ಭೂತ ದಹನ ಮಾಡುವ ಮೂಲಕ ಟಿಬೇಟಿಯನ್ನರ ಲೋಸರ್ ಹಬ್ಬ ಆಚರಣೆ

Team Udayavani, Mar 19, 2022, 9:00 PM IST

ಭೂತ ದಹನ ಮಾಡುವ ಮೂಲಕ ಟಿಬೇಟಿಯನ್ನರ ಲೋಸರ್ ಹಬ್ಬ ಆಚರಣೆ

ಮುಂಡಗೋಡ: ಟಿಬೇಟಿಯನ್ನರ ಹೊಸ ವರ್ಷದ ಹಬ್ಬವಾದ ಲೋಸಾರ ಹಬ್ಬದ ಕೊನೆಯ ದಿನವಾದ ಶನಿವಾರ ಧಾರ್ಮಿಕ ವಿಧಿವಿಧಾನಗಳಂತೆ ಭೂತ ದಹನ ಮಾಡುವ ಕಾರ್ಯಕ್ರಮವು ನಡೆಯಿತು.

ಲೋಸರ್ ಹಬ್ಬವನ್ನು ಟಿಬೇಟಿಯನ್ನರ ಅದ್ದೂರಿಯಿಂದ ನಡೆಸುಕೊಂಡು ಬರುವ ಪದ್ಧತಿ ಇತ್ತು. ಆದರೆ ಕಳೆದ ಎರಡು ವರ್ಷಗಳಿಂದ ಕೋವಿಡ್ ಮಹಾಮಾರಿಯಿಂದಾಗಿ ಟಿಬೆಟಿಯನ್ನರು ಹೊಸ ವರ್ಷವಾದ ಲೋಸಾರ ಹಬ್ಬವನ್ನು ಸರಳವಾಗಿ ಮನೆಯಗಳಲ್ಲಿ, ಬೌದ್ಧಮಂದಿರಲ್ಲಿ ಆಚರಿಸಿ ಭೂತ ದಹನ ಮಾಡುತ್ತಿರಲಿಲ್ಲ. ಪ್ರಸ್ತುತ ವರ್ಷದ ಹೊಸ ವರ್ಷವನ್ನು ಲೋಸರ್‌ನ್ನು ವಿಜೃಂಭಣೆಯಿಂದ ಆಚರಿಸಿದರು.

ತಾಲೂಕಿನ ಟಿಬೆಟಿಯನ್ ಕ್ಯಾಂಪ ನಂ.1ರ ಬೌದ್ಧ ಮಂದಿರದಲ್ಲಿ ಲೋಸಾರ ಹಬ್ಬದ ಕೊನೆಯ ದಿನದ ಶನಿವಾರ ಟಿಬೇಟಿಯನ್ ದೇವಸ್ಥಾನದಲ್ಲಿ ಧಾರ್ಮಿಕ ವಿಧಿ ವಿಧಾನಗಳಂತೆ ಪೂಜೆ ಜರುಗಿತು. ನಂತರ ಬೌದ್ಧ ಮಂದಿರದಲ್ಲಿ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಹಿರಿಯ ಬೌದ್ಧ ಸನ್ಯಾಸಿಗಳ ನೇತೃತ್ವದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಬೌದ್ಧ ಮಂದಿರದ ಆವರಣದಿಂದ ವಿಶೇಷ ಮೂರ್ತಿಯನ್ನು ತಯಾರು ಮಾಡಿದ ಮೂರ್ತಿಯನ್ನು ಬೌದ್ಧ ಸನ್ಯಾಸಿಗಳು ಸಂಪ್ರದಾಯದ ಉಡುಗೆ ತೊಟ್ಟು ವಿವಿಧ ವಾದ್ಯಗಳನ್ನು ನುಡಿಸಿ ಮೆರವಣಿಗೆ ಮೂಲಕ ಭೂತ ದಹನ ಮಡುವ ಸ್ಥಳಕ್ಕೆ ಬಂದು ಗುಡಿಸಿಲಿನ ಆಕಾರದ ಸ್ಥಳದಲ್ಲಿ ಸುಡುವ ಪೂರ್ವದಲ್ಲಿ ಟಿಬೇಟಿಯನ್ನರು ಹಬ್ಬಕ್ಕೆ ಮಾಡಿರುವ ವಿವಿಧ ಧವಸ ಧಾನ್ಯಗಳಿಂದ ತಯಾರಿಸಿದ ಪದಾರ್ಥವನ್ನು ಹಾಗೂ ಬಿಳಿ ವಸ್ತ್ರವನ್ನು ಹಾಕಿದರು ತದನಂತರ ಮೂರ್ತಿಯನ್ನು ಇಟ್ಟು ಬೌದ್ದ ಸನ್ಯಾಸಿ ಅಗ್ನಿ ಸ್ಪರ್ಶ ಮಾಡಿದರು. ಈ ಕಾರ್ಯಕ್ರಮದಲ್ಲಿ ಅಕ್ಕ ಪಕ್ಕದ ಸಹಸ್ರಾರು ಟಿಬೇಟಿಯನ್ನರ ಮತ್ತು ಬೌದ್ಧ ಸನ್ಯಾಸಿಗಳಿದ್ದರು. ಈ ಬಾರಿ ಕ್ಯಾಂಪ್ ನಂ೨ ನಲ್ಲಿ ಭೂತ ದಹನ ಮಾಡುವ ಕಾರ್ಯಕ್ರಮವನ್ನು ಧಾರ್ಮಿಕ ವಿಧಿವಿಧಾನಗಳಂತೆ ನಡೆಸಿದರು.

