ಇದು ಮಾಮೂಲಿ ಲವ್ ಸ್ಟೋರಿ ಅಲ್ಲ…”ಬೈ ಟು ಲವ್ ’ ಬಗ್ಗೆ ಶ್ರೀಲೀಲಾ ಮಾತು
Team Udayavani, Feb 18, 2022, 1:40 PM IST
“ಸದ್ಯ ನನ್ನ ಫೋಕಸ್ ಏನಿದ್ರೂ “ಬೈ ಟು ಲವ್’ ಕಡೆಗೆ. ನನಗೆ “ಬೈ ಟು ಲವ್’ ತುಂಬ ಖುಷಿಕೊಟ್ಟಿದೆ. ಸದ್ಯ ಎಲ್ಲೇ ಹೋದ್ರೂ “ಬೈ ಟು ಲವ್’ ವಿಷಯ ಬಿಟ್ಟು ಬೇರೇನೂ ಮಾತನಾಡೋದಕ್ಕೆ ಆಗ್ತಿಲ್ಲ. ಅಷ್ಟರ ಮಟ್ಟಿಗೆ “ಬೈ ಟು ಲವ್’ ಹ್ಯಾಂಗೋವರ್‌ನಲ್ಲಿದ್ದೇನೆ’ ಇದು ನಟಿ ಶ್ರೀಲೀಲಾ ಮಾತು.
ಹೌದು, “ಕಿಸ್’ ಮತ್ತು “ಭರಾಟೆ’ ಖ್ಯಾತಿಯ ನಾಯಕಿ ಶ್ರೀಲೀಲಾ ಈಗ “ಬೈ ಟು ಲವ್’ ಮೂಡ್‌ನಲ್ಲಿದ್ದಾರೆ! ಕಳೆದ ಎರಡು ಮೂರು-ವಾರಗಳಿಂದ ಶ್ರೀಲೀಲಾ ಎಲ್ಲಿಗೇ ಹೋದ್ರೂ, ಏನೇ ಮಾತನಾಡಿದ್ರೂ ಅದೆಲ್ಲವೂ “ಬೈ ಟು ಲವ್’ ಮ್ಯಾಟರ್… ಅಂದಹಾಗೆ, ಇದಕ್ಕೆಲ್ಲ ಕಾರಣವಾಗಿರುವುದು, ಈ ವಾರ ಬಿಡುಗಡೆಯಾಗುತ್ತಿರುವ “ಬೈ ಟು ಲವ್’ ಸಿನಿಮಾ.
ಈ ವಾರ ಶ್ರೀಲೀಲಾ ಅಭಿನಯದ ಮೂರನೇ ಕನ್ನಡ ಚಿತ್ರ “ಬೈ ಟು ಲವ್’ ಬಿಡುಗಡೆಯಾಗುತ್ತಿದೆ. ಈ ವರ್ಷದಲ್ಲಿ ಬಿಡುಗಡೆಯಾಗುತ್ತಿರುವ ತಮ್ಮ ಮೊದಲ ಸಿನಿಮಾ “ಬೈ ಟು ಲವ್’ ಬಗ್ಗೆ ಶ್ರೀಲೀಲಾ ಅವರಿಗೂ ಸಾಕಷ್ಟು ನಿರೀಕ್ಷೆ ಇದೆ. ಈ ಬಗ್ಗೆ “ಉದಯವಾಣಿ’ ಜೊತೆಗೆ “ಬೈ ಟು ಟಾಕ್’ ಮಾಡಿದ ಶ್ರೀಲೀಲಾ “ಬೈ ಟು ಲವ್’ ಬಗ್ಗೆ ಒಂದಷ್ಟು ವಿಷಯಗಳನ್ನು ಹಂಚಿಕೊಂಡಿದ್ದಾರೆ.
