ಇದು ನನ್ನ ಕೊನೆ ಅಧಿವೇಶನ; ಸಂತೋಷದಿಂದ ಹೊರ ಹೋಗುತ್ತಿದ್ದೇನೆ: ಎಸ್.ಆರ್.ಪಾಟೀಲ
ನಾನು ಸದನಕ್ಕೆ ಬಂದಾಗ ಮೊದಲ ಬಾರಿಗೆ ಮಾತನಾಡಿದ್ದೇ ಯುಕೆಪಿ ಯೋಜನೆ ಕುರಿತಾಗಿ ಆದು ನನ್ನ ಬದ್ಧತೆಯಾಗಿದೆ.
Team Udayavani, Dec 22, 2021, 1:20 PM IST
ಸುವರ್ಣ ವಿಧಾನಸೌಧ: ವಿಧಾನಪರಿಷತ್ ಸದಸ್ಯನಾಗಿ ನನಗೆ ಇದು ಕೊನೆಯ ಅಧಿವೇಶನ, 24 ವರ್ಷಗಳಿಂದ ಸದಸ್ಯನಾಗಿ ಜನರ ಭಾವನೆ ಗಳಿಗೆ ಧ್ವನಿಯಾಗಿ ಕಾರ್ಯನಿರ್ವಹಿಸಿದ್ದೇನೆ, ಪಕ್ಷ ನನಗೆ ವಿಶ್ರಾಂತಿ ನೀಡಿದೆ. ಸಂತೋಷದಿಂದ ಹೊರ ಹೋಗುತ್ತಿದ್ದೇನೆ ಎಂದು ವಿಪಕ್ಷ ನಾಯಕ ಎಸ್.ಆರ್.ಪಾಟೀಲ ಹೇಳಿದರು.
ವಿಧಾನಪರಿಷತ್‌ನಲ್ಲಿ ಮಾತನಾಡಿದ ಅವರು, ಪಕ್ಷ ನನಗೆ ಎಲ್ಲ ಅವಕಾಶಗಳನ್ನು ನೀಡಿದೆ. ಸಂತಸ ದಿಂದಲೇ ಹೊರಹೋಗುತ್ತಿದ್ದೇನೆ ಎಂದು ತಿಳಿಸಿದರು. 24 ವರ್ಷಗಳ ಹಿಂದೆ ನಾನು ಸದನಕ್ಕೆ ಬಂದಾಗ ಮೊದಲ ಬಾರಿಗೆ ಮಾತನಾಡಿದ್ದೇ ಯುಕೆಪಿ ಯೋಜನೆ ಕುರಿತಾಗಿ ಆದು ನನ್ನ ಬದ್ಧತೆಯಾಗಿದೆ.
ಈಗಲು ನನ್ನ ಮನವಿ ಇಷ್ಟೇ. ಯುಕೆಪಿ-3ನೇ ಹಂತದ ಯೋಜನೆಯಡಿ ನಾಲ್ಕು ಹಂತದಲ್ಲಿ ಭೂ ಸ್ವಾಧೀನಕ್ಕೆ ಸರ್ಕಾರ ಚಿಂತಿಸಿದೆ. ಸಂತ್ರಸ್ತರ ಭಾವನೆಗಳನ್ನು ಅರ್ಥ ಮಾಡಿ ಕೊಂಡು ಒಂದೇ ಬಾರಿಗೆ 524.256 ಮೀಟರ್‌ಗೆ ಎಷ್ಟು ಅಗತ್ಯವೋ ಅಷ್ಟು ಭೂಮಿ ಸ್ವಾಧೀನಪಡಿಸಿಕೊಂಡು ಬಿಡಿ ಎಂಬುದು ನನ್ನ ಮನವಿ ಎಂದು ಭಾವುಕರಾದರು.