ಲೋಸಾರ ಹಬ್ಬದ ಕೊನೆಯ ದಿನದಂದು ನಡೆಯುವ ಭೂತದಹನ ಕಾರ್ಯಕ್ರಮಕ್ಕೆ ಪೊಲೀಸರು ವಿಶೇಷ ನಿಗಾ ವಹಿಸಿದ್ದರು. ಕಳೆದ ಕೆಲ ವರ್ಷಗಳ ಹಿಂದೆ ಭೂತದಹನದ ಹೆಸರಿನಲ್ಲಿ ಭಾರತೀಯ ನೋಟು, ನಾಣ್ಯಗಳನ್ನು ಸುಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದ್ದರಿಂದ ಅಂದಿನಿಂದ ಇಂದಿನವರೆಗೂ ಭೂತದಹನ ಕಾರ್ಯಕ್ರಮದಲ್ಲಿ ಸ್ಥಳೀಯ ಪೊಲೀಸರು ಹಾಗೂ ಟಿಬೆಟಿಯನ್ ಮುಖಂಡರು ಉಪಸ್ಥಿತರಿದ್ದು ಸುಡುವ ಸ್ಥಳದಲ್ಲಿ ಹಾಕುವ ವಸ್ತುಗಳನ್ನು ಪರಿಶೀಲಿಸುವದು ಸಾಮಾನ್ಯವಾಗಿತ್ತು.

ಇದನ್ನೂ ಓದಿ : ಮರಕ್ಕೆ ಡಿಕ್ಕಿ ಹೊಡೆದು ಹೊತ್ತಿ ಉರಿದ ಕಾರು , ಮೂವರು ಸ್ಥಳದಲ್ಲೇ ಸಾವು

ತೇಂಜಿನ್ ಸಿರಿಂಗ್, ಕ್ಯಾಂಪ್ ನಂ.2 ನಿವಾಸಿ : ವಿಶೇಷ ಪೂಜೆ ಸಲ್ಲಿಸುವ ಮೂಲಕ ವರ್ಷದ ಎಲ್ಲ ಅಶುಭ ಸಂಕೇತಗಳನ್ನು ಸುಟ್ಟು ಹಾಕುವ ಕಾರ್ಯಕ್ರಮ. ಮನುಷ್ಯರಿಗೆ ಅಷ್ಟೇ ಅಲ್ಲದೇ ಜಾನುವಾರುಗಳಿಗೆ ಯಾವುದೇ ರೋಗಗಳು ಬರದಂತೆ, ಪ್ರಕೃತಿ ವಿಕೋಪಗಳು ಬಾರದಂತೆ ಮತ್ತು ಉತ್ತಮ ರಾಜಕೀಯ ಬೆಳವಣಿಗೆಯ ಸಲುವಾಗಿ ಈ ಸಂದರ್ಭದಲ್ಲಿ ದೇವರಲ್ಲಿ ಬೇಡಿಕೊಳ್ಳಲಾಗುತ್ತದೆ.

