ಟೋಕಿಯೊ ಒಲಿಂಪಿಕ್ಸ್‌ ನಲ್ಲಿ ಅತಿಥಿಗಳಿಗಿಲ್ಲ ಮಣೆ; ವಿಜೇತರಿಂದಲೇ ಪದಕಧಾರಣೆ!

Team Udayavani, Jul 15, 2021, 7:00 AM IST

ಟೋಕಿಯೊ ಒಲಿಂಪಿಕ್ಸ್‌ ನಲ್ಲಿ ಅತಿಥಿಗಳಿಗಿಲ್ಲ ಮಣೆ; ವಿಜೇತರಿಂದಲೇ ಪದಕಧಾರಣೆ!

ಟೋಕಿಯೊ : ಟೋಕಿಯೊ ಒಲಿಂಪಿಕ್ಸ್‌ ಮತ್ತೂಂದು ಸಂಪ್ರದಾಯ ಹಾಗೂ ಆಕರ್ಷಣೆಯಿಂದ ವಂಚಿತವಾಗಲಿದೆ. ಇಲ್ಲಿನ ವಿಜೇತರ ಕೊರಳಿಗೆ ಆತಿಥಿಗಳು ಪದಕ ಹಾಕುವುದಿಲ್ಲ, ಬದಲಿಗೆ ಗೆದ್ದವರೇ ತಮ್ಮ ಪದಕಗಳನ್ನು ತಾವೇ ಕೊರಳಿಗೆ ಹಾಕಿಕೊಳ್ಳಬೇಕಿದೆ. ಎಲ್ಲವೂ ಕೊರೊನಾ ಎಫೆಕ್ಟ್!

ಬದಲಾದ ಕ್ರಮದಂತೆ, ವಿಜೇತರ ಮೂರು ಪದಕಗಳನ್ನು ಮೂರು ಟ್ರೇಗಳಲ್ಲಿ ಹಾಕಿ ಪೋಡಿಯಂ ಮೇಲೆ ಇಡಲಾಗುವುದು. ವಿಜೇತರು ಬಂದು ತಮ್ಮ ಪದಕಗಳನ್ನು ತಾವೇ ಕುತ್ತಿಗೆಗೆ ಹಾಕಿಕೊಳ್ಳಬೇಕು. ಚಪ್ಪಾಳೆ ಇಲ್ಲ, ಅಭಿನಂದನೆ ಇಲ್ಲ, ಅಪ್ಪುಗೆ ಇಲ್ಲ, ಹಸ್ತಲಾಘವ ಇಲ್ಲ, ಯಾವ ಸಂಭ್ರಮವೂ ಇಲ್ಲ!

ಟೋಕಿಯೊ ಒಲಿಂಪಿಕ್ಸ್‌ನ ಈ ನಿಯಮವನ್ನು ಬುಧವಾರ ಐಒಸಿ ಅಧ್ಯಕ್ಷ ಥಾಮಸ್‌ ಬಾಕ್‌ ಪ್ರಕಟಿಸಿದರು.
“ಕೊರೊನಾದಿಂದಾಗಿ ಈ ಸಂಪ್ರದಾಯವನ್ನು ಕೈಬಿಡಲಾಗಿದೆ. ವಿಜೇತರು ಅವರ ವರೇ ಪದಕಕಳನ್ನು ಧರಿಸಿಬೇಕಿದೆ. ಟ್ರೇಯಲ್ಲಿ ಪದಕ ತಂದಿರಿಸುವವರು ಕೂಡ ಇದನ್ನು ಗ್ಲೌಸ್‌ ಧರಿಸಿಯೇ ಮುಟ್ಟಿರುತ್ತಾರೆ. ಪದಕ ಸಮಾರಂಭದಲ್ಲಿ ವಿಜೇತರಿಗೆ ಯಾವ ವಿಶೇಷ ಗೌರವವೂ ಇರುವುದಿಲ್ಲ. ಇದು ಕೇವಲ ಸಾಂಕೇತಿಕ ಸಮಾರಂಭ’ ಎಂದು ಬಾಕ್‌ ಸ್ಪಷ್ಟಪಡಿಸಿದರು.

ಕೊರೊನಾ ಹೆಚ್ಚಳ
ಒಲಿಂಪಿಕ್ಸ್‌ ಸಮೀಪಿಸುತ್ತಿದ್ದಂತೆಯೆ ಟೋಕಿಯೊದಲ್ಲಿ ಕೊರೊನಾ ಸಂಖ್ಯೆಯೂ ಹೆಚ್ಚಿದೆ. ಬುಧವಾರ 1,149 ಕೇಸ್‌ ದಾಖಲಾಗಿದೆ. ಕಳೆದ 6 ತಿಂಗಳಲ್ಲೇ ಇದು ಜಪಾನ್‌ ರಾಜಧಾನಿಯಲ್ಲಿ ಕಂಡುಬಂದ ಅತೀ ಹೆಚ್ಚಿನ ಸೋಂಕಿನ ಪ್ರಕರಣವಾಗಿರುವುದು ಕಳವಳದ ಸಂಗತಿ.

