ಎರಡಕ್ಕಿಂತ ಹೆಚ್ಚು ಮಕ್ಕಳಿರುವವರಿಗೆ ಸ್ಥಳೀಯ ಸಂಸ್ಥೆ ಚುನಾವಣೆ ಸ್ಪರ್ಧೆಗೆ ಅವಕಾಶ: ಸಿಎಂ
ಈಗಿನ ಜಾಣರು ಮೋಜು ಮಾಡಲು ದುಪ್ಪಟ್ಟು ಆದಾಯಕ್ಕಾಗಿ ಮಕ್ಕಳು ಬೇಡ ನೀತಿ ಅನುಸರಿಸುವುದಕ್ಕೆ ಚಂದ್ರಬಾಬು ನಾಯ್ಡು ಅಸಮಾಧಾನ
Team Udayavani, Jan 16, 2025, 8:24 PM IST
ತಿರುಪತಿ (ನರವರಿಪಲ್ಲಿ): ಎರಡಕ್ಕಿಂತ ಹೆಚ್ಚು ಮಕ್ಕಳು ಹೊಂದಿರುವ ವ್ಯಕ್ತಿಗಳಿಗೆ ಮಾತ್ರ ಸ್ಥಳೀಯ ಚುನಾವಣೆಗಳಾದ ಸರ್‌ಪಂಚ್, ಪುರಸಭೆ ಕೌನ್ಸಿಲರ್ ಅಥವಾ ಮೇಯರ್ ಹುದ್ದೆಗಳಿಗೆ ಸ್ಪರ್ಧಿಸಲು ಅವಕಾಶ ಕಲ್ಪಿಸಲಾಗುವುದು ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಹೇಳಿದ್ದಾರೆ.
ತಿರುಪತಿ ಬಳಿಯ ತಮ್ಮ ಹುಟ್ಟೂರು ನರವರಿಪಲ್ಲಿಗೆ ಭೇಟಿ ನೀಡಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿ ಎರಡಕ್ಕಿಂತ ಹೆಚ್ಚು ಮಕ್ಕಳಿಲ್ಲದ ಜನರು ಸ್ಥಳೀಯ ಸಂಸ್ಥೆ ಮತ್ತು ನಾಗರಿಕ ಸಂಸ್ಥೆಗಳ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡುವ ಶಾಸನವನ್ನು ನಾವು ಈ ಹಿಂದೆ ತಂದಿದ್ದೆವು. ಈಗ ಕಡಿಮೆ ಮಕ್ಕಳನ್ನು ಹೊಂದಿರುವವರು ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಲಾಗುವುದಿಲ್ಲ ಎಂದು ನಾನು ಹೇಳುತ್ತೇನೆ. ಆಂಧ್ರಪ್ರದೇಶದ ಜನಸಂಖ್ಯಾ ಭವಿಷ್ಯ ಕಾಪಾಡುವ ದೃಷ್ಟಿಗೆ ಅನುಗುಣವಾಗಿ ಕುಟುಂಬಗಳು ಹೆಚ್ಚು ಮಕ್ಕಳ ಹೊಂದಲು ಸಿಎಂ ನಾಯ್ಡು ಪ್ರೋತ್ಸಾಹಿಸುತ್ತಿದ್ದಾರೆ.
ಡಿಂಕ್ ನೀತಿ ಪಾಲಿಸುವಿಕೆಗೆ ಅಸಮಾಧಾನ:
ಈ ಹಿಂದೆ ನಿಮ್ಮ ಪೋಷಕರು ನಾಲ್ಕರಿಂದ ಐದು ಮಕ್ಕಳ ಪಡೆಯುತ್ತಿದ್ದರು. ಈಗಿನ ಯುವಜನತೆ ಅದನ್ನು ಒಂದೇ ಮಗುವಿಗೆ ಇಳಿಸಿದ್ದು, ಈಗಿನ ಬುದ್ಧಿವಂತ ಜನರು ದುಪ್ಪಟ್ಟು ಆದಾಯ, ಮಕ್ಕಳಿಲ್ಲದ ಜೀವನಶೈಲಿಯ (ಡಬಲ್ ಇನ್‌ಕಂ ನೋ ಕಿಡ್ಸ್ (DINK) ನೀತಿಯ ಆರಿಸಿಕೊಳ್ಳುತ್ತಿದ್ದಾರೆ. ಈಗಿನ ಯುವಕರ ಪೋಷಕರು ಕೂಡ ಅದೇ ರೀತಿ ಯೋಚಿಸಿದ್ದರೆ ಇಂದು ಈ ಯುವಕರ ಅಸ್ತಿತ್ವವೇ ಇರುತ್ತಿರಲಿಲ್ಲ. ಜಪಾನ್ ಮತ್ತು ದಕ್ಷಿಣ ಕೊರಿಯಾದಂತಹ ದೇಶಗಳು ಈಗಾಗಲೇ ವಯಸ್ಕರೇ ತುಂಬಿರುವ ದೇಶವಾಗಿದ್ದು, ಕುಸಿಯುತ್ತಿರುವ ಜನನ ಫಲವತ್ತತೆಯ ದರಗಳೊಂದಿಗೆ ಹೋರಾಡುತ್ತಿವೆ ಎಂದು ಒತ್ತಿ ಹೇಳಿದರು.