“ಒಂದು ಒಳ್ಳೆಯ ಸಿನಿಮಾವನ್ನ ನಾವೇ ಮಾಡ್ಬೇಕು ಅಂದ್ರೆ, ಒಂದು ಒಳ್ಳೆಯ ಕಥೆ, ಒಳ್ಳೆಯ ಡೈರೆಕ್ಟರ್, ಒಳ್ಳೆಯ ಪ್ರೊಡಕ್ಷನ್ ಹೌಸ್, ಒಳ್ಳೆಯ ಆರ್ಟಿಸ್ಟ್‌ಗಳನ್ನ ಹುಡುಕಿಕೊಂಡು ಹೋಗಬೇಕಾಗುತ್ತದೆ. ಆದ್ರೆ ಅದೇ ಒಂದು ಒಳ್ಳೆಯ ಸಿನಿಮಾ ತಾನಾಗಿಯೇ ಆಗಬೇಕಾದ್ರೆ, ಅದು ತನಗೆ ಬೇಕಾದವರನ್ನ ತಾನೇ ಹುಡುಕಿಕೊಂಡು ಹೋಗಿ, ತನಗೆ ಬೇಕಾದವರನ್ನ ಆಯ್ಕೆ ಮಾಡಿಕೊಳ್ಳುತ್ತದೆ. ನನ್ನ ಪ್ರಕಾರ “ಬೈ ಟು ಲವ್’ ಅಂಥದ್ದೇ ಸಿನಿಮಾ. ಅದರ ಸಬೆjಕ್ಟ್ ಮತ್ತು ಸ್ಕ್ರಿಪ್ಟ್ ತನಗೆ ಬೇಕಾದವರನ್ನ ಹುಡುಕಿಕೊಂಡು ಹೋಗಿ ಒಳ್ಳೆಯ ಸಿನಿಮಾ ಆಗುವಂತೆ ಮಾಡಿತು. ನಿಜ ಹೇಳ್ಬೇಕು ಅಂದ್ರೆ, ನಾವು ಈ ಸಿನಿಮಾ ಸೆಲೆಕ್ಟ್ ಮಾಡಿದ್ದಲ್ಲ, ಈ ಸಿನಿಮಾನೇ ನಮ್ಮನ್ನ ಸೆಲೆಕ್ಟ್ ಮಾಡಿಕೊಂಡಿದೆ’ ಎನ್ನುವ ಅಭಿಪ್ರಾಯ ಶ್ರೀಲೀಲಾ ಅವರದ್ದು.
ಲವ್‌ಸ್ಟೋರಿ ಆದ್ರೂ ಆ ಥರ ಅಲ್ಲ…!
“ಸಿನಿಮಾದ ಟೈಟಲ್ಲೇ ಹೇಳುವಂತೆ “ಬೈ ಟು ಲವ್’ ಲವ್‌ಸ್ಟೋರಿ ಸಿನಿಮಾ. ಹಾಗಂತ ಇದು ಮಾಮೂಲಿ ಲವ್‌ಸ್ಟೋರಿ ಸಿನಿಮಾವಂತೂ ಖಂಡಿತಾ ಅಲ್ಲ. ನೀವೇನಾದ್ರೂ ಎಲ್ಲ ಲವ್‌ಸ್ಟೋರಿ ಸಿನಿಮಾಗಳ ಥರ ಇದೂ ಮಾಮೂಲಿ ಲವ್‌ಸ್ಟೋರಿ ಸಿನಿಮಾ ಇರಬಹುದು ಅಂಥ ಅಂದುಕೊಂಡರೆ, ನಿಮ್ಮ ಊಹೆ ಖಂಡಿತಾ ತಪ್ಪು. ಇಲ್ಲಿ ಲವ್ ಇದೆ. ಸೆಂಟಿಮೆಂಟ್ – ಎಮೋಶನ್ಸ್, ಆ್ಯಕ್ಷನ್, ಕಾಮಿಡಿ, ಸಸ್ಪೆನ್ಸ್ ಎಲ್ಲವೂ ಇದೆ. ಅದೆಲ್ಲದಲ್ಲೂ ಹೊಸಥರದ ಡೆಫಿನೇಶನ್ (ವ್ಯಾಖ್ಯಾನ) ಇದೆ. ಒಂದು ಲವ್ ಸ್ಟೋರಿ ಅಂದ್ರೆ ಅಲ್ಲಿ ಹೀರೋ, ಹೀರೋಯಿನ್ ಇದ್ದೇ ಇರ್ತಾರೆ. ಆದ್ರೆ ಇದರಲ್ಲಿ ಹಾಗಲ್ಲ. ಇದು ಎರಡು ಡಿಫರೆಂಟ್ ಮೆಂಟಾಲಿಟಿ ನಡುವಿನ ಜರ್ನಿ ಇದೆ. ಎಲ್ಲ ಥರದ ಆಡಿಯನ್ಸ್‌ಗೂ ಕನೆಕ್ಟ್ ಆಗುವಂಥ ಸಬೆjಕ್ಟ್ ಇದು’ ಎಂದು “ಬೈ ಟು ಲವ್’ ಸಿನಿಮಾವನ್ನು ವ್ಯಾಖ್ಯಾನಿಸುತ್ತಾರೆ ಶ್ರೀಲೀಲಾ.
ಆಡಿಯನ್ಸ್‌ಗೆ ಇಷ್ಟವಾಗ್ತೀನಿ ಅನ್ನೋ ನಂಬಿಕೆ ಇದೆ
“ಸಾಮಾನ್ಯವಾಗಿ ಯಾರೇ ಕಲಾವಿದರಾದ್ರೂ, ತಮ್ಮ ಪಾತ್ರ ಮತ್ತು ಕೆಲಸ ಆಡಿಯನ್ಸ್‌ಗೆ ಇಷ್ಟವಾಗಬೇಕು ಅಂಥ ಬಯಸುತ್ತಾರೆ. ಅದಕ್ಕಾಗಿ ಹೊಸಥರದ ಸಬ್ಜೆಕ್ಟ್, ಪಾತ್ರಗಳನ್ನು ಹುಡುಕುತ್ತಿರುತ್ತಾರೆ. ಆದ್ರೆ ಈ ವಿಷಯದಲ್ಲಿ ನಾನು ತುಂಬಾನೇ ಲಕ್ಕಿ ಅಂಥ ಹೇಳಬಹುದು. ಮೊದಲ ಸಿನಿಮಾದಿಂದ ಇಲ್ಲಿಯವರೆಗೆ ಪ್ರತಿ ಸಿನಿಮಾದಲ್ಲೂ ಹೊಸಥರ ಎನಿಸುವಂಥ ಪಾತ್ರಗಳು ಸಿಗುತ್ತಿದೆ. “ಬೈ ಟು ಲವ್’ನಲ್ಲೂ ಅಂಥದ್ದೇ ಪಾತ್ರವಿದೆ. ನಾನು ತುಂಬ ಖುಷಿಯಿಂದ ಒಪ್ಪಿಕೊಂಡು ಮಾಡಿದ ಸಿನಿಮಾ ಮತ್ತು ಪಾತ್ರ ಆಡಿಯನ್ಸ್‌ಗೂ ಇಷ್ಟವಾಗುವುದೆಂಬ ನಂಬಿಕೆ ಇದೆ’ ಎನ್ನುತ್ತಾರೆ ಶ್ರೀಲೀಲಾ.
“ಕೆವಿಎನ್ ಪ್ರೊಡಕ್ಷನ್ಸ್’ ಬ್ಯಾನರ್‌ನಲ್ಲಿ ನಿಶಾ ವೆಂಕಟ್ ಕೋನಂಕಿ ಹಾಗೂ ಸುಪ್ರೀತ್ ನಿರ್ಮಿಸಿರುವ “ಬೈ ಟು ಲವ್’ ಚಿತ್ರಕ್ಕೆ ಹರಿ ಸಂತೋಷ್ ಆಕ್ಷನ್-ಕಟ್ ಹೇಳಿದ್ದಾರೆ. ಚಿತ್ರಕ್ಕೆ ಮಹೇಂದ್ರ ಸಿಂಹ ಛಾಯಾಗ್ರಹಣವಿದೆ. ಚಿತ್ರದ ಹಾಡುಗಳಿಗೆ ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸಿದ್ದು, ಈಗಾಗಲೇ ಹಾಡುಗಳು ಮತ್ತು ಟ್ರೇಲರ್ ಹಿಟ್ ಲಿಸ್ಟ್‌ನಲ್ಲಿದೆ. “ಬಜಾರ್’ ಸಿನಿಮಾದ ಬಳಿಕ ನಟ ಧನ್ವೀರ್ “ಬೈ ಟು ಲವ್’ ಸಿನಿಮಾದಲ್ಲಿ ನಾಯಕನಾಗಿ ಲವರ್ ಬಾಯ್ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
Nodidavaru Enanthare Movie: ನವೀನ್ ಶಂಕರ್ ಚಿತ್ರದ ಟೀಸರ್ ಬಂತು
BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ
Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್
Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.