ನಿರಾಶ್ರಿತರ ತಂಡದಲ್ಲಿ ಕೊರೊನಾ
ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳಲಿರುವ 29 ಸದಸ್ಯರ ನಿರಾಶ್ರಿತರ ಕ್ರೀಡಾ ತಂಡಕ್ಕೆ (ರೆಪ್ಯುಜಿ ಟೀಮ್‌) ಕೊರೊನಾ ಆತಂಕ ಎದುರಾಗಿದೆ. ಕತಾರ್‌ನಲ್ಲಿ ಅಭ್ಯಾಸ ನಡೆಸುತ್ತಿರುವ ಈ ತಂಡದ ಅಧಿಕಾರಿಯೊಬ್ಬರಿಗೆ ಕೊರೊನಾ ಪಾಸಿಟಿವ್‌ ದೃಢಪಟ್ಟಿದೆ. ಹೀಗಾಗಿ ಈ ತಂಡದ ಟೋಕಿಯೊ ಪ್ರಯಾಣ ವಿಳಂಬಗೊಳ್ಳಲಿದೆ.

ಸಿರಿಯಾ, ಸೌತ್‌ ಸುಡಾನ್‌, ಎರಿಟ್ರಿಯಾ, ಅಫ್ಘಾನಿಸ್ಥಾನ, ಇರಾನ್‌ ಮೊದಲಾದ ನಿರಾಶ್ರಿತ ಕ್ರೀಡಾಪಟುಗಳು ಈ ತಂಡದಲ್ಲಿದ್ದು, ಒಲಿಂಪಿಕ್ಸ್‌ ಧ್ವಜದಡಿ 12 ವಿಭಾಗಗಳಲ್ಲಿ ಸ್ಪರ್ಧಿಸಲಿದ್ದಾರೆ. ಕಳೆದ ರಿಯೋ ಒಲಿಂಪಿಕ್ಸ್‌ನಲ್ಲಿ ಮೊದಲ ಸಲ ನಿರಾಶ್ರಿತರ ತಂಡ ಪ್ರತಿನಿಧಿಸಿತ್ತು.

ಬ್ರಝಿಲ್‌ ತಂಡ ತಂಗಿರುವ ಹೋಟೆಲ್‌ನಲ್ಲೇ ಕೊರೊನಾ!
ಒಲಿಂಪಿಕ್ಸ್‌ ಜೈವಿಕ ಸುರಕ್ಷಾ ವಲಯದಲ್ಲಿ ಬರುವ ಹೊಟೇಲೊಂದರ 7 ಸಿಬಂದಿಗೆ ಕೊರೊನಾ ಸೋಂಕು ಬಂದಿರುವುದು ಖಚಿತವಾಗಿದೆ! ಹಮನತ್ಸು ನಗರದಲ್ಲಿರುವ ಈ ಹೊಟೇಲ್‌ನಲ್ಲಿ ಬ್ರಝಿಲ್‌ ತಂಡ ಕೂಡ ತಂಗಿದೆ. ಈ ಹೊಟೇಲ್‌ನಲ್ಲೇ ಸೋಂಕು ಪತ್ತೆಯಾಗಿರುವುದು ಎಲ್ಲರಿಗೂ ಆತಂಕ ಮೂಡಿಸಿದೆ. ಸದ್ಯ ಬ್ರಝಿಲ್‌ ಆ್ಯತ್ಲೀಟ್ಸ್‌ಗಳು ಸುರಕ್ಷಾವಲಯದಲ್ಲಿರುವುದರಿಂದ ಆತಂಕಪಡುವ ಅಗತ್ಯವಿಲ್ಲ.

ಟಾಪ್ ನ್ಯೂಸ್

Maharastra: ಕಾರಿನ ಮೇಲೆ ಕಲ್ಲು ತೂರಾಟ… ಮಾಜಿ ಸಚಿವ ಅನಿಲ್ ದೇಶಮುಖ್ ಹಣೆಗೆ ಗಾಯ

Maharastra: ಕಾರಿನ ಮೇಲೆ ಕಲ್ಲು ತೂರಾಟ… ಮಾಜಿ ಸಚಿವ ಅನಿಲ್ ದೇಶಮುಖ್ ಹಣೆಗೆ ಗಾಯ

Maha-Leaders

Assembly Election: ಮಹಾರಾಷ್ಟ್ರ ಕದನದಲ್ಲಿ ಘಟಾನುಘಟಿಗಳ ಭವಿಷ್ಯ ಪಣಕ್ಕೆ

Delhi Pollution: ಅಸ್ತಮಾ, ಶ್ವಾಸಕೋಶ ಕ್ಯಾನ್ಸರ್‌ ಭೀತಿ!

Delhi Pollution: ಅಸ್ತಮಾ, ಶ್ವಾಸಕೋಶ ಕ್ಯಾನ್ಸರ್‌ ಭೀತಿ!