24 ವರ್ಷ ಕಾಲ ಮೇಲ್ಮನೆಯಲ್ಲಿ ಕಾಂಗ್ರೆಸ್ ನ್ನು ಪ್ರತಿನಿಧಿಸಿದ್ದ ಪಾಟೀಲ್ ಕಾಂಗ್ರೆಸ್ ಕಾರ್ಯಾಧ್ಯಕ್ಷರಾಗಿ ಸಚಿವರಾಗಿಯೂ ಕೆಲಸ ಮಾಡಿದ್ದಾರೆ. ತಮ್ಮ ಕೊನೆಯ ಅಧಿವೇಶನದ ಸಂದರ್ಭದಲ್ಲೂ ಅವರು ಸಭಾಪತಿ ಹೊರಟ್ಟಿಯವರಿಂದ ಒಂದು ದಿನದ ಮೂಲಕ ಅಮಾನತು ಶಿಕ್ಷೆಗೆ ಒಳಗಾಗಿದ್ದರು. ಹೀಗಾಗಿ ಕೊನೆಯ ದಿನದವರೆಗೂ ಎಸ್.ಆರ್.ಪಾಟೀಲರು ಪರಿಷತ್ ನಲ್ಲಿ ಹೋರಾಟ ನಡೆಸಿಯೇ ಅವಧಿ ಪೂರ್ಣಗೊಳಿಸಿದಂತಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUDA Case: ಸಿಬಿಐ ತನಿಖೆ ಕೋರಿದ್ದ ಅರ್ಜಿ ವಿಚಾರಣೆ ನ.26ಕ್ಕೆ ಮುಂದೂಡಿದ ಹೈಕೋರ್ಟ್
Belagavi: ತಹಶೀಲ್ದಾರ್ ಕೊಠಡಿಯಲ್ಲೇ ಸಿಬ್ಬಂದಿ ನೇಣಿಗೆ ಶರಣು, ಸ್ಥಳದಲ್ಲಿ ಡೆತ್ ನೋಟ್ ಪತ್ತೆ
MUDA Case: ಲೋಕಾಯುಕ್ತ ನೋಟಿಸ್ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಸಿಎಂ
ಅಂಗಡಿಯಲ್ಲಿ ಬಿಟ್ಟು ಹೋಗಿದ್ದ 1.20 ಲ.ರೂ ಹಿಂದಿರುಗಿಸಿ ಮಾನವೀಯತೆ ಮೆರೆದ ಶಾಸಕ ಬಸವಂತಪ್ಪ
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
MUST WATCH
ಹೊಸ ಸೇರ್ಪಡೆ
MUDA Case: ಸಿಬಿಐ ತನಿಖೆ ಕೋರಿದ್ದ ಅರ್ಜಿ ವಿಚಾರಣೆ ನ.26ಕ್ಕೆ ಮುಂದೂಡಿದ ಹೈಕೋರ್ಟ್
Belagavi: ತಹಶೀಲ್ದಾರ್ ಕೊಠಡಿಯಲ್ಲೇ ಸಿಬ್ಬಂದಿ ನೇಣಿಗೆ ಶರಣು, ಸ್ಥಳದಲ್ಲಿ ಡೆತ್ ನೋಟ್ ಪತ್ತೆ
MUDA Case: ಲೋಕಾಯುಕ್ತ ನೋಟಿಸ್ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಸಿಎಂ
Mangaluru: ಪರಿಶಿಷ್ಟ ಜಾತಿ ಪಟ್ಟಿಗೆ ಮರುಸೇರ್ಪಡೆ ಆಗ್ರಹಿಸಿ ಕುಡುಬಿ ಸಮಾಜದವರಿಂದ ಜಾಥಾ
Canada: ಹಿಂದೂ ದೇಗುಲದ ಮೇಲೆ ದಾಳಿ-ಖಲಿಸ್ತಾನಿಗಳ ವಿರುದ್ಧ ಸಾವಿರಾರು ಭಾರತೀಯರ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.