ಇದು ಮನರಂಜನೆಯ ಲೋಕ: ಮನಸ್ಸನ್ನು ಹಗುರಾಗಿಸುವ ಒಂದು ಪರ್ಯಾಯ ಮಾರ್ಗ
ಎಷ್ಟೇ ಭಯವಾದರೂ ಈ ಥೀಮ್ ಪಾರ್ಕ್‌ಗಳ ಮೇಲಿರುವ ವ್ಯಾಮೋಹವನ್ನು ಬಿಡಲಾಗದು.
Team Udayavani, Apr 27, 2024, 12:53 PM IST
ಥೀಮ್ ಪಾರ್ಕ್ ಎಂದ ಕೂಡಲೇ ಕಣ್ಣ ಮುಂದೆ ಬರುವುದು ಕಡಿದಾದ ಇಳಿಜಾರಿನಲ್ಲಿ ಹಾಯುವ, ಎತ್ತರದ ಸುರುಳಿಯೊಳಗೆ ಸುತ್ತಿ ಸುಳಿಯುವ, ತಿರುವುಗಳಿಂದ ಕೂಡಿದ ರೋಲರ್ ಕೋಸ್ಟರ್‌ಗಳು. ಚಿಕ್ಕವರಿದ್ದಾಗ ವರ್ಷಕ್ಕೊಮ್ಮೆ ಬರುತ್ತಿದ್ದ ಈ ಬಗೆಬಗೆಯ ಆಟಗಳನ್ನು ನಮ್ಮ ಎಳೆಯ ವಯಸ್ಸಿನವರ ಜತೆಗೆ ಆಡುವುದು ಬಹಳ ಮೋಜೆನ್ನಿಸುತ್ತಿತ್ತು. ಆಗ ಇದನ್ನು ಫೇರ್ ಎಂದು ಕರೆಯುತ್ತಿದ್ದವು. ಮೊಸಳೆಗಳ, ಕಪ್ಪೆಗಳ ವಿನ್ಯಾಸಗಳಿರುವ ಕುರ್ಚಿಗಳ ಮೇಲೆ ಇಬ್ಬಿಬ್ಬರಾಗಿ ಕುಳಿತು ಅವು ನಿಧಾನವಾಗಿ ತಿರುಗತೊಡಗಿದರೆ ನಮ್ಮ ಸುತ್ತಲಿನ ಪ್ರಪಂಚವೆಲ್ಲ ಗರಗರ ತಿರುಗಿದಂತಾಗುತ್ತಿತ್ತು.
ದೊಡ್ಡ ವೃತ್ತದಲ್ಲಿ ತೂಗುತ್ತಿದ್ದ ತೂಗು ತೊಟ್ಟಿಲುಗಳು ಮೇಲೆ ಹೋದಾಗ ಆಯ ತಪ್ಪಿ ಬಿದ್ದು ಬಿಟ್ಟರೆ, ಏನಾದರೂ ಸಮಸ್ಯೆಯಾಗಿ ಕೂತಿದ್ದ ತೊಟ್ಟಿಲೇ ಮುರಿದು ಹೋದರೆ ಎಂದೆಲ್ಲ ಭಯವಾಗುತ್ತಿತ್ತು. ಇಂತಹ ಭಯಂಕರ ಎನ್ನಿಸುವಂತವುಗಳನ್ನು ಬಿಟ್ಟು ನನ್ನ ಮಟ್ಟಕ್ಕೆ ಯಾವುದು ಸರಿಯಾಗುತ್ತದೆ ಎಂದು ಹುಡುಕುತ್ತಿದ್ದೆ. ಜತೆಗೆ ಇಲ್ಲಿ ಮಾರಲು ಬರುತ್ತಿದ್ದ ತರಾವರಿ ತಿಂಡಿ, ಕ್ಲಿಪ್ಪು, ಬಳೆ ಇತ್ಯಾದಿಗಳು ಸಹ ಸೆಳೆಯುತ್ತಿದ್ದವು. ಆಗ ಬೇಕೆನ್ನಿಸಿದ್ದನ್ನು ಕೊಳ್ಳುವಷ್ಟು ಆರ್ಥಿಕ ಬಲವಿರಲಿಲ್ಲ. ನೋಡಿ ಸಮಾಧಾನ ಪಟ್ಟುಕೊಳ್ಳಬೇಕಿತ್ತು. ಎಷ್ಟೇ ಭಯವಾದರೂ ಈ ಥೀಮ್ ಪಾರ್ಕ್‌ಗಳ ಮೇಲಿರುವ ವ್ಯಾಮೋಹವನ್ನು ಬಿಡಲಾಗದು.
