ಉಡುಪಿಯ ಕಿದಿಯೂರು ಬಳಿ ಸುಳಿಗಾಳಿ : ಸುರುಳಿ ಸುರುಳಿಯಾಗಿ ಆಕಾಶಕ್ಕೆ ಚಿಮ್ಮಿದ ನದಿ ನೀರು!
Team Udayavani, Sep 14, 2022, 10:13 AM IST
ಮಲ್ಪೆ : ಕಿದಿಯೂರು ಸಮೀಪ ಪಾದೆ ಬಳಿಯ ಹೊಳೆಯಲ್ಲಿ ಅಪರೂಪದ ವಿದ್ಯಮಾನವೊಂದು ಕಾಣಿಸಿದೆ.
ಮಂಗಳವಾರ ಮಧ್ಯಾಹ್ನದ ವೇಳೆ ಮಳೆ ಬೀಳುತ್ತಿದ್ದು ಈ ಸಂದರ್ಭದಲ್ಲಿ ಹೊಳೆಯ ನಡುವೆ ಸುಳಿಗಾಳಿ ಎದ್ದು ನೀರು ಸುರುಳಿ ಸುರುಳಿಯಾಗಿ ಆಗಸಕ್ಕೆ ಚಿಮ್ಮಿತು.
ಬಿಸಿಲು ಮತ್ತು ಮಳೆಯ ವಾತಾವರಣ ಏಕಕಾಲದಲ್ಲಿ ನಿರ್ಮಾಣವಾಗಿದ್ದು, ಈ ವೇಳೆ ಹೊಳೆ ನೀರು ಗಾಳಿಯೊಂದಿಗೆ ಮೇಲೆ ಚಿಮ್ಮಿದೆ ಎನ್ನಲಾಗಿದೆ. ಸಾಮಾನ್ಯವಾಗಿ ಮೈದಾನದಲ್ಲಿ ಸುಳಿಗಾಳಿ ಕಾಣಿಸಿಕೊಂಡು ಧೂಳು ಮೇಲಕ್ಕೆ ಹೋಗುವುದು ಕಾಣಸಿಗುತ್ತದೆ. ಆದರೆ ಹೊಳೆಯಲ್ಲಿ ಸುಳಿ ಕಾಣಿಸಿಕೊಂಡು ನೀರು ಮೇಲೇರುವ ದೃಶ್ಯ ಅಪೂರ್ವ. ಈ ದೃಶ್ಯವನ್ನು ಕೆಲವರು ಮೊಬೈಲ್ ಕೆಮರಾದಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಅದೀಗ ವೈರಲ್ ಆಗಿದೆ.
ಇದನ್ನೂ ಓದಿ : ಮಹಾರಾಷ್ಟ್ರ : ಮಕ್ಕಳ ಕಳ್ಳರೆಂದು ಭಾವಿಸಿ ಸಾಧುಗಳಿಗೆ ಹಿಗ್ಗಾಮುಗ್ಗಾ ಥಳಿತ! ವಿಡಿಯೋ ವೈರಲ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
MUDA Scam: ಕೇಸ್ ವಾಪಸ್‌ಗೆ ಹಣದ ಆಮಿಷ? ಸ್ನೇಹಮಯಿ ಕೃಷ್ಣ ಲೋಕಾಯುಕ್ತಕ್ಕೆ ದೂರು
Priyank Kharge: ಎಲ್ಲವನ್ನೂ ನ್ಯಾಯಾಂಗವೇ ಮಾಡೋದಾದ್ರೆ ಶಾಸಕಾಂಗ ಏಕೆ?
Krishna Byre Gowda: 16.5 ಸಾವಿರ ಗ್ರಾಮಗಳು ಈಗ ಪೋಡಿ ಮುಕ್ತ
Karnataka: ಶಕ್ತಿ ಯೋಜನೆ ಬಳಿಕ ನಿತ್ಯ ಪ್ರಯಾಣಿಕರ ಸಂಖ್ಯೆ 23 ಲಕ್ಷ ಏರಿಕೆ
ಮಾಜಿ ಸೈನಿಕರಿಗೆ ಭೂಮಿ ಬದಲು ಬಡಾವಣೆ: ಸಚಿವ ಕೃಷ್ಣ ಬೈರೇಗೌಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.