kasaragod Crime News: ಅವಳಿ ಪಾಸ್‌ಪೋರ್ಟ್‌; ಕೇಸು ದಾಖಲು

1-weqeqw

Traffic; ಉಡುಪಿ ನಗರದಲ್ಲಿ 5 ದಿನ ರಸ್ತೆ ಮಾರ್ಗಗಳಲ್ಲಿ ಮಾರ್ಪಾಡು

Australian Open:  ಹಿಂದೆ ಸರಿದ ಸಿಮೋನಾ ಹಾಲೆಪ್‌

Australian Open: ಹಿಂದೆ ಸರಿದ ಸಿಮೋನಾ ಹಾಲೆಪ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.