ಇಲ್ಲಿಗೆ ಹೋಗಿ ಎಲ್ಲ ಬಗೆಯ ಆಟಗಳನ್ನು ಆಡಬೇಕು, ಹಗುರವಾಗಬೇಕು ಎನ್ನಿಸುತ್ತಲೇ ಇರುತ್ತದೆ. ಅಮೆರಿಕದಲ್ಲಿ ಇಂತಹ ಬಹಳಷ್ಟು ಥೀಮ್ ಪಾರ್ಕ್‌ಗಳು ಇವೆಯಾದರೂ ವಿಶ್ವಮಟ್ಟದಲ್ಲಿ ಪ್ರಖ್ಯಾತಿ ಪಡೆದಿರುವುದು ಯುನಿವರ್ಸಲ್ ಸ್ಟುಡಿಯೋಸ್ ಪಾರ್ಕ್‌ಗಳು. ಸದ್ಯಕ್ಕೆ ಅಮೆರಿಕದ ಒರ್ಲಾಂಡೋ ಮತ್ತು ಹಾಲಿವುಡ್ ಮತ್ತು ಜಪಾನ್, ಸಿಂಗಾಪುರ್ ಮತ್ತು ಚೀನಗಳಲ್ಲಿ ಈ ಯುನಿವರ್ಸಲ್ ಸ್ಟುಡಿಯೋಸ್ ಕಾಣಸಿಗುತ್ತದೆ.
ನಾವು ಹೋಗಿದ್ದು ಫ್ಲೋರಿಡಾ ರಾಜ್ಯದಲ್ಲಿರುವ ಒರ್ಲಾಂಡೋ ಊರಿಗೆ. ಈ ಊರಿಗೆ ಖ್ಯಾತಿ ಬಂದಿರುವುದೇ ಯುನಿವರ್ಸಲ್ ಸ್ಟುಡಿಯೋಸ್‌ನಿಂದ. ಇಲ್ಲಿಯ ಟಿಕೆಟ್ ಸಹ ಬಹಳ ದುಬಾರಿ. ಏನಿದು, ಏನಿರುತ್ತದೆ, ಯಾಕಿಷ್ಟು ಜನಪ್ರಿಯವಾಗಿದೆ ಎಂದು ಕುತೂಹಲವಾಗುವುದು ಸಹಜ. 1912ರಲ್ಲಿ ಕಾರ್ಲ್ ಲ್ಯಾಮ್ಲೆ ಎಂಬಾತ ಸ್ಯಾನ್ ಫರ್ನಾಂಡೋ ವ್ಯಾಲಿಯಲ್ಲಿ ಇನ್ನೂರು ಎಕ್ರೆಗಳ ಜಾಗವನ್ನು ಕೊಂಡು ಅಲ್ಲಿ ಜಗತ್ತಿನ ಮೊಟ್ಟ ಮೊದಲ ಫಿಲ್ಮ್ ಸ್ಟುಡಿಯೋ ಕಟ್ಟಿ ಆ ಊರಿಗೆ ಯುನಿವರ್ಸಲ್ ಸಿಟಿ ಎಂದು ಹೆಸರಿಟ್ಟ.