IPL-2025: ಓಂಕಾರ್‌ ಸಾಳ್ವಿ ಆರ್‌ಸಿಬಿ ಬೌಲಿಂಗ್‌ ಕೋಚ್‌

IPL-2025: ಓಂಕಾರ್‌ ಸಾಳ್ವಿ ಆರ್‌ಸಿಬಿ ಬೌಲಿಂಗ್‌ ಕೋಚ್‌

Siddu-Somanna

MUDA: ಸುಮ್ನಿರಯ್ಯ ಗೊತ್ತಿಲ್ದೆ ಮಾತಾಡ್ತಿಯಾ: ಸೋಮಣ್ಣಗೆ ಸಿದ್ದರಾಮಯ್ಯ ಪ್ರೀತಿಯ ಗದರಿಕೆ!

Market: ಇಳುವರಿ ಕೊರತೆ: ತೆಂಗಿನಕಾಯಿ ಬೆಲೆ 58ರಿಂದ 60 ರೂಪಾಯಿ!

Market: ಇಳುವರಿ ಕೊರತೆ: ತೆಂಗಿನಕಾಯಿ ಬೆಲೆ 58ರಿಂದ 60 ರೂಪಾಯಿ!

Siddu–Muniyappa

Ration Card: ಬಡವರಿಗೆ ಬಿಪಿಎಲ್‌ ಕಾರ್ಡ್‌ ತಪ್ಪದಂತೆ ನೋಡಿಕೊಳ್ಳಿ: ಸಿಎಂ ಸೂಚನೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

IPL-2025: ಓಂಕಾರ್‌ ಸಾಳ್ವಿ ಆರ್‌ಸಿಬಿ ಬೌಲಿಂಗ್‌ ಕೋಚ್‌

IPL-2025: ಓಂಕಾರ್‌ ಸಾಳ್ವಿ ಆರ್‌ಸಿಬಿ ಬೌಲಿಂಗ್‌ ಕೋಚ್‌

World Cup; ಖೋ ಖೋ ಪಂದ್ಯಾವಳಿಗೆ ಐಒಎ ಬೆಂಬಲ

World Cup; ಖೋ ಖೋ ಪಂದ್ಯಾವಳಿಗೆ ಐಒಎ ಬೆಂಬಲ

ATP Finals : ಜಾನಿಕ್‌ ಸಿನ್ನರ್‌ಗೆ ಮೊದಲ ಪ್ರಶಸ್ತಿ

ATP Finals : ಜಾನಿಕ್‌ ಸಿನ್ನರ್‌ಗೆ ಮೊದಲ ಪ್ರಶಸ್ತಿ

Women’s Asian Hockey Semi-Finals: ಜಪಾನ್‌ ವಿರುದ್ಧ ಭಾರತ ಫೇವರಿಟ್‌

Women’s Asian Hockey Semi-Finals: ಜಪಾನ್‌ ವಿರುದ್ಧ ಭಾರತ ಫೇವರಿಟ್‌

China Master Badminton: ಸಾತ್ವಿಕ್‌-ಚಿರಾಗ್‌ ಜೋಡಿ ಮರಳಿ ಕಣಕ್ಕೆ

China Master Badminton: ಸಾತ್ವಿಕ್‌-ಚಿರಾಗ್‌ ಜೋಡಿ ಮರಳಿ ಕಣಕ್ಕೆ

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

Maharastra: ಕಾರಿನ ಮೇಲೆ ಕಲ್ಲು ತೂರಾಟ… ಮಾಜಿ ಸಚಿವ ಅನಿಲ್ ದೇಶಮುಖ್ ಹಣೆಗೆ ಗಾಯ

Maharastra: ಕಾರಿನ ಮೇಲೆ ಕಲ್ಲು ತೂರಾಟ… ಮಾಜಿ ಸಚಿವ ಅನಿಲ್ ದೇಶಮುಖ್ ಹಣೆಗೆ ಗಾಯ

Maha-Leaders

Assembly Election: ಮಹಾರಾಷ್ಟ್ರ ಕದನದಲ್ಲಿ ಘಟಾನುಘಟಿಗಳ ಭವಿಷ್ಯ ಪಣಕ್ಕೆ

Delhi Pollution: ಅಸ್ತಮಾ, ಶ್ವಾಸಕೋಶ ಕ್ಯಾನ್ಸರ್‌ ಭೀತಿ!

Delhi Pollution: ಅಸ್ತಮಾ, ಶ್ವಾಸಕೋಶ ಕ್ಯಾನ್ಸರ್‌ ಭೀತಿ!

IPL-2025: ಓಂಕಾರ್‌ ಸಾಳ್ವಿ ಆರ್‌ಸಿಬಿ ಬೌಲಿಂಗ್‌ ಕೋಚ್‌

IPL-2025: ಓಂಕಾರ್‌ ಸಾಳ್ವಿ ಆರ್‌ಸಿಬಿ ಬೌಲಿಂಗ್‌ ಕೋಚ್‌

Siddu-Somanna

MUDA: ಸುಮ್ನಿರಯ್ಯ ಗೊತ್ತಿಲ್ದೆ ಮಾತಾಡ್ತಿಯಾ: ಸೋಮಣ್ಣಗೆ ಸಿದ್ದರಾಮಯ್ಯ ಪ್ರೀತಿಯ ಗದರಿಕೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.