ಪ್ರವಾಸಿ ತಾಣವಾದ ಸ್ಮಶಾನ… ಇಲ್ಲಿ Pre-Wedding Shoot, Birthday ಪಾರ್ಟಿ ಕೂಡ ನಡೆಯುತ್ತೆ
ಪ್ರವಾಸಿತಾಣವನ್ನೂ ಮೀರಿಸುವಂತಿದೆ ಇಲ್ಲಿನ ಸ್ಮಶಾನ
ಸುಧೀರ್, Jul 22, 2024, 6:04 PM IST
ಸ್ಮಶಾನ ಎಂದಾಗ ನಮ್ಮ ಮನಸ್ಸಿನಲ್ಲಿ ಬರುವುದು ದುಃಖದ ವಿಚಾರ, ನೆನಪುಗಳು ಮಾತ್ರ, ಇದರ ಬಗ್ಗೆ ಮಾತನಾಡಲು ಕೂಡ ಜನ ಹೆದರುತ್ತಾರೆ. ಅಷ್ಟೇ ಯಾಕೆ ಸಂಜೆಯಾಗುತ್ತಿದ್ದಂತೆ ಈ ಮಾರ್ಗದಲ್ಲಿ ಸಂಚರಿಸಲೂ ಜನ ಹೆದರುತ್ತಾರೆ. ಆದರೆ ಇಲ್ಲಿರುವ ಸ್ಮಶಾನ ಎಲ್ಲದಕ್ಕಿಂತ ಕೊಂಚ ಭಿನ್ನವಾಗಿದೆ, ಇಲ್ಲಿನ ಸ್ಮಶಾನವನ್ನು ಜನರು ಪ್ರವಾಸಿತಾಣವಾಗಿ ಪರಿಗಣಿಸಿದ್ದಾರೆ ಹಾಗಾಗಿ ದಿನ ಇಲ್ಲಿಗೆ ನೂರಾರು ಜನ ಬರುತ್ತಾರೆ ಅಷ್ಟು ಮಾತ್ರವಲ್ಲದೆ ಇಲ್ಲಿ ಪ್ರೀ ವೆಡ್ಡಿಂಗ್ ಶೂಟ್, ಬರ್ತ್‌ಡೇ ಪಾರ್ಟಿಗಳಂಥ ಕಾರ್ಯಕ್ರಮಗಳೂ ನಡೆಯುತ್ತವೆಯಂತೆ. ಬನ್ನಿ ಹಾಗಾದರೆ ಈ ಸ್ಮಶಾನ ಯಾವ ಪ್ರದೇಶದಲ್ಲಿದೆ, ಜನ ಯಾಕೆ ಇದನ್ನು ಪ್ರವಾಸಿತಾಣವಾಗಿ ಪರಿಗಣಿಸಿದ್ದಾರೆ ಎಂಬುದನ್ನು ತಿಳಿದುಕೊಂಡು ಬರೋಣ…
ಗುಜರಾತ್‌ನ ಬನಸ್ಕಾಂತ ಜಿಲ್ಲೆಯ ದಿಸಾದಲ್ಲಿದೆ ಈ ಸ್ಮಶಾನ… ಸುಮಾರು 12,000 ಚದರ ಅಡಿ ಪ್ರದೇಶದಲ್ಲಿ 5 ರಿಂದ 7 ಕೋಟಿ ರೂಪಾಯಿ ವೆಚ್ಚದಲ್ಲಿ ಸ್ಮಶಾನವನ್ನು ನಿರ್ಮಾಣಗೊಳಿಸಲಾಗಿದೆ, ಈ ಪ್ರದೇಶದಲ್ಲಿ ಮಕ್ಕಳಿಗೆ ಆಟದ ವ್ಯವಸ್ಥೆಯಿದೆ, ಸಂಜೆಯ ವೇಳೆಗೆ ಇಲ್ಲಿನ ಸುತ್ತಮುತ್ತಲಿನ ಜನ ವಿಹಾರಕ್ಕೆ ಬರುತ್ತಾರೆ, ಉದ್ಯಾನವನವಿದ್ದು ನೂರಾರು ಹೂವಿನ ಗಿಡಗಳಿಂದ ಕೂಡಿದ್ದು ಪ್ರವಾಸಿ ತಾಣವಾಗಿ ಮಾರ್ಪಟ್ಟಿದೆ.
ಪ್ರೀ ವೆಡ್ಡಿಂಗ್, ಬರ್ತ್‌ಡೇ ಪಾರ್ಟಿ:
ಈ ಸ್ಮಶಾನವನ್ನು ಯಾವ ರೀತಿ ನಿರ್ಮಾಣಗೊಳಿಸಲಾಗಿದೆ ಎಂಬುದಕ್ಕೆ ಇಲ್ಲಿ ದಿನ ನಿತ್ಯ ಬೆಳಗಾಗುತ್ತಲೇ ಫೋಟೋ ಶೂಟ್ ಗಳು ನಡೆಯುತ್ತಿರುತ್ತವೆ, ನೂರಾರು ಮಂದಿ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ, ಅಲ್ಲದೆ ಸಂಜೆ ವೇಳೆ ಇಲ್ಲಿ ಬರ್ತ್‌ಡೇ ಪಾರ್ಟಿ ಸೇರಿದಂತೆ ಇತರ ಕಾರ್ಯಕ್ರಮಗಳೂ ನಡೆಯುತ್ತಿರುವುದರಿಂದ ಇದೊಂದು ಸ್ಮಶಾನ ಅನ್ನುವ ಭಾವನೆ ಯಾರಿಗೂ ಬರಲಾರದು.