ಸಿನೆಮಾಗಳ ಚಿತ್ರೀಕರಣಕ್ಕೆ ಅನುಕೂಲವಾಗುವಂತಹ ಸೆಟ್‌ಗಳನ್ನು ಒದಗಿಸುವುದು ಈ ಸ್ಟುಡಿಯೋದ ಉದ್ದೇಶ. ಜಗತ್ತಿನ ಯಾವುದೇ ನಗರದ ನಕಲಿಯನ್ನು ಥೇಟ್ ಅದರಂತೆಯೇ ಇಲ್ಲಿ ನಿರ್ಮಿಸಬಹುದಿತ್ತು. ತನ್ನ ಅಗಾಧ ಆಕಾರಕ್ಕೆ ಹೆಸರಾಗಿರುವ ಯುರೋಪಿನ ನೋಟ್ರಾ ಡಾಮ್ ಕ್ಯಾಥೆಡ್ರಲ್ ಅನ್ನು ಸಹ ಇಲ್ಲಿ ಸಿನೆಮಾ ಒಂದರ ಚಿತ್ರೀಕರಣಕ್ಕಾಗಿ ನಿರ್ಮಿಸಿದ ಹೆಗ್ಗಳಿಕೆಯಿದೆ. ಶುರುವಾದ ಸಮಯದಿಂದಲೂ ಬಹಳ ಹೆಸರು ಮಾಡಿದ ಈ ಸ್ಟುಡಿಯೋಸ್ ಒಂದಾದ ಮೇಲೊಂದರಂತೆ ಬ್ಲಾಕ್ ಬಸ್ಟರ್ ಚಿತ್ರಗಳನ್ನು ಕೊಡತೊಡಗಿತು.Airport, Earthquake, Jaws, National Lampoon’s Animal House, and Coal Miner’s Daughter ಇವು ಒಂದಿಷ್ಟು ಹೆಸರಿಸಲೇಬೇಕಾದಂತಹ ಚಿತ್ರಗಳು. ಇವುಗಳಿಂದ ಯುನಿವರ್ಸಲ್‌ಗೆ ಸಾಕಷ್ಟು ದುಡ್ಡು ಬಂತು. ಸಿನೆಮಾಗಳನ್ನು ನೋಡಿದ ಜನರು ಈ ಸ್ಟುಡಿಯೋಸ್ ಒಳಗೆ ಹೋಗಿ ಅಲ್ಲಿರುವ ಅದ್ಭುತಗಳನ್ನು ನೋಡಬೇಕು ಎಂದು ಅಪೇಕ್ಷೆಪಟ್ಟರು.
ಅದಕ್ಕೆಂದೇ ಹುಟ್ಟಿಕೊಂಡಿತು ಯುನಿವರ್ಸಲ್ ಸ್ಟುಡಿಯೋಸ್. ಜನರಿಗಾಗಿಯೇ, ಅವರ ಮನೋರಂಜನೆಗಾಗಿಯೇ 1990ರಲ್ಲಿ ಒರ್ಲಾಂಡೋನಲ್ಲಿ ಯುನಿವರ್ಸಲ್ ಸ್ಟುಡಿಯೋಸ್ ಕಟ್ಟಲು ಆರಂಭ ಮಾಡಿದರು. ಇದರೊಳಗೆ ಹಲವಾರು ಸವಾರಿಗಳು, ಆಕರ್ಷಣೆಗಳು, ಜನಪ್ರಿಯ ಸಿನೆಮಾಗಳಿಗೆ ಸಂಬಂಧಿಸಿದ ನೇರಪ್ರಸಾರಗಳು ಹೀಗೆ ಮನೋರಂಜನೆಗೆ ಸಂಬಂಧಿಸಿದ ಎಲ್ಲವನ್ನೂ ನಿರ್ಮಿಸಿದರು. ಇಲ್ಲಿ ವರ್ಷಕ್ಕೆ ಸುಮಾರು ಹತ್ತು ಲಕ್ಷ ಜನ ಪ್ರವಾಸಿಗರು ಭೇಟಿ ನೀಡುತ್ತಾರೆ. ಅನಂತರದ ವರ್ಷಗಳಲ್ಲಿ ಐಲ್ಯಾಂಡ್ ಆಫ್ ಅಡ್ವೆಂಚರ್, ವೊಲ್ಕಾನೋ ಬೇ ಎಂದು ಇನ್ನು ಎರಡು ಥೀಮ್ ಪಾರ್ಕ್‌ಗಳನ್ನು ಸೇರಿಸಿದರು. ಎಪಿಕ್ ಯುನಿವರ್ಸ್ ಎಂಬ ಇನ್ನೊಂದು ಥೀಮ್ ಪಾರ್ಕ್ 2025ರ ಹೊತ್ತಿಗೆ ಯುನಿವರ್ಸಲ್ ಸ್ಟುಡಿಯೋಸ್ ಒರ್ಲಾಂಡೋ ಸೇರಿಕೊಳ್ಳಲಿದೆ. ಡಿಸ್ನಿಲ್ಯಾಂಡ್‌ಗೆ ಸರಿಸಮನಾದ ಒಂದು ಥೀಮ್ ಪಾರ್ಕ್ ಕಟ್ಟಬೇಕು ಎಂಬ ಉದ್ದೇಶದಿಂದಲೇ ಆರಂಭವಾದ ಯುನಿವರ್ಸಲ್ ಸ್ಟುಡಿಯೋಸ್ ಇವತ್ತಿಗೆ ಎಲ್ಲ ವಿಷಯಗಳಲ್ಲೂ ಡಿಸ್ನಿಲ್ಯಾಂಡ್‌ಗೆ ಸರಿಸಮನಾಗಿ ನಿಲ್ಲುತ್ತದೆ.
