Ticket Price Hike: ನಾಲ್ಕು ನಿಗಮಗಳ ಬಸ್ ಪ್ರಯಾಣ ದರ ಇಂದು ಮಧ್ಯರಾತ್ರಿಯಿಂದಲೇ ಹೆಚ್ಚಳ
ಪುರುಷ ಪ್ರಯಾಣಿಕರ ಜೇಬಿಗೆ ಮತ್ತಷ್ಟು ಬರೆ, ದೆಹಲಿ ಚುನಾವಣೆಯಲ್ಲಿ ಕಾಂಗ್ರೆಸ್‌ನ ಪಾರ್ಟಿ ಫಂಡ್‌ಗೆ ದರ ಹೆಚ್ಚಳ ಎಂದು ಬಿಜೆಪಿ ಟೀಕೆ
Team Udayavani, Jan 4, 2025, 9:37 PM IST
ಬೆಂಗಳೂರು: ಕೆಎಸ್‌ಆರ್‌ಟಿಸಿ ಸೇರಿ ಸರಕಾರಿ ಸ್ವಾಮ್ಯದ ಬಿಎಂಟಿಸಿ, ಎನ್ಡಬ್ಲ್ಯುಕೆಆರ್ಟಿಸಿ ಹಾಗೂ ಕೆಕೆಆರ್ಟಿಸಿಯ 4 ಸಾರಿಗೆ ನಿಗಮಗಳ ಬಸ್ ಪ್ರಯಾಣ ದರ ಶೇ. 15ರಷ್ಟು ಹೆಚ್ಚಳದ ಆದೇಶ ಶನಿವಾರ (ಜ.4) ಮಧ್ಯರಾತ್ರಿಯಿಂದಲೇ ಜಾರಿಗೆ ಬಂದಿದೆ. ಸುವಿಹಾರಿ ಬಸ್ ಹೊರತುಪಡಿಸಿ ಸಾಮಾನ್ಯ ಹಾಗೂ ವೇಗದೂತ ಬಸ್‌ಗಳಿಗೆ ದರ ಹೆಚ್ಚಳ ಮಾಡಲಾಗಿದ್ದು, ಪುರುಷ ಪ್ರಯಾಣಿಕರ ಜೇಬಿಗೆ ಮತ್ತಷ್ಟು ಬರೆ ಬಿದ್ದಿದೆ.
ವೋಲ್ವೋ ಸೇರಿ ಪ್ರತಿಷ್ಠಿತ (ಸುವಿಹಾರಿ) ಸೇವೆಗಳಿಗೆ ದರ ಪರಿಷ್ಕರಣೆ ಅನ್ವಯವಾಗುವುದಿಲ್ಲ. ಇದು ನಿಗಮದ ಮಟ್ಟದಲ್ಲೇ ಕಾಲಕಾಲಕ್ಕೆ ನಿರ್ಣಯ ಆಗಲಿದೆ. ಈ ಮಧ್ಯೆ ಬಿಎಂಟಿಸಿಯಲ್ಲಿ ಸಾಮಾನ್ಯ ಬಸ್ ದರಗಳ ಏರಿಕೆ ಹೊರತಾಗಿಯೂ ಹವಾನಿಯಂತ್ರಿತ ವಜ್ರ, ವಾಯುವಜ್ರ ಬಸ್‌ಗಳ ಯಾನ ದರಗಳನ್ನು ಏರಿಸಲಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಕಳೆದ ಗುರುವಾರ ನಡೆದ ಸಚಿವ ಸಂಪುಟದ ತೀರ್ಮಾನದಂತೆ ಯಾನದರ ಪರಿಷ್ಕರಣೆಗೊಳಿಸಿದ ಅಧಿಕೃತ ಆದೇಶ ಶನಿವಾರ ಹೊರಬಿದ್ದಿದೆ. ಟಿಕೆಟ್ ಮೂಲ ಪ್ರಯಾಣ ದರದಲ್ಲಿ 7 ರೂ.ಗಳಿಂದ 115 ರೂ. ವರೆಗೂ ಹೆಚ್ಚಳವಾಗಿದೆ. ಸಿಬಂದಿ ವೇತನ, ಇಂಧನ ಮತ್ತು ನಿರ್ವಹಣೆ ವೆಚ್ಚದ ಹೆಚ್ಚಳವನ್ನು ಪರಿಗಣಿಸಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ಸರಕಾರ ಆದೇಶದಲ್ಲಿ ಸ್ಪಷ್ಟಪಡಿಸಿದೆ.
ನೌಕರರ ವೇತನ ಪರಿಷ್ಕರಣೆಯಿಂದಾಗಿ ದೈನಂದಿನ ವೇತನದ ವೆಚ್ಚವು 12.85 ಕೋಟಿ ರೂ.ಗಳಿಂದ 18.36 ಕೋಟಿ ರೂ.ಗಳಿಗೆ ಹೆಚ್ಚಾಗಿದೆ. ಇದರಿಂದಾಗಿ ಪ್ರತೀ ದಿನ 5.51 ಕೋಟಿ ರೂ. ಹೆಚ್ಚುವರಿ ಹೊರೆ ಬೀಳುತ್ತಿದೆ ಎಂದು ಸರಕಾರ ಆದೇಶದಲ್ಲಿ ತಿಳಿಸಲಾಗಿದೆ.