ಲಾಕ್ಬಾ ಸೆರಿಂಗ್., ಟಿಬೆಟಿಯನ್ ಆಡಳಿತ ಕಛೇರಿ ಚೇರ್‌ಮನ್: ಕೋವಿಡ್ ಮಹಾಮಾರಿಯಿಂದಾಗಿ 2 ವರ್ಷ ಲೋಸಾರ ಹಬ್ಬವನ್ನು ಸರಳವಾಗಿ ಮನೆಯಗಳಲ್ಲಿ, ಬೌದ್ಧ ಮಂದಿರಲ್ಲಿ ಆಚರಿಸಿದರು. ಎಲ್ಲಾ ಕಾಲೂನಿಯ ಬೌದ್ಧ ಸನ್ಯಾಸಿಗಳು ಮತ್ತು ಟಿಬೇಟಿಯನ್ನರು ಸೇರಿ ಲೋಸರಿನ ಕೊನೆಯ ದಿನದಂದು ಭೂತ ದಹನ ಮಾಡುವ ಕಾರ್ಯಕ್ರಮವು ನಡೆಸುತ್ತಿದ್ದೇವು. ಹೆಚ್ಚು ಜನ ಸೇರುತ್ತಾರೆ ಎಂಬ ಉದ್ದೇಶದಿಂದ ಈ ಬಾರಿ ಎರಡು ಕಡೆ ಭೂತ ದಹನ ಮಾಡುವ ಕಾರ್ಯಕ್ರಮವು ಮಾಡಿದ್ದೇವೆ. ಕ್ಯಾಂಪ್ ನಂ 2 ಮತ್ತು ಕ್ಯಾಂಪ್ ನಂ 1 ರಲ್ಲಿ ಮಡಲಾಯಿತು. ಮುಂದಿನ ವರ್ಷ ಒಂದೇ ಕಡೆ ಸೇರಿ ವಿಜೃಂಭಣೆಯಿಂದ ಆಚರಿಸಲಾಗುವುದು.

ಟಾಪ್ ನ್ಯೂಸ್

HDK2

By Election: ಯೋಗೇಶ್ವರ್‌ ನಿಂದಿಸಿದ್ದ ಡಿ.ಕೆ.ಸುರೇಶ್‌ ಆಡಿಯೋ ಎಚ್‌ಡಿಕೆ ಬಿಡುಗಡೆ

DVS

By Election: ನಾಗೇಂದ್ರ, ಜಮೀರ್‌, ಡಿಕೆಶಿ ಮೇಲೆ ಚುನಾವಣಾ ಆಯೋಗ ಕಣ್ಣಿಡಲಿ: ಡಿವಿಎಸ್‌

Maharashtra: ಸ್ತ್ರೀಯರಿಗೆ ಮಾಸಿಕ 3000, ರೈತರ ಸಾಲ ಮನ್ನಾ: ಎಂವಿಎ

Maharashtra: ಸ್ತ್ರೀಯರಿಗೆ ಮಾಸಿಕ 3000, ರೈತರ ಸಾಲ ಮನ್ನಾ: ಎಂವಿಎ

Jet Airways ಆಸ್ತಿ ಮಾರಾಟಕ್ಕೆ ಸುಪ್ರೀಂ ಕೋರ್ಟ್‌ ಅನುಮತಿ

Jet Airways ಆಸ್ತಿ ಮಾರಾಟಕ್ಕೆ ಸುಪ್ರೀಂ ಕೋರ್ಟ್‌ ಅನುಮತಿ

Bengaluru; ಒಂದೇ ದಿನ ಚಿನ್ನದ ಬೆಲೆ 10 ಗ್ರಾಂಗೆ 1,790 ರೂ. ಇಳಿಕೆ

Bengaluru; ಒಂದೇ ದಿನ ಚಿನ್ನದ ಬೆಲೆ 10 ಗ್ರಾಂಗೆ 1,790 ರೂ. ಇಳಿಕೆ

Delhi Pollution: ಕೃಷಿ ತ್ಯಾಜ್ಯ ಸುಟ್ಟರೆ ರೈತರಿಗೆ ಇನ್ನು ದುಪ್ಪಟ್ಟು ದಂಡ!