ಹ್ಯಾರಿ ಪಾಟರ್ ಯಾರಿಗೆ ಗೊತ್ತಿಲ್ಲ. ಜೆ.ಕೆ.ರೌಲಿಂಗ್ ಬರೆದ ಪುಸ್ತಕಗಳನ್ನು ಓದುವಾಗ ನಮ್ಮದೇ ಕಲ್ಪನೆಯಲ್ಲಿ ಹೊಸ ಜಗತ್ತು ತೆರೆದುಕೊಳ್ಳುತ್ತದೆ. ಆ ಅಸ್ಪಷ್ಟ ಕಲ್ಪನೆಗೆ ಜೀವ ಬರುವುದು ಹ್ಯಾರಿ ಪಾಟರ್ ಸಿನೆಮಾಗಳನ್ನು ನೋಡುವಾಗ. ನಾವೂ ಹಾಗವರ್ಟ್ಸ್ ಗೆ ಹೋಗಿ ವಿದ್ಯಾರ್ಥಿಗಳಾಗಬೇಕು, ನಮ್ಮ ಬಳಿಯೂ ಒಂದು ಮಾಂತ್ರಿಕ ದಂಡವಿರಬೇಕು, ಮಾಂತ್ರಿಕ ಜಗತ್ತಿನ ಬೀದಿಗಳಲ್ಲಿ ಹಾದು ಬರಬೇಕು ಎಂದೆಲ್ಲ ಅನ್ನಿಸುವುದು ಸಹಜ. ಆ ಅನುಭವಗಳನ್ನು ಅನುಭವಿಸುವ, ನಮ್ಮದಾಗಿಸಿಕೊಳ್ಳುವ ಅವಕಾಶವನ್ನು ಯುನಿವರ್ಸಲ್ ಸ್ಟುಡಿಯೋಸ್ ಕಲ್ಪಿಸಿ ಕೊಡುತ್ತದೆ. ಹ್ಯಾರಿ ಪಾಟರ್ – ದಿ ಫಾರಬಿಡನ್ ಜರ್ನಿ ಎಂಬ ಹೆಸರಿನ ಈ ಸವಾರಿ ಬಹಳ ಜನಪ್ರಿಯ.
ಸೀಟುಗಳಲ್ಲಿ ಚಲನೆಯ ಸೆನ್ಸಾರ್ ತಂತ್ರಜ್ಞಾನವನ್ನು ಅಳವಡಿಸಿರುವುದರಿಂದ ನಾವು ಕೂತಿರುವಾಗ ಅದು ಅಲ್ಲಾಡುತ್ತ ಹ್ಯಾರಿ ಪಾಟರ್ ಲೋಕಕ್ಕೆ ಸೆಳೆದೊಯ್ಯುತ್ತದೆ. ಕಣ್ಣಮುಂದೆ ಚಲಿಸುವ 3ಡಿ ಚಿತ್ರಗಳಿಂದ ನಾವು ಹ್ಯಾರಿ ಪಾಟರ್‌ನಷ್ಟೇ ವೇಗವಾಗಿ ಸಾಗುತ್ತಿದ್ದೇವೆ ಎನ್ನಿಸುತ್ತದೆ. ಅಕ್ಕ ಪಕ್ಕದಲ್ಲಿ ಕಟ್ಟಡಗಳು ಬಂದಾಗ ಆ ಕಿರಿದಾದ ಜಾಗದಲ್ಲಿ ನುಸುಳಿ ಹೋಗುವಾಗ ಭಯವಾಗುತ್ತದೆ. ಜತೆಗೆ ಆಡಿಯೋ ಸಹ ಇರುತ್ತದೆ. ನಮ್ಮ ಜತೆಗೆ ಹ್ಯಾರಿ ಪಾಟರ್, ರಾನ್ ವೀಸ್ಲಿ, ಹೆರ್ಮೋಯಿನೀ ರೈಡ್ ಮಾಡುತ್ತ ಸಿನೆಮಾದಲ್ಲಿರುವಂತೆಯೇ ಆ್ಯಕ್ಷನ್ ಜಾರಿಯಲ್ಲಿರುತ್ತದೆ.