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) 2015ರಲ್ಲಿ ಹಾಗೂ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ), ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ಎನ್ಡಬ್ಲ್ಯುಕೆಆರ್ಟಿಸಿ) ಮತ್ತು ಕಲ್ಯಾಣ ಕರ್ನಾಟಕ ಸಾರಿಗೆ ನಿಗಮ (ಕೆಕೆಆರ್ಟಿಸಿ)ಗಳಲ್ಲಿ 2020ರಲ್ಲಿ ಪ್ರಯಾಣದ ದರ ಪರಿಷ್ಕರಣೆ ಮಾಡಲಾಗಿತ್ತು.
ಪ್ರತಿಷ್ಠಿತ ಬಸ್‌ಗಳಿಗೆ ದರ ಏರಿಕೆ ಅನ್ವಯಿಸುವುದಿಲ್ಲ
ಜಿಎಸ್‌ಟಿ (ಸರಕು ಸೇವಾ ತೆರಿಗೆ) ಹವಾನಿಯಂತ್ರಿತ (ಎಸಿ) ಬಸ್‌ಗಳಿಗೆ ಮಾತ್ರ ಅನ್ವಯಿಸುತ್ತದೆ. ಜತೆಗೆ ಪ್ರತಿಷ್ಠಿತ ಬಸ್‌ಗಳ ಪ್ರಯಾ ಣ ದರ ಏರಿಕೆಯು ನಿಗಮದ ಮಟ್ಟದಲ್ಲೇ ಕಾಲ ಕಾಲಕ್ಕೆ ನಡೆಯುವ ಪ್ರಕ್ರಿಯೆ ಆಗಿರುತ್ತದೆ. ಆ ಹಿನ್ನೆಲೆಯಲ್ಲಿ ಈಗ ಏರಿಕೆ ಮಾಡಲಾಗಿರುವ ಟಿಕೆಟ್ ದರವು ಅವುಗಳಿಗೆ ಅನ್ವಯಿಸುವುದಿಲ್ಲ ಎಂದು ಸಾರಿಗೆ ಇಲಾಖೆಯ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ ರಾಜ್ಯಗಳಲ್ಲಿರುವ ಸರಕಾರಿ ಬಸ್‌ಗಳ ಟಿಕೆಟ್ ದರವನ್ನು ಹೋಲಿಸಿದಲ್ಲಿ ಕರ್ನಾಟಕದಲ್ಲಿ ಸಾರಿಗೆ ಬಸ್‌ದ ಕಡಿಮೆಯಿದೆ ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಯಾಣ ದರ ಏರಿಕೆ: ಎಲ್ಲಿಗೆ ಎಷ್ಟು?
ಬೆಂಗಳೂರಿನಿಂದ ವಿವಿಧ ಜಿಲ್ಲಾ ಕೇಂದ್ರದ ಘಟಕಗಳಿಗೆ ತೆರಳುವ ಕೆಎಸ್ಸಾರ್ಟಿಸಿ ವೇಗದೂತ ಬಸ್ ಪ್ರಯಾಣದ ದರ ಪಟ್ಟಿ ಈ ಕೆಳಕಂಡಂತಿದೆ.