Delhi Pollution: ಕೃಷಿ ತ್ಯಾಜ್ಯ ಸುಟ್ಟರೆ ರೈತರಿಗೆ ಇನ್ನು ದುಪ್ಪಟ್ಟು ದಂಡ!

Maharashtra: ಕಾಂಗ್ರೆಸ್‌ ಬಂಡಾಯ ಸ್ಪರ್ಧಿಗಳು 6 ವರ್ಷ ಅಮಾನತು

Maharashtra: ಕಾಂಗ್ರೆಸ್‌ ಬಂಡಾಯ ಸ್ಪರ್ಧಿಗಳು 6 ವರ್ಷ ಅಮಾನತು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

DVS

By Election: ನಾಗೇಂದ್ರ, ಜಮೀರ್‌, ಡಿಕೆಶಿ ಮೇಲೆ ಚುನಾವಣಾ ಆಯೋಗ ಕಣ್ಣಿಡಲಿ: ಡಿವಿಎಸ್‌

Dinesh-gundurao

Waqf: ಮುಸ್ಲಿಮರ ಗುರಿ ಮಾಡುವುದು ಬಿಟ್ಟರೆ ಬಿಜೆಪಿಗೆ ಬೇರೇನೂ ಇಲ್ಲ: ಸಚಿವ ದಿನೇಶ್‌

Gadag-Sp–Money

Gadaga: ಎಸ್ಪಿ ನೇಮಗೌಡ ಹೆಸರಲ್ಲಿ ನಕಲಿ ಫೇಸ್‌ಬುಕ್ ಖಾತೆ; ವ್ಯಕ್ತಿಗೆ 25 ಸಾವಿರ ರೂ. ವಂಚನೆ

Tejasvi-surya

Waqf Property: ಆಡು ಮುಟ್ಟದ ಸೊಪ್ಪಿಲ್ಲ, ವಕ್ಫ್‌ ಮುಟ್ಟದ ಸ್ವತ್ತಿಲ್ಲ: ತೇಜಸ್ವಿ ಸೂರ್ಯ

priyank

Waqf issue: ಬಿಜೆಪಿ ಅಧಿಕಾರದಲ್ಲಿದ್ದಾಗ ಕತ್ತೆ ಕಾಯಿತಿದ್ದರಾ?: ಪ್ರಿಯಾಂಕ್ ಖರ್ಗೆ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

HDK2

By Election: ಯೋಗೇಶ್ವರ್‌ ನಿಂದಿಸಿದ್ದ ಡಿ.ಕೆ.ಸುರೇಶ್‌ ಆಡಿಯೋ ಎಚ್‌ಡಿಕೆ ಬಿಡುಗಡೆ

DVS

By Election: ನಾಗೇಂದ್ರ, ಜಮೀರ್‌, ಡಿಕೆಶಿ ಮೇಲೆ ಚುನಾವಣಾ ಆಯೋಗ ಕಣ್ಣಿಡಲಿ: ಡಿವಿಎಸ್‌

Dinesh-gundurao

Waqf: ಮುಸ್ಲಿಮರ ಗುರಿ ಮಾಡುವುದು ಬಿಟ್ಟರೆ ಬಿಜೆಪಿಗೆ ಬೇರೇನೂ ಇಲ್ಲ: ಸಚಿವ ದಿನೇಶ್‌

Maharashtra: ಸ್ತ್ರೀಯರಿಗೆ ಮಾಸಿಕ 3000, ರೈತರ ಸಾಲ ಮನ್ನಾ: ಎಂವಿಎ

Maharashtra: ಸ್ತ್ರೀಯರಿಗೆ ಮಾಸಿಕ 3000, ರೈತರ ಸಾಲ ಮನ್ನಾ: ಎಂವಿಎ

Jet Airways ಆಸ್ತಿ ಮಾರಾಟಕ್ಕೆ ಸುಪ್ರೀಂ ಕೋರ್ಟ್‌ ಅನುಮತಿ

Jet Airways ಆಸ್ತಿ ಮಾರಾಟಕ್ಕೆ ಸುಪ್ರೀಂ ಕೋರ್ಟ್‌ ಅನುಮತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.