ಮಿನಿಯನ್ಸ್ ಲ್ಯಾಂಡ್ ನನಗಿಷ್ಟವಾದ ತಾಣ. ಮಿನಿಯನ್ಸ್ ಯಾರಿಗೆ ಇಷ್ಟವಾಗುವುದಿಲ್ಲ? ಬನಾನಾ ಬನಾನಾ ಎಂದು ಓಡಾಡುವ ಇವುಗಳನ್ನು ಹಿಡಿದು ಒಂದೆಡೇ ಕೂರಿಸಲು ಸಾಧ್ಯವಾಗುವುದು ಈ ಯುನಿವರ್ಸಲ್ ಸ್ಟುಡಿಯೋಸ್‌ನಲ್ಲಿ ಮಾತ್ರ. ಮಿನಿಯನ್ಸ್ ವೇಷ ತೊಟ್ಟ ಪಾತ್ರಧಾರಿಗಳು ಅವರಂತೆಯೇ ಮು¨ªಾಗಿ ಓಡಾಡುತ್ತಿರುತ್ತಾರೆ. ಇಲ್ಲಿಯೂ ಮಿನಿಯನಸ್ ಸಿನೆಮಾದ ಅನುಭವ ಕೊಡುವ ಸವಾರಿಗಳಿವೆ. ಜುರಾಸಿಕ್ ಪಾರ್ಕ್, ಸ್ಕಲ್ ಐಲ್ಯಾಂಡ್, ಟ್ರಾನ್ಸ್‌ಪೋರ್ಟ್ಸ್… ಹೀಗೆ ಎಲ್ಲದರ ಬಗ್ಗೆ ವಿವರವಾಗಿ ಬರೆಯುತ್ತ ಹೋದರೆ ಪುಟಗಳು ಸಾಲುವುದಿಲ್ಲ. ವೋಲ್ಕಾನೋ ಬೇ ಎಂದು ಇತ್ತೀಚಿಗೆ ನಿರ್ಮಾಣವಾಗಿರುವ ಪಾರ್ಕ್‌ನಲ್ಲಿ ದೊಡ್ಡ ವೋಲ್ಕಾನೋ, ಅದರಿಂದ ಪುಟಿಯುವ ನೀರು, ಕೆಳಗೆ ನೀರಿನ ಕೊಳ ಮತ್ತು ನೀರಿನಲ್ಲಿ ಆಡುವ ಬಹಳಷ್ಟು ಕ್ರೀಡೆಗಳಿವೆ. ನನ್ನ ಪ್ರಕಾರ ಒಂದೊಂದು ಸವಾರಿಗೆ ಒಂದು ದಿನವನ್ನು ಮೀಸಲಿಟ್ಟರೆ ಮಾತ್ರ ಆ ಅನುಭವವನ್ನು ಇಂಗಿಸಿಕೊಳ್ಳಲು ಸಾಧ್ಯ.
ಸಾಮಾನ್ಯವಾಗಿ ಏನಾಗುತ್ತದೆಯೆಂದರೆ ಮೂರು ದಿನಗಳ, ನಾಲ್ಕು ದಿನಗಳ ಟಿಕೆಟ್ ಎಂದು ಡೀಲ್ ಇರುವುದರಿಂದ ಹೋದವರು ಒಂದೇ ಪಟ್ಟಿಗೆ ಎಲ್ಲ ಸವಾರಿಗಳನ್ನು, ಆಕರ್ಷಣೆಗಳನ್ನು ಮಾಡಿ ಮುಗಿಸಲು ಯತ್ನಿಸುತ್ತಾರೆ. ನಾವು ಅದೇ ಮಾಡಿದ್ದು. ಒಂದಾದ ಅನಂತರ ಒಂದರಂತೆ ಇಡೀ ದಿನ ಎಷ್ಟಾಗುತ್ತದೋ ಅಷ್ಟು ಮಾಡಿ ಮುಗಿಸೋಣ ಎಂದು ಎಲ್ಲವನ್ನು ಮಾಡುವ ಪ್ರಯತ್ನ ಮಾಡಿದೆವು. ಎಲ್ಲವನ್ನು ಮಾಡಿ ಮುಗಿಸಿದೆವಾದರೂ ಮನದಲ್ಲಿ ಉಳಿದದ್ದು ಕೆಲವೇ ಕೆಲವು ಅನುಭವಗಳು. ಒಮ್ಮೆ ಮಾಡಿ ಮುಗಿಸಿದ್ದೇವೆ ಮತ್ತೇನಿದೆ ನೋಡಲಿಕ್ಕೆ ಅನ್ನುವಂತಿಲ್ಲ. ಪ್ರತಿ ಸಲವೂ ಹೊಸದೇ ಅನುಭವಾಗುತ್ತದೆ. ಅದಕ್ಕೆಂದೇ ಇಲ್ಲಿನ ಜನ ಮತ್ತೆ ಮತ್ತೆ ಹೋಗುತ್ತಾರೆ. ಸವಾರಿಗಳನ್ನು ಮಾಡಲು ಭಯ ಎನ್ನುವವರಿಗೆ, ವಯಸ್ಸಾದವರಿಗೂ ಸಹ ಪಾರ್ಕ್‌ನಲ್ಲಿ ಬೇರೆ ತರಹದ ಆಕರ್ಷಣೆಗಳಿದ್ದು ಎಲ್ಲರ ಅಭಿರುಚಿಗಳಿಗೆ ತಕ್ಕಂತೆ ಸಮಯ ಕಳೆಯುವ ಅವಕಾಶವಿದೆ.