ಊರು – ಹಿಂದಿನ ಪ್ರಯಾಣ ದರ – ಪರಿಷ್ಕೃತ ಪ್ರಯಾಣ ದರ
ತುಮಕೂರು 80 91
ಮಂಗಳೂರು 398 454
ಉಡುಪಿ 452 516
ಪುತ್ತೂರು 401 457
ಮಡಿಕೇರಿ 265 313
ಶಿವಮೊಗ್ಗ 312 356
ಕಾರವಾರ 614 699
ಮಂಡ್ಯ 116 131
ಹಾಸನ 217 246
ಚಿಕ್ಕಬಳ್ಳಾಪುರ 72 81
ದಾವಣಗೆರೆ 320 362
ಮೈಸೂರು 141 162
ಚಿಕ್ಕಮಗಳೂರು 284 323
ಚಿತ್ರದುರ್ಗ 242 274
ರಾಮನಗರ 45 52
ಚಾಮರಾಜನಗರ 179 206
ಕೋಲಾರ 74 85
ಕಲಬುರಗಿ 706 805
ಬೀದರ್ 821 936
ರಾಯಚೂರು 560 638
ಯಾದಗಿರಿ 662 755
ಬಳ್ಳಾರಿ 374 424
ಹೊಸಪೇಟೆ 402 455
ಕೊಪ್ಪಳ 447 506
ವಿಜಯಪುರ 691 779
ಬೆಳಗಾವಿ 617 697
ಚಿಕ್ಕೋಡಿ 708 801
ಬಾಗಲಕೋಟೆ 605 685
ಧಾರವಾಡ 523 591
ಹುಬ್ಬಳ್ಳಿ 499 563
ಶಿರಸಿ 455 520
ಗದಗ 525 593
ಹಾವೇರಿ 420 474
ಬಿಜೆಪಿ ಟೀಕೆ:
ಪರ ರಾಜ್ಯಗಳ ಚುನಾವಣೆ ಖರ್ಚಿಗಾಗಿ ಕನ್ನಡಿಗರ ಜೇಬಿಗೆ ಕನ್ನ ಹಾಕುವ ಸಂಪ್ರದಾಯವನ್ನು ಭ್ರಷ್ಟ ಕಾಂಗ್ರೆಸ್ ಸರ್ಕಾರ ಮುಂದುವರಿಸಿದೆ!! ಸಾರಿಗೆ ಸಂಸ್ಥೆ ಲಾಭದಲ್ಲಿದೆ ಎಂದು ಸುಳ್ಳು ಹೇಳಿ ಈಗ ಏಕಾಏಕಿ ಬಸ್ ಪ್ರಯಾಣ ದರವನ್ನು ಶೇ.15ರಷ್ಟು ಹೆಚ್ಚಿಸಿರುವುದು ಸಹ ಮುಂಬರುವ ದೆಹಲಿ ಚುನಾವಣೆಯಲ್ಲಿ ಕಾಂಗ್ರೆಸ್ ನ ಪಾರ್ಟಿ ಫಂಡ್‌ಗೆ!! ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಅವರೇ ನಿಮ್ಮ ಸ್ವಾರ್ಥಕ್ಕಾಗಿ ಕನ್ನಡಿಗರಿಗೆ ಇನ್ನೆಷ್ಟು ತೊಂದರೆ ನೀಡುವಿರಿ..??!! ಎಂದು ಬಿಜೆಪಿ ಟೀಕಿಸಿದೆ.
ಬೆಲೆಯೇರಿಕೆಯ ಮೂಲಕ ಕನ್ನಡಿಗರ ಖರೀದಿ ಶಕ್ತಿಯನ್ನು ಕುಂದಿಸುತ್ತಿರುವ @INCKarnataka ಸರ್ಕಾರ!!#CongressLootsKarnataka pic.twitter.com/5mubTRBVc8
— BJP Karnataka (@BJP4Karnataka) January 4, 2025
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
60%; ಕುಮಾರಸ್ವಾಮಿ ಆರೋಪಕ್ಕೆ ಆಧಾರ, ಸತ್ಯಾಸತ್ಯತೆ ಇಲ್ಲ: ಸಚಿವ ಜಾರಕಿಹೊಳಿ
ರಿಲಯನ್ಸ್‌ನಿಂದ ‘ರಸ್‌ಕಿಕ್’ ಎನರ್ಜಿ ಡ್ರಿಂಕ್ ಬಿಡುಗಡೆ
ರಿಲ್ಯಾಕ್ಸ್ ಮೂಡ್‌ನಲ್ಲಿದ್ದ ದಾಸನಿಗೆ ಖಾಕಿ ಶಾಕ್: ಜಾಮೀನು ರದ್ದು ಕೋರಿ ಸುಪ್ರೀಂಗೆ ಅರ್ಜಿ
HMPV: ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ ಸಿಎಂ ಸಿದ್ದರಾಮಯ್ಯ
Yadagiri: ಕಾಂಗ್ರೆಸ್ ಪಕ್ಷದಲ್ಲಿ ಎಲ್ಲವೂ ಸರಿ ಇದೆ: ಸಚಿವ ಸತೀಶ್ ಜಾರಕಿಹೊಳಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mangaluru: ಕೊಕೇನ್, ಚರಸ್ ಸೇವನೆ; ಮೂವರ ಬಂಧನ
Raichuru: ರಿಮ್ಸ್ ಆಸ್ಪತ್ರೆಯಲ್ಲಿ ಮತ್ತೋರ್ವ ಬಾಣಂತಿ ಸಾವು; 3 ತಿಂಗಳಿನಲ್ಲಿ 12 ಮಂದಿ ಬಲಿ
Brahmavar: ಕಂಟೈನರ್ ಢಿಕ್ಕಿ; ಬೈಕ್ ಸಹಸವಾರೆ ಸಾವು
Hosanagar: ಪ್ರಪಾತಕ್ಕೆ ಉರುಳಿದ ಬಸ್; ಸಣ್ಣ ಪುಟ್ಟ ಗಾಯಗಳಿಂದ ಪ್ರಯಾಣಿಕರು ಪಾರು
60%; ಕುಮಾರಸ್ವಾಮಿ ಆರೋಪಕ್ಕೆ ಆಧಾರ, ಸತ್ಯಾಸತ್ಯತೆ ಇಲ್ಲ: ಸಚಿವ ಜಾರಕಿಹೊಳಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.