ಈ ಮೊದಲು ಕೂಡ ಪ್ರಸ್ತಾಪ:
ಜನಸಂಖ್ಯೆಯ ಕುರಿತು ಹಾಗೂ ಹೆಚ್ಚು ಮಕ್ಕಳನ್ನು ಹೊಂದುವ ಬಗ್ಗೆ ಸಿಎಂ ಚಂದ್ರಬಾಬು ನಾಯ್ಡು ಹೇಳಿಕೆ ನೀಡುತ್ತಿರುವುದು ಇದೇ ಮೊದಲಲ್ಲ. ಕಳೆದ ವರ್ಷ ಅಕ್ಟೋಬರ್‌ನಲ್ಲಿ ಇದೇ ವಿಚಾರವಾಗಿ ಮಾತನಾಡಿ ಉತ್ತರ ಭಾರತಕ್ಕೆ ಹೋಲಿಸಿದರೆ ದಕ್ಷಿಣ ಭಾರತದಲ್ಲಿ ‘ವಯಸ್ಕರ ಜನಸಂಖ್ಯೆ’ ಹೆಚ್ಚುತ್ತಿದೆ, ಮಕ್ಕಳು ಹಾಗೂ ಯುವಕರ ಜನಸಂಖ್ಯೆ ಕುಸಿಯುತ್ತಿದೆ ಎಂದು ಕಳವಳ ವ್ಯಕ್ತಪಡಿಸಿ ದಕ್ಷಿಣ ಭಾರತೀಯ ರಾಜ್ಯಗಳ ಜನರು ಹೆಚ್ಚು ಮಕ್ಕಳನ್ನು ಹೆರಬೇಕು ಎಂದು ಹೇಳಿಕೆಗಳನ್ನು ನೀಡಿದ್ದರು.
ಇದನ್ನೂ ಓದಿ: Fertility Rate Down: ಮಕ್ಕಳಿರಲವ್ವ ಮನೆ ತುಂಬ!; ಹೆಚ್ಚು ಮಕ್ಕಳ ಹೆರಲು ನಾನಾ ಆಫರ್‌ಗಳು
ಭಾರತ ಸೇರಿದಂತೆ ಜಗತ್ತಿನೆಲ್ಲೆಡೆ ಈಗ “ಹೆಚ್ಚು ಮಕ್ಕಳನ್ನು ಹೆರಬೇಕು’ ಎಂಬ ಚರ್ಚೆ ವ್ಯಾಪಕವಾಗಿದೆ. ಈಚೆಗೆ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಕನಿಷ್ಠ 3 ಮಕ್ಕಳನ್ನು ಹೆರುವಂತೆ ಭಾರತೀಯರಿಗೆ ಸಲಹೆ ನೀಡಿದ್ದರು. ಆದರೆ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತ್ರ ಇತ್ತೀಚೆಗೆ ಸಾಮೂಹಿಕ ಮದುವೆಯ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಎರಡು ಮಕ್ಕಳು ಮಾತ್ರ ಪಡೆಯಿರಿ ಎಂದು ವ್ಯತಿರಿಕ್ತವಾಗಿ ಹೇಳಿಕೆ ನೀಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress;ಪೂಜಾ ಸ್ಥಳಗಳ ಕಾಯಿದೆ ಪ್ರಶ್ನಿಸುವ ಮನವಿಗಳನ್ನು ವಿರೋಧಿಸಿ ಸುಪ್ರೀಂಗೆ ಅರ್ಜಿ
Central government ನೌಕರರಿಗೆ ಗಿಫ್ಟ್; 8ನೇ ವೇತನ ಆಯೋಗ ರಚನೆಗೆ ಅನುಮೋದನೆ
Sukma; ಭೀಕರ ಗುಂಡಿನ ಕಾಳಗದಲ್ಲಿ 12 ನಕ್ಸಲರನ್ನು ಹೊಡೆದುರುಳಿಸಿದ ಭದ್ರತಾ ಪಡೆ
Saif Ali Khan: ನಟ ಸೈಫ್ ಅಲಿಖಾನ್‌ಗೆ ಚಾಕು ಇರಿತ; ಸಿಸಿಟಿವಿಯಲ್ಲಿ ಶಂಕಿತನ ದೃಶ್ಯ ಸೆರೆ
ED ವಾದದ ವಿರುದ್ಧ ಸುಪ್ರೀಂ ಕೋರ್ಟ್ ಬಲವಾದ ಟೀಕೆ;ನಾವು ಸಹಿಸುವುದಿಲ್ಲ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.