*ಸಂಜೋತಾ ಪುರೋಹಿತ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಈ ಎಲೆಯಿಂದ ಮಾಡುವ ಖಾದ್ಯ ಆರೋಗ್ಯಕ್ಕೂ ಉತ್ತಮ… ಅದ್ಯಾವ ಎಲೆ ಅಂತೀರಾ ಇಲ್ಲಿದೆ ರೆಸಿಪಿ
ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್ ಪಡೆದು ಸಿನಿಮಾದಲ್ಲಿ ಫೇಮ್ ಆದ ಕಲಾವಿದರು
ಖುಷಿ ಕೊಡಬಲ್ಲ ಕೆಲವು ವಿಧಾನ ತಿಳಿಸಿ…ಏನೂ ಇಲ್ಲದೆಯೂ ಸಂತೋಷವಾಗಿರಿ!
Catacombs: ಇದು ಎಲುಬುಗಳೇ ತುಂಬಿಕೊಂಡ ಸುರಂಗ; ಸುಂದರ ದೇಶದ ಕರಾಳ ಇತಿಹಾಸ
BGT: ವಿರಾಟ್ ಬಗ್ಗೆ ಆಸೀಸ್ ಜನರಿಗೆ ಯಾಕಿಷ್ಟು ಕುತೂಹಲ; ಇದು ಕಿಂಗ್ ಸಾಮ್ರಾಜ್ಯದ ಕಥೆ
MUST WATCH
ಹೊಸ ಸೇರ್ಪಡೆ
Ration Card: ಅನರ್ಹರಿಗೆ ಬಿಪಿಎಲ್ ಕಾರ್ಡ್ ಕೊಡಲ್ಲ, ಅರ್ಹರಿಗೆ ತಪ್ಪಿಸಲ್ಲ: ಸಿದ್ದರಾಮಯ್ಯ
ಈ ಎಲೆಯಿಂದ ಮಾಡುವ ಖಾದ್ಯ ಆರೋಗ್ಯಕ್ಕೂ ಉತ್ತಮ… ಅದ್ಯಾವ ಎಲೆ ಅಂತೀರಾ ಇಲ್ಲಿದೆ ರೆಸಿಪಿ
Laddu Mutya: ಬದುಕು ಅರಳಿಸಿದ ಬಾಗಲಕೋಟೆಯ ಭಗವಂತ: ತಮಾಷೆಯ ವಸ್ತುವಲ್ಲ ಲಡ್ಡು ಮುತ್ಯಾ
KL Rahul; ಗಾಯದ ಚಿಂತೆ ನಿವಾರಿಸಲು ನೆಟ್‌ನಲ್ಲಿ ಬ್ಯಾಟಿಂಗ್: ಬ್ಯಾಕ್-ಅಪ್ ಆಗಿ ಪಡಿಕ್ಕಲ್
Maharastra: ಚುನಾವಣಾ ರ್‍ಯಾಲಿ ರದ್ದುಗೊಳಿಸಿ ದಿಢೀರ್ ದೆಹಲಿಗೆ ವಾಪಸ್ಸಾದ ಸಚಿವ ಅಮಿತ್ ಶಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.