ಎರಡು ಪ್ರಮುಖ ಪ್ರದೇಶಗಳಾಗಿ ವಿಂಗಡಣೆ :
ಬನಾಸ್ ನದಿಯ ದಡದಲ್ಲಿರುವ ದಿಸಾ ಸ್ಮಶಾನ ಪ್ರದೇಶವನ್ನು ಎರಡು ಭಾಗಗಳಾಗಿ ವಿಂಗಡಣೆ ಮಾಡಲಾಗಿದೆ ಒಂದು ಭಾಗದಲ್ಲಿ ಸ್ಮಶಾನ ಇದ್ದರೆ ಇನ್ನೊಂದು ಭಾಗದಲ್ಲಿ ಉದ್ಯಾನವನ, ಮನರಂಜನಾ ಸ್ಥಳ ಸೇರಿದಂತೆ ಪಿಕ್ನಿಕ್ ಸ್ಪಾಟ್ ಆಗಿ ಮಾರ್ಪಾಡು ಮಾಡಲಾಗಿದ್ದು ಇಲ್ಲಿ ಹಚ್ಚ ಹಸಿರಾದ ಹೂ ಗಿಡಗಳು, ಇಲ್ಲಿನ ಗೋಡೆಗಳ ಮೇಲೆ ಬಿಡಿಸಿದ ಸುಂದರವಾದ ವರ್ಣಚಿತ್ರಗಳು. ಆಕರ್ಷಕವಾದ ಆಕೃತಿಗಳು, ದೇವರ ವಿಗ್ರಹಗಳು, ಪ್ರಾರ್ಥನಾ ಮಂದಿರ, ಹಿರಿಯರಿಗೆ ಗ್ರಂಥಾಲಯ ಸೇರಿದಂತೆ ಬಾವಿ ಮತ್ತು ಮಳೆನೀರು ಕೊಯ್ಲು ಸೌಲಭ್ಯಗಳನ್ನು ಒಳಗೊಂಡಂತೆ ಹಲವಾರು ಸೌಲಭ್ಯಗಳನ್ನು ಇಲ್ಲಿ ಒದಗಿಸಲಾಗಿದೆ.
ಶವ ಸಂಸ್ಕಾರಕ್ಕೆ 1 ರೂ.
ದಿಸಾ ಸ್ಮಶಾನದಲ್ಲಿ ಶವಸಂಸ್ಕಾರಕ್ಕೆ ಕೇವಲ ಒಂದು ರೂಪಾಯಿ ಮಾತ್ರ ಶುಲ್ಕವನ್ನು ಪಾವತಿ ಮಾಡಿದರೆ ಸಾಕು, ಕಷ್ಟದಲ್ಲಿರುವ ಕುಟುಂಬಗಳಿಗೆ ಇಲ್ಲಿನ ವ್ಯವಸ್ಥೆ ಸಹಕಾರಿಯಾಗಿದೆ.
ಸ್ಮಶಾನ ಎಂಬ ಭಯವಿಲ್ಲ:
ಸಾಮಾನ್ಯವಾಗಿ ಸ್ಮಶಾನ ಎಂದಾಕ್ಷಣ ಎಲ್ಲರಿಗೂ ಭಯ ಇದ್ದೆ ಇರುತ್ತದೆ, ಜನ ಈ ಪ್ರದೇಶದಲ್ಲಿ ರಾತ್ರಿ ಬಿಡಿ ಹಗಲಲ್ಲೂ ಸಂಚರಿಸಲು ಹೆದರುತ್ತಾರೆ, ಆದರೆ ಇಲ್ಲಿನ ಪ್ರದೇಶ ಸ್ಮಶಾನಕ್ಕೆ ಮಾತ್ರ ಸೀಮಿತವಾಗಿರದೆ ಪ್ರವಾಸಿ ತಾಣವಾಗಿ ಮಾರ್ಪಾಡು ಆಗಿರುವುದರಿಂದ ಜನ ನಿರ್ಭಿತಿಯಿಂದ ಬರುತ್ತಾರೆ, ಮಕ್ಕಳ ಜೊತೆ ಇಲ್ಲಿಗೆ ಬಂದು ಸಮಯ ಕಳೆಯುತ್ತಾರೆ, ಇಲ್ಲಿರುವ ಗ್ರಂಥಾಲಯದಲ್ಲಿ ಪುಸ್ತಕಗಳನ್ನು ಓದಿ ಜ್ಞಾನವನ್ನು ವೃದ್ಧಿಸಿಕೊಳ್ಳುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf ಗೆಜೆಟ್ ನೋಟಿಫಿಕೇಶನ್ ನಲ್ಲಿ ಬಿಜೆಪಿ ಪಾಲಿದೆ: ಎಚ್.ಕೆ. ಪಾಟೀಲ್ ಕಿಡಿ
Waqf ವಿಷಯ ಮುಗಿದು ಹೋಗಿದೆ.. ಬಿಜೆಪಿಯವರಿಂದ ಗೊಂದಲ: ಲಕ್ಷ್ಮಣ ಸವದಿ
Dandeli: ಅಪರಿಚಿತ ವಾಹನ ಡಿಕ್ಕಿ; ಕರು ಸಾವು
Covid ಗಿಂತ ಬಿಜೆಪಿ ಭ್ರಷ್ಟಾಚಾರದಿಂದ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದಾರೆ: ಖಂಡ್ರೆ
Delhi: ಕ್ಷುಲ್ಲಕ ಕಾರಣಕ್ಕೆ 19ರ ಯುವಕನ ಗುಂಡಿಕ್ಕಿ ಹ*ತ್ಯೆಗೈದ ಅಪ್ರಾಪ್ತರು!!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.