![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
Team Udayavani, May 15, 2020, 6:15 AM IST
ಬೆಂಗಳೂರು: ಲಾಕ್‌ಡೌನ್ ಪರಿಣಾಮ ಹೊರ ಜಿಲ್ಲೆ -ಹೊರ ರಾಜ್ಯಗಳ ವಲಸೆ ಕಾರ್ಮಿಕರು ಸ್ವಂತ ಊರುಗಳತ್ತ ಮುಖ ಮಾಡಿದ್ದಾರೆ. ಇದು ಭವಿಷ್ಯದಲ್ಲಿ ಕನ್ನಡಿಗರಿಗೆ ಉದ್ಯೋಗಾ ವಕಾಶ ಸೃಷ್ಟಿಗೆ ವಿಪುಲ ಅವಕಾಶ ತೆರದಿಡಲಿದೆ. ಇದಕ್ಕಾಗಿ “ನಮ್ಮವರು’ ಮನಸ್ಸು ಮಾಡಬೇಕಷ್ಟೇ.
ನಿರ್ಮಾಣ ಸಹಿತ ವಿವಿಧ ಕ್ಷೇತ್ರಗಳ ಕಾರ್ಮಿಕರು ಬಹುತೇಕ ಹೊರ ರಾಜ್ಯಗಳಿಂದ ಬಂದವರು. ಪ್ರಸ್ತುತ ಅವರು ಊರಿಗೆ ಮರಳಿದ್ದಾರೆ. ಈಗ ಪ್ರತಿಷ್ಠೆ ಬದಿಗೊತ್ತಿ ಮುಂದೆ ಬಂದರೆ ಮತ್ತು ರಾಜ್ಯ ಸರಕಾರ ಪಣತೊಟ್ಟರೆ ಈಗಿನ ಅನಿವಾರ್ಯತೆಯನ್ನು ಅವಕಾಶ ವಾಗಿ ಪರಿವರ್ತಿಸಬಹುದು. ಅದಕ್ಕೆ ಇದು ಸಕಾಲವೂ ಹೌದು ಎಂದು ಸಣ್ಣ ಕೈಗಾರಿಕೆಗಳು ಮತ್ತು ಕಟ್ಟಡ ನಿರ್ಮಾಣ ಸಂಘಟನೆಗಳು ವಿಶ್ಲೇಷಿಸುತ್ತವೆ.
ರಾಜ್ಯದ ಸಣ್ಣ ಕೈಗಾರಿಕಾ ವಲಯದಲ್ಲಿ 6.5 ಲಕ್ಷ ಸಣ್ಣ, ಅತೀ ಸಣ್ಣ ಉದ್ದಿಮೆಗಳಿವೆ. ಇಲ್ಲಿ 10ರಿಂದ 15 ಲಕ್ಷ ವಲಸೆ ಕಾರ್ಮಿಕರು. ಕಟ್ಟಡ ನಿರ್ಮಾಣ ವಲಯದ ಕಾರ್ಮಿಕರಲ್ಲಿ 6ರಿಂದ 7 ಲಕ್ಷ ವಲಸಿಗರು. ಪ್ರಸ್ತುತ ಅವರು ತವರಿಗೆ ಮರಳಿರುವುದರಿಂದ ರಾಜ್ಯ ದಲ್ಲಿ ಕನಿಷ್ಠ 10 ಲಕ್ಷ ಉದ್ಯೋಗ ಗಳು ತೆರವಾಗಿದ್ದು, ಈ ಜಾಗವನ್ನು ತುಂಬಲು ಸ್ಥಳೀಯರಿಗೆ ಅವಕಾಶ ಸಿಗಲಿದೆ ಎಂಬುದು ಸಣ್ಣ ಕೈಗಾರಿಕೆ ಸಂಘಟನೆಗಳ ಲೆಕ್ಕಾಚಾರ.
ವಲಸೆ ಕಾರ್ಮಿಕರು ತವರಿಗೆ ಮರಳಿರುವುದರಿಂದ ಕುಶಲೇತರ ಕಾರ್ಮಿಕರು ಹೆಚ್ಚಿರುವ ಸಂಘಟಿತ ಮತ್ತು ಅಸಂಘ ಟಿತ ಸಣ್ಣ ಉದ್ದಿಮೆ, ನಿರ್ಮಾಣ ವಲಯ ಗಂಭೀರ ಸಮಸ್ಯೆ ಎದುರಿಸುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಸ್ಥಳೀಯರಿಗೆ ಬೇಡಿಕೆ ಮತ್ತು ಆದ್ಯತೆ ಹೆಚ್ಚಿರುತ್ತದೆ. ಈ ಅವಕಾಶವನ್ನು ಸ್ಥಳೀಯರು ಎಷ್ಟರಮಟ್ಟಿಗೆ ಬಳಸಿಕೊಳ್ಳುತ್ತಾರೆ ಎಂದು ಕಾದು ನೋಡಬೇಕಿದೆ ಎಂದು ಸಣ್ಣ ಕೈಗಾರಿಕೆಗಳು ಮತ್ತು ನಿರ್ಮಾಣ ಕಾಮಗಾರಿಗಳ ವಲಯದ ತಜ್ಞರು ಅಭಿಪ್ರಾಯಪಡುತ್ತಾರೆ.
ನೀಲನಕ್ಷೆ ರೂಪಿಸಲಿ
ಒಂದು ಕಾಲದಲ್ಲಿ ಬೆಂಗಳೂರು ಸಹಿತ ಇಡೀ ರಾಜ್ಯದ ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ತಮಿಳರ ಪ್ರಾಬಲ್ಯ ಇತ್ತು. 90ರ ದಶಕದಲ್ಲಿ ನಡೆದ ಕಾವೇರಿ ಗಲಾಟೆಯ ಅನಂತರ ಚಿತ್ರಣ ಬದಲಾಯಿತು. ಆಗ ಉತ್ತರ ಕರ್ನಾಟಕ, ಉತ್ತರ ಭಾರತದವರಿಗೆ ಅವಕಾಶ ಸಿಕ್ಕಿತು. ಈಗ ಅವರೆಲ್ಲ ದೊಡ್ಡ ಸಂಖ್ಯೆಯಲ್ಲಿ ಹೊರಟು ಹೋಗಿದ್ದಾರೆ. ಇದು ಕನ್ನಡಿಗರಿಗೊಂದು ಸದವಕಾಶ. ವೃತ್ತಿ ಮೈಲಿಗೆ ಬಿಟ್ಟು ಈ ಅವಕಾಶಗಳನ್ನು ಕನ್ನಡಿಗರು ಬಳಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಸರಕಾರವೂ ನೀಲನಕ್ಷೆಯೊಂದನ್ನು ರೂಪಿಸಬೇಕು ಎಂದು ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಕುರಿತ ಹೋರಾಟದ ಮುಂದಾಳು ರಾ.ನಂ. ಚಂದ್ರಶೇಖರ್ ಅಭಿಪ್ರಾಯಪಡುತ್ತಾರೆ.
ವಲಸೆ ಕಾರ್ಮಿಕರು ವಾಪಸಾತಿ ಯಿಂದ ನಮ್ಮವರಿಗೆ ವಿಪುಲ ಅವಕಾಶ ಸಿಗಲಿವೆ. ಈ ಅವಕಾಶ ವನ್ನು ಬಳಸಿಕೊಳ್ಳುವ ಸವಾಲು ಸ್ಥಳೀಯರ ಮುಂದಿದೆ. ಆದರೆ ವೈಟ್ ಕಾಲರ್ ಜಾಬ್ ಇಷ್ಟಪಡುವ ಮನಃಸ್ಥಿತಿಯಿಂದ ನಮ್ಮವರು ಹೊರಬರುತ್ತಾರೆಯೇ ಎಂಬುದು ಪ್ರಶ್ನೆ.
-ಆರ್. ರಾಜು, ಅಧ್ಯಕ್ಷರು, ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ (ಕಾಸಿಯಾ)
ವಲಸಿಗರು ದಿನಕ್ಕೆ 13-14 ತಾಸು ಕೆಲಸ ಮಾಡುತ್ತಾರೆ. ಕೂಲಿ ಕಡಿಮೆ, ರಜೆ ಇಲ್ಲ. ವಲಸೆ ಕಾರ್ಮಿಕರು 30 ದಿನಗಳಲ್ಲಿ ಮುಗಿಸುವ ಯೋಜನೆಗೆ ಸ್ಥಳೀಯರಿಗೆ 40 ದಿನ ತಗಲುತ್ತದೆ ಎಂಬ ಭಾವನೆ ಇದೆ. ಇವನ್ನು ಮೆಟ್ಟಿ ನಿಂತರೆ ಸ್ಥಳೀಯರಿಗೆ ಅವಕಾಶ ಸಿಗುವುದರಲ್ಲಿ ಅನುಮಾನವಿಲ್ಲ.
– ಎನ್.ಪಿ. ಸಾಮಿ, ಅಧ್ಯಕ್ಷರು, ರಾಜ್ಯ ಕಟ್ಟಡ ನಿರ್ಮಾಣ ಕಾರ್ಮಿಕರ ಕೇಂದ್ರ ಸಂಘ.
Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್
Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ
You seem to have an Ad Blocker on.
To continue reading, please turn it off or whitelist